ನಾನು : ಮಾರನೆಯ ದಿನ ಬೆಳಿಗ್ಗೆ ಅಮ್ಮ ನನ್ನ ಮೂರು ಘಂಟೆಗೆ ಎಬ್ಬಿಸಿ ನಾನು ನನ್ನ ನಿದ್ದೆಯ ಸಕಲ ರೆಕಾರ್ಡುಗಳನ್ನು ಮುರಿಯುವಲ್ಲಿ ಯಶಸ್ವಿಯಾದರು. ನಾಲ್ಕಕ್ಕೆ ಸರಿಯಾಗಿ ಬಸ್ಸು ಹತ್ತಿದ ನಾವು ಏಳಾದರೂ ತಿಂಡಿಗೆ ನಿಲ್ಲಿದೇ ಹಾಗೇ ಮುಂದುವರೆಯುತ್ತಿದ್ದೆವು. ಬಸ್ಸಿನಲ್ಲಿದ್ದ ಎಲ್ಲರು ತಿಂಡಿಗೆ ನಿಲ್ಲಿಸಲೇಬೇಕೆಂದು ಏಳುವರೆಯ ಹೊತ್ತಿಗೆ ಗಲಾಟೆ ಮಾಡಲಾರಂಭಿಸಿದರು. ಶಿವಾನಂದ ಅಂಕಲ್ ಹೋದ ಮೇಲೆ ಬಂದ ಈ ಹೊಸ ಗೈಡ್ ನಾಗರಾಜನಿಗೂ ನಮಗೂ ಯಾಕೋ ಮೊದಲದಿನದಿಂದ ಸರಿಬರುತ್ತಲೇ ಇರಲಿಲ್ಲ. ಬಸ್ಸಿನವರೆಲ್ಲರು ಅವರಿಗೆ "ಬುಸ್ ನಾಗ" ಎಂದೇ ನಾಮಕರಣ ಮಾಡಿದ್ದರು.
Z : ಎಹೆಹೆಹೆ....whatte name madamji !
ನಾನು :ನಾನಲ್ಲ...ಇದು ಎಲ್ಲ ಅಂಕಲ್ ಗಳು ಸೇರಿ ಮಾಡಿದ ಕೆಲಸ !
Z : :) :) :) ರಾಮ ರಾಮ ! ಆಮೇಲೆ ?
ನಾನು : ತಿಂಡಿ ಹೆಸರುಬೇಳೆ ಪೊಂಗಲ್ಲು. ನಾಲ್ಕು ಘಂಟೆಗೆ ಮಾಡಿದ್ದರೂ ಚೆನ್ನಾಗಿ ಇತ್ತು. ಅದನ್ನು ತಿಂದ ತಕ್ಷಣ ನನಗೆ ಹೊಟ್ಟೆ ನೋವು ಶುರುವಾಯ್ತು. ಆದರೆ ಬಸ್ಸು ಹೊರಟುಬಿಟ್ಟಿತ್ತು. ನಾವು ಹೋಗುತ್ತಿದ್ದುದು ಮದುರೈ ಗೆ. ಅರ್ಧ ಘಂಟೆ ಪ್ರಯಾಣ ಅಂದಿದ್ದರು ಆದ್ದರಿಂದ ನಾನು ಈ ವಿಷಯವನ್ನು ಅಮ್ಮ ಅಣ್ಣನಿಗೂ ತಿಳಿಸದೇ ದಕ್ಷಿಣಾ ಮೂರ್ತಿ ಸ್ತೋತ್ರ ಮತ್ತು ಧನ್ವಂತರಿ ಜಪದಿಂದಲೇ ವಾಸಿ ಮಾಡಿಕೊಳ್ಳಲು ನಿರ್ಧರಿಸಿ ಜಪ ಮಾಡತೊಡಗಿದೆ. ಆದರೆ ಹರಿಹರರಿಬ್ಬರೂ ದಯೆ ತೋರಿಸಲು ಮೀನ ಮೇಷ ನೋಡುತ್ತಿದ್ದರು ಆದ್ದರಿಂದ ನನಗೆ ಹೊಟ್ಟೆ ನೋವು ಉಲ್ಬಣಗೊಂಡಿತು. ಆದರೂ ಯಾರೊಬ್ಬರ ಬಳಿಯೂ ಬಾಯ್ಬಿಡದೇ ಒಬ್ಬಳೇ ಅನುಭವಿಸುತ್ತಿದ್ದೆ.ಆದರೆ, ಅಪರ್ಣ ಮಾತ್ರ ನನಗೇನೋ ಆಗಿದೆ ಅಂತ ಛಕ್ಕನೆ ಕಂಡುಹಿಡಿದಳು.
Z : ಹೇಗೆ ?
ನಾನು : ರಮ್ಯ ದೃಶ್ಯಾವಳಿಗಳು ಕಣ್ಣು ಮುಂದೆ ರಾಚುತ್ತಿದ್ದರೂ ಒಂದೂ ಫೋಟೋ ತೆಗೆಯದೇ ಸುಮ್ಮನಿದ್ದಿದ್ದು ಅಪರ್ಣನಿಗೆ ಅನುಮಾನ ಬರಲು ಮೊದಲ ಕಾರಣ. ಅವಳು "ಏನಾಯ್ತು ? " ಅಂದಳು. ನಾನು " ಏನಿಲ್ಲ" ಅಂದೆ. ಅವಳು ನನ್ನ ಧ್ವನಿಯಲ್ಲೇ ನನಗೇನೋ ಆಗಿದೆ ಅಂತ ಕಂಡುಹಿಡಿದುಬಿಟ್ಟಳು. ಒಂದು ಲುಕ್ ಕೊಟ್ಟಿರಬೇಕು, ನಾನು ನೋಡಲಿಲ್ಲ. ಅವಳು ಮತ್ತೆ ನಿದ್ದೆ ಮಾಡಲು ಶುರು ಮಾಡಿದಳು. ನಾನು ಜಪವನ್ನು ಮುಂದುವರೆಸಿದೆ.
Z : ಆಮೇಲೆ ?
ನಾನು : ಅರ್ಧ ಘಂಟೆ ಪ್ರಯಾಣ ಅಂದವರು ಒಂದುವರೆ ಘಂಟೆಯಾದರೂ ಮದುರೈ ಗಡಿಯನ್ನೂ ತಲುಪದಿದ್ದು ನೋಡಿ ನನಗೆ ಆತಂಕ ಹೆಚ್ಚಾಯ್ತು. ಹೊಟ್ಟೆ ನೋವು ಕೂಡಾ ಕಡಿಮೆ ಆಗುವ ಯಾವುದೇ ಕುರುಹನ್ನು ತೋರಿಸುತ್ತಿರಲಿಲ್ಲ. ಎರಡು ಘಂಟೆಯ ಆ ದುಸ್ತರದ ಪ್ರಯಾಣದ ನಂತರ ನಾವು ಮದುರೈ ತಲುಪಿದೆವು. ನಾನು ನೋವು ತಡೆಯಲಾಗದೇ ಕಣ್ಣೀರನ್ನು ಧಾರಾಕಾರವಾಗಿ ಹರಿಸುತ್ತಿದ್ದೆ. ಅಮ್ಮ ಗಾಬರಿಯಾಗಿ ಏನಾಯ್ತು ಅಂದರು. ನಾನು ನನಗೆ ಹೊಟ್ಟೆ ನೋವು ಎಂದು ಅತ್ತೆ. ಬಸ್ಸಿನಲ್ಲಿದ್ದ ಮಮತಾ ಆಂಟಿ ನಿಂಬೆಹಣ್ಣು, ನೀರು ಮತ್ತು ಉಪ್ಪು ಹಾಕಿ ಕುಡಿಸಿದರು. ಐದೇ ಸೆಕೆಂಡಿಗೆ ವಾಂತಿಯಾಯ್ತು. ಆದರೆ ನೋವು ಕಡಿಮೆಯಾಗಲಿಲ್ಲ. ಮಿಕ್ಕವರೆಲ್ಲರನ್ನು ದೇವಸ್ಥಾನಕ್ಕೆ ಕಳಿಸಿದರು. ಅಣ್ಣ ಅಪರ್ಣ ದೇವಸ್ಥಾನಕ್ಕೆ ಹೋಗಬೇಕೆಂದು, ಅಮ್ಮ ನನ್ನೊಡನೆ ಇರಬೇಕೆಂದು ಮಾತಾಯ್ತು. ಅಣ್ಣ ಹೇಳಿದರು, ನೋವು ಕಡಿಮೆಯಾಗದಿದ್ದರೆ ನಾವು ಟ್ಯಾಕ್ಸಿಯಲ್ಲಿ ಬೆಂಗಳೂರಿಗೆ ಹೊರಟುಬಿಡೋಣ ಅಂತ. ನಾನು ಬಸ್ಸಿನ ಕಡೆಯ ಸೀಟಲ್ಲಿ ಮಲಗಿದೆ.
ಒಂದುವರೆಘಂಟೆಯಾದ ಮೇಲೆ ಎಚ್ಚರವಾದಾಗಲೂ ನನಗೆ ನೋವು ಕಡಿಮೆಯಾಗದಿದ್ದುದನ್ನು ನೋಡಿ ಅಮ್ಮ ನಾವು ಬೆಂಗಳೂರಿಗೆ ಹೊರಡುವುದೇ ಗಟ್ಟಿ ಎಂದು ಭಾವಿಸಿದರು.ಅಲೋಪತಿಯ ಯಾವುದೇ ಮಾತ್ರೆಯೂ ನನಗೆ ಅಲರ್ಜಿ ಆದ್ದರಿಂದ ಬೆಂಗಳೂರಿಗೆ ಹೋಗಿ ನಮ್ಮ ವೈದ್ಯರನ್ನು ಸಂಪರ್ಕಿಸದೇ ಗತ್ಯಂತರವಿರಲಿಲ್ಲ. ತಕ್ಷಣ ಅಮ್ಮನಿಗೆ ಅದೇನೋ ನೆನಪಾಗಿ ನಮ್ಮ ಆಯುರ್ವೇದದ ವೈದ್ಯರು ಕೊಟ್ಟ ಔಷಧಿಗಳ ಪೊಟ್ಟಣಗಳನ್ನು ತೆಗೆದು ಮಾತ್ರೆಯೊಂದನ್ನು ಬಾಯಲ್ಲಿ ಇಟ್ಟು "ಇದನ್ನ ಜಗಿದು ತಿನ್ನು" ಅಂತ ಅಂದರು. ನಾನು ತಿಂದೆ.
Z : ಆಮೇಲೆ ?
ನಾನು : ಹತ್ತೇ ಸೆಕೆಂಡಿಗೆ ನನಗೆ ಮತ್ತೆ ವಾಂತಿಯಾಯ್ತು. ಆಮೇಲೆ ಹೊಟ್ಟೆ ನೋವು ಮಾಯ ! ಏನೋ ಒಂಥರಾ ಹಗುರವಾದ ಅನುಭವ. ಮುಖದಲ್ಲಿ ನೆಮ್ಮದಿಯ ಕಳೆ ಬಂದಿದ್ದು ನೋಡಿ ಅಮ್ಮಂಗೆ ಅರ್ಧ ನೆಮ್ಮದಿ.
Z : ಹೆಹೆ...ಹಾಗಾದ್ರೆ ಅಜೀರ್ಣ ಆಗಿತ್ತೂ ಅನ್ನು.
ನಾನು : ಹೂಂ.ಅಮ್ಮಂಗೆ ಮದುರೈ ಮೀನಾಕ್ಷಿಯನ್ನು ಜೀವನದಲ್ಲಿ ಒಂದು ಸರ್ತಿ ನೋಡಬೇಕೆಂದು ಮಹದಾಸೆ ಇತ್ತು. ನನಗೂ ! ನಾನಂದೆ, " ಅಮ್ಮ, ನಾನು ಹುಶಾರಾಗಿದ್ದೀನಿ,ನಡಿ ದೇವಸ್ಥಾನಕ್ಕೆ ಹೋಗೋಣ."
ಅಮ್ಮ:" ಆಗತ್ತಾ ? ನಿಜ್ವಾಗ್ಲು ?"
ನಾನು :"ಹೂಂ"
Z : ಆಹಾ ! ಏನು ಭಂಡ ಧೈರ್ಯ !
ನಾನು : ನಮಗಿದ್ದ ಆಸೆಯನ್ನು ಪೂರೈಸಿಕೊಳ್ಳಲು ನಮಗೆ ಇನ್ನು ಅವಕಾಶ ಸಿಕ್ಕೋದು ಅನುಮಾನ ಆಗಿತ್ತು Z. ಮದುರೈ ನಲ್ಲಿ ಶಾಪಿಂಗಿಗೆ ಟೈಂ ಬೇರೆ ಕೊಟ್ಟಿದ್ದರು. ನಾವು ದೇವಸ್ಥಾನ ನೋಡಿ ಬರುವಷ್ಟೊತ್ತಿಗೆ ಇವರು ದೇವಸ್ಥಾನ ನೋಡಿ ಶಾಪಿಂಗ್ ಸಹಿತ ಮುಗಿಸಿರುತ್ತಾರೆ ಅಂತ ಲೆಕ್ಕಾಚಾರ ಹಾಕಿದೆ. ನಾನು ಬಸ್ಸಿನಿಂದ ಕೆಳಗಿಳಿದ್ದನ್ನು ನೊಡಿ ಡ್ರೈವರ್ರು " ಏನ್ ಮೇಡಮ್...ಮಲಗಿದ್ದವರು ಎದ್ದು ಈಗ ಜಿಂಕೆ ಮರಿ ಥರ ಓಡುತ್ತಿದ್ದೀರಲ್ಲ ? " ಅಂದ. ಅದಕ್ಕೆ ನಾನು " ಹುಶಾರಾದೆ. ಮೀನಾಕ್ಷಿನ ನೋಡಕ್ಕೆ ಹೋಗಲೇಬೇಕು. ಹೊರಟೆವು" ಅಂದದ್ದೇ ಅಲ್ಲೆಲ್ಲಾದರೂ ಪೋಲೀಸಿನವರು ಕಾಣಿಸುತ್ತಾರ ಅಂತ ಹುಡುಕಿದೆ.
Z : ಪೋಲೀಸಿನವರನ್ನ ಯಾಕೆ ಹುಡುಕಿದೆ ?
ನಾನು : ಯಾಕಂದರೆ ಅವರಿಗೆ ಮಾತ್ರ ತಕ್ಕ ಮಟ್ಟಿಗೆ ಆಂಗ್ಲ ಬರೋದು. ಮಿಕ್ಕವರೆಲ್ಲರೂ ಜಲೇಬಿಪ್ರಿಯರು. ಪುಣ್ಯಕ್ಕೆ ಅಲ್ಲೊಬ್ಬಳ ಲೆಡಿಸ್ ಕಾನ್ ಸ್ಟೇಬಲ್ ಕಂಡಳು. ನಾನು ಹೋಗಿ "We need to go to meenakshi temple. how do we go ? " ಅಂದೆ.
ಅಮ್ಮ ನನ್ನ ಹಿಂದೆ ನಿಧಾನವಾಗಿ ಬಂದರು. ಕಾನ್ ಸ್ಟೇಬಲ್ "you can walk. its just 1.5 kms." ಅಂದಳು. ನಾನು " tell us the way" ಅಂದೆ. ಆದರೆ ಅಮ್ಮ, " we cant walk" ಅಂದರು. ನಾನು " ನಡಿಯಮ್ಮ ಏನ್ ಮಹಾ ದೂರ " ಅಂದೆ. ಅದಕ್ಕೆ ಅಮ್ಮ " ಈಗ ತಾನೆ ಎದ್ದಿದಿಯ. ಈ ಬಿಸಿಲಲ್ಲಿ ನಡೆದು ತಲೆ ಸುತ್ತಿ ಬೀಳು. ಅದನ್ನೂ ನೋಡ್ತಿನಿ ನಾನು. ಸುಮ್ನಿರ್ತ್ಯೋ ಇಲ್ವೋ " ಅಂತ ರೇಗಿಬಿಟ್ಟರು.
Z : ಸರಿಯಾಗಿ ಮಾಡಿದಾರೆ.
ನಾನು : ಅಷ್ಟೊತ್ತಿಗೆ ಆ ಕಾನ್ ಸ್ಟೆಬಲ್ "then take an auto or cycle rickshaw"ಅಂದಳು.
ನಾನು ಬುದ್ಧಿ ಓಡಿಸಿ " how much does it cost ?" ಅಂದೆ.
ಅವಳು " 20 rupees. Dont pay more. " ಅಂದಳು.
"thank you so much " ಅಂದದ್ದೇ ನಾವು ಸಿಕ್ಕ ಆಟೋವನ್ನು ಹತ್ತಿ ದೇವಸ್ಥಾನ ತಲುಪಿದೆವು. ದೇವಸ್ಥಾನದ ಪೂರ್ವದಿಕ್ಕಿನ ಮುಂಬಾಗಿಲಲ್ಲಿ ಮಧ್ಯಾಹ್ನ ಹನ್ನೆರಡಕ್ಕೆ ಸರಿಯಾಗಿ ಪಾದಾರ್ಪಣೆ ಮಾಡಿದೆವು. ಚಪ್ಪಲಿ ಬಿಟ್ಟು ಒಳಗೆ ಬಂದು ನೋಡಿದರೆ ಹೊರಪ್ರಾಕಾರದಿಂದ ಐದು ಸುತ್ತು ಸುತ್ತಿ ಒಳಪ್ರಾಕಾರದ ಪ್ರವೇಶದ್ವಾರಕ್ಕೆ ಕ್ಯೂ !
Z : ಸದ್ಯೋಜಾತ !
ನಾನು : ನಾವು ಅನ್ಯಾಯ ಆಯ್ತಲ್ಲಾ ಅಂತ ಉದ್ಗರಿಸಿ ಅತ್ತಿತ್ತ ನೊಡಿದೆವು.ಪಕ್ಕದಲ್ಲೊಂದು ಮೇಜಿನ ಮೇಲೆ "special darshan- 100 Rs" ಅಂತ ಬೋರ್ಡು ಹಾಕಿ ಒಬ್ಬರು ರಸೀತಿ ಪುಸ್ತಕ ಇಟ್ಟುಕೊಂಡು ಕುಳಿತಿದ್ದರು. ನಾವು ಸ್ಲೋ ಮೋಷನ್ನಲ್ಲಿ ಸ್ಪೀಡಾಗಿ ಓಡಿ ಅಲ್ಲಿ ಹೋಗಿ ಈ ದರ್ಶನದ ಟಿಕೆಟ್ ಕೊಂಡರೆ ಎಷ್ಟೊತ್ತಿಗೆ ದರ್ಶನ ಅಂತ ಹರಕು ಮುರುಕು ಜಲೇಬಿ ಭಾಷಾಜ್ಞಾನ ಬಳಸಿ ಕೇಳಿದೆವು. ಅವರು ಹತ್ತು ನಿಮಿಷ ಅಂತ ಅಂದಿದ್ದನ್ನ ಅರ್ಥ ಮಾಡಿಕೊಳ್ಳಲು ನಮಗೆ ಹತ್ತು ನಿಮಿಷ ಬೇಕಾಯ್ತು. ನಾನು ಅಮ್ಮ ಇಬ್ಬರು ಒಂದೊಂದು ಟಿಕೆಟ್ ಪಡೆದೆವು. ನಾವು ಅವರಿಗೆ ಆಂಗ್ಲದಲ್ಲಿ ಹೀಗೆ ಕೇಳಿಕೊಂಡೆವು ," We are tourists. Got separated from our group. Please let us have the darshan fast so that we can search for them in bus stand" ಅಂದೆವು. ಅದಕ್ಕೆ ಅವರು " ವಾಂಗೋ ವಾಂಗೋ" ಅಂದದ್ದೇ ಆ ಅದು ಸುತ್ತಿನ ಕ್ಯೂ ಇತ್ತಲ್ಲ, ಅದರ ಮಧ್ಯದಿಂದ ನಮ್ಮನ್ನು ನುಸುಳಿಸಿ ಹತ್ತೇ ನಿಮಿಷದಲ್ಲಿ ಪ್ರವೇಶದ್ವಾರದ ಕ್ಯೂವನ್ನೂ ಹಿಂದಕ್ಕೆ ಹಾಕಿ special darshan ಕ್ಯೂ ಬಳಿ ತಂದು ಪ್ರತಿಷ್ಟಾಪಿಸಿದರು.
Z : ಉತ್ಸವ ಮೂರ್ತಿ ಥರ.
ನಾನು : ಹೂಂ. ನಾವು ಕ್ಯೂ ನಲ್ಲಿ ನಿಂತೆವು. ಅಷ್ಟೊತ್ತಿಗೆ ಸರಿಯಾಗಿ ಅಣ್ಣ ಫೋನ್ ಮಾಡಿದರು. ಪುಣ್ಯಕ್ಕೆ ಸೈಲೆಂಟ್ ಮೋಡ್ ನಲ್ಲಿ ಇತ್ತು ಫೋನು. ಇಲ್ಲಾಂದಿದ್ದ್ರೆ ಅರ್ಚಕರು ಗುರಾಯಿಸಿರೋರು.
ಅಣ್ಣ: ಎಲ್ಲಿದಿಯ ?
ನಾನು : ಗರ್ಭಗುಡಿ ಹತ್ರ.
ಅಣ್ಣ: ಯಾಕೆ ? ಹೇಗಿದ್ಯಾ? ಒಬ್ಬಳೇ ಬಂದ್ಯಾ ? ಅಮ್ಮ ಎಲ್ಲಿ ?
ನಾನು : ದೇವರನ್ನ ನೊಡೋಕೆ ಬಂದ್ವಿ. ನಾನು ಹುಶಾರಾಗಿದಿನಿ. ಅಮ್ಮ ಇಲ್ಲೇ ಇದಾರೆ. ಅವರ ಜೊತೆಗೆ ಬಂದೆ.
ಅಣ್ಣ: ದೇವಸ್ಥಾನ ಬಸ್ ಸ್ಟ್ಯಾಂಡ್ ನಿಂದ ದೂರ ಇದೆ. ಹೇಗೆ ಬಂದ್ರಿ ?
ನಾನು: ಆಟೋ.
ಅಣ್ಣ: ನಿಜ್ವಾಗ್ಲು ಹುಷಾರಾದ್ಯಾ ಅಥ್ವಾ ಹಂಗೆ ಬಂದ್ಯೊ ?
ನಾನು : ಇಲ್ಲಾ ಅಣ್ಣ, ಆಯುರ್ವೇದದ ಒಂದು ಮಾತ್ರೆ ಇತ್ತು. ತಗೊಂಡ ತಕ್ಷಣ ಸರಿಯಾದೆ. ಮಿಕ್ಕಿದ ಕಥೆ ಎಲ್ಲಾ ಆಮೇಲೆ ಹೇಳ್ತಿವಿ. ನೀವೆಲ್ಲ ಎಲ್ಲಿದಿರ ?
ಅಣ್ಣ: ನಾವು west entrance ಇಂದ ಹೊರಗೆ ಬಂದ್ವಿ ಈಗ ತಾನೆ. ಇಲ್ಲಿ ಶಾಪಿಂಗ್ ಮಾಡ್ತಿದಿವಿ. ನಿಮ್ಮ ದರ್ಶನ ಪುಣ್ಯವಶಾತ್ ಏನಾದ್ರೂ ಬೇಗ ಆದರೆ, ಸೀದಾ west entrance ಇಂದ ಹೊರಬಂದು ಬಲಕ್ಕೆ ತಿರುಗಿ. ನಾವು ಅಲ್ಲೆ krishna silks ನಲ್ಲದಿವಿ.
ನಾನು: ಸರಿ. ಇಡ್ತಿನಿ.
ಆ ಸಮಯಕ್ಕೆ ಸರಿಯಾಗಿ ನಮ್ಮನ್ನು ದರ್ಶನಕ್ಕೆ ಒಳಕರೆಯಲಾಯ್ತು. ಮೀನಾಕ್ಷಿ ದೇವಿ ಮಾತ್ರ ಏನ್ ಸೂಪರ್ರಾಗಿದಾರೆ ಅಂದ್ರೆ....
Z : ಅಂದ್ರೆ....
ನಾನು : ನೋಡಕ್ಕೆ ಎರಡು ಕಣ್ಣು ಸಾಲದು.
Z : ಕಥೆ ಪ್ಲೀಸ್...
ನಾನು : ಮೀನಾಕ್ಷಿ ಪಾಂಡ್ಯ ರಾಜ ಸುಮಲಯಜನ ಮಗಳು. ಪಾರ್ವತಿಯ ಅವತಾರ. ಮಹಾಸುಂದರಿ. ಮಹಾ ವೀರಳು ಕೂಡ. ದೇವತೆಗಳಿಗೆಲ್ಲಾ ಯುದ್ಧದಲ್ಲಿ help ಎಲ್ಲಾ ಮಾಡ್ತಿದ್ಲಂತೆ.
Z : wow !
ನಾನು : Asusual, ಪಾಂಡ್ಯರಾಜ "ಮದುವೆ ಮಾಡಿಕೋ ಮಗಳೇ" ಅಂದರು. ಇವಳು "not now pappa..." ಅಂದಳು. ಅದಕ್ಕೆ ಪಾಂಡ್ಯರಾಜ "ನಾವು search engineಗಳು, matrimonial sitesಗಳ ಮೂಲಕ ಹುಡುಕ್ತಿರ್ತಿವಿ, ಸಿಕ್ಕಿದರೆ ನಾವು ನಿನಗೆ ಹೇಳ್ತಿವಿ, ನೀನು ಡಿಸೈಡ್ ಮಾಡು. ಇಲ್ಲಾಂದ್ರೆ ನೀನೆ ಗೂಗಲ್ ಮಾಡ್ಕೋ"ಅಂದ್ರಂತೆ. ಇವಳು ಓಕೆ ಅಂದು globe trottingu, space walkingu, star warsu ಎಲ್ಲಾ ಮಾಡ್ತಿದ್ಲಂತೆ.
Z : ಆಮೇಲೆ ?
ನಾನು : ಒಂದು ದಿನ Mr. Indra ಒಂದು SOS ಮೆಸೇಜು ಕಳ್ಸಿದ್ನಂತೆ. ಯುದ್ಧಕ್ಕೆ ಮೀನಾಕ್ಷೀ ಮೇಡಮ್ಮು ಹೆಲ್ಪಿಗೆ ಬೇಕು ಅಂತ. ಮೇಡಮ್ಮು zuyk ಅಂತ ಇಂದ್ರಲೋಕಕ್ಕೆ ಬಂದ್ರಂತೆ. At the same time, Mr. Sundareshwara (Ome of the forms of eeshwara) ಯುದ್ಧಕ್ಕೆ ಹೆಲ್ಪ್ ಮಾಡೋಣ ಅಂತ ಇಂದ್ರಲೋಕಕ್ಕೆ ಬಲಗಾಲಿಟ್ಟರು. ಮೇಡಮ್ಮು ಇವರನ್ನ ನೋಡಿದ್ದೇ clean bowled ಆಗೋದ್ರಂತೆ.
Z : ಏಕೋ ಏನೋ ನನ್ನಲ್ಲಿ ಹೊಸ ಆಸೆಯು ಮೂಡುತಿದೆ....
ನಾನು : ನಿನ್ನನ್ನ play back singing ಮಾಡು ಅಂತ ಹೇಳಿದ್ನಾ ನಾನು ?
Z : ಇಲ್ಲ...situation ಗೆ correct ಆಗಿ song ಹಾಡಿದೆ.
ನಾನು : ಅದೆಲ್ಲಾ ಮಾಡಕ್ಕೆ ಇಂದ್ರಲೋಕದಲ್ಲಿ ಸಿಕ್ಕಾಪಟ್ಟೆ ಜನ ಇದಾರೆ. ನೀನು ರೆಸ್ಟ್ ತಗೋ.
Z : ತಾವು ಕಥೆ ಮುಂದುವರೆಸಿ.
ನಾನು : clean bowled ಆದ Ms. ಮೀನಾಕ್ಷಿಯನ್ನು Mr. ಸುಂದರೇಶ್ವರ with great pomp and grandeur ಮದುರೈ ನಲ್ಲಿ ಮದುವೆಯಾದರಂತೆ.
Z : ಸುಮುಹುರ್ತೋಸ್ತು.
ನಾನು : ಆಮೇಲೆ ಪಾಂಡ್ಯರಾಜ ನೀವಿಬ್ರು ಸುಖವಾಗಿರಿ ಅಂತ ದೇವಸ್ಥಾನ ಕಟ್ಟಿಸಿದರಂತೆ.
Z : ಹ್ಮ್ಮ್....
ನಾನು : ಮೀನಾಕ್ಷಿ ದೇವಿಯು ಕೈಯಲ್ಲಿ ಗಿಣಿ ಹಿಡಿದಿದ್ದಾರೆ. ವಜ್ರಖಚಿತ ಕಿರೀಟ, ಪಚ್ಚೆಯ ಹಾರ, ವಜ್ರದ ಮೂಗುತಿ ಸಹಿತ ದೇವಿಯು ಸರ್ವಾಲಂಕಾರ ಭುಷಿತ ತ್ರಿಪುರಸುಂದರಿ, ಜಗಜ್ಜನನಿ. ನಾನಂತೂ ಒಂದು ಹತ್ತು ನಿಮಿಷ ಕಣ್ಣು ಮಿಟುಕಿಸದೆಯೇ ನೋಡುತ್ತಲೇ ಇದ್ದೆ. ಆಮೇಲೆ ನಮಸ್ಕಾರ ಮಾಡಿದ್ದು ನಾನು.
Z : ಆಹಾ...ಏನ್ ತಲೆ !
ನಾನು : ಇನ್ನೇನ್ ಮತ್ತೆ ! ಏನ್ ಲುಕ್ ಗೊತ್ತಾ ? I am the most powerful, but very kind and considerate ಅನ್ನೋ ಲುಕ್ಕಿದೆ ಮೀನಾಕ್ಷಿಗೆ.
Z : ಹೌದಾ ?
ನಾನು : ಹೂಂ ! ಭಯ ಭಕ್ತಿ ಆಶ್ಚರ್ಯ ಮೂರು ಆಗತ್ತೆ ಗೊತ್ತಾ ಮೀನಾಕ್ಷಿ ನ ನೋಡಿದ್ರೆ?
Z : I see.
ನಾನು :yeah. ಅಲ್ಲಿಂದ ನಾವು ಸೀದಾ ಸುಂದರೇಶ್ವರರ ಸನ್ನಿಧಿಗೆ ಹೋದ್ವಿ. ಅಲ್ಲಿ ನಾನು ಕ್ಲೀನ್ ಬೋಲ್ಡ್ ಆದೆ.
Z : ಆಹಾ....
ನಾನು : ಸುಂದರೇಶ್ವರ ಲಿಂಗದ ಸೌಂದರ್ಯದ ಮುಂದೆ hollywood, bollywood, sandalwood, kollywood ಮತ್ತು tollywood ಹೀರೋಗಳೆಲ್ಲಾ ನಗಣ್ಯರು ನನ್ನ ಪ್ರಕಾರ.
Z : ಹೌದಾ ?
ನಾನು : ಹೂಂ...ಏನ್ ಅಪೀಲಿಂಗ್ ಲುಕ್ ಗೊತ್ತಾ....ಎಂಥವರೂ fida ಆಗೋಗ್ತಾರೆ.....extremely handsome ದೇವರು.
Z : ಅದಕ್ಕೆ ಸುಂದರೇಶ್ವರ ಅಂತ ಹೆಸರಿರೋದು.
ನಾನು : ಕರೆಕ್ಟೂ...ನಾವು ದೇವಾಲಯದ ಒಳಗೆ ಬಂದೊಡನೆ ಅಮ್ಮ ಮಹಾಮೃತ್ಯುಂಜಯ ಮಂತ್ರ ಜಪಿಸುತ್ತಿದ್ದರೆ, ನಾನು "how handsome !" ಅಂತ ಉದ್ಗರಿಸಿದೆ. ಅಮ್ಮ ಮೊಟಕಿ " ಮಂತ್ರ ಹೇಳ್ಕೊಳೇ ! ಇಡೀ ಸೌತ್ ಇಂಡಿಯಾ ಟೂರಲ್ಲಿ ಇನ್ನೆಲ್ಲೂ ಹುಷಾರು ತಪ್ಪದೇ ಇರೋಹಾಗಾಗಲಿ ಅಂತ ಕೇಳ್ಕೊ." ಅಂದ್ರು. ನಾನು ಹೂಗುಟ್ಟಿದೆನಾದರೂ ಮಂತ್ರಗಳೇ ನೆನಪಾಗಲಿಲ್ಲ ಸ್ವಲ್ಪ ಹೊತ್ತು. ಆ ದೇವರ appearance, radiance and manifestation ಗೆ ಮನಸೋತು ಎಲ್ಲೋ ಕಳೆದುಹೋಗಿದ್ದೆ. ಒಂದೈದು ನಿಮಿಷ ಆದಮೇಲೇನೆ ನನಗೆ "ಸದ್ಯೋಜಾತಂ ಪ್ರಪದ್ಯಾಮಿ ಸದ್ಯೋಜಾತಾಯ ವೈ ನಮೋ ನಮಃ" ನೆನಪಾದದ್ದು !
Z : hopeless fellow ! ಮೊದಲು ಭಕ್ತಿ ಮುಖ್ಯ, ಆಮೇಲೆ ಲುಕ್ಕೆಲ್ಲ. ಮಂತ್ರನ ಬಾಯ್ಬಿಟ್ಟು ಹೇಳೋಬದಲು ದೇವರನ್ನ ಬಾಯ್ಬಿಟ್ಟುಕೊಂಡು ನೋಡ್ತಿದ್ಯಲ್ಲಾ....ಏನನ್ನೋಣ ಇದಕ್ಕೆ ?
ನಾನು : ಏನು ಅನ್ನಬೇಡ. ನನಗೆ ಅಲ್ಲಿ ಕಾಡಿದ್ದು ಒಂದೇ ವಿಚಾರ. ಅರುಣಾಚಲೇಶ್ವರನ ಲಿಂಗ firm, invincible and adamant ಅಂತ ಅನ್ನಿಸಿದರೆ ಚಿದಂಬರದಲ್ಲಿ ಲಿಂಗ creative and intelligent. ಒಂಥರಾ research scientist look ಇದೆ.ಶ್ರೀರಂಗದಲ್ಲಿ calm and composed ಈಶ್ವರ ತಂಜಾವೂರಿನಲ್ಲಿ magnificent and majestic. ಒಬ್ಬನೇ ಈಶ್ವರ ಅವನು, ಆದರೆ ಒಂದು ಕಡೆ ಇದ್ದ ಹಾಗೆ ಇನ್ನೊಂದು ಕಡೆ ಇಲ್ಲ.Above all, Sundareshwara is the best and most beautiful of all lingas. As a material scientist, I wonder if it is the property of the stone or is it by the power of vibration of that place that we feel so.
Z : ನಿಮ್ಮಂಥೋರೆಲ್ಲಾ ದೇವಸ್ಥಾನಕ್ಕೆ ಹೋಗಲೇಬಾರದು.
ನಾನು : ಯಾಕಮ್ಮ ?
Z : ಲೋಕದ ಆರೋಗ್ಯಕ್ಕೆ ಒಳ್ಳೇದಲ್ಲ.
ನಾನು : shut up ok ? ನಾನು ಏನಂದೆ ಅಂಥದ್ದು ಅಂತ ?
Z : ನಿಮ್ಮಂಥೋರನ್ನೆಲ್ಲಾ ಬಿಟ್ಟರೆ, "ಇಲ್ಲಿ metallurgical microscope ಇಡಕ್ಕೆ ಸ್ವಲ್ಪ ಜಾಗ ಮಾಡ್ಕೊಡಿ, ನಾವು ಲಿಂಗನ ಏನು ಮಾಡಲ್ಲ, ಬರಿ grain boundary determine ಮಾಡಿ crystal structure determine ಮಾಡಿ speciality ಕಂಡುಹಿಡಿತಿವಿ ಅಷ್ಟೇ " ಅಂತಿರಾ !
ನಾನು :ಹಂಗೆಲ್ಲಾ ಅನ್ನಲ್ಲ...ನೀ ಏನೇ ಅನ್ನು, every linga is special.
Z : ಹ್ಮ್ಮ್...ಏನೋ ಪಾ.ಮುಂದೆ ?
ನಾನು :ಅಮ್ಮ ಕೈಹಿಡಿದು ಎಳಕೊಂಡು ಬರದೇ ಹೋಗಿದ್ದಿದ್ದರೆ ನಾನು ಖಂಡಿತಾ ದೇವಸ್ಥಾನದಿಂದ ಹೊರಬರುವ ಮೂಡ್ ನಲ್ಲೇ ಇರಲ್ಲಿಲ್ಲ. ನೀಟಾಗಿ west entrance ಇಂದ ಹೊರಬಂದ ಮೇಲೆ ನಮಗೆ ಜ್ಞಾನೋದಯವಾಯ್ತು, ನಾವು ಚಪ್ಪಲಿಯನ್ನ east entrance ನಲ್ಲಿ ಬಿಟ್ಟಿದ್ದೇವೆ ಅಂತ.
Z : ಭೇಷ್.
ನಾನು :ಮತ್ತೆ ವಾಪಸ್ಸು ಸುತ್ತುಹೊಡೆದೆವು. ಅಣ್ಣ ಅಷ್ಟೊತ್ತಿಗೆ ಫೋನ್ ಮಾಡಿ "ಎಲ್ಲಿ ಕಳೆದುಹೋಗಿದಿರಾ ?" ಅಂದ್ರು.ನಾವು ಚಪ್ಪಲಿ ಮರ್ತಿದಿವಿ, ಹಾಕೊಂಡ್ ಬರ್ತಿವಿ ಅಂದು, ಮತ್ತೆ ರೌಂಡ್ ಹೊಡೆದು, ಅಣ್ಣ ಇರೋ ಜಾಗಕ್ಕೆ ತಲುಪಿದೆವು. ಮದುರೈ ಗೆ ಹೋದ ಸವಿ(!) ನೆನಪಿಗಾಗಿ ಒಂದು ಡ್ರೆಸ್ ಮಟೀರಿಯಲ್ಲನ್ನು ಖರೀದಿಸಿದೆವು. ಅಮ್ಮ ಒಂದು ಸೀರೆ ತಗೊಂಡರು. ಅಲ್ಲಿಂದ ಬಸ್ ಸ್ಟ್ಯಾಂಡ್ ಗೆ ಆಟೋರಿಕ್ಷಾ ಲಿ ಬಂದೆವು. ಮಜವಾಗಿತ್ತು. ಅಲ್ಲಿಂದ ಬಂದು ಬಸ್ಸಲ್ಲಿ ಕೂತ ಮೇಲೆ ಶುರುವಾಯ್ತು ನೊಡಿ ನನಗೆ installment ನಲ್ಲಿ ಗೀತೋಪದೇಶ....
Z: ಎಹೆಹೆ...ಏನಂತ ?
ನಾನು : "ಚೆನ್ನಾಗ್ ತಿನ್ನಬೇಕು ನೀನು, ಏನ್ ಕೋಳಿ ಕಾಳು ಕೆದಕಿದ ಹಾಗೆ ಊಟ ಕೆದಕುತ್ತೀಯಾ ? nanotechnology ನಲ್ಲಿ research ಮಾಡ್ತ್ಯಾ ಅಂದ ಮಾತ್ರಕ್ಕೆ nanograms ನಲ್ಲಿ ಊಟ ಮಾಡಬಾರದಮ್ಮ...." ಅಂತ ಒಂದಿಷ್ಟು ಜನ ಅಂಕಲ್ಗಳು..
"ನಾವು ದೇವರನ್ನ ಬೇಡ್ಕೊಂಡ್ವಿ, ಸದಾ ಕಾಲ ಬುಕ್ ಓದ್ತಿರತ್ತೆ ಮಗು, ಯಾವಾಗ್ ಯಾವಗ್ಲೋ ಎಲ್ಲೆಲ್ಲೋ ಫೋಟೋ ತೆಗಿತಿರತ್ತೆ, ಚಿನಕುರುಳಿ ಅಂಥಾ ಮಗುನ ಹಿಂಗೆ ಮಲ್ಕೊಂಡಿರೋದನ್ನ ನೋಡಕ್ಕಾಗದಿಲ್ಲ, ಹುಷಾರು ಮಾಡಮ್ಮ... ಅಂತ ನಾವು ಕೇಳ್ಕೊಂಡ್ವಿ, ಮೀನಾಕ್ಷಮ್ಮ ದಯೆ ತೋರ್ಸ್ಬಿಟ್ಲು, ಸಿಕ್ಕಾಪಟ್ಟೆ ಮಹಿಮೆ ಇದೆ ಸ್ಥಳಕ್ಕೆ " ಅಂತ ಆಂಟಿಗಳು..ಮಧ್ಯ ನಾನು ಬಡಪಾಯಿ !
Z : ಎಹೆಹೆಹೆ...ಅವರಿಗೇನು ಗೊತ್ತು ಪಾಪ. ನೀನು ಚಪಾತಿ, ಅವಲಕ್ಕಿ, ಸಾರನ್ನ ಮತ್ತು ಮೊಸರನ್ನ ಪ್ರಿಯೆ ಅಂತ.
ನಾನು :ನನಗೆ ಎಲ್ಲದಕ್ಕಿಂತ ಮೊಸರನ್ನ ನೇ ಹೆಚ್ಚು ಇಷ್ಟ. ಅದಕ್ಕೆ ನಿಂಬೆಕಾಯೋ ಮಾವಿನಕಾಯೋ ಉಪ್ಪಿನಕಾಯಿ ಇದ್ದುಬಿಟ್ಟರೆ, ಅಷ್ಟು ಸಾಕು ನನಗೆ. ಅದಕ್ಕೆ ಆವತ್ತೆ ಪ್ರತಿಜ್ಞೆ ಮಾಡಿದೆ, "ಎಲ್ಲೇ ಹೋಗಲಿ, ಏನೇ ಮಾಡಲಿ, ನಾನು ಮೊಸರನ್ನಾ ನೇ ತಿನ್ನೋದು" ಅಂತ.
Z : ಗುಡುಗು, ಸಿಡಿಲು, ಮಿಂಚೇನಾದ್ರು ಬಂತಾ ಈ ಪ್ರತಿಜ್ಞೆಗೆ ?
ನಾನು :ಉಹು.
Z : ಪರ್ವಾಗಿಲ್ಲ. ಆಮೇಲೆ ?
ನಾನು :ಊಟದ ಸಮಯದಲ್ಲಿ ನಾನು ಬರೀ ಮೊಸರನ್ನ ತಿಂದೆ. ಅಲ್ಲಿಂದ ಸೀದಾ ರಾಮೇಶ್ವರಕ್ಕೆ ಹೊರಟೆವು.ದಾರಿಯಲ್ಲಿ ಸಮುದ್ರದ ಫೋಟೋನ ಸಮೃದ್ಧವಾಗಿ ತೆಗೆದೆ. ಅಲ್ಲಿಂದ ದೇವಾಲಯಕ್ಕೆ ಹೋಗುವ ಮುನ್ನ ಒಂದು ಲಾಡ್ಜಲ್ಲಿ ನಮ್ಮನ್ನು ಇಳಿಸಲಾಯ್ತು. ಮೈನ್ ಲ್ಯಾಂಡ್ ನಲ್ಲಿ ಬಸ್ಸಿತ್ತು. ನಾವು ಆಟೋ ಹಿಡಿದು, ಸೇತುವೆ ಮೂಲಕ ರಾಮೇಶ್ವರ ತಲುಪಿದೆವು.
Z :ರಾಮ ಕಟ್ಟಿಸಿದ್ದಾ ?
ನಾನು : ಅದು ಸಮುದ್ರದ ಕೆಳಗಿದೆ ಕಣೇ...ಇದು ಸಮುದ್ರದ ಮೇಲಿದೆ.ಅಲ್ಲಿ ಹೋಗಿ, ರೆಸ್ಟ್ ತಗೊಂಡು ದೇವಾಲಯಕ್ಕೆ ಹೋದೆವು. ದರ್ಶನ ಸೂಪರ್ ಫಾಸ್ಟಾಗಿ ಆಯ್ತು. ಅಲ್ಲಿಂದ ಸೀದಾ ಶೃಂಗೇರಿ ಶಂಕರ ಮಠದ ಶಾಖೆಗೆ ಬಂದು, ನಮ್ಮ ತಂದೆ ಮತ್ತು ಅನಂತ್ ಅಂಕಲ್ ಮಾಡಬೇಕಿದ್ದ ಅಪರಕರ್ಮವಿಧಿಗಳ ಬಗ್ಗೆ ವಿಚಾರಿಸಿಕೊಂಡೆವು. ಅವರೇ ಅದೆಲ್ಲಾ ಮಾಡಿಸುವುದಾಗಿ ಹೇಳಿ, ಮಾರನೆಯದಿನದ ಮುಂಜಾವಿನ ಸ್ಫಟಿಕಲಿಂಗದ ದರ್ಶನ ಮತ್ತು ಇಪ್ಪತ್ತೆರಡು ಬಾವಿ ಸ್ನಾನಕ್ಕೆ ಕೂಡ ವ್ಯವಸ್ಥೆ ಮಾಡುತ್ತೇವೆಂದರು. ನಾವು ತಲೆಯಲ್ಲಾಡಿಸಿ ಬೆಳಿಗ್ಗೆ ಎಷ್ಟೊತ್ತಿಗೆ ಮಠಕ್ಕೆ ಬರಬೇಕು ಎಂದು ಕೇಳಿದೆವು. ಅವರು "ಮೂರುವರೆ" ಅಂದರು.
Z :ಉಹಹಹಹಾ.....
ನಾನು :ನಗಬೇಡ. ನನಗಾಗಲೇ ಅಭ್ಯಾಸ ಆಗೋಗಿತ್ತು ಮೂರುಘಂಟೆಗೆ ಏಳೋದು. ಸರಿ ಅಂತ ಗೋಣಲ್ಲಾಡಿಸಿ, ಮತ್ತೆ ಲಾಡ್ಜಿಗೆ ಬಂದು ಊಟ ಮಾಡಿ ಮಲಗಿದೆವು.ಫೋಟೋಸ್ ನೋಡು, ಮಿಕ್ಕ ಕಥೆ ಆಮೇಲೆ.
ಜೀವನದೊಂದಿಗಿನ ನಮ್ಮ ಮಾತು lifetime ! ಇದರಲ್ಲಿ incoming -ಊ free outgoing -ಊ free !
ನನ್ನ ज़िंदगीಯೊಂದಿಗಿನ nonstop ಗುಸುಗುಸುವನ್ನು ಇಲ್ಲಿ ಬಿಚ್ಚಿಟ್ಟಿದ್ದೇನೆ.
Saturday, August 15, 2009
Monday, August 3, 2009
ಮತ್ತೊಂದು ಆಹ್ವಾನ
Z : ಮತ್ತೊಂದು ಆಹ್ವಾನ ?
ನಾನು : ಹು.
Z : ಏನ್ ವಿಶೇಷ ?
ನಾನು : ಪ್ರಣತಿ ಗೊತ್ತಲ್ಲ ?
Z : ಹು.
ನಾನು : ಗಮಕ ಸುಧಾ ಧಾರೆ ಕಾರ್ಯಕ್ರಮದ ನಂತರ ಪ್ರಣತಿ ಮತ್ತೊಂದು ಕಾರ್ಯಕ್ರಮಕ್ಕೆ ರೆಡಿಯಾಗಿದೆ.
Z : ರೆಡಿ...ಸ್ಟೆಡಿ...ಗೋ !!
ನಾನು : ಹಾಂ ಅದೇ ನೆ. ಎರಡು ಪುಸ್ತಕಗಳ ಬಿಡುಗಡೆ ಇದೆ.
Z : ಯಾವ್ ಯಾವ್ದು ?
ನಾನು : ನಮ್ಮ silent ಸುಶ್ರುತ ...
Z : ಹಾಂ ? ಸುಶ್ರುತ ಸೈಲೆಂಟಾ ?
ನಾನು : ಅಲ್ಲ, ಆದ್ರೆ ಹಂಗಂದುಕೋಬೇಕ್ ನಾವು. ಯಾಕಂದ್ರೆ ಅವರ ಬ್ಲಾಗ್ ಹೆಸರೇ ಮೌನಗಾಳ ಅಂತ. ಸೈಲೆಂಟಾಗಿ ಗಾಳ ಹಾಕಿ ಹಾಕಿ ಸಿಕ್ಕ ರುಚಿ ರುಚಿಯಾದ ಮೀನುಗಳನ್ನೆಲ್ಲ " ಹೊಳೆಬಾಗಿಲು" ಕೃತಿಯಲ್ಲಿ ನಮಗೆ introduce ಮಾಡಿಕೊಡುತ್ತಿದ್ದಾರೆ.
Z : I see. ಇನ್ನೊಂದು ಪುಸ್ತಕ ?
ನಾನು : ನಮ್ಮ lazy ಶ್ರೀನಿಧಿ...
Z : lazy ಅನ್ನೋ ಗುಣವಾಚಕ ಇಟ್ಕೊಂಡು ಪುಸ್ತಕ ಎಲ್ಲ ಬರ್ದ್ರೆ ನಾವ್ ಏನ್ ಅಂದುಕೋಬೇಕು ?
ನಾನು : lazy ಅನ್ನೋದು ಅವರನ್ನ ವರ್ಣಿಸಲು ಬಳಸಿರೋ ತಪ್ಪು ಗುಣವಾಚಕ ಅಂತ.
Z : ಒಹ್ಹೋ...
ನಾನು : ಆಹ್ಹಾ. ಮೀಡಿಯಾದಲ್ಲಿರೋರು ಯಾವತ್ತಾದ್ರು, ಯಾವಾಗ್ಲಾದ್ರು lazy ಆಗಿರಕ್ಕಾಗತ್ತಾ ಹೇಳು ?
Z : correct correct.
ನಾನು : ಶ್ರೀನಿಧಿ ಕವನಗಳನ್ನ ಬರೆದು ಒಂದು ಸಂಕಲನವನ್ನ ನಮಗೆ ನೀಡುತ್ತಿದ್ದಾರೆ.ಮೀಡಿಯಾದಲ್ಲಿ ಸಖತ್ ಬ್ಯುಸಿ ಆಗಿರೋ ಅವರು, ಅವರಿಗೆ ಸಿಕ್ಕ free time ಗೆ ಅನುಗುಣವಾಗಿ ಕವನದ ವಿಷಯ, ಸಾಂದ್ರತೆ, ಉದ್ದ, ಅಗಲ ಇದಿಯಾ ಅಂತ ಕಂಡುಹಿಡಿಯಕ್ಕೆ ಹೋಗ್ತಿದಿನಿ ನಾನು.
Z : ಇಲ್ಲೂ ರಿಸರ್ಚಾ ? !
ನಾನು : ಇನ್ನೇನ್ ಮತ್ತೆ ? ನನ್ನ ಕೈಗೆ ಮೈಕ್ ಸಿಕ್ಕರೆ....
Z : ಸಭೆಯ ಗ್ರಹಚಾರ ಕೆಟ್ಟಿದ್ದರೆ ಇದು ಸಾಧ್ಯ.
ನಾನು : ಶ್ಹ್ಹ್ಹ್ !!! ನನ್ನ ಕೈಗೆ ಮೈಕ್ ಸಿಕ್ಕರೆ, ಅದು ಯಾವ ಮಾಯೆಯಲ್ಲಿ ನೀವು ಕವನ ಬರೆದಿರಿ ಶ್ರೀನಿಧಿ ಅಂತ ಶ್ರೀನಿಧಿಯನ್ನ, ಮತ್ತು ನಿಮ್ಮ ಗಾಳಕ್ಕೆ ಯಾವ ಎರೆಹುಳು ಹಾಕಿದ್ದೀರಿ ಸುಶ್ರುತ ಅಂತ ಸುಶ್ರುತನ್ನ ಕೇಳಿಯೇ ಬಿಡುತ್ತೇನೆ.
Z : ಇಂಟರ್ ವ್ಯೂ ಥರ.
ನಾನು : ಹೂಂ.
Z : media person ಗೆ interview ಮಾಡಿದ್ರೆ ಸೂರ್ಯಂಗೆ ಟಾರ್ಚ್ ಬಿಟ್ಟಂಗೆ ಆಗತ್ತೆ.
ನಾನು : ಹೌದು, ಆದರೆ ವಿಧಿಯಿಲ್ಲ.
Z : ನಿನಗೊಬ್ಬಳಿಗೇನಾ ತಲೆ ಇರೋದು ? ಅವ್ರಿಗೂ ತಲೆ ಇದೆ. ಅವರು ಇಂಥಾ ಪ್ರಶ್ನೆಗಳಿಗೆಲ್ಲಾ ಉತ್ತರ ಕೊಡಕ್ಕೆ ಮೊದಲೇ ರೆಡಿಯಾಗಿರ್ತಾರೆ. ಇಲ್ಲಾಂದ್ರೆ ಒಂದು eternal answer ಕೊಡ್ತಾರೆ- "ಹೇಳುವುದಕ್ಕೂ ಕೇಳುವುದಕ್ಕೂ ಸಮಯವಲ್ಲ ! " ಅಂತ !!!
ನಾನು : ಹೌದಾ ? ಇದೇ ಮಾತಾ ?
Z : bets ತಗೊ.
ನಾನು : ಸರಿ ಬಾ ಅವತ್ತು ಮತ್ತೆ. ಇಬ್ಬರೂ ನೋಡಿಯೇ ಬಿಡೋಣ.
Z : ಯಾವತ್ತು ?
ನಾನು : ಆಗಸ್ಟ್ ಒಂಭತ್ತು, ಬೆಳಿಗ್ಗೆ ಹತ್ತು ಮೂವತ್ತಕ್ಕೆ ಸುಚಿತ್ರ ಫಿಲಂ ಸೊಸೈಟಿಯಲ್ಲಿ. ಇಲ್ಲಿದೆ ಡಿಟೈಲ್ಸು, ನೋಡು.
Z : ಓಹ್ ! ನಾಗತಿಹಳ್ಳಿ ಚಂದ್ರಶೇಖರ್ ಸರ್, ಎಚ್. ಎಸ್. ವಿ ಸರ್ ಮತ್ತು ಜೋಗಿ ಸರ್ ಎಲ್ಲಾ ಬರ್ತಿದಾರೆ !
ನಾನು : ಹೂಂ ಮತ್ತೆ !
Z :ನಾನು ಬರ್ತಿನಿ.
ನಾನು : ಬರದೇ ಇರೋ ಹಾಗೇ ಇಲ್ಲ ! ಗೊತ್ತಲ್ಲ ?
ನಾನು : ಹು.
Z : ಏನ್ ವಿಶೇಷ ?
ನಾನು : ಪ್ರಣತಿ ಗೊತ್ತಲ್ಲ ?
Z : ಹು.
ನಾನು : ಗಮಕ ಸುಧಾ ಧಾರೆ ಕಾರ್ಯಕ್ರಮದ ನಂತರ ಪ್ರಣತಿ ಮತ್ತೊಂದು ಕಾರ್ಯಕ್ರಮಕ್ಕೆ ರೆಡಿಯಾಗಿದೆ.
Z : ರೆಡಿ...ಸ್ಟೆಡಿ...ಗೋ !!
ನಾನು : ಹಾಂ ಅದೇ ನೆ. ಎರಡು ಪುಸ್ತಕಗಳ ಬಿಡುಗಡೆ ಇದೆ.
Z : ಯಾವ್ ಯಾವ್ದು ?
ನಾನು : ನಮ್ಮ silent ಸುಶ್ರುತ ...
Z : ಹಾಂ ? ಸುಶ್ರುತ ಸೈಲೆಂಟಾ ?
ನಾನು : ಅಲ್ಲ, ಆದ್ರೆ ಹಂಗಂದುಕೋಬೇಕ್ ನಾವು. ಯಾಕಂದ್ರೆ ಅವರ ಬ್ಲಾಗ್ ಹೆಸರೇ ಮೌನಗಾಳ ಅಂತ. ಸೈಲೆಂಟಾಗಿ ಗಾಳ ಹಾಕಿ ಹಾಕಿ ಸಿಕ್ಕ ರುಚಿ ರುಚಿಯಾದ ಮೀನುಗಳನ್ನೆಲ್ಲ " ಹೊಳೆಬಾಗಿಲು" ಕೃತಿಯಲ್ಲಿ ನಮಗೆ introduce ಮಾಡಿಕೊಡುತ್ತಿದ್ದಾರೆ.
Z : I see. ಇನ್ನೊಂದು ಪುಸ್ತಕ ?
ನಾನು : ನಮ್ಮ lazy ಶ್ರೀನಿಧಿ...
Z : lazy ಅನ್ನೋ ಗುಣವಾಚಕ ಇಟ್ಕೊಂಡು ಪುಸ್ತಕ ಎಲ್ಲ ಬರ್ದ್ರೆ ನಾವ್ ಏನ್ ಅಂದುಕೋಬೇಕು ?
ನಾನು : lazy ಅನ್ನೋದು ಅವರನ್ನ ವರ್ಣಿಸಲು ಬಳಸಿರೋ ತಪ್ಪು ಗುಣವಾಚಕ ಅಂತ.
Z : ಒಹ್ಹೋ...
ನಾನು : ಆಹ್ಹಾ. ಮೀಡಿಯಾದಲ್ಲಿರೋರು ಯಾವತ್ತಾದ್ರು, ಯಾವಾಗ್ಲಾದ್ರು lazy ಆಗಿರಕ್ಕಾಗತ್ತಾ ಹೇಳು ?
Z : correct correct.
ನಾನು : ಶ್ರೀನಿಧಿ ಕವನಗಳನ್ನ ಬರೆದು ಒಂದು ಸಂಕಲನವನ್ನ ನಮಗೆ ನೀಡುತ್ತಿದ್ದಾರೆ.ಮೀಡಿಯಾದಲ್ಲಿ ಸಖತ್ ಬ್ಯುಸಿ ಆಗಿರೋ ಅವರು, ಅವರಿಗೆ ಸಿಕ್ಕ free time ಗೆ ಅನುಗುಣವಾಗಿ ಕವನದ ವಿಷಯ, ಸಾಂದ್ರತೆ, ಉದ್ದ, ಅಗಲ ಇದಿಯಾ ಅಂತ ಕಂಡುಹಿಡಿಯಕ್ಕೆ ಹೋಗ್ತಿದಿನಿ ನಾನು.
Z : ಇಲ್ಲೂ ರಿಸರ್ಚಾ ? !
ನಾನು : ಇನ್ನೇನ್ ಮತ್ತೆ ? ನನ್ನ ಕೈಗೆ ಮೈಕ್ ಸಿಕ್ಕರೆ....
Z : ಸಭೆಯ ಗ್ರಹಚಾರ ಕೆಟ್ಟಿದ್ದರೆ ಇದು ಸಾಧ್ಯ.
ನಾನು : ಶ್ಹ್ಹ್ಹ್ !!! ನನ್ನ ಕೈಗೆ ಮೈಕ್ ಸಿಕ್ಕರೆ, ಅದು ಯಾವ ಮಾಯೆಯಲ್ಲಿ ನೀವು ಕವನ ಬರೆದಿರಿ ಶ್ರೀನಿಧಿ ಅಂತ ಶ್ರೀನಿಧಿಯನ್ನ, ಮತ್ತು ನಿಮ್ಮ ಗಾಳಕ್ಕೆ ಯಾವ ಎರೆಹುಳು ಹಾಕಿದ್ದೀರಿ ಸುಶ್ರುತ ಅಂತ ಸುಶ್ರುತನ್ನ ಕೇಳಿಯೇ ಬಿಡುತ್ತೇನೆ.
Z : ಇಂಟರ್ ವ್ಯೂ ಥರ.
ನಾನು : ಹೂಂ.
Z : media person ಗೆ interview ಮಾಡಿದ್ರೆ ಸೂರ್ಯಂಗೆ ಟಾರ್ಚ್ ಬಿಟ್ಟಂಗೆ ಆಗತ್ತೆ.
ನಾನು : ಹೌದು, ಆದರೆ ವಿಧಿಯಿಲ್ಲ.
Z : ನಿನಗೊಬ್ಬಳಿಗೇನಾ ತಲೆ ಇರೋದು ? ಅವ್ರಿಗೂ ತಲೆ ಇದೆ. ಅವರು ಇಂಥಾ ಪ್ರಶ್ನೆಗಳಿಗೆಲ್ಲಾ ಉತ್ತರ ಕೊಡಕ್ಕೆ ಮೊದಲೇ ರೆಡಿಯಾಗಿರ್ತಾರೆ. ಇಲ್ಲಾಂದ್ರೆ ಒಂದು eternal answer ಕೊಡ್ತಾರೆ- "ಹೇಳುವುದಕ್ಕೂ ಕೇಳುವುದಕ್ಕೂ ಸಮಯವಲ್ಲ ! " ಅಂತ !!!
ನಾನು : ಹೌದಾ ? ಇದೇ ಮಾತಾ ?
Z : bets ತಗೊ.
ನಾನು : ಸರಿ ಬಾ ಅವತ್ತು ಮತ್ತೆ. ಇಬ್ಬರೂ ನೋಡಿಯೇ ಬಿಡೋಣ.
Z : ಯಾವತ್ತು ?
ನಾನು : ಆಗಸ್ಟ್ ಒಂಭತ್ತು, ಬೆಳಿಗ್ಗೆ ಹತ್ತು ಮೂವತ್ತಕ್ಕೆ ಸುಚಿತ್ರ ಫಿಲಂ ಸೊಸೈಟಿಯಲ್ಲಿ. ಇಲ್ಲಿದೆ ಡಿಟೈಲ್ಸು, ನೋಡು.
Z : ಓಹ್ ! ನಾಗತಿಹಳ್ಳಿ ಚಂದ್ರಶೇಖರ್ ಸರ್, ಎಚ್. ಎಸ್. ವಿ ಸರ್ ಮತ್ತು ಜೋಗಿ ಸರ್ ಎಲ್ಲಾ ಬರ್ತಿದಾರೆ !
ನಾನು : ಹೂಂ ಮತ್ತೆ !
Z :ನಾನು ಬರ್ತಿನಿ.
ನಾನು : ಬರದೇ ಇರೋ ಹಾಗೇ ಇಲ್ಲ ! ಗೊತ್ತಲ್ಲ ?
Subscribe to:
Posts (Atom)
ಉತ್ತರಾಯಣ ೩
ನಾನು: ಬೃಂದಾವನಕ್ಕೆ ಹೊರಡಲು ನಾಲ್ಕು ಘಂಟೆಯಷ್ಟೊತ್ತಿಗೆ ರೆಡಿ ಇರಬೇಕು ಎಂದು ಮ್ಯಾನೇಜರ್ ವೆಂಕಟೇಶ್ ಅವರು ಹೇಳಿದ್ದರು. ಇವರೆಲ್ಲರೂ ಊಟ ಮಾಡಿ, ಮಲಗಿ, ಎದ್ದು ರೆಡಿಯಾಗು...
-
ನಾನು : There is always a next time. Z : ಹೌದಾ ? ನಾನು : ಹೌದು. Z : ಪ್ರತೀ ಸಲವೂ ಹೀಗೆ ಆದರೆ ಗತಿಯೇನು ? ನಾನು : ಅದಕ್ಕೆ ನಿನ್ನ pessimistic ಅಂತ ಬೈಯ್ಯ...
-
ನಾನು: ಬೃಂದಾವನಕ್ಕೆ ಹೊರಡಲು ನಾಲ್ಕು ಘಂಟೆಯಷ್ಟೊತ್ತಿಗೆ ರೆಡಿ ಇರಬೇಕು ಎಂದು ಮ್ಯಾನೇಜರ್ ವೆಂಕಟೇಶ್ ಅವರು ಹೇಳಿದ್ದರು. ಇವರೆಲ್ಲರೂ ಊಟ ಮಾಡಿ, ಮಲಗಿ, ಎದ್ದು ರೆಡಿಯಾಗು...
-
ಎಲ್ಲರಿಗೂ ಹೊಸ ವರ್ಷದ ಹಾರ್ದಿಕ ಶುಭಾಶಯಗಳು. ಈ ಬ್ಲಾಗಿನ ಹುಟ್ಟು ಹಬ್ಬ ಮತ್ತು ಹೊಸ ವರ್ಷ ಯಾವಾಗ್ಲು ಒಟ್ಟಿಗೆ ಬರತ್ತೆ. ಆದರೆ, ಮತ್ತೆ ಅದೇ flash back ಗೆ ಹೋಗಿ, ಅದೇ ...