Tuesday, December 16, 2008

ಕೆಲವು ಖತರ್ನಾಕ್ ಐಡಿಯಾಗಳು

ನಾನು : ನನ್ನ ತಲೆ ಕೆಟ್ಟೋಗಿದೆ.

Z :ಅದೇನು ಹೊಸ ವಿಷಯ ಅಲ್ಲ.

ನಾನು : ಆದ್ರೂ...ಸುಮ್ನೆ ಗೊತ್ತಿರ್ಲಿ ಅಂತ ಹೇಳ್ದೆ.

Z : ಓದ್ತಿದ್ದೀಯಾ ?

ನಾನು : ಪ್ರಯತ್ನ ಪಡ್ತಿದಿನಿ.

Z : ಇಷ್ಟೇ...

ನಾನು : ಹಾಗೇನಿಲ್ಲ. ತಕ್ಕ ಮಟ್ಟಿಗೆ ಓದಿದ್ದೀನಿ.

Z : ಓಕೆ.

ನಾನು : ನನ್ನ ತಲೆ ಎಷ್ಟು ಕೆಟ್ಟಿದೆ ಅಂದ್ರೆ ಪರೀಕ್ಷೆ ಆದ್ಮೇಲೆ ಏನೆಲ್ಲಾ ಮಾಡ್ಬೇಕು ಅಂತ ಸ್ಕೆಚ್ ಹಾಕಿದಿನಿ.

Z : ನಾನು ಮಹಾಮೃತ್ಯುಂಜಯ ಜಪ ಮಾಡೋ ಲೆವೆಲ್ ಗೆ ಸ್ಕೆಚ್ ಹಾಕಿದ್ದೀಯಾ ?

ನಾನು : ಯೆಸ್.

Z : ಶಿವ ಶಿವ .....

ನಾನು : ಉಹಹಹಹಹಾಆಆಆಆ....

Z : ನೀನ್ ಈ ಥರ ರಾಕ್ಷಸಿ ನಗು ನಕ್ರೆ ನನಗೆ ಸಖತ್ ಭಯ ಆಗತ್ತೆ.

ನಾನು : ಹೇ...ಎಲ್ಲಾ ಭಯ ನೂ ಈಗ್ಲೆ ಪಟ್ಕೊಂಡ್ ಸ್ಟಾಕ್ ಖಾಲಿ ಮಾಡ್ಕೋಬೇಡ.ಒಂದೊಂದು ಐಡಿಯಾ ಕೇಳಿ installment ನಲ್ಲಿ ಭಯ ಪಟ್ಕೋ.

Z :ಓಕೆ.

ನಾನು : ಭಯಪಟ್ಕೊಂಡಾದ್ಮೇಲೆ...ನೆಕ್ಸ್ಟ್ ಅನ್ನಬೇಕು...ಓಕೆ ?

Z : ಓಕೆ.

ನಾನು : ಐಡಿಯ ೧. ಅಡುಗೆ ಮನೆಗೆ ಹೋಗಿ ಸ್ಟೀಲ್ ಪಾತ್ರೆನೆಲ್ಲಾ ಹೊರಗಡೆ ಇಟ್ಟು ಲ್ಯಾಬ್ ಥರ ಪಿಂಗಾಣಿ ಪಾತ್ರೆಗಳನ್ನ ಇಡ್ಬೇಕು;without bothering about ಮಡಿ.

Z : ಅಮ್ಮ ಒದ್ದು ಓಡಿಸ್ತಾರೆ. ನಿನ್ನ ಮನೆ ನ ಪಿಂಗಾಣಿ ಲೆ ಕಟ್ಟಿಸಿಕೋ...ನನ್ನ ಅಡಿಗೆಮನೆ ಬಿಟ್ಟು ಬಿಡು ಅಂತ ಬೈದು, ಒದಿತಾರೆ.

ನಾನು :ಇದು ಬರೀ ಐಡಿಯಾ ಅಷ್ಟೆ. ಕಲ್ಪನೆ.

Z : ನಿನ್ನ ಒದಿಯೋ ಕಲ್ಪನೆ ಚೆನ್ನಾಗಿದೆ ನಿಜ್ವಾಗ್ಲು.

ನಾನು : ನಿಜ್ವಾಗ್ಲು ಒದಿತಿನಿ ನಿಂಗೆ.

Z : ಬೇಡಾ....ನೆಕ್ಸ್ಟ್.

ನಾನು : ಐಡಿಯಾ ೨ .ಆಗುಂಬೆ ಘಾಟ್ ನ ಮಳೆಲಿ ಒಬ್ಬಳೇ ನಡ್ಕೊಂಡ್ ಇಳಿಬೇಕು...ವಿಥೌಟ್ ಛತ್ರಿ.

Z : ವ್ಹಾಟ್ ?????????????? !!!!!!!!!!!!!!!!!!!!!!!!!!!!!!!!!!!! ನಿನಗೆ ಬದುಕೋ ಆಸೆ ಇಲ್ವಾ ?

ನಾನು : ಇಲ್ಲ.

Z : ಲೇ...ನಿನಗಿಲ್ದೆ ಇರ್ಬಹುದು..ಆದ್ರೆ ನನಗಿದೆ.

ನಾನು : ಸರಿ. ಇಟ್ಕೋ.

Z : ನಿಜ್ವಾಗ್ಲೂ ಈ ಥರ ಖತರ್ನಾಕ್ ಐಡಿಯಾ ಎಲ್ಲಾ ಯಾಕ್ ಹೊಳಿತಿದೆ ನಿಂಗೆ ?

ನಾನು : ಗೊತ್ತಿಲ್ಲ.

Z : ದೇವ್ರೆ...ಪ್ಲೀಸ್ ಕಾಪಾಡು.

ನಾನು : any reply from God ?

Z : Not reachable at the moment ಅಂತೆ....

ನಾನು : ಹೆ ಹೆ ನಂಗೊತ್ತಿತ್ತು....

Z : ಗ್ರ್ರ್ರ್ರ್ರ್ರ್ರ್ರ್ರ್ರ್ರ್...ನೆಕ್ಸ್ಟ್

ನಾನು : ಐಡಿಯಾ ೩ . ಅಣ್ಣ ಚಿಕ್ಕೋರಾಗಿದ್ದಾಗ ಒಂದು ಮೋಟರ್ ಸೈಕಲ್ ನ ಪೂರ್ತಿ ಬಿಚ್ಚಿ ಮತ್ತೆ ಅಸ್ಸೆಂಬಲ್ ಮಾಡಿದ್ರು...ನಾನು ಅಟ್ ಲೀಸ್ಟ್ ಒಂದು ಸೈಕಲ್ ನಾದ್ರೂ ಡಿಸ್ಮಾಂಟಲ್ ಮಾಡ್ಬೇಕಲ್ಲಾ....

Z : ಬೋಲೋ ಮೆಕಾನಿಕ್ ಲಕ್ಷ್ಮೀ ಕಿ..

ನಾನು : ಓಯ್....ಆಡ್ಕೋಬೇಡಾ....

Z : ಇಲ್ಲ...ಜೈಕಾರ ಹಾಕ್ತಿದಿನಿ. ನಿಜ್ವಾಗ್ಲು...ಸಿಕ್ಕಾಪಟ್ಟೆ ಖತರ್ನಾಕ್ ಐಡಿಯಾ ಇದು. ನೆಕ್ಸ್ಟ್.

ನಾನು : ಐಡಿಯಾ ೪. ಲೈಬ್ರರಿ ಒಂದರಲ್ಲಿ ಬಚ್ಚಿಟ್ಕೋಬೇಕು. ರಾತ್ರಿ ಲೈಬ್ರರಿ ಮುಚ್ಚಿದ್ಮೇಲೆ ನಾನು ಒಳಗಿಂದ ಲೈಟ್ ಹಾಕಿ, ಪುಸ್ತಕ ಓದಿ..ಹೊರಗಿರೋರನ್ನೆಲ್ಲಾ ಹೆದರಿಸಿ, ಕಿಟಕಿಯಿಂದ ಹಾರಿ ತಪ್ಪಿಸ್ಕೋಬೇಕು. ಮಾರನೆಯ ದಿನ ಪೇಪರ್ ನಲ್ಲಿ " ಲೈಬ್ರರಿಯಲ್ಲಿ ದೆವ್ವ? " ಅನ್ನೋ ಹೆಡ್ ಲೈನ್ಸ್ ಓದ್ಬೇಕು.

Z : ವಾಆಆಆ ವಾ ವಾಹ್ !!!! ಗುಮ್ ನಾಂ ಹೈ ಕೊಯಿ....

ನಾನು : ಹೆ ಹೆ...ಸಖತ್ತಾಗಿದೆ ಅಲ್ವಾ ?

Z : ನಿಜ್ವಾಗ್ಲು...ಏಕ್ ದಂ ಖತರ್ನಾಕ್ ! ನೆಕ್ಸ್ಟ್.

ನಾನು : ಐಡಿಯಾ ೫. ಒಂದು ದಿನ ಸಿಕ್ಕ್ ಸಿಕ್ಕಿದ ಬಸ್ಸು ಹತ್ತಿ ಎಲ್ಲೆಲ್ಲೋ ಕಳೆದು ಹೋಗಿ...ಆಮೇಲೆ ನಾನೇ ರಸ್ತೆ ಕಂಡು ಹಿಡಿದುಕೊಂಡು ಮನೆಗೆ ಬರ್ಬೇಕು.

Z : ಯಾಕ್ ವಾಪಸ್ ಬರ್ತೀಯಾ ? ಹೊಟೋಗು ಅತ್ಲಗೆ .

ನಾನು : ಅಲ್ವಾ ? ನಂಗೂ ಹಾಗೆ ಅನ್ಸಿತ್ತು. ಆದ್ರೆ, for reasons , ಹಾಗೆ ಮಾಡಕ್ಕೆ ಆಗಲ್ಲ.

Z : ಥುತ್ ! ನೀನೋ...ನಿನ್ನ ಐಡಿಯಾಗಳೋ....

ನಾನು : ಸಖತ್ ಖತರ್ನಾಕ್ ಅಲ್ವಾ ?

Z :ಹೌದ್ ಹೌದ್.

ನಾನು :ಇನ್ನೊಂದಿಷ್ಟ್ ಇವೆ...ಹೇಳಿಬಿಡ್ಲಾ ?

Z : ತಾಯಿ....ಪ್ಲೀಸ್...ಬೇಡ.

ನಾನು : ಯಾಕೆ ?

Z : ಭಯದ ಸ್ಟಾಕ್ ಖಾಲಿ ಆಗಿದೆ.

ನಾನು : ಓಹ್...sad. ಸರಿ, Replenish your depleted stocks and I will tell you more !

Z : [ದೇವ್ರೆ..ಕಾಪಾಡು..ಪ್ಲೀಸ್...ಬೇಗ !] Yeah sure, why not ?

ನಾನು : ಅಲ್ಲಿಯವರೆಗೂ line on hold.

Wednesday, December 3, 2008

ಸಿಕ್ಕಾಪಟ್ಟೆ ದೊಡ್ಡ ಸುದ್ದಿ !

Z : ಏನ್ ಸುದ್ದಿ..ಬೇಗ ಹೇಳು !!!

ನಾನು : ನಾನ್ ಹೇಳಿದ್ರೆ ನೀನು ಖಂಡಿತಾ ನಂಬಲ್ಲ.

Z : ಏನ್ ಅಂಥಾ ಶಾಕಿಂಗ್ ನ್ಯೂಸು ?

ನಾನು : ಶಾಕಿಂಗ್ ಏ...ನಿಜ್ವಾಗ್ಲು

Z : ಪ್ಲೀಸ್...ಬೇಗ ಹೇಳ್ಬಿಡು.

ನಾನು : ಓಕೆ...ಫೋನ್ ಗಟ್ಟಿಯಾಗಿ ಇಟ್ಕೋ...

Z : ಹೂ....ಇಟ್ಕೊಂಡಿದಿನಿ...

ನಾನು : ಮನಸ್ಸು ಗಟ್ಟಿ ಮಾಡ್ಕೊ.

Z : ಮಾಡ್ಕೊಂಡಿದಿನಿ.

ನಾನು : ವಿಷಯ ಏನಪ್ಪಾ ಅಂದ್ರೆ.... kyunki saas bhi kabhi bahu thi ಸೀರಿಯಲ್ಲು ಮುಗಿದು ಹೋಗಿದೆ.

Z : what ???????


DHUD !!!!!!!!!!!!!!!

SHATTTER !!!!!!!!!!!!!!!!!!!


ನಾನು : ಬಿದ್ಯಾ ಚೇರ್ ಇಂದ ? ಮತ್ತೆ ಏನ್ ಒಡೆದು ಹಾಕ್ದೆ ? ಇನ್ನು ವಿಷಯ ನೇ ಕಂಪ್ಲೀಟ್ ಆಗಿಲ್ಲ.....

Z : ಬಿದ್ದೆ...ಜೋರಾಗೆ ಬಿದ್ದೆ :( ...ಕಾಫಿ ಲೋಟ ಬಿತ್ತು ಕೆಳಗೆ ...ತಿಂಡಿ ತಟ್ಟೆ ಕೂಡಾ...ಇನ್ನೂ ನ್ಯೂಸ್ ಇದ್ಯಾ ?

ನಾನು : ಹೂ...

Z : ಹೇಳ್ಬಿಡು.

ನಾನು : kahaanii ghar ghar kii ನೂ ಮುಗ್ದಿದೆ !

Z : Oh my God !!!!!!!!!!!!!!!!!!!!!!!!!!!!!!!!!!!


ನಾನು : ಆಯ್ತ ಗಾಬರಿ ಆಗಿದ್ದು ?

Z : ಹೂ. But I still cant believe it. ಯಾವಾಗ್ ಶುರುವಾಗಿದ್ದ್ ಹೇಳು ಇವೆರಡು ಸೀರಿಯಲ್ಲು ?

ನಾನು : ಒಂಭತ್ತನೇ ಕ್ಲಾಸಿನಲ್ಲಿದ್ದಾಗ.

Z : ಈಗ ?

ನಾನು : ಎಮ್. ಎಸ್ಸಿ ಮುಗಿಸಿದೆ.

Z :ಅಲ್ಲಿವರ್ಗು ಬರ್ತಿತ್ತು ಈ ಸೀರಿಯಲ್ಲು...

ಯಾಕ್ ಮುಗಿತು ಈ ಸೀರಿಯಲ್ಲು ?

ನಾನು :What do you mean by ಯಾಕ್ ಮುಗಿತು ?

Z : ಅವೆಲ್ಲ ನೆವರ್ ಎಂಡಿಂಗ್ ಸೀರಿಯಲ್ಲು ಕಣೇ...ಅದಕ್ಕೆ ಮುಕ್ತಾಯ ನೆ ಇಲ್ಲ...

ನಾನು : ಹೇಗೆ ಹೇಳ್ತಿಯಾ ?

ನೋಡು...ಕ್ಯುಂಕಿ ಯ ನಾಯಕ (?) ಮಿಹಿರ್ first time ಸತ್ತಾಗ by public demand ಅವನನ್ನ ಬದುಕಿಸ್ಲಿಲ್ವ ? ಆಮೇಲೆ ಅವ್ನಿಗೆ amnesia ಅಂತ ಹೇಳ್ಸಿ ಮಂದಿರಾ ಬೇಡಿ ನ ಕರ್ಸಿಲ್ವಾ ? amnesia season started with this serial. ಅದಾದ್ಮೆಲೆ ಇಪ್ಪತ್ತ್ ವರ್ಷದ advancement. That also began with this serial. ಎಷ್ಟು ಸರ್ತಿ ಮಿಹರ್ ಸತ್ತ ? ಎಷ್ಟು ಸರ್ತಿ ಬದಲಾದ ? ಆ ಅಜ್ಜಿ ನೂರೈವತ್ತ್ ವರ್ಷ ಆದ್ರು ಬದ್ಕಿದ್ರು ? ಇನ್ನು ಕಥಾನಾಯಕಿ ತುಳಸಿ..ಆ ಮಹಾಮಾತೆ ? ಎಷ್ಟು ಕೋಟಿ ಸರ್ತಿ ಕಣ್ಣ್ ಕೆಕ್ಕರಿಸಿದ್ದಾಳೆ ? ಆಮೇಲೆ euthenesia (mercy killing) concept ನ ಜಾರಿಗೆ ತಂದು ಭಾರತದ ಸೀರಿಯಲ್ ಗಳ ರೂಪುರೇಷೆಯನ್ನೇ ಬದಲಿಸಿಬಿಟ್ಟಳಲ್ಲಾ ತುಳಸಿ ಮಾತೆ ? ( Actually Ekta Kapoor) ಇಷ್ಟೆಲ್ಲಾ ಮಾಡಿದ್ಮೇಲೆ ಫೈನಲ್ ಎಪಿಸೋಡ್ ಗೆ ಹತ್ತ್ ಎಪಿಸೋಡ್ ಮುಂಚೆ ಆ ನೂರೈವತ್ತು ವರ್ಷದ ಮುದುಕಿಯನ್ನ ಝಟ್ ಅಂತ ಸಾಯಿಸಿಬಿಟ್ಟ್ರು..ಆ ಆಸ್ತಿ ವಿಷಯ ನ ಕಡೆಗೂ ಬಗೆ ಹರಿಸಲೇ ಇಲ್ಲ...

Z : ಓ...ತಮಗೆ ಆಸ್ತಿ ವಿವಾದ ನೆಟ್ಟಗಾಗ್ಲಿಲ್ಲ ಅಂತ ಬೇಜಾರಾ ?

ನಾನು : ಇಲ್ಲಾ...ಎಂಡಿಂಗ್ ಅರ್ಥ ಆಗ್ಲಿಲ್ಲಾ ಅಂತ ಬೇಜಾರು.

Z : ಯಾಕೆ ?

ನಾನು : ನೋಡೂ...ಫಸ್ಟಫಾಲ್ ನಾನು ಸ್ಟಾರ್ ಪ್ಲಸ್ ಕಡೆ ಮುಖ ಹಾಕಿ ತುಂಬಾ ತಿಂಗಳುಗಳಾಗಿದ್ದವು. ರಿಯಾಲಿಟಿ ಷೋಗಳನ್ನ ಕೂಡಾ ನೋಡೋದು ಬಿಟ್ಟಿದ್ದೆ. ಒಂದಿನ ತಲೆ ಕೆಟ್ಟು ಟಿವಿ ಆನ್ ಮಾಡಿದೆ. ಅಲ್ಲೇ ಹುರುವಾಗಿದ್ದು ಗೋಳು. " ಆಖ್ರೀ ಎಪಿಸೋಡ್...ಕ್ಯೂಂಕಿ ಸಾಸ್ ಭಿ ಕಭೀ ಬಹೂ ಥಿ ಅಂತ ಆಡ್ ಬಂತು. ನಾನು ಕುಸಿದು ಕೂತೆ !! ಏನಾದ್ರು ಆಗ್ಲಿ, ಹೇಗ್ ಮುಗಿಸ್ತಾಳೇ ಈ ಮಹಾರಾಯ್ತಿ ಸೀರಿಯಲ್ ನ ಅಂತ ನೋಡಲು ಆವತ್ತು ರಾತ್ರಿ ನಿದ್ದೆಗೆಟ್ಟೆ. ಎದುರು ಮನೆ ನಂದಿನಿ ಗೆ ನಮ್ಮನೆ ಕಿಟಕಿಯಿಂದಲೇ ಕಿರುಚಿ ವಿಷಯ ತಿಳಿಸಿದೆ. ಅವರು ಕೂಡಾ ಆಸಕ್ತಿಯಿಂದ ನೋಡಲು ಕೂತರು. ನೋಡಿದ್ರೆ...ಅದ್ ಯೇನೋ ಹೇಳಿ ಮುಗ್ಸೇ ಬಿಟ್ಲು ಅರ್ಧ ಘಂಟೆಲೆ...ನನಗೆ ಅದು ಎಂಡಿಂಗ್ ಅನ್ನಿಸಲೇ ಇಲ್ಲ...ನಾಳೆ ಮತ್ತೆ ನೋಡಿದರಾಯ್ತು ಅಂತ ಫೋನಲ್ಲಿ ರಿಮೈಂಡರ್ ಹಾಕೊಂಡೆ.

Z : ಆಮೇಲೆ ?

ನಾನು : ಮಾರನೇ ದಿನದಿಂದ ಮುಂಬೈ ನಲ್ಲಿ ಸೀರಿಯಲ್ ನಿರ್ಮಾಪಕರಿಗೂ ಮತ್ತೆ ಅದೆಂಥದ್ದೋ ಸಂಘಕ್ಕೂ ಸಿಕ್ಕಾಪಟ್ಟೆ ಜಗಳ್ ಶುರು ಆಯ್ತು. ಎಲ್ಲ ಸೀರಿಯಲ್ ಗಳನ್ನ ಮೊದಲನೇ ಎಪಿಸೋಡ್ ಇಂದ telecast ಮಾಡಲು ಶುರು ಮಾಡಿದರು.

Z : ತಮಗೆ ಅದನ್ನ ನೋಡಿ ತಲೆ ಕೆಟ್ಟಿರತ್ತೆ...

ನಾನು : ಕೆಡೋದಾ..ಚೆಲ್ಲಾಪಿಲ್ಲಿ ಚಿಂದಿ ಚಿತ್ರಾನ್ನ ಆಗೋಯ್ತು. ಸರಿ ಮತ್ತೆ ನಾನು ಟಿವಿ ಕಡೆ ಮುಖ ಹಾಕಲೇ ಇಲ್ಲ.

Z : ಆಮೇಲೆ ?

ನಾನು : ಮೊನ್ನೆ ರೋಹಿಣಿ ಗೆ ಫೋನ್ ಮಾಡಿದೆ. ಹಾಗೆ ಮಾತಾಡ್ತಾ ಕ್ಯೂಂಕಿಯ ಕಥೆ ಶುರುವಾಯ್ತು. ನಾನು ಹೇಳಿದೆ ಕ್ಯೂಂಕಿ ಮುಗಿತು ಕಣೆ ಅಂತ. ಅವಳು ನಂಬಲೇ ಇಲ್ಲ. ಆಮೇಲೆ ಅವಳಿಗೆ ಆ ನಿರ್ಮಾಪಕರ ಜಗಳದ ಕಥೆ ಗೊತ್ತೇ ಇರ್ಲಿಲ್ಲ. ಆದರೂ ಅವಳು ಆ ಸೋ ಕಾಲ್ಡ್ "ಕಡೆಯ ಎಪಿಸೋಡ್ " ನೋಡಿದ್ದಳು. ನಾವಿಬ್ಬರೂ ಆ ಎಂಡಿಂಗ್ ನ ಅರ್ಥ ಏನಂತ ಹುಡುಕಲು ಶುರು ಮಾಡಿದ್ವಿ. ಕಡೆಗೆ ರೋಹಿಣಿ..

"ನೋಡು ಲಕ್ಷ್ಮೀ...ಏಕ್ತಾ ಕಪೂರ್ ಸೀರಿಯಲ್ ಗೇ ಅರ್ಥ ಇಲ್ಲ ಅಂದಮೇಲೆ ಇನ್ನು ಮುಕ್ತಾಯಕ್ಕೆ ಅರ್ಥ ಇದ್ಯಾ ?"

ಅಂದಳು.

ನಾನು ದೀಈಈಈಈಈರ್ಘವಾಗಿ ಯೋಚನೆ ಮಾಡಿದೆ. ಸರಿ ಅನ್ನಿಸಿತು. ಹೌದು ಕಣೆ...ನಿಜ ಅಂದೆ. ಆದರೆ ನಮ್ಮಿಬ್ಬರಿಗೂ ಎಂಡಿಂಗ್ ಅಲ್ಲಿ ತೋರಿಸಿದ ಕಹಾನಿ ಘರ್ ಘರ್ ಕೀ ಸೀರಿಯಲ್ಲಿಗೂ ಕ್ಯೂಂಕಿ ಸಾಸ್ ಭಿ ಕಭಿ ಬಹೂ ಥಿ ಸೀರಿಯಲ್ಲಿಗೂ ಏನ್ ಸಂಬಂಧ ಅಂತ ಇನ್ನೂ ಅರ್ಥ ಆಗ್ಲಿಲ್ಲ. ಹೆಚ್ಚು ತಲೆ ಕೆಡಿಸಿಕೊಳ್ಳಲು ನಮ್ಮಿಬ್ಬರಿಗೂ ಸಮಯ ಇರ್ಲಿಲ್ಲ. ಇಲ್ಲಾಂದಿದ್ರೆ ಅದಕ್ಕು ಒಂದು ಅರ್ಥ ಹುಡುಕ್ತಿದ್ವಿ.

Z : ವಾಹ್ ವಾಹ್ !! ಏನ್ detctive agents ನೀವು !

ನಾನು : ಇನ್ನೇನ್ ಮತ್ತೆ ? ;-)

Z : ಥುಥ್! ಇರ್ಲಿ...ಸೋ ಇವಾಗ ಏಕ್ತಾ ಕಪೂರ್ ಅವಳ highest TRP rated serials ನ ಮುಗಿಸಿದ್ದಾಳೆ.

ನಾನು : ಹೂಂ...

Z : ಯಾಕೆ ಅಂತ ಗೊತ್ತಿಲ್ಲ ಯಾರಿಗೂ...

ನಾನು : ಹೂಂ....

Z : ನೀನು ಗೆಸ್ಸ್ ಮಾಡು ನೋಡಣ ?

ನಾನು : ನಾನು ಗೆಸ್ಸ್ ಮಾಡೋದಾದ್ರೆ,

  • ತಿರುಪತಿಯಿಂದ ತಿಮ್ಮಪ್ಪನ ಪ್ರಸಾದದ ಕೊರಿಯರ್ ಅಪ್ಪಿ ತಪ್ಪಿ ರಾಹುಕಾಲದಲ್ಲಿ ಬಾಲಾಜಿ ಟೆಲಿಫಿಲಮ್ಸ್ ತಲುಪಿರತ್ತೆ.
  • ಸಿದ್ದಿವಿನಾಯಕ್ ದೇವಸ್ಥಾನಕ್ಕೆ ಇವರಿಗೆ ಯಮಗಂಡಕಾಲದಲ್ಲಿ ಪ್ರವೇಶ ಸಿಕ್ಕಿರತ್ತೆ.
  • ಅವಳ production unit ನಲ್ಲಿ 118ನೇ ಗಣಪತಿಯನ್ನು ಇಟ್ಟಿದ್ದ ಜಾಗದ ವಾಸ್ತು ಸರಿ ಇರಲ್ಲ.
  • ಅವರ studio ವಾಸ್ತು feng shui ಅನುಸಾರ ಇರಲಿಕ್ಕಿಲ್ಲ.
  • Director ವಾಸ್ತು ಪ್ರಕಾರ camera ಇಟ್ಟಿರಲ್ಲ.
  • actors reality show ಗೆ ಡೇಟ್ಸ್ ಕೊಟ್ಟಿರುತ್ತಾರೆ...ಸಿಗೋದಿಲ್ಲ.
  • ಡ್ಯಾನ್ಸ್ ಮಾಡಿ ಮಾಡಿ ಕೈ ಕಾಲು ನೋವು ಬಂದಿರತ್ತೆ...ನ್ಯಾಚುರಲ್ ಸ್ಲೋ ಮೋಷನ್ ನಲ್ಲಿ act ಮಾಡ್ತಿರ್ತಾರೆ, ಆದ್ರೆ ಆಗ chasing scene ನಡಿತಿರತ್ತೆ.
  • actors ಗೆ ತಾತನ ಅಜ್ಜಿ ಅತ್ತೆಯ ರೋಲ್ ಮಾಡೊ ಅಷ್ಟು ವಯಸ್ಸೇ ಆಗಿರಲ್ಲ...ತಗಾದೆ ತೆಗ್ದಿರ್ತಾರೆ.
ಇಷ್ಟು ನನ್ನ ಗೆಸ್ಸುಗಳು.

Z : ಉಫ್ಹ್ಹ್ಹ್ಹ್ಹ್ಹ್ !!!!!!!!!!! ಕಷ್ಟ ಈ ಸುದ್ದಿಯನ್ನ ಅರಗಿಸಿಕೊಳ್ಳೋದು.

ನಾನು : ಇದು ನಿಜ Z ...ಪ್ಲೀಸ್ ನಂಬು...ಸತತ ಒಂಭತ್ತು ವರ್ಷಗಳ torture ನಂತರ ಸರಿಯಲ್ ಮುಗಿದಿವೆ.

ಸೀರಿಯಲ್ ಮುಗಿದಿದೆ.....

ನಿಜ್ವಾಗ್ಲೂ....................

ನಿಜ್ ನಿಜ್ವಾಗ್ಲೂ ಮುಗಿದಿದೆ !

ಉತ್ತರಾಯಣ ೩

ನಾನು: ಬೃಂದಾವನಕ್ಕೆ ಹೊರಡಲು ನಾಲ್ಕು ಘಂಟೆಯಷ್ಟೊತ್ತಿಗೆ ರೆಡಿ ಇರಬೇಕು ಎಂದು ಮ್ಯಾನೇಜರ್ ವೆಂಕಟೇಶ್ ಅವರು ಹೇಳಿದ್ದರು. ಇವರೆಲ್ಲರೂ ಊಟ ಮಾಡಿ, ಮಲಗಿ, ಎದ್ದು ರೆಡಿಯಾಗು...