ನಾನು : Z ......... look at this picture !!
Z : nice alva ???
ನಾನು : ಹು !!! education loan ಗೆ IDBI Bank ನವರು Advertise ಮಾಡಿರೋದು !! ಸಕತ್ concept -ಉ !! ನಂಗೆ appeal ಆಯ್ತು !
At the same time ನನಗೆ ಎರಡು ಸುಭಾಷಿತಗಳು ನೆನಪಾದವು.
ಕ್ಷಣಶಃ ಕಣಶಶ್ಚೈವ ವಿದ್ಯಾಂ ಅರ್ಥಂ ಚ ಸಾಧಯೇತ್
ಕ್ಷಣತ್ಯಾಗೇ ಕುತೋ ವಿದ್ಯಾ ಕಣತ್ಯಾಗೇ ಕುತೋ ಧನಮ್
ಅರ್ಥ : ಪ್ರತಿಯೊಂದು ಕ್ಷಣವನ್ನು ಬಿಡದೇ ವಿದ್ಯೆಯನ್ನೂ, ಪ್ರತಿಯೊಂದು ಕಣವನ್ನು ಬಿಡದೇ ಧನವನ್ನೂ ಸಾಧಿಸಬೇಕು ( ಶ್ರಮ ಪಡಬೇಕು ). ಒಂದು ಕ್ಷಣ ತ್ಯಾಗ ಮಾಡಿದರೆ ವಿದ್ಯಾರ್ಜನೆ ಎಂಥದ್ದು ? ಒಂದು ಕಣವು ಅಪೂರ್ಣವಾದರೆ ಧನವೆಂಥದ್ದು ?
ಪುಸ್ತಕಸ್ಥಾ ತು ಯಾ ವಿದ್ಯಾ ಪರಹಸ್ತಗತಮ್ ಧನಮ್
ಕಾರ್ಯಕಾಲೇ ಸಮುತ್ಪನ್ನೇ ನ ಸಾ ವಿದ್ಯಾ ನ ತದ್ಧನಮ್
ಪುಸ್ತಕದಲ್ಲಿರುವ ವಿದ್ಯೆಯೂ, ಬೇರೆಯವರ ಕೈಯಲ್ಲಿ ಕೊಟ್ಟ ಹಣವೂ ಸಮಯಕ್ಕೆ ಸರಿಯಾಗಿ ಉಪಯೋಗಕ್ಕೆ ಬರದಿದ್ದರೆ ಆ ವಿದ್ಯೆ ವಿದ್ಯೆಯೂ ಅಲ್ಲ, ಆ ದುಡ್ದು ದುಡ್ದೂ ಅಲ್ಲ !
ನಮ್ಮ ಪುಸ್ತಕಗಳಲ್ಲಿ ಇರುವ ವಿದ್ಯೆಯನ್ನು ಸಮಯಕ್ಕೆ ಸರಿಯಾಗಿ ಉಪಯೋಗಿಸಿಕೊಳ್ಳಲಿ ಅಂತಲೇ ಬ್ಯಾಂಕ್ ನವರು ನಮಗೆ ದುಡ್ಡು ಕೊಡ್ತಾರೆನೋ ಓದಿ ಅಂತ !! ಬೇರೆಯವರ ಕೈಗೆ ದುಡ್ದು ಕೊಡುವ ಬದಲು ನಮ್ಮ ಬ್ಯಾಂಕ್ ನಲ್ಲೇ ಇಡಿ ಅಥ್ವಾ ನಮ್ಮಿಂದ್ಲೇ ದುಡ್ಡನ್ನು ತಗೊಳ್ಳಿ ಸಮಯಕ್ಕೆ ಬೇಕಾಗತ್ತೆ ಅಂತ ಇರಬಹುದು ಈ Advertisement ಅರ್ಥ !
Z : fulllllllllll ಅರ್ಥ ಆಗೋಯ್ತು ನಂಗೆ !! [ಸ್ವಗತ : over head projection aaytu !! ಪಾಪ ಬೀಜಾರ್ ಮಾಡ್ಕೊಳ್ತಾಳೆ ...ನ ಬ್ರೂಯಾತ್ ಸತ್ಯಮಪ್ರಿಯಮ್ ! ]
ನಾನು : [ಸ್ವಗತ : ಒಂದು ಚೂರು ಅರ್ಥ ಆಗಿರೊಲ್ಲ....ನನ್ನ ಸಂತೈಸಕ್ಕೆ ಹೇಳ್ತಿರೋದು ಅಂತ ನಂಗೆ ಗೊತ್ತು !] . good... ಅರ್ಥ ಆಯ್ತಲ್ಲ !!
ಸರಿ ....ಹೊರಟೆ... internals ide ನಂಗೆ....ಮಧ್ಯ ಯಾವಾಗ್ಲಾದ್ರೂ time ಸಿಕ್ಕಿದ್ರೆ phone ಮಾಡ್ತಿನಿ ಆಯ್ತ ?
Z : done !
ನಾನು : (Line on hold ! )
4 comments:
ಚಿಕ್ಕ ವಯಸ್ಸಿನಲ್ಲಿ (ಈಗಲೂ ಚಿಕ್ಕ ವಯಸ್ಸೆ ಅದು ಬೇರೆ ವಿಷಯ..) ಓದಿದ್ದ ಸುಭಾಷಿತ ಇದು. ಇನ್ನು ಮರೆತಿಲ್ಲ..
ನಿಮ್ಮ observation ಚೆನ್ನಾಗಿದೆ ಮಾ.
ಒಳ್ಳೆ ಸುಭಾಷಿತಗಳು ನೆನಪಿಸಿದ್ದಕ್ಕೆ ಥ್ಯಾಂಕ್ಸ್. BTW, ಆ advertisement ಚೆನ್ನಾಗಿದೆ.
ಶ್ರೀನಿವಾಸ ಕಳ್ಸಿದ್ದ ಈ ಜಾಹೀರಾತುಗಳನ್ನು ನನಗೆ. ಅದರದೇ ಸೆಟ್ನಲ್ಲಿದ್ದ ಇನ್ನೊಂದು ಜಾಹೀರಾತನ್ನು ನಾನೂ ನನ್ನ ಬ್ಲಾಗಿನಲ್ಲಿ ಹಾಕಿರೋದು ಕಾಕತಾಳೀಯ!
ಪುಸ್ತಕ ಮತ್ತು ಧನ - ಒಳ್ಳೇ ಸುಭಾಷಿತಗಳು.
high school nalli oodidh nenpu subhaashitha du..chennagive....
super ad -u
Post a Comment