Z : ನಾಳೆ ಚಾಂದ್ರಮಾನ ಯುಗಾದಿ. ಸರ್ವಧಾರಿ ಬರಲಿದ್ದಾನೆ. ನಾನಂತೂ ಬೇವು ಬೆಲ್ಲಕ್ಕೆ ಕಾಯುತ್ತಿದ್ದೇನೆ.
ನಾನು : ಅದು ಅರ್ಧ ಸತ್ಯ. ಪೂರ್ತಿ ಸತ್ಯ ಏನೂ ಅಂತ ನಂಗೊತ್ತು. ರುದ್ರಾಭಿಷೇಕದ ತೀರ್ಥ, ಒಬ್ಬಟ್ಟು, ಪಾಯಸ, ಮಾವಿನ ಕಾಯಿ ಚಿತ್ರಾನ್ನ, ಮೊಸರನ್ನ...ಇವೆಲ್ಲ ಸಿಕ್ಕ್ ಸಿಕ್ಕಾಪಟ್ಟೆ ಮೇಯೋದು ನಿನ್ನ agenda !!!ತಾಯಿ.....ಮಂಗಳವಾರದಿಂದ internals ಇದೆ !! ಓದ್ಬೇಕು !!
Z : ಓದು, ಬರಹ, ಸಾಧನೆ, ಎಲ್ಲಾ ನಿನ್ನ department ಉ. ನಾನು Zindagi. ಭಾವನೆ ಇರೋಳು. ಹಬ್ಬ ಹರಿದಿನ ಎಲ್ಲ ಎಂಜಾಯ್ ಮಾಡೋಳು. ನಿನ್ ಥರ emotionless ಅಲ್ಲ. ಎಲ್ಲದಕ್ಕೂ ಕಾರಣ ಹುಡುಕ್ತಾ ಪ್ರಶ್ನೆ , ತರ್ಕ ಎಲ್ಲ ಮಾಡೋದಿಲ್ಲ !!
ನಾನು : ನಿನ್ emotion ನ ನೀನೆ ಇಟ್ಕೊಂಡು ಉಪ್ಪಿನ್ಕಾಯಿ ಹಾಕೊ. ನನ್ನ practicality ಬಗ್ಗೆ ಚಕಾರ ಎತ್ತ್ಬೇಡ.
Z : ಸರಿ. ನಂಗೂ ಈಗ ಮತ್ತೆ ಜಗಳ ಆಡೋಕೆ mood ಇಲ್ಲ. ಆಗ್ಲೆ ಒಂದು ಸಲ ಇದರ ಬಗ್ಗೆ ನೇ ಸಿಕ್ಕ್ ಸಿಕ್ಕಾಪಟ್ಟೆ ಜಗಳ ಆಡಿ, ನೀನು ಮಾತು ಬಿಟ್ಟು, ಕಡೆಗೆ ನಾನೇ ಸೋಲೊಪ್ಪಿಕೊಳ್ಳುವ ಹಾಗೆ ಮಾಡಿದ್ದೀಯ. ನಿನ್ನನ್ನ ಸೋಲಿಸುವವುದು ಕಷ್ಟ...ನನಗಿಂತ ಹೆಚ್ಚು ಹಠವಾದಿ ನೀನು.
ನಾನು : ಗೊತ್ತಾಯ್ತಲ್ಲ...ಶಾಂತವಾಗಿ silent ಆಗಿ ಹಾಗೆ ಸುಮ್ನೆ ತೆಪ್ಪಗೆ ಇದ್ಬಿಡು. ನಾಳೆ ಗೆ ಏನ್ plan- ಉ ?
Z : ನೀನೆ almost ಎಲ್ಲಾ ತಿಳೀಸಿದಿಯ....ಎರಡು ವಿಷಯ ಮರ್ತೆ. ಪಂಚಾಂಗ ಶ್ರವಣ ಮತ್ತು ರಾಶಿ ಫಲ ಪಠಣ. ಏನ್ ಬರ್ದಿದೆ ನನ್ನ ಭವಿಷ್ಯದಲ್ಲಿ ಅಂತ ತಿಳ್ಕೋಬೇಕು.
ನಾನು : ಲೇ hopeless ! ಕಣ್ಮುಂದೆ ಕಾಣಿಸು ನೀನು ಒಂದ್ ಸರ್ತಿ ! ಕುಟ್ಟುತ್ತೀನಿ ತಲೆ ಮೇಲೆ ! ಭವಿಷ್ಯ ಅಂತೆ ಭವಿಷ್ಯ !ಗ್ರಹಗಳಿಂದ ನಮಗೆ at the most ಆಗೋ effect ಅಂದ್ರೆ gravitational attraction ಒಂದೆ. ಅವ್ರನ್ನೆಲ್ಲಾ ಕರ್ದು ಒಂದೊಂದು ಮನೇಲಿ ಕೂರಿಸಿ ಇವನು ಒಳ್ಳೆಯವನು, ಅವನು ಕೆಟ್ಟವನು, ಇವನಿಂದ ಹೀಗ್ ಆಗತ್ತೆ ,ಹಾಗ್ ಆಗತ್ತೆ ಅಂತೆಲ್ಲ ತರಹೇವಾರಿ ಭವಿಷ್ಯಗಳನ್ನ ಓದಿ mood out ಮಾಡ್ಕೋತೀಯ ...ಅದಕ್ಕೆ ನಿನ್ನ ನಿಷ್ಪ್ರಯೋಜಕಿ ಅನ್ನೋದು !! ನಾಳೆ ನಾನು internals ge ಓದ್ತಿರ್ತಿನಿ. ಮಧ್ಯ ಏನಾದ್ರು ಫೋನ್ ಮಾಡಿ ಭವಿಷ್ಯ ದ್ದು "ಭ" ನು ಎತ್ಬೇಕಲ್ಲ... ಅಷ್ಟೆ !!!!
Z : noooooooooo !!!!!!!!!!! ಇಲ್ಲಾ....ಹಾಗ್ ಮಾಡ್ಬೇಡ...ಪ್ಲೀಈಈಈಈಈಈಈಈಈಸ್ !!!
ನಾನು : good ! ಇದು ದಾರಿಗೆ ಬರೋ ಲಕ್ಷಣ ಅಂದ್ರೆ. ನಾವು ನಮ್ಮ ಪ್ರಯತ್ನ ನ ಶ್ರದ್ಧೆ ಇಂದ ಮಾಡಿದ್ರೆ, sooner or later ನಮಗೆ ಎಲ್ಲಾ ಒಳ್ಳೇದೇ ಆಗತ್ತೆ. Newton's laws are always valid and that's why they are universal. ಗೊತ್ತಾಯ್ತ ? ನಾಳೆ ನನ್ನ ಪ್ರಕಾರ another new day ಅಷ್ಟೆ. lets all pray for a good life. ಜನಕ್ಕೆ ಸದ್ಬುದ್ಧಿ ಬರ್ಲಿ. pollution ಇಂದ warming ಆಗಿ ಯಾವಾಗ್ ಯಾವಗ್ಲೋ ಮಳೆ, ಯಾವಾಗ್ ಯಾವಾಗ್ಲೋ ಚಂಡಮಾರುತಗಳು ಬೀಸುತ್ತಿವೆ. ಇದನ್ನ ಬಗೆಹರಿಸೋ ವಿವೇಕವನ್ನ ಸರ್ವಧಾರಿ ಕರುಣಿಸಲಿ. ಸದ್ಯೋಜಾತನ ದಯೆಯಿಂದ ಅಪಘಾತಗಳು ಆದಷ್ಟು ಕಡಿಮೆ ಆಗಲಿ. ರಾಜಕೀಯ ಮತ್ತು ವ್ಯಾಪಾರಗಳಲ್ಲಿನ ವೈಮನಸ್ಯ ಮತ್ತು unhealthy competition ಕಡಿಮೆ ಆಗಿ, greater good ಗೆ ಪ್ರಪಂಚ aim ಮಾಡಲಿ. ಎಲ್ಲರಿಗೂ ಮನಶ್ಶಾಂತಿ ಲಭಿಸಲಿ. ನೀನು ಹೀಗೆ ಕೇಳಿಕೋ.
Z : ditto !!!
ನಾನು : ಸೋಂಬೇರಿ !! anyways, ಎಲ್ಲರಿಗೂ ಸರ್ವಧಾರಿ ಸಂವತ್ಸರದ ಹಾರ್ದಿಕ ಶುಭಾಶಯಗಳು.
Z : ditto !
ಇವಳು ಮತ್ತೆ ಸೋಂಬೇರಿ ಅಂತ ಬಯ್ಯೋ ಮುಂಚೆ....line on hold !!!
ಜೀವನದೊಂದಿಗಿನ ನಮ್ಮ ಮಾತು lifetime ! ಇದರಲ್ಲಿ incoming -ಊ free outgoing -ಊ free !
ನನ್ನ ज़िंदगीಯೊಂದಿಗಿನ nonstop ಗುಸುಗುಸುವನ್ನು ಇಲ್ಲಿ ಬಿಚ್ಚಿಟ್ಟಿದ್ದೇನೆ.
Subscribe to:
Post Comments (Atom)
ಉತ್ತರಾಯಣ ೩
ನಾನು: ಬೃಂದಾವನಕ್ಕೆ ಹೊರಡಲು ನಾಲ್ಕು ಘಂಟೆಯಷ್ಟೊತ್ತಿಗೆ ರೆಡಿ ಇರಬೇಕು ಎಂದು ಮ್ಯಾನೇಜರ್ ವೆಂಕಟೇಶ್ ಅವರು ಹೇಳಿದ್ದರು. ಇವರೆಲ್ಲರೂ ಊಟ ಮಾಡಿ, ಮಲಗಿ, ಎದ್ದು ರೆಡಿಯಾಗು...
-
ನಾನು : There is always a next time. Z : ಹೌದಾ ? ನಾನು : ಹೌದು. Z : ಪ್ರತೀ ಸಲವೂ ಹೀಗೆ ಆದರೆ ಗತಿಯೇನು ? ನಾನು : ಅದಕ್ಕೆ ನಿನ್ನ pessimistic ಅಂತ ಬೈಯ್ಯ...
-
ನಾನು: ಬೃಂದಾವನಕ್ಕೆ ಹೊರಡಲು ನಾಲ್ಕು ಘಂಟೆಯಷ್ಟೊತ್ತಿಗೆ ರೆಡಿ ಇರಬೇಕು ಎಂದು ಮ್ಯಾನೇಜರ್ ವೆಂಕಟೇಶ್ ಅವರು ಹೇಳಿದ್ದರು. ಇವರೆಲ್ಲರೂ ಊಟ ಮಾಡಿ, ಮಲಗಿ, ಎದ್ದು ರೆಡಿಯಾಗು...
-
ಎಲ್ಲರಿಗೂ ಹೊಸ ವರ್ಷದ ಹಾರ್ದಿಕ ಶುಭಾಶಯಗಳು. ಈ ಬ್ಲಾಗಿನ ಹುಟ್ಟು ಹಬ್ಬ ಮತ್ತು ಹೊಸ ವರ್ಷ ಯಾವಾಗ್ಲು ಒಟ್ಟಿಗೆ ಬರತ್ತೆ. ಆದರೆ, ಮತ್ತೆ ಅದೇ flash back ಗೆ ಹೋಗಿ, ಅದೇ ...
3 comments:
ನಿನಗೂ ಕೂಡ ಸರ್ವಧಾರಿ ನಾವ ಸಂವತ್ಸರದ ಶುಭಾಶಯಗಳು.
ಇದನ್ನು ಓದಿ ನನಗೆ ಸಿಕ್ಕ್ ಸಿಕ್ಕಾಪಟ್ಟೆ ಖುಷಿ ಆಯ್ತು.
ಅದಿರಲಿ... ನೀನು emotionless ಆ? ಸತ್ಯ ಹೇಳಮ್ಮ.
ಸದ್ಯೋಜಾತ...andre?? wat it is??
vivaraNe please..
@ಜಯಶಂಕರ್: ಹೌದು ! "ನಾನು " is emotionless ! ;-)
@ಕರ್ಮಕಾಂಡ ಪ್ರಭುಗಳು : ಸದ್ಯೋಜಾತ ಅನ್ನುವುದು ಸದಾಶಿವನ ಮತ್ತೊಂದು ಹೆಸರು.
Post a Comment