Wednesday, February 20, 2008

chloroform ಕವಿತೆಯೋ coffee ಕವಿತೆಯೋ ?

ನಾನು : Hi !!!!!!!! sorry ya !! lab nalli ಒಂದು experiment ಬರದೇ ನನ್ನ ತಲೆ ಎಲ್ಲ ಕಂಗೆಟ್ಟು, ನಾನು ದಿಕ್ಕೆಟ್ಟುಹೋಗಿದ್ದೆ. After 4 houurs of toil ಇವತ್ತೂ ಬರ್ಲಿಲ್ಲ !! ತಲೆ ನೋಯುತ್ತಿತ್ತು... time pass ಗೆ ಅಂತ ಒಂದು ಕವನ ಬರ್ದೆ !!

Z : ಮತ್ತೊಂದು chloroform ಕವಿತೆ ನ ? ಆಗೊಲ್ಲ ನನ್ ಕೈಲಿ !! pleeeeeeeeeeease !!!

ನಾನು : ಹೌದಾ ? ಇದೇ ಮಾತಾ ? ಸರಿ, ನಿನ್ನ ಪ್ರಕಾರ ಇದು chloroform ಕವಿತೆ. ನನ್ನ ಪ್ರಕಾರ ಇದು coffee ಕವಿತೆ. ಓದುಗರೆ, ದಯವಿಟ್ಟು ನಮ್ಮಿಬ್ಬರಲ್ಲಿ ಯಾರು ಸರಿ ಅಂತ ನೀವೆ ನಿರ್ಧರಿಸಿ !!

Z : election na ? ಮತ ಬಾಂಧವರೇ....ನನ್ನನ್ನು ಗೆಲ್ಲಿಸಿ chloroform ಇಂದ ಬಚಾವಾಗಿ !! ಇವಳು ಶುರು ಹಚ್ಚಿಕೊಳ್ಳುವ ಮುನ್ನ ನಾನು ತಪ್ಪಿಸಿಕೊಳ್ಳುತ್ತೇನೆ. head ruled u.... ಇವತ್ತು ನಿನಗೆ ತಿಳಿಸಿಯೇ going u !!

ನಾನು : ಹೋಗೇ !! ಎಲ್ಲಿಗೆ ಹೋಗ್ತಿಯ ? ಕೋಪ ಬಂದು, frustrate aagi, time pass ge lollypop ತಿಂದುಕೊಂಡು ಇರ್ತಿಯ ಮೂಲೆ ಲಿ !!! ಬಿದ್ದಿರು ಅಲ್ಲೇ!! election results ಬರ್ಲಿ !! ಆಗ ಗೊತಾಗತ್ತೆ !!

ಹ...ಈಗ ನನ್ನ ಕವನ ನ ಶುರು ಮಾಡ್ತಿನಿ.

ನೀ ಕಾಡುತ್ತಿಹೆ ಏಕೆ ?

ತಂಗಾಳಿ ಬೀಸಿದಾಗ ಮೈ ಹಗುರಾಗುತ್ತಿತ್ತು,
ಇಂದು ಬೀಸಿದಾಗ ಮೈ ಭಾರವಾಯಿತೇಕೆ ?

ಹುಣ್ಣಿಮೆಯ ಚಂದ್ರನಲ್ಲಿ ಮೊಲ ಮಾತ್ರ ಕಾಣುತ್ತಿತ್ತು
ಶಶಾಂಕನಲ್ಲಿ ನಿನ್ನ ಮೊಗವು ಇಂದು ಕಂಡಿತೇಕೆ ?

ತುಂತುರು ಮಳೆ ಸುರಿದೆ ಧರೆಯೆಲ್ಲಾ ತಂಪಾಗೆ
ನನ್ನ ತನುವು ಮಾತ್ರ ಇಂದು ಬಿಸಿಯಾಯಿತೇಕೆ ?

ನಿನ್ನ ಕುಡಿನೋಟ ಮೃಷ್ಟಾನ್ನ ನಿನ್ನ ಮಾತೇ ಜೋಗುಳ
ಹಸಿವು ನಿದಿರೆ ನಿಯತಿ ಮೀರಿ ನಡೆಯುತ್ತಿದೆ ಏಕೆ ?

ಬಾಳಿನಲ್ಲಿ ಇಂದೆಲ್ಲಾ ಸುಖಗಳು ತುಂಬಿದ್ದರೂ
ಅಪೂರ್ಣತೆಯು ಇನ್ನೂ ಇಣುಕುತ್ತಿದೆ ಏಕೆ ?

ತೊರೆದೆಲ್ಲಾ ಸಿರಿಯನ್ನು ನಾನಿನ್ನ ಹುಡುಕಿದರೂ
ಕಾಣಿಸದೇ ನೀ ಕಾಡುತ್ತಿಹೆ ಏಕೆ ?


vote maaDi !!

A : chloroform

B : coffee.

Sunday, February 17, 2008

The best mail out of 5311 useful messages in my mailbox

ನಾನು : Z.....please read this !! This is the best mail I have got !! This is from one of my best friends. ಎಷ್ಟು ಅರ್ಥಪೂರ್ಣವಾಗಿದೆ ಅಂದ್ರೆ ಇದು...ಕಣ್ಣಲ್ಲಿ ನನಗೆ ನೀರು ಬಂತು...ನಿಜವಾಗಲು...that too without going to the theatre !!

Z : ಹೌದಾ ? ಹಾಗಾದ್ರೆ ಇದು ಯಾವುದೋ extra-ordinary ಈಮೈಲ್ ಇರ್ಬೇಕು .paste ಮಾಡು...ಓದ್ತಿನಿ.

ನಾನು :

The woman in your life...very well expressed...

Tomorrow you may get a working woman, but you should marry her with these facts as well.

Here is a girl, who is as much educated as you are;
Who is earning almost as much as you do;

One, who has dreams and aspirations just as
you have because she is as human as you are;

One, who has never entered the kitchen in her life just like you or your
Sister haven't, as she was busy in studies and competing in a system
that gives no special concession to girls for their culinary achievements

One, who has lived and loved her parents & brothers & sisters, almost as
much as you do for 20-25 years of her life;

One, who has bravely agreed to leave behind all that, her home, people who love her, to adopt your home, your family, your ways and even your family name

One, who is somehow expected to be a master-chef from day #1, while you sleep oblivious to her predicament in her new circumstances, environment and that kitchen

One, who is expected to make the tea, first thing in the morning and cook food at the end of the day, even if she is as tired as you are, maybe more, and yet never ever expected to complain; to be a servant, a cook, a mother, a wife, even if she doesn't want to; and is learning just like you are as to what you want from her; and is clumsy and sloppy at times and knows that you won't like it if she is too demanding, or if she learns faster than you;

One, who has her own set of friends, and that includes boys and even men at her workplace too, those, who she knows from school days and yet is willing to put all that on the back-burners to avoid your irrational jealousy, unnecessary competition and your inherent insecurities;

Yes, she can drink and dance just as well as you can, but won't, simply Because you won't like it, even though you say otherwise

One, who can be late from work once in a while when deadlines, just like yours, are to be met;

One, who is doing her level best and wants to make this most important, relationship in her entire life a grand success, if you just help her some and trust her;

One, who just wants one thing from you, as you are the only one she knows in your entire house - your unstinted support, your sensitivities and most importantly - your understanding, or love, if you may call it.

But not many guys understand this......

Please appreciate "HER"



Z :superru !!! fantasticcu !! ಸಖತ್ !! ನನಗೂ ಅಳು ಬರ್ತಿದೆ !! sniff !! sniff !! sniff !!!

ನಾನು : ಹೌದಾ ? ನೀನು KRS dam gate open ಆದಾಗ ಬರೋ ಕಾವೇರಿ ಪ್ರವಾಹದ ಥರ ಅಳ್ತಿಯಾ !! ನೋಡಲಾರೆ !!
line on hold !!

Saturday, February 16, 2008

ವಾಹ್ !! ಮಂಗಳೂರು !! ಭಾಗ ೩

ನಾನು : ಹೇಗಿದೆ ನನ್ನ ಮೊದಲ ಕವಿತೆ ?

Z : chloroform ಥರ ಇದೆ!! 48 hours ಪ್ರಜ್ಞಾರಹಿತಳಾಗಿದ್ದೆ ನಾನು !!

ನಾನು : ಸಾಕು ಸಾಕು ...ಒಬ್ಬರನ್ನ ನಾವು ಎಷ್ಟು under-estimate ಮಾಡ್ತಿವೋ ಅಷ್ಟೇ dosage ನಲ್ಲಿ ನಾವು ನಮಗೇ chloroform ಕೊಟ್ಟುಕೋತೀವಿ ಅವರು ನಮ್ಮ ನಿರೀಕ್ಷೆ ಮೀರಿದಾಗ !! ನಿನಗಾಗಿದ್ದೂ ಇದೇ !! ಸದಾ ಬದುಕನ್ನು ಕುಹಕ ಮತ್ತು ನಕಾರಾತ್ಮಕ ದೃಷ್ಟಿಯಿಂದ ನೋಡಿದರೆ...ಹೀಗೆ ಪ್ರಜ್ಞಾರಹಿತರಾಗೇ ಇರುತ್ತೀಯಾ..ಮೊದಲು ನೀನು ನಿನ್ನ ಅತೀ ಕುಹಕ,under estimation ಅನ್ನು ನಿಲ್ಲಿಸು !! ಆಯ್ತಾ ?

Z : yes boss !!

ನಾನು : very good ! ಹೇಳಿದ ಮಾತನ್ನ ಕೇಳುವವರು ತುಂಬಾ ಒಳ್ಳೆಯವರು !! ಈಗ ಮಂಗಳೂರು ಕಥೆಯನ್ನ continue ಮಾಡ್ತಿನಿ.

Z : ಹಾ !! yes !! ಮಾಡು ಮಾಡು !!

ನಾನು : ಜನವರಿ ೧೭ ನೆ ತಾರೀಖು ಕಣ್ಣು ಬಿಟ್ಟಾಗ ಗಡಿಯಾರ ೭ ಗಂಟೆ ತೋರಿಸುತ್ತಿತ್ತು. ಎದ್ದೆ...ನನ್ನಿಬ್ಬರು ಸ್ನೇಹಿತೆಯರು ಇನ್ನೂ ನಿದ್ದೆಯ ಸೆರಗಲ್ಲೇ ಇದ್ದರು . ಎಬ್ಬಿಸಲು ಮನಸ್ಸಾಗದೇ ಹಾಗೆ ನಡೆದೆ. ಅಂಕಲ್ ಪ್ರಾತಃ ಸಂಧ್ಯಾವಂದನೆ ಮಾಡುತ್ತಿದ್ದರು. ಅದಕ್ಕೇ coffee ನಾನೇ ಮಾಡಿಕೊಂಡೆ. ಅವರ ಮನೆಯ terrace ಮೇಲೆ ಹತ್ತಿ coffee ಯ ಸವಿಯನ್ನು ಸವಿಯುತ್ತಾ ಸುತ್ತ ಮುತ್ತ ಕಣ್ಣಾಡಿಸಿದೆ. ಬೆಂಗಳೂರಂಥಾ concrete ಕಾಡಿನಲ್ಲಿ one patch of greenery ನೋಡೋದು ಎಷ್ಟು ಅಪರೂಪ !! ಅಲ್ಲೆಲ್ಲಾ ಎಲ್ಲರ ಮನೆಗಳ ಮುಂದೆಯೂ ಮರಗಳು, ಗಿಡಗಳ ಸಾಲು...ಕಣ್ಣಿಗೆ ತುಂಬಾ ತಂಪನ್ನು ನೀಡಿತು !! ಮಂಗಳೂರು ಎಷ್ಟೇ industrialise and cosmopolitan ಆದರೂ ಬೆಂಗಳೂರಷ್ಟು ಕೆಡದಿರಲಿ ಅಂತ ನಾನು ಪ್ರಾರ್ಥನೆ ಮಾಡಿದೆ !! ಅರ್ಧಾ ಗಂಟೆ ಅಲ್ಲೇ ನಿಂತು ಕಾಫಿಯನ್ನು ಗುಟುಕುಗಳಲ್ಲಿ ಹೀರಿದೆ. ನಂತರ ಕೆಳಗೆ ಬಂದಾಗ ನನ್ನ ಸ್ನೇಹಿತೆಯರಿಬ್ಬರೂ ಎದ್ದಿದ್ದರು. ಸ್ನಾನ, ತಿಂಡಿ ಎಲ್ಲಾ ಮುಗಿಸಿ ಮಂಗಳೂರು ಸುತ್ತಲು ಸಜ್ಜಾದೆವು.

Z : ಎಷ್ಟೊತ್ತಿಗೆ ಹೊರಟಿರಿ ?

ನಾನು : ೧೦.೩೦ ಗೆ !! ಊರಲ್ಲಿ ತಾನೇ ಸುತ್ತೋದು, ಏನ್ ಮಹಾ ಅಂತ ನಿಧಾನಕ್ಕೆ ready ಆದ್ವಿ. ಮೊದಲು ಕುದ್ರೋಳಿಯಲ್ಲಿರುವ ಗೋಕರ್ಣಾಥೇಶ್ವರ ದೇವಸ್ಥಾನಕ್ಕೆ ಹೋದೆವು. ಮಂಗಳೂರಿನ ಅತ್ಯಂತ "ಶ್ರೀಮಂತ " ದೇವಸ್ಥಾನವಾದ ಇಲ್ಲಿ ಎಲ್ಲಾ ದೇವರುಗಳಿಗೂ ಚಿನ್ನದ ಕವಚಗಳನ್ನು ತೊಡಿಸಿದ್ದರು !! ಮುತ್ತು ರತ್ನ ಹವಳಗಳಿಂದ ಅಲಂಕರಿಸಿದ್ದರು. ಆಕರ್ಷಕ ಕೆತ್ತನೆಗಳು ಪ್ರಶಂಸನೀಯ ಮತ್ತು ಶುಚಿತ್ವ ನಿಜಕ್ಕೂ ಅನುಕರಣೀಯ !! ಕಳಶದ ಆಕಾರದಲ್ಲೊಂದು ಬಾವಿಯಿದೆ. very cute !! ಕೃಷ್ಣ-ಅರ್ಜುನರ ರಥವಂತು ನಮಗೆ ನಿಜವೆನ್ನಿಸುವ ಹಾಗೆ ಕೆತ್ತಿದ್ದಾರೆ !!ಉದ್ಯಾನ ವನದಲ್ಲಿರುವ ಪ್ರಾಣಿಗಳ ಬೊಂಬೆಗಳು ಬೊಂಬೆ ಅಂತ ಅನ್ನಿಸೋದೇ ಇಲ್ಲ !! ಅಲ್ಲೊಂದು "ಗಂಗಾವತರಣ " ಎನ್ನುವ ಬೃಹತ್ ಕಾರಂಜಿ ಇದೆ. ಅದು ಏಷ್ಯಾ ಖಂಡದ ಅತಿ ದೊಡ್ದ ಕಾರಂಜಿ. ಶಿವನ ಜಟೆಯಿಂದ ಹೊರ ಬರುವ ಗಂಗೆ ಕಣ್ಣಿಗೆ ಹಬ್ಬವೇ ಸರಿ !! ಆದರೆ ಅದನ್ನು ನೋಡುವ ಭಾಗ್ಯ ನಮಗೆ ಇಲ್ಲವಾಯ್ತು. ಯಾಕಂದೆರೆ ಅದನ್ನು ಹಾಕುವುದೇ ಸಂಜೆ ವೇಳೆಗೆ!!ಅದನ್ನು ನೋಡಲಿಕ್ಕೇ ನಾನು ಮತ್ತೊಮ್ಮೆ ಮಂಗಳೂರಿಗೆ ಹೋಗಲೇ ಬೇಕು !!

Z : ಇಷ್ಟೋಂದು ಹೊಗಳುತ್ತಿದ್ದೀಯ ಅಂದಮೇಲೆ ಹೋಗೋಣ !! ನನಗೂ ಆಸೆ ಆಗ್ತಿದೆ !!

ನಾನು : ಮುಗಿಲಿ M.Sc !! ಆಮೇಲೆ ಹೋಗೋಣ !! ಅಲ್ಲಿಂದ ideal ice creams ಅನ್ನುವ famous ice cream parlour ಗೆ ಬಂದು ಕವಡೆ ಆಟ ಆಡಿ ice cream ಗಳನ್ನ choose ಮಾಡಿ ತಿಂದ್ವಿ !!

Z : ಯಾರೂ ನೋಡಿ "ಯಾರಪ್ಪ ಈ ಗಲಾಟೆ ಗಂಗಮ್ಮಂದಿರು ?" ಅಂದುಕೊಳ್ಳಲಿಲ್ವಾ ?

ನಾನು : no chance !! ಯಾಕಂದ್ರೆ ಅಲ್ಲಿ ಇದ್ದಿದ್ದು ನಾವು ಮೂವರೇ !! ;-) ಸಖತ್ ಮಜ ಮಾಡಿದ್ವಿ !! ನಂತರ St. Aloysius chapel ಗೆ ಬಂದ್ವಿ. ಮಂಗಳೂರಲ್ಲಿ ನೋಡಲೇ ಬೇಕಾದ ಜಾಗ ಅದು !! ಗೋಡೆಯ ಮತ್ತು ತಾರ್ಸಿಯ ಮೇಲೆ ಒಂದು ಇಂಚನ್ನೂ ಬಿಡದೇ ಏಸು ಕ್ರಿಸ್ತನ ಜೀವನವನ್ನು paint ಮಾಡಿದ್ದಾರೆ !!! ನೋಡೋಕೆ ನಿಜವಾಗಲೂ ಎರಡು ಕಣ್ಣೂ ಸಾಲದು !! ಎಂತಹಾ ಶಾಂತಿ ಅಲ್ಲಿ !! ನಿಜವಾಗಲೂ ಕಲೆ, ಚರಿತ್ರೆ ಮತ್ತು ಅಭಿರುಚಿಯ ದೃಷ್ಟಿಯಿಂದ "must see " ಜಾಗ !!

Z : ಹೌದಾ ? ಫೊಟೋ ಪ್ಲೀಸ್ !!

ನಾನು : ತೋರ್ಸಲ್ಲ !! ಅದನ್ನ ಖುದ್ದಾಗಿ ಹೋಗಿ ನೋಡಿದರೇನೆ ಚೆಂದ !! ಇದೊಂದೇ ಏನು...ನಾನು ಯಾವ ಜಾಗದ ಫೋಟೋ ನೂ ತೋರ್ಸಲ್ಲ !! ಅವನ್ನೆಲ್ಲ ಹೊಗಿಯೇ ನೋಡಬೇಕು !! ನಾನೇ ಕರ್ಕೋಂಡು ಹೋಗ್ತಿನಿ ನಿನ್ನ...ಅಲ್ಲಿ ತಂಕ wait !!

Z : ದೇವರೇ...M.Sc ಬೇಗ ಮುಗಿಯಲಿ ಇವಳದ್ದು !!

ನಾನು : ಗಡಿಬಿಡಿ raani !! ಜೀವನದಲ್ಲಿ ಸ್ವಲ್ಪ ತಾಳ್ಮೆ ಇರ್ಬೇಕು !!

Z : hmm...... !!!!!!! continue !!

ನಾನು : ಅಲ್ಲಿಂದ ಅತ್ರಿ book stall ಅಂತ ಒಂದು ಜಾಗಕ್ಕೆ ಬಂದು ನಾನು ದೇವುಡು ಅವರ ಮಹಾ ಬ್ರಾಹ್ಮಣ, ಮಹಾ ಕ್ಷತ್ರಿಯ ಮತ್ತು ಮಹಾದರ್ಶನ ಹಾಗೂ ಪೂಚಂತೇಯವರ ಕರ್ವಾಲೋ ಖರೀದಿಸಿದೆ. ಹೋದ ಕಡೆಯಲ್ಲೆಲ್ಲ ನಾನು ಪುಸ್ತಕಗಳನ್ನೇ ಖರೀದಿಸೋದು. Show piece ಗಳೆಲ್ಲಾ ನಶ್ವರ . ಜ್ಞಾನವೊಂದೇ ಶಾಶ್ವತ ಅನ್ನೋ principle ನ ನಾನು ardent ಆಗಿ follow ಮಾಡ್ತಿನಿ.

Z : ಜೀವನದಲ್ಲಿ ಇದೊಂದೇ ಒಳ್ಳೇ ಕೆಲ್ಸ ಮಾಡೋದು ನೋಡು ನೀನು !!

ನಾನು : ಲಟ್ಟಣಿಗೆ ಇಂದ ಒಂದು ಕುಟ್ಟಿತೀನಿ ನೋಡು ತಲೆ ಮೇಲೆ !! ಅತಿ ಆಯ್ತು !!

Z : sorry sorry sorry !! ಅವೆಲ್ಲ ಬೇಡ !! continue please, continue !!!

ನಾನು : Now that's better !! ಅಲ್ಲಿಂದ ಕದ್ರಿ ಗೆ ಹೋದ್ವಿ. ಕದ್ರಿಯಲ್ಲಿ ಮಂಜುನಾಥೇಶ್ವರ ದೇವಸ್ಥಾನ ಪುರಾಣ ಪ್ರಸಿದ್ಧ.ಕಾಶಿಯಿಂದ ಗಂಗೆಯು ಗುಪ್ತಗಾಮಿನಿಯಾಗಿ ಹರಿದು ಗೋಮುಖ ಗಣಪತಿಯ ಪಾದದಿಂದ ಕದ್ರಿಗೆ ಧುಮುಕುತ್ತಾಳೆ. ಅಲ್ಲಿಯೇ ಒಂದು ಲಿಂಗವಿದೆ.ಭಕ್ತಾದಿಗಳು ಸ್ವತಃ ಈ ಗಂಗೆಯನ್ನು "plastic" ಚೊಂಬುಗಳಲ್ಲಿ ಕೊಂಡೊಯ್ದು ಈಶ್ವರನಿಗೆ ಅಭಿಷೇಕ ಮಾಡಬಹುದು!! ಏನು ಚೆನ್ನಾಗಿತ್ತು ಗೊತ್ತಾ ? ನಾನು ಮಹಾ ಮೃತ್ಯುಂಜಯ ಮಂತ್ರವನ್ನು ಪಠಣ ಮಾಡುತ್ತಾ ಧಾರಾಪಾತ್ರೆಗೆ ನೀರು ಹಾಕಿ ಪುನೀತಳಾದೆ !!

Z : nice... very nice !!! ಆದರೆ plastic ಬದಲು ಹಿತ್ತಾಳೆಯೋ ಕಂಚೋ ಇಟ್ಟಿದ್ದಿರೆ ಚೆನ್ನಾಗಿ ಇರ್ತಿತ್ತು !!

ನಾನು : ಈ plastic ಎಂಬ ಪೆಡಂಭೂತ ಬೇಗ ತೊಲಗುವುದು ಅನುಮಾನ !!ಆದರೂ ನಾವೆಲ್ಲ ನಮ್ಮ ಕೈಲಾದಷ್ಟು ಪ್ರಯತ್ನ ಮಾಡಬೇಕು ಇದನ್ನ ಓಡಿಸೋಕೆ !!

ಅಲ್ಲಿ ಜಾತ್ರೆ ಇದ್ದಿದ್ದರಿಂದ ಒಂದು ವಾರ special ಅನ್ನ ಸಂತರ್ಪಣೆ ಇತ್ತು. ನಮಗೂ ಸುತ್ತಾಡಿ ಸುತ್ತಾಡಿ ಆದ ಆಯಾಸದಿಂದ ಜಠರಾಗ್ನಿ ಪ್ರಜ್ವಲಿಸುತ್ತಿತ್ತು. ಒಂದೂ ಬಿಡದೇ ಹಾಕಿದ್ದೆಲ್ಲ ತಿಂದೆವು. ಎಲೆಯೊಂದನ್ನೇ ಬಿಡಬೇಕಲ್ಲಾ ಅಂತ ಬಿಟ್ಟು ಬಂದೆವು. ಊಟ ಮಾತ್ರಾ... high class !! ಕ್ಷೇತ್ರ ಮಹಿಮೆ ನೋಡು !! ಪ್ರಸಾದ super !!

ಅಲ್ಲಿಂದ ಮನೆಗೆ ಬಂದು, one stage of packing ಮುಗಿಸಿ ಪೆಣಂಬೂರು ಬೀಚಿಗೆ ತೆರಳಿದೆವು. ನಮಗೆ ಸೂರತ್ಕಲ್ಲಿಗೆ ಹೋಗುವ ಆಸೆ ಇತ್ತಾದರೂ ರಾತ್ರಿಯ ರೈಲಿಗೆ reservation ಇದ್ದಿದ್ದರಿಂದ ಈ ಬೀಚಿಗೆ ಹೋಗಬೇಕಾಗಿ ಬಂತು !!

Z : ಹೇಗಿದೆ ?

ನಾನು : not so clean...But tolerable. it did not matter to me in any way. ನಾನು ನೀರಿನಲ್ಲೆಲ್ಲಾ ಇಳಿಯುವುದಿಲ್ಲ ಅಂತ ಅಮ್ಮಂಗೆ promise ಮಾಡಿದ್ದೆ. ಆದರೆ ನನ್ನ ಕಾಲಿಗೆ ಬರುತ್ತಿದ್ದ ಸಣ್ಣ ಸಣ್ಣ ಅಲೆಗಳು ನನ್ನ ಕಾಲಿಗೆ ಕಚಗುಳಿಯನ್ನಿಟ್ಟು ಕೀಟಲೆ ಮಾಡಿದವು !! ಲೋಕವನ್ನೇ ಮರೆಯುವ ಹಾಗೆ ಮಾಡಿದವು. ನನ್ನ ಸ್ನೇಹಿತೆಯರು ನಡೆದು ಮುಂದೆ ಹೋಗುತ್ತಿದ್ದರು. ನೋಡಿದಷ್ಟುದ್ದಕ್ಕೂ ಸಮುದ್ರವೇ !! ಅಪೂರ್ವ !! ರಮಣೀಯ !! ಮನೋಹರ !! ನಂತರ ನಾನೂ ಮೆಲ್ಲನೆ ನಡೆದು ನನ್ನ ಸ್ನೇಹಿತೆಯರನ್ನು ಸೇರಿಕೊಂಡೆ. shadow photographs ಮತ್ತು " foot prints on the sands of penambur", ಮುಂತಾದ ಮಹತ್ಸಾಧನೆಗಳ ನಂತರ ಆಟೋ ಲಿ ಮನೆ ತಲುಪಿದೆವು.ನಮಗೆ ಮಂಗಳೂರು ಬಿಡಲು ಮನಸ್ಸೇ ಇರಲಿಲ್ಲ...ಆದರೆ ಬೇರೆ ವಿಧಿಯೇ ಇರಲಿಲ್ಲ. ಎರಡು ದಿನಗಳಲ್ಲಿ ನಾವು ಇಷ್ಟೆಲ್ಲ ಜಾಗಗಳನ್ನ ನೋಡಿ ಬಂದಿದ್ದು ಮಂಗಳೂರಿನವರ ಪ್ರಕಾರ ಮಹತ್ಸಾಧನೆ !! ನಮಗೆ ಪರಮಾನಂದ !! ಎಲ್ಲರಿಗೂ bye ಹೇಳಿ taxi ಲಿ station ತಲುಪುವ ವೇಳೆಗೆ traffic jam !!

Z : what ????? !!!! ಮಂಗಳೂರಲ್ಲಿ traffic jam ಆ ?

ನಾನು : ಹು !! unbelievable, but true !! ೭.೪೦ ಕ್ಕೆ train. naavu 7.25 ಆದ್ರೂ station ತಲುಪಲಿಲ್ಲ. jab we met case ಆಗಬಹುದೆಂದು ನಾವು ಅಂದುಕೊಂಡೆವು. ಆದರೆ ೭.೩೫ ಗೆ station ತಲುಪಿ ನೋಡಿದರೆ ..exact jab we met ಥರ passage seat !!! unfortunately for us, ಯಾವ shahid kapoor - ಊ ನಮ್ಮೆದುರು ಇರ್ಲಿಲ್ಲ !! train ಹೊಸದಾಗಿತ್ತಾದ್ದರಿಂದ ಶುಚಿಯಾಗಿತ್ತು. ಆದರೆ berth ಗಳು ಹತ್ತಲು ಕಷ್ಟ ಪಡಬೇಕು. ನಾವಿಬ್ಬರೂ ಅದಕ್ಕೆ ready ಇರಲಿಲ್ಲ.TC annu ಕೇಳಿ ಹಿಂದಿದ್ದ lower berth ಗೆ ನನ್ನ ಸ್ನೇಹಿತೆ shift ಆದಳು. ನಾವು aunty ಕೊಟ್ಟ ಚಪಾತಿಯನ್ನು ತಿಂದು,ನಮ್ಮ ನಮ್ಮ berth ಗೆ ತೆರಳಿದೆವು. ಮಹಾದರ್ಶನ ಕಾದಂಬರಿಯಲ್ಲಿ ಕೆಲ ಕಾಲ ತಲ್ಲೀನಳಾಗಿದ್ದೆ. ಮುಸುಕು ಹೊದ್ದಿ ಮಲಗಿದ್ದೆ.ಆದರೆ ನಂಗೆ ನಿದ್ದೇ ನೆ ಬರ್ಲಿಲ್ಲ. ಕನ್ನಡಕ ಬ್ಯಾಗ್ ನಲ್ಲಿ ಅತೀ ಜೋಪಾನವಾಗಿ ಇಟ್ಟಿದ್ದ ಕಾರಣ ಮತ್ತೆ ಹುಡುಕಿದರೂ ಅದು ಸಿಕ್ಕಲಿಲ್ಲ,even with lights on !! ಆದ್ದರಿಂದ ನನಗೆ ರಾತ್ರಿಯಲ್ಲಿ ಪಶ್ಚಿಮ ಘಟ್ಟಗಳ ಸೌಂದರ್ಯ ಕಾಣಲಿಲ್ಲ !! ಹಾಗೇ ಯಾವಾಗಲೋ ಮಂಪರು ಹತ್ತಿತ್ತು. ಮೈಸೂರು ನಿಲ್ದಾಣದಲ್ಲಿ ರೈಲು ಬಹಳ ಕಾಲ ನಿಂತಿತ್ತಾದ್ದರಿಂದ ನನಗೆ ಎಚ್ಚರವಾಯ್ತು. ಆಮೇಲೆ ರಾಮನಗರದಲ್ಲಿ ಅರ್ಧ ಗಂಟೆ ನಿಲ್ಲಿಸಿ, ಕಡೆಗೂ ಬೆಂಗಳೂರು ತಲುಪಿತು. ನಾವು ಓಕಳಿಪುರಮ್ ಬಳಿ ಇಳಿದಿದ್ದೇವೆ ಎಂದು ತಿಳಿಯುವಷ್ಟರಲ್ಲಿ ಅರ್ಧ ಗಂಟೆಯಾಗಿತ್ತು. ನಮ್ಮ ತಂದೆಗೆ ಫೋನಿಸಿ ಅಲ್ಲಿಗೇ ಬರಲು ಹೇಳಿ ಕಾರಲ್ಲಿ ಮನೆಗೆ ತಲುಪಿದೆವು. ಮಂಗಳೂರಿನ ವರ್ಣನಾತೀತ ಅನುಭವಗಳನ್ನು ಮನಸ್ಸೆಂಬ ಬೃಹತ್ ಹಾಳೆಯ ಮೇಲೆ ವರ್ಣಮಯವಾಗಿ ಚಿತ್ರಿಸಿ, ಅದರ ನೆನಪಿನಲ್ಲೇ ಮನೆಗೆ ಹೊರಟೆವು.

Z : ವಾಹ್ !! nice !! very nice !! ಮಂಗಳ ಹಾಡೋಣವಾ ? " ಇತಿ ನಾನು + zindagi ವಿರಚಿತ zindagi calling ಪುರಾಣೇ ವಾಹ್ !! ಮಂಗಳೂರು !! ನಾಮ ಅಧ್ಯಾಯ: ಸಂಪೂರ್ಣಮ್ " !!

Thursday, February 14, 2008

ಬರಬಾರದೇ ?

ನಾನು : ಇವತ್ತು ಒಂದು ಕವನ ಬರೀಬೇಕು ಅಂತ ಅಂದುಕೊಂಡಿದಿನಿ.

Z : ಓದುಗರೇ ಒಂದು ಮುನ್ನೆಚ್ಚರಿಕೆ. amrutaanjan, aspirin, ನೀರು ಇವು ಮೂರನ್ನೂ ನಿಮ್ಮ ಬಳಿ ಇಟ್ಟುಕೊಳ್ಳದೇ ಖಂಡಿತ ಮುಂದಕ್ಕೆ ಓದಬೇಡಿ !!ಆಮೇಲೆ ನಾನು warn ಮಾಡಲಿಲ್ಲ ಅಂತ ಬೈಬೇಡಿ !!

ನಾನು : you are such a cynic !! ಜೀವನದಲ್ಲಿ first time, ಅದೂ valentine's day ದಿನ ಕವನ ಬರಿಬೇಕು ಅಂತ ಅನ್ನಿಸಿತಪ್ಪ....try ಮಾಡೋದ್ರಲ್ಲಿ ಏನ್ ತಪ್ಪು ?

Z : ನಿಮ್ಮಂಥ head ruled people ಗೆಲ್ಲಾ ಆಗೊಲ್ಲ ಕವನ ಕವಿತೆ ಬರೆಯೋದು ಎಲ್ಲ !! ಅದಕ್ಕೆ ಹೃದಯ ಬೇಕು ಹೃದಯ !! ನೀನೋ...ಹೃದಯದ ಯೋಚನೆಗೆಳಿಗೆ 7 lever navtal lock ಹಾಕಿದ್ದೀಯ.ಭಾವನೆಗಿಂತ ನಿನಗೆ ಕರ್ತವ್ಯ ಮುಖ್ಯ. Heart is an organ that pumps blood. Dont make it think ...It strains it !! ಅಂತೆಲ್ಲ ವಾದಿಸುವವಳು. ತೊಂದ್ರೆ ತಗೋಬೇಡ...ನಿನ್ನ ಕೈಯಲ್ಲಿ ಕವನ ಬರೆಯೋಕೆ ಆಗೊಲ್ಲ. ಪ್ರೀತಿ ಪ್ರೇಮ ಪ್ರಣಯದ ಬಗ್ಗೆ ಅಂತೂ...chance-ಏ ಇಲ್ಲ !!!

ನಾನು : ಆಯ್ತಾ ? ಮುಗಿತಾ ? ಇನ್ನು ನಿಶ್ಶಬ್ದ. ಇವತ್ತು ಬೀಗ ತೆಗಿತಿನಿ. ನೋಡೋಣ ಅದು ಏನಾಗತ್ತೋ !

ಹೊಂಗಿರಣ ನೀ ಬಾರದೇ
ಈ ಮನಕಮಲವು ಅರಳದು.
ವರಶಿಲ್ಪಿ ನೀ ಉಳಿಯಿಡದೇ
ಈ ಕಲ್ಲು ಶಿಲೆ ಆಗದು.

ನಿನ್ನ ದೃಷ್ಟಿ ಬೀಳದೇ
ನನ್ನ ಬದುಕು ವ್ಯರ್ಥವು.
ನಿನ್ನ ಒಲುಮೆಯಿಂದಲೇ
ಬಾಳಿಗೊಂದು ಅರ್ಥವು.

ನನ್ನೀ ಪ್ರೀತಿ ಲತೆಗೆ
ನೀನೆ ತಾನೆ ಆಸರೆ ?
ಇನ್ನೆಷ್ಟು ದಿನ ನಾನಾಗಲಿ
ಕಹಿ ವಿರಹದ ಕೈಸೆರೆ ?

ಕಾದಿದೆ ನನ್ನ ಮನದಾಗಸ
ಶಿಖಿ ನಿನ್ನ ಬೆಳದಿಂಗಳಿಗೆ !
ನಿನ್ನ ದರ್ಶನ ಭಾಗ್ಯವದು
ಎಂದುಂಟೋ ಈ ಕಂಗಳಿಗೆ ?

ಬಸವಳಿದು ಹೋದೆ ನಾನು
ನಿನ್ನ ಮೊಗವ ನೋಡದೇ..
ಉಸಿರು ಉಡುಗಿ ಹೋಗುವ ಮುನ್ನ
ಒಮ್ಮೆಯಾದರೂ ಬರಬಾರದೇ ?

ಜಿಂದಗಿ ??? ಜಿಂದಗಿ ?? ...ಮಾತಾಡದೇ ಎಲ್ಲೋ ತಪ್ಪಿಸಿಕೊಂಡಿದ್ದಾಳೆ ಕಳ್ಳಿ!!ಅವಳು ಸಾವರಿಸಿಕೊಂಡು ಬರುವ ವರೆಗೂ...line on hold !

Tuesday, February 5, 2008

ಕೊನೆಗೂ ಸಿಕ್ಕಿದ....ಧ್ರುವ !!

Z : 2nd week of college..... lakshmi is always looking up towards the sky...All day ...All night!

ನಾನು : ಇಷ್ಟು ವರ್ಷ ಪುಸ್ತಕದೊಳಗೆ ಮುಳುಗಿದ್ದಾಯಿತು...ಈಗಲಾದರೂ ಕತ್ತೆತ್ತೋಣ ಅಂತ...ಸಂಕ್ರಾಂತಿ resolution !!

Z : ವಿಠ್ಠಲ ನರಹರಿ ಮಾಧವ ಕೇಶವ ಗೋವಿಂದ ಜನಾರ್ಧನ ಕೃಷ್ಣ ....!!!!

ನಾನು : ಇವರು ಯಾರು ನಂಗೆ ನಿಜ್ವಾಗ್ಲು ಗೊತ್ತಿಲ್ಲ !!!

Z : .... + 993 allotropic forms of Vishnu....wherever you people are scattered...Help !!!!!!!!!!!!!!!!!!!!!!!

ನಾನು : ಏನಿದು ?

Z : ವಿಷ್ಣು ಸಹಸ್ರನಾಮದ concise version -ನ್ನು.

ನಾನು : ನಿಂಥರ ನೇ ಧ್ರುವ ನೂ concise ಆಗಿ ಬೇಡಿಕೊಳ್ಳಬಹುದಿತ್ತಲ್ವ ವಿಷ್ಣು ನ ? ಧ್ರುವ ನಕ್ಷತ್ರ ಆಗೋಕೆ ? hey by the way...I spotted dhruva in the sky !!

Z : ಚಪ್ಪಾಳೆ !! Dhruva was clever...he only said ನಾರಾಯಣ !!

ನಾನು : ಮತ್ತೆ ನಾವು ಅದನ್ನೆ copy ಹೊಡೆಯೋದಪ್ಪ !!


Z : whats the point ? dhruva did penance to prove to the world his uniqueness. So, we should also be unique.

ನಾನು : right !! I totally agree. ಈಗ ನಾನು ಧ್ರುವ ನಕ್ಷತ್ರ ನ ಕಂಡು ಹಿಡಿದ ಕಥೆ ಹೇಳ್ತಿನಿ. ಇವತ್ತು tailor ಹತ್ರ ಹೋಗಿದ್ದೆ ಬಟ್ಟೆ ತರಕ್ಕೆ. ಅವನು change ಕೊಡಲು ಸ್ವಲ್ಪ ಸಮಯ ತಗೊಂಡ.ನಾನು ಅದೇ ಸಮಯದಲ್ಲಿ ತಲೆ ಮೇಲಕ್ಕೆ ಎತ್ತಿದೆ. exactly ನನ್ನ ಎದುರುಗಡೆ ursa major constellation !! [ ಸಪ್ತ ಋಷಿ ಮಂಡಲ ]!!ಶೈಲಜ maa'm ಅದರ picture ಬರ್ದು ತೋರ್ಸಿದ್ದರು. ಆ ಮಂಡಲದ ಕಡೆಯ ನಕ್ಷತ್ರದಿಂದ ಒಂದು straight line ಎಳೆದರೆ ಅದು ಧ್ರುವಕ್ಕೆ ಬಂದು ನಿಲ್ಲತ್ತೆ. ಅದನ್ನೆ ಮಾಡಿದೆ. my eyes widened with wonder !!My goodness... ಯೇನ್ cute ಆಗಿದ್ದಾನೆ ಗೊತ್ತೇನೆ ಧ್ರುವ ? ಸಖತ್ತಾಗಿ twinkle-ಲ್ಲಿಸುತ್ತಿದ್ದ !! ಎಂಟು ವರ್ಷದವ...ಎಂದೆಂದಿಗೂ ಎಂಟೇ ವರ್ಷದವ...ಯೇನು energetic ಆಗಿ ಹೊಳೆಯುತ್ತಿದ್ದ ಅಂದರೆ...ನನಗೆ ಅವನ ಹತ್ರ ಹೋಗಿ mic ಇಟ್ಕೊಂಡು" what is the secret of your energy" ಅಂತ ಕೇಳೋಣ ಅಂತ ತುಂಬಾ ಆಸೆ ಆಯ್ತು !!

Z : definitely not boost !! that I can tell you.

ನಾನು : ಹೆ ಹೆ ಹೆ ....

ನೀನು ಏನೇ ಹೇಳು...he is such a cuuuuuuuuuuuuuuuuuuuuute hot star !!

Z : hmmm...determine his surface temperature...you will know how hot he is !! ;)

ನಾನು : thats a brilliant idea !! ಮಾಡ್ತಿನಿ...ಮಾಡೇ ಮಾಡ್ತಿನಿ. Line on hold

( ಸಶೇಷ )

ಉತ್ತರಾಯಣ ೩

ನಾನು: ಬೃಂದಾವನಕ್ಕೆ ಹೊರಡಲು ನಾಲ್ಕು ಘಂಟೆಯಷ್ಟೊತ್ತಿಗೆ ರೆಡಿ ಇರಬೇಕು ಎಂದು ಮ್ಯಾನೇಜರ್ ವೆಂಕಟೇಶ್ ಅವರು ಹೇಳಿದ್ದರು. ಇವರೆಲ್ಲರೂ ಊಟ ಮಾಡಿ, ಮಲಗಿ, ಎದ್ದು ರೆಡಿಯಾಗು...