Z : ಇರೋ ಹದಿನೆಂಟು ಪುರಾಣಗಳನ್ನೇ ಜನರಿಗೆ ಓದಕ್ಕೆ time ಇಲ್ಲ...ಇನ್ನು ನೀನು ಹತ್ತೊಂಭತ್ತನೇ ಪುರಾಣ ನ ರಚನೆ ಮಾಡಿದ್ರೆ ಗತಿ ಎನು ?
ನಾನು : ಇದು ಹಾಗಲ್ಲ ವಿಷಯ Z .ಜನರು ಆ ಹದಿನೆಂಟು ಪುರಾಣಗಳನ್ನ ನಿಧಾನವಾಗಿ ಓದಲಿ. ಆದರೆ ಇದು current issue ಬಗ್ಗೆ ಇರೋದು. ಇದನ್ನ ಓದಲು ಜನ time ಮಾಡಿಕೊಂಡರೆ ಒಳ್ಳೆಯದು. ಪುರಾಣಗಳಂತೆ ಇದನ್ನು ಓದುವುದರಿಂದ ಉಪಯೋಗವಂತೂ ಖಂಡಿತಾ ಇದೆ. But let me make myself clear. ನನಗೆ ಯಾಜ್ಞವಲ್ಕ್ಯರಂತಾಗಲಿ, ನಾರದರಂತಾಗಲೀ ಆಗಲು ಖಂಡಿತಾ ಆಸೆ ಏನು ಇಲ್ಲ. but it so happens that, It just happens !!!!
Z : ಕರ್ಮಕಾಂಡ !! continue.
ನಾನು : correction. ಇದು ಸೌತ್ ಎಂಡ್ ಸರ್ಕಲ್ ಕಾಂಡ. Well, to start with....
Z : ಲೇ..................ಕನ್ನಡದಲ್ಲಿ ಶುರು ಮಾಡು !!
ನಾನು : ಹ ! ನೆನಪಿಸಿದ್ದಕ್ಕೆ ಧನ್ಯವಾದಗಳು ( ಥ್ಯಾಂಕ್ಸ್ ಅಂದ್ರೆ ಒದಿತಾಳೇ ಅನ್ಸತ್ತೆ ! )
ಕಲಿಯುಗದ ಪ್ರಥಮ ಪಾದದಲ್ಲಿ, ಶಾಲೀವಾಹನ ಶಕೆಯಲ್ಲಿ, ೨೦೦೮ ನೇ ವರ್ಷದಲ್ಲಿ, ಚೈತ್ರ ಶುದ್ಧ ದ್ವಿತೀಯಾ (ಏಪ್ರಿಲ್ ೯ )ರಂದು ಕಾಲೇಜಿನಲ್ಲಿ ಪರೀಕ್ಷೆ ಪ್ರಾರಂಭವಾದ ದಿನದ [ಅ]ಶುಭ ಮುಹೂರ್ತದಲ್ಲಿ, ಭಾಗ್ಯದಾಯಕವಾದ ಬಲಗಾಲನ್ನು ತ್ರಿಚಕ್ರವಾಹನದಲ್ಲಿ ಮೊದಲು ಇಟ್ಟು ಕುಳಿತಿದ್ದೆಯಾದರೂ ಸಂಭವಿಸಿದ [ದುರ್]ಘಟನೆ ಇದು !
Z : hmm...ಆಮೇಲೆ....
ಕೈಯಲ್ಲಿ ನನ್ನ ಅತಿ ಭಾರವಾದ ನೀಲಿ folder-ಉ....ಅದರೊಳಗೆ ಕಷ್ಟ ಪಟ್ಟು ಕುಳಿತಿರುವ ನನ್ನ astrophysics notes...[i seriously think astrophysics notes must be in "space" ....they can be better accessed and understood there and very well written ......ಇರ್ಲಿ ಇದು ಉಪಕಥೆ ಆಗೋಗತ್ತೆ....ಪುರಾಣದ ಬಗ್ಗೆ ಮಾತಾಡೋಣ]
ಇಟ್ಕೊಂಡು ಅಕ್ರಮ - ಸಕ್ರಮ ಗಲಾಟೆಯಲ್ಲಿ ತ್ರಿಶಂಕು ಸ್ಥಿತಿಯಲ್ಲಿರುವ, ಅರ್ಧ ನಿರ್ಮಿತವಾಗಿರುವ ರಶ್ಮಿ ಕಲ್ಯಾಣ ಮಂಟಪದ ಬಳಿ ಬಂದು ನಿಂತೆ. ಎಂದಿನಂತೆ ಹತ್ತು ನಿಮಿಷ ಕಾದಮೇಲೆ ಆಟೋ ಒಂದರ ದಿವ್ಯದರ್ಶನವಾಯಿತು. "South end circle ?" ಅಂದೆ. "ಹತ್ತಿ ಮೇಡಂ" ಅಂದ. ವಿದ್ಯಾಪೀಠದಿಂದ ಬನಶಂಕರಿ ೨ನೆ ಹಂತಕ್ಕೆ ಹೋಗುವ ರಸ್ತೆಯಲ್ಲಿ ಆಟೋ ತಿರುಗಿಸುತ್ತಿದ್ದ. ನಾನು last minute revision ಮಾಡುತ್ತಿದ್ದುದರಿಂದ ಅವನು ನನ್ನ ದಾರಿ ತಪ್ಪಿಸಲು ಕಾಯುತ್ತಿದ್ದ.....But ಸಿಕ್ಕಾಕೊಂಡ.
" ಹೇಗ್ರಿ ಹೋಗ್ತಿದ್ದೀರಿ ?" ಎನ್. ಆರ್. ಕಾಲೋನಿ ಮೇಲೆ ಹೋಗಿ...ಏನು ಜಯನಗರ full ಸುತ್ತಿಸಿ south end circle ಗೆ ಕರ್ಕೋಂಡ್ ಹೋಗ್ತೀರಾ ? ಅಂತ ಸಲ್ಪ light ಆಗಿ ಗದರಿದೆ. first shock ಅವನಿಗೆ. ಅವನಿಗೆ ನಂಗೆ ಕನ್ನಡ ಬರತ್ತೆ ಅಂತಾನೇ ಗೊತ್ತಿರ್ಲಿಲ್ಲ.ಕೈಯಲ್ಲಿ folder, ನೇತು ಹಾಕಿಕೊಂಡಿರುವ ಪರ್ಸ್ ಮತ್ತು handsfree mode ನಲ್ಲಿದ್ದ ಮೊಬೈಲ್ ನೋಡಿ ನನ್ನನ್ನು ಕಾಲ್ ಸೆಂಟರ್ employee ಎಂದು ಭಾವಿಸಿದ್ದನೇನೋ !! ಬ್ರಿಟೀಷರ ಬಳುವಳಿ " ಸಾರಿ" ಪದವನ್ನು ಬಿಟ್ಟಿ ಬಿಸಾಕಿ ಗಾಡಿ ನೇರ ನಡೆಸಿ ಎನ್. ಆರ್ ಕಾಲೋನಿಗೆ ಬಂದ.ಅಲ್ಲಿಂದ ನಾಗಸಂದ್ರ ವೃತ್ತದಲ್ಲಿ ತಿರುಗಿಸಿ ಮತ್ತಷ್ಟು ಸುತ್ತಿಸಲು ನೋಡಿದ. ನಾನು ಹೀಗೆ ಬೇಡ...ಸೀಧಾ ಹೋಗಿ ಅಂದೆ. ಅವನು ಕಣ್ಣು ಕೆಕ್ಕರಿಸಿ " ಏನ್ ಮೇಡಂ ನಮಗೆ ರೂಟ್ ಗೊತ್ತಿಲ್ಲ ಅಂತ ಅಂದುಕೊಂಡಿದ್ದೀರಾ ? ನಾವೂ ಬೆಂಗಳೂರಿಗರೇ !!! " ಆಂದ. ನಾನು " ಗೊತ್ತಾಯ್ತು ಬಿಡಿ ! ನೀವು ಬನಶಂಕರಿ ಸೆಕೆಂಡ್ ಸ್ಟೇಜ್ ಗೆ ಗಾಡಿ ತಿರುಗಿಸಿದಾಗ್ಲೇ ಗೊತಾಯ್ತು ನೀವು ಬೆಂಗಳೂರಿಗರೇ ಅಂತ. ನಾವು ಹೇಳಿದ ಹಾಗೆ ಓಡಿಸೋಕೆ ನೀವು ಇರದೋ ಅಥವಾ ನಿಮ್ಮ ಆಜ್ಞೆ ಆಣತಿ ಅಪ್ಪಣೆಗಳನ್ನ ಪಾಲಿಸೋಕೆ ನಾವೋ ? " ಅಂದೆ. ಕನ್ನಡ ಕೇಳಿ ಭಯ ಆಯ್ತು ಅನಿಸುತ್ತೆ....ಸುಮ್ನೆ ಮಾತಾಡದೇ ಸೌತ್ ಎಂಡ್ ಸರ್ಕಲ್ ಗೆ ಬಂದ. ಸಿಗ್ನಲ್ ಇತ್ತು. ಪೂರ್ತಿ ಮೂರು ನಿಮಿಷ. ನಾನು " ರಾಮಕೃಷ್ಣ ಆಸ್ಪತ್ರೆ ರಸ್ತೆಯಲ್ಲಿ ಹೋಗಿ ಅಂದೆ. ಬೆಂಗಳೂರಿಗ...ಗೊತ್ತಿದೆ ಅಂತ ಕೊಚ್ಚಿಕೊಳ್ಳುತ್ತಿದ್ದ ಭೂಪನಿಗೆ. ಅವನು ನೀಟ್ ಆಗಿ ಆರ್.ವೀ ರಸ್ತೆಯಲ್ಲಿ ಗಾಡಿ ತಿರುಗಿಸಿದ. ನನಗೆ ರೇಗೇ ಹೋಯ್ತು.
Z : ಹ್ಮ್ಮ್ಮ್.....ಕಾಳಿಯ ಅವತಾರವಾಯ್ತು....ಅದೂ ಬೆಳಗ್ಗೆ ಬೆಳಗ್ಗೆ !!
ನಾನು : I couldn't help it Z . internals tension ಬೇರೆ. ಸಮಯ ಎಂಟು ಇಪ್ಪತ್ತಾಗಿತ್ತು. ೮.೪೫ ಗೆ ಪರೀಕ್ಷೆ. "ನಿಲ್ಲಿಸಿ ಗಾಡಿ" ಎಂದೆ. "ಓಹ್ ...ಸಾರಿ ಮೇಡಂ....ನೀವು ರಾಮಕೃಷ್ಣ ನರ್ಸಿಂಗ್ ಹೋಮ್ ರಸ್ತೆ ಅಂದಿರಿ....ಇಲ್ಲೇ ವೆಸ್ಟ್ ಗೇಟ್ ಬಳಿ ಯು ಟರ್ನ್ ತಗೋಂಡು ವಾಪಸ್ ಬರ್ತಿನಿ" ಅಂದ. "ಗಾಡಿ ನ ಇಲ್ಲೇ ಲೆಫ್ಟ್ ನಲ್ಲಿ ನಿಲ್ಲಿಸ್ತೀರೋ ಇಲ್ಲವೋ...." ಗುಡುಗಿದೆ. ಮೊಬೈಲ್ ಇಂದ ಚೈತ್ರಳ ತಂದೆ ಲಾಯೆರ್ ಅಂಕಲ್ ಗೆ ಡಯಲ್ ಮಾಡಲು ನಂಬರ್ ರೆಡಿಯಾಗಿಟ್ಟಿದ್ದೆ. ಆದರೆ ಪರಿಸ್ಥಿತಿ ಅಲ್ಲಿಗೆ ಹೋಗಲಿಲ್ಲ. ಅವನು ಮರುಮಾತಾಡದೇ ನಿಲ್ಲಿಸಿದ. ಮಿನಿಮಮ್ ಈಗ ಹದಿನಾಲ್ಕಾದರೂ ಅವನು ಮೀಟರ್ ಅಪ್ಡೇಟ್ ಮಾಡಿಸಿರಲಿಲ್ಲ. ಮೂವತ್ತು ರೂಪಾಯಿ ಆಗಿತ್ತು. "ನಲವತ್ತು ಕೊಡಿ...ಫಾರ್ಟಿ ರುಪೀಸ್ " ಎಂದ.
ನಾನು : " ಮೀಟರ್ conversion table ಎಲ್ಲಿ ?"
ಅವನು : "ಮನೇಲಿದೆ "
ನಾನು : ತಿಜೋರಿಯಲ್ಲಿಟ್ಟು ಬೀಗ ಹಾಕಿ. ಕಳೆದು ಹೋಗದಂತೆ ಕಾಪಾಡಿಕೊಳ್ಳಿ. ಅದಿರಲಿ, ಮೀಟರ್ ಮೂವತ್ತು ತೋರಿಸುತ್ತಿದ್ದರೆ ನಾನು ಕೊಡಬೇಕಿರುವುದು ಮೂವತ್ತೈದಲ್ವಾ...ಹೇಗೆ ನಲವತ್ತಾಯಿತು ?
ಅವನು : ಮೇಡಮ್ ನಿಮಗೆ ಈ ಲೆಕ್ಕಚಾರಗಳೆಲ್ಲಾ ಅರ್ಥ ಆಗಲ್ಲ.... ಎಂಥೆಂಥದೋ ಲೆಕ್ಕ ಮಾಡ್ಬೇಡಿ. ಕೈಯ್ಯಲ್ಲಿ ಪುಸ್ತಕ ಇದ್ದರೆ ಸಾಲದು. ಬುದ್ಧಿ ಇರಬೇಕು.
ನಾನು : ನಾನು ಓದೋಕೆ ಬರೆಯೋಕೆ ಬರದವಳೇನಲ್ಲ. ನೋಡಿ ನೀವು ಮಿನಿಮಮ್ ನ ಎರಡು ರೂಪಾಯಿ ಏರಿಸಿದ್ದೀರಿ ಎರಡು ಕಿಲೋಮೀಟರ್ ಗೆ . ಅಂದರೆ ಹಳೇ ೧೨ ರೂಪಾಯಿ ಮಿನಿಮಮ್ ನ ಆರನೇ ಒಂದರಷ್ಟು. ಆದ್ದರಿಂದ ಈಗ ಮೀಟರ್ ರೀಡಿಂಗ್ ನ ಆರನೇ ಒಂದಷ್ಟು ಭಾಗವನ್ನು ನಾವು ಕಂಡುಹಿಡಿದು, ಈ ಮೊತ್ತಕ್ಕೆ ಸೇರಿಸಿ ಒಟ್ಟು ದುಡ್ಡು ಕೊಡಬೇಕು ತಾನೆ ? ಮೂವತ್ತರ ಆರನೇ ಒಂದು ಭಾಗ ಐದು ರೂಪಾಯಿ. ಆದ್ದರಿಂದ ನಿಮಗೆ ನಾನು ಮೂವತ್ತೈದು ಕೊಡಬೇಕು ತಾನೆ ?
ಅವನು : ನಾನು ಒಪ್ಪಲ್ಲ. ನಿಮಗೆ ಹೇಗೆ ಗೊತ್ತಾಯ್ತು ಇದು ?
ನಾನು : ಎಲ್ಲರನ್ನೂ ಕುರಿಗಳು ಅಂದುಕೊಂಡಿದ್ದೀರಾ ನೀವು ? ನಮಗೆ ದೇವರ ಕೃಪೆಯಿಂದ ಸ್ವಲ್ಪ ಬುದ್ಧಿ ಇದೆ.ನಿಮ್ಮ conversion table ನ line by line ಬರೆದು ತೋರಿಸಲಾ ? 12.50 ರಿಂದ ಹಿಡಿದು 15 ರೂಪಾಯಿ ವರೆಗೆ ನನ್ನ ಲೆಕ್ಕಾಚಾರದ ಪ್ರಕಾರ ಮೊಬೈಲ್ ನಲ್ಲಿ ಮಾಡಿ ತೋರಿಸಿದೆ. ಅವನಿಗೆ ಬೆವರಿಳಿಯಿತು. ಮೂವತ್ತೈದು ತಗೊಂಡು ಜಾಗ ಖಾಲಿ ಮಾಡಿ. ಏನಾದರೂ ಹೆಚ್ಚಿಗೆ ದುಡ್ಡು ಬೇಕಿದ್ದರೆ ಬಸವನಗುಡಿ ಪೋಲೀಸ್ ಸ್ಟೇಷನ್ ಗೆ ಬನ್ನಿ...ಮಾತಾಡೋಣ.
ಅವನು : " ಪೋಲಿಸ್ ಸ್ಟೇಷನ್ ವಿಷಯ ಎತ್ತಬೇಡಿ . ಸರಿ...ಐದು ರೂಪಾಯಿ ದಿಸ್ಕೌಂಟ್ ಕೊಡ್ತೀನಿ...ಕೊಡಿ ಮೂವತ್ತೈದೇ "
ನಾನು : ದಿಸ್ಕೌಂಟ್ ಪದದ ಅರ್ಥ ಗೊತ್ತಿದಿಯೇನ್ರಿ ನಿಮಗೆ ? ನಾನು ಕೊಡಲೇನು ದಿಸ್ಕೌಂಟ್ ? ಪೂರ್ತಿ 35 ರೂಪಾಯಿ ದಿಸ್ಕೌಂಟ್ . ಬಿಡಿಗಾಸು ಕೊಡಲ್ಲ...ಹೊರಡಿ.
ಅವನು : ಮೇಡಂ...ತಪ್ಪಾಯ್ತು. ಮೊದಲ ಬೋಣಿ ನೀವೇ ಮಾಡಬೇಕು. ಕೊಡಿ ಮೂವತ್ತೈದೆ.
ಮೂವತ್ತೈದು ರೂಪಾಯಿ ಕೊಟ್ಟು ಅಲ್ಲಿಂದ ನಮ್ಮ ಕಾಲೇಜಿಗೆ ಬರುವ ಹೊತ್ತಿಗೆ ಪರೀಕ್ಷೆಗೆ ಎಲ್ಲಾ ಸಿದ್ಧತೆ ನಡೆದಿತ್ತು. ಬಂದದ್ದೇ ನನ್ನ ಸ್ನೇಹಿತೆಯೊಬ್ಬಳು-
" what happened lakshmi ? Anything wrong ? you look upset . " ಅಂದಳು.
ನಾನು : No yaar..nothing. I had a fight with an auto driver and was stuck there for almost 10 minutes. That took my time. "
ಅವಳು : Is he there even now ? You want me to come down and talk to him ?
ನಾನು : No, he is gone. I thought I would be late. But thankfully... I am just in time.
Z : ರಾಮಾ....internals start ಆಗೋಗಿದ್ದಿದ್ರೆ ಗತಿ ಏನು ? ಪೋಲೀಸ್ ಸ್ಟೇಷನ್ ಅಂತೆಲ್ಲ ನೀನು ಒಬ್ಬೊಬ್ಬ್ಳೆ ಹೋಗೋದು ಸರಿ ಇಲ್ಲ head ruled !
ನಾನು : ಸುಮ್ಮನೆ ಇರು.ನಿನ್ನಂಥವರು ಹೀಗೆ ಹೆದರೋದರಿಂದಲೇ ಇಷ್ಟೆಲ್ಲ ಆಗಿ, ಇಂಥವರೆಲ್ಲ ಕೊಬ್ಬಿ ಹೋಗಿರೋದು. ನಾವು ಹೆದರಿದರೆ ನಮ್ಮನ್ನು ಹೆದರಿಸಲು ಲೋಕ ಕಾಯ್ತಾಯಿರತ್ತೆ. ಧೈರ್ಯಂ ಸರ್ವತ್ರ ಸಾಧನಮ್. ನೆನಪಿಟ್ಟುಕೋ. ಅಷ್ಟಕ್ಕು...ಬಸವನಗುಡಿಯಲ್ಲಿ ಮಹಿಳಾ ಪೋಲೀಸ್ ಠಾಣೆ ಇದೆ. ಸರ್ಕಲ್ ಇನ್ಸ್ಪೆಕ್ಟರ್ ಅಪ್ಪನಿಗೆ ಗೊತ್ತಿದ್ದಾರೆ. ನನಗೆ ಭಯ ಇಲ್ಲ. ಗೊತ್ತಲ್ಲ ನಿಂಗೆ ? ಜನ್ಮ ಜಾಲಾಡ್ಬಿಡ್ತೀನಿ ಯಾರಾದ್ರು ತಕರಾರು ಮಾಡಿದ್ರೆ. ಅದಕ್ಕೂ ಬಗ್ಗದಿದ್ದರೆ ಇವರೆಲ್ಲ ಇದ್ದಾರಲ್ಲ !!
Z : ನೀನು ಹೇಳೋದು ಸರಿನೇ. ನಾವು ಹೆದರಿ ಏನೂ ಪ್ರಯೋಜನ ಇಲ್ಲ. We have to learn to defend and protect ourselves. World is not a safe place anymore !!
ನಾನು : Very true ! ನಾವೂ ಸ್ವಲ್ಪ ಹುಶಾರಾಗಿರ್ಬೇಕು. ನಾವು ಏನೆ tension ನಲ್ಲಿ ಇರಲಿ, ಫೋನ್ ನಲ್ಲಿ ಮಾತು ಕಥೆಯಲ್ಲಿರಲಿ, ಓದುತ್ತಿರಲಿ, ಹೋಗುತ್ತಿರುವ ರಸ್ತೆಯ ಬಗ್ಗೆ ಎಚ್ಚರ ವಹಿಸಬೇಕು. ಗಮನ ವಹಿಸದೇ ಅವರು ನಮಗೆ ಮೋಸ ಮಾಡಲು ಪ್ರಚೋದನೆ ನೀಡಬಾರದು .
ಇತಿ ಅಟೋ ಪುರಾಣೇ ಸೌತ್ ಎಂಡ್ ಸರ್ಕಲ್ ಕಾಂಡಃ ಸಂಪೂರ್ಣಃ
ಇನ್ನೊಂದು ಕಾಂಡದ ಕಥೆಯನ್ನು ಅತಿ ಶೀಘ್ರದಲ್ಲಿ ಹೇಳುವೆ.
ಅಲ್ಲಿಯವರೆಗೂ ...Line on hold.
(ಸಶೇಷ)
ಜೀವನದೊಂದಿಗಿನ ನಮ್ಮ ಮಾತು lifetime ! ಇದರಲ್ಲಿ incoming -ಊ free outgoing -ಊ free !
ನನ್ನ ज़िंदगीಯೊಂದಿಗಿನ nonstop ಗುಸುಗುಸುವನ್ನು ಇಲ್ಲಿ ಬಿಚ್ಚಿಟ್ಟಿದ್ದೇನೆ.
Subscribe to:
Post Comments (Atom)
ಉತ್ತರಾಯಣ ೩
ನಾನು: ಬೃಂದಾವನಕ್ಕೆ ಹೊರಡಲು ನಾಲ್ಕು ಘಂಟೆಯಷ್ಟೊತ್ತಿಗೆ ರೆಡಿ ಇರಬೇಕು ಎಂದು ಮ್ಯಾನೇಜರ್ ವೆಂಕಟೇಶ್ ಅವರು ಹೇಳಿದ್ದರು. ಇವರೆಲ್ಲರೂ ಊಟ ಮಾಡಿ, ಮಲಗಿ, ಎದ್ದು ರೆಡಿಯಾಗು...
-
ನಾನು : There is always a next time. Z : ಹೌದಾ ? ನಾನು : ಹೌದು. Z : ಪ್ರತೀ ಸಲವೂ ಹೀಗೆ ಆದರೆ ಗತಿಯೇನು ? ನಾನು : ಅದಕ್ಕೆ ನಿನ್ನ pessimistic ಅಂತ ಬೈಯ್ಯ...
-
ನಾನು: ಬೃಂದಾವನಕ್ಕೆ ಹೊರಡಲು ನಾಲ್ಕು ಘಂಟೆಯಷ್ಟೊತ್ತಿಗೆ ರೆಡಿ ಇರಬೇಕು ಎಂದು ಮ್ಯಾನೇಜರ್ ವೆಂಕಟೇಶ್ ಅವರು ಹೇಳಿದ್ದರು. ಇವರೆಲ್ಲರೂ ಊಟ ಮಾಡಿ, ಮಲಗಿ, ಎದ್ದು ರೆಡಿಯಾಗು...
-
ಎಲ್ಲರಿಗೂ ಹೊಸ ವರ್ಷದ ಹಾರ್ದಿಕ ಶುಭಾಶಯಗಳು. ಈ ಬ್ಲಾಗಿನ ಹುಟ್ಟು ಹಬ್ಬ ಮತ್ತು ಹೊಸ ವರ್ಷ ಯಾವಾಗ್ಲು ಒಟ್ಟಿಗೆ ಬರತ್ತೆ. ಆದರೆ, ಮತ್ತೆ ಅದೇ flash back ಗೆ ಹೋಗಿ, ಅದೇ ...
11 comments:
enama,
anthu inthu shuru hachkonde auto puraNa..
very nice..
idarinda ellaru mosa maado auto driverna sari yaagi vicharskobeku.
sariyaagi dabaayisiddeya biDu.. :D
ಆಟೋ ಬಂದಾಗಿಂದ ಅದರ ಪುರಾಣದ ರಚನೆ ಆಗ್ತಾನೇ ಇದೆ. ಇದು ಆ ಪುರಾಣದ ಮತ್ತೊಂದು ಭಾಗವಷ್ಟೇ.
ನಿಮ್ ಹೆಲ್ಪಿಗೆ - ಆಟೋ ಮೀಟರ್ ಜೋರಾಗಿ ಓಡ್ತಾ ಇದ್ರೆ ಈ ನಂಬರ್ ಗೆ ಕಾಲ್ ಮಾಡಿ ಕಂಪ್ಲೇಂಟ್ ಕೊಡಿ - ಆಟೋ ನಂಬರ್ ಹೇಳಿ.08022253500. ಇದು ಕಾನೂನು ಮಾಪನ ಇಲಾಖೆ ನಂಬರ್.
@ shrinidhi :
tumbaa thanks !!! nanage idara bagge gottirlilla !!
ಒಳ್ಳೇ quote-u...
i seriously think astrophysics notes must be in "space" ....they can be better accessed and understood there and very well written ......
ಶ್ರೀನಿಧಿ ಹೇಳಿದ ಹಾಗೆ ಆ ನಂಬರಿಗೆ ಫೋನ್ ಮಾಡು.. ಒಂದು ವೇಳೆ ಅಲ್ಲಿ ಯಾರೂ ಪ್ರತಿಕ್ರಯಿಸದಿದ್ದರೆ ಆಟೋದಲ್ಲಿ ಪ್ರಯಾಣ ಮಾಡೋದನ್ನು ಬಿಡು. ಸರ್ಕಾರಿ ವಾಹನಗಳು ಇರೋದು ಯಾಕೆ?
@ಶ್ರೀನಿಧಿ:
ಆ ಸಂಖ್ಯೆ ಕೆಲ್ಸ ಮಾಡುತ್ತಾ? ತುಂಬಾ recent ಆಗಿ ನಂಗೆ ಪೋಲೀಸ್ ಇಂದ ಕೆಲಸ ಆಗ್ಬೇಕಿತ್ತು, ಸ್ಟೇಷನ್ ಫೋನಿನ ಹಾಡನ್ನು ಕೇಳೋರೇ ಇರ್ಲಿಲ್ಲ. ಜನಕ್ಕೆ ರಕ್ಷಣೆ ಸಿಕ್ಕ ಹಾಗೇನೇ ಅಂದ್ಕೊಂಡೆ.
ಬಿ.ಎಸ್.ಎನ್.ಎಲ್.ಗೆ ನಿಮ್ ದರಿದ್ರ ಬ್ರಾಡ್ಬ್ಯಾಂಡ್ ಕೆಲ್ಸ ಮಾಡಲ್ಲ, ಈ ಸುಡುಗಾಡನ್ನು ಕಿತ್ತ್ ಬಿಸಾಕಿ ಬನ್ನಿ ಅಂತ ಹೇಳೋಕೆ ಒಂದು ತಿಂಗಳು ಫೋನ್ ಪ್ರಯತ್ನಿಸಿದ್ದೀನಿ. ಎತ್ತೋರು ಯಾರೂ ಗತಿ ಇರಲ್ಲ.
ಈ ಎಲ್ಲಾ "ಸಾರ್ವಜನಿಕ" ಸೇವೆಯನ್ನು ಬಳಸಿಕೊಂಡಿರುವ ಅನುಭವವಿರುವುದರಿಂದ ಕೇಳುತ್ತಿದ್ದೇನಷ್ಟೆ. ಈ ಆಟೋ ಸಂಖ್ಯೆಯನ್ನು ನಾನು ಡಯಲ್ ಮಾಡಿಲ್ಲ. ನಾನು ಆಟೋದಲ್ಲಿ ಪ್ರಯಾಣ ಮಾಡೋದು ತೀರ ಕಡಿಮೆ ಅನ್ನೋದು ಬೇರೆ ವಿಷ್ಯ.
huh ene exam tension nalli ishtella avnge regAdiddiya? hmmm mEchalebeku ninna patience ge !
ಸಿಕಾಪಟ್ಟೆ ಚೆನ್ನಾಗ್ ಬರೀತೀರ ಕಣ್ರೀ! ಎಸ್ಪೆಶಲ್ಲಿ ಆ ಕಾಮನ್ ಸೆನ್ಸ್ ವಿಷಯಗಳ (ಪೋಲ್ ಟು ಪೋಲ್, ಬಸ್ ಸ್ಟಾಪ್ ಟು ಬಸ್ ಸ್ಟಾಪ್ ಅಂತರ, ಆಓ ಶುಲ್ಕದ ಆರನೇ ಒಂದು ಭಾಗದ ಏರಿಕೆ) ರಿವಿಶನ್ ಮಾಡಿಸಿದ್ದಕ್ಕೆ ವಂದನೆಗಳು! :)
@susheel
tumbaa thanks nimma amulya comment ge. ee revision nange matte lokakke agatya annisitu....adakke maadiside...adanna appreciate maaDiddakke nimagU vandanegaLu !
thanx. nanu rickshadalli hogalla. aparoopakke hogbekadre nim tara swalpa talent baLasteeni inmEle.
Post a Comment