Sunday, June 28, 2009

Journey to ಜಲೇಬಿನಾಡು ಭಾಗ ೫

ನಾನು : ಬೆಳಿಗ್ಗೆ ಅಲಾರಂ ಹೊಡೆಯುವ ಮುಂಚೆನೆ ಅಮ್ಮ ಬಾಗಿಲು ಬಡಿದು ಎಬ್ಬಿಸಿದರು.

Z : ಅಲಾರಂ ಇಟ್ಟಿದ್ದು ವೇಸ್ಟ್ ಆಯ್ತು ಅಂತ ನೀನು ಗೊಣಗಿರ್ತೀಯಾ.

ನಾನು : ಯೆಸ್. ಗೊಣಗಿದೆ. ನೋಡಿದ್ರೆ ಮೂರುಕಾಲಿಗೇ ಎಬ್ಬಿಸಿದ್ದಾರೆ !

Z : ಹೆಹೆಹೆಹೆ...

ನಾನು : ತೀರಾ ಕೋಪ ಬಂತು ನಂಗೆ. ಮತ್ತೆ ಮಲಗಲು ಹೊರಟೆ. ಅಮ್ಮ - " ಮೊದಲು ಜಂಭುಕೇಶ್ವರನನ್ನ ನೋಡಿಕೊಂಡು ರಂಗನಾಥ ದೇವಸ್ಥಾನದಲ್ಲಿ ಕ್ಯೂ ನಿಲ್ಲಬೇಕು. ಆಮೇಲೆ ಬಸ್ಸಿನಲ್ಲಿ ಹೋಗುವಾಗ ನಿದ್ದೆ ಮಾಡು." ಅಂದರು.

ನಾನು "ಫೋಟೋ ?" ಅಂತ ನಿದ್ದೆಗಣ್ಣಲ್ಲೇ ಕೇಳಿದೆ.

"Not allowed inside the temple. ಅಂತ ಶಿವಾನಂದ್ ಅವರು ಹೇಳಿ ನೆನ್ನೆಯೇ ಹೊರಟುಬಿಟ್ಟರು. ಈಗಿನಿಂದ ನಾಗರಾಜ್ ಅವರು ಗೈಡು."ಅಂದರು ಅಮ್ಮ.

ಹಿಂದಿನ ದಿನದ ರಶ್ಶು ನೋಡಿಯೇ ನನಗೆ ಕ್ಯಾಮೆರಾ ತಗೊಂಡು ಹೋಗೋದು ಸೇಫ್ ಅಲ್ಲ ಅನ್ನಿಸಿತ್ತು. ಮತ್ತೂ, ಕ್ಯಾಮೆರಾ ಒಳಗೆ ತೆಗೆದುಕೊಂಡು ಹೋಗಲು ಐವತ್ತು ರುಪಾಯಿ ಶುಲ್ಕ ವಿಧಿಸಿದ್ದರು. ಹಿಂದಿನ ದಿನ ಆ ಶುಲ್ಕ ಪಾವತಿಸಿಯೇ ಒಳ ನಡೆದಿದ್ದಾಯ್ತು. ಹಾಗಾಗಿಯೇ ಶ್ರೀರಂಗದ ಕೆಲವು ಫೋಟೋಗಳನ್ನು ಮಾತ್ರ ತೆಗೆಯಲು ಸಾಧ್ಯವಾಗಿದ್ದು. ಐದನೆಯ ಪ್ರಾಕಾರದಿಂದ ಛಾಯಾಗ್ರಹಣ ನಿಷೇಧ. ಕ್ಯಾಮೆರಾ ಗೂ ಸುಸ್ತಾಗಿತ್ತು. ಅದನ್ನ ಹಾಗೆಯೆ ಹೋಟೆಲ್ಲಲ್ಲಿ ಇಟ್ಟು , ಥಣ್ಣನೆ ಕಾವೇರಿ ನೀರಲ್ಲಿ ಸ್ನಾನ ಮಾಡಿ ನನ್ನ ಬ್ಯಾಗ್ ಪ್ಯಾಕ್ ಮಾತ್ರ ಹೊತ್ತುಕೊಂಡು ಬಸ್ ಹತ್ತಿದೆ. ನಾಲ್ಕು ಕಾಲು ಬೆಳಿಗ್ಗೆ ಆಗ. ಹತ್ತು ಹದಿನೈದು ನಿಮಿಷಕ್ಕೆಲ್ಲಾ ನಾವು ಜಂಬುಕೇಶ್ವರನ ದೇವಸ್ಥಾನ ತಲುಪಿದೆವು.

Z : ಹೇಗಿದೆ ದೇವಸ್ಥಾನ ?

ನಾನು : just superb. ಈ ದೇವಸ್ಥಾನಕ್ಕೆ ಐದು ಪ್ರಾಕಾರಗಳಿವೆ, concentric circles ಥರ.

Z : ಹೌದಾ ?

ನಾನು : ಹೂಂ. ನಾಲ್ಕನೆಯ ಪ್ರಾಕಾರದಲ್ಲಿ Mrs. jambukeshwara ಇದ್ದಾರೆ in the name of ಅಖಿಲಾಂಡೇಶ್ವರಿ. ಏನ್ powerful look ಇದೆ ಗೊತ್ತಾ ? ನೋಡಿದ್ರೆ ಗಡ ಗಡ ನಡುಕ ಬರತ್ತೆ.

Z : ಆಹಾ ?

ನಾನು : ಇನ್ನೇನ್ ಮತ್ತೆ ? ಅಖಿಲಾಂಡೇಶ್ವರಿ ಅಂದ್ರೆ ಸುಮ್ಮನೆ ನಾ ?

Z : ಅದು ಸರಿ ಅನ್ನು. ಆಮೇಲೆ ಮುಂದೆ ?

ನಾನು : ಮುಂದೆ ಇರೋದು Mr. jambukeshwara.

Z :Story of this place please...

ನಾನು : yeah sure. ಕೀರ್ತನಾರಂಭ ಕಾಲದಲ್ಲಿ, ಜಲೇಬಿನಾಡಿನ ಪುರಾಣಗಳಲ್ಲಿ, ನಾನು ಪಂಚಭೂತ ಲಿಂಗಗಳ ಬಗ್ಗೆ ಮಾತಾಡಿದ್ದೆ. ನೆನಪಿದೆಯಾ ?

Z :ಇಲ್ಲ.

ನಾನು : ನೆನಪಿಟ್ಕೋಬೇಕು ! ನೆನಪಿಲ್ಲ ಅಂದ್ರೆ ಕಾಲ್ ಹಿಸ್ಟರಿ ತೆಗ್ದು ನೋಡು. ತಿರುವಣ್ಣಾಮಲೈ ನಲ್ಲಿ ಅಗ್ನಿ, ಚಿದಂಬರದಲ್ಲಿ ಆಕಾಶರೂಪದಲ್ಲಿ Mr. sadyojaata ಇದ್ದಾರೆ ಅಂತ ಹೇಳಿರ್ಲಿಲ್ವಾ ?

Z :ಯೆಸ್ ಯೆಸ್. ನೆನಪಾಯ್ತು . ಮುಂದೆ ?

ನಾನು : ಈ ದೇವಸ್ಥಾನದಲ್ಲಿ ಪರಮೇಶ್ವರ ನೀರಿನ ರೂಪದಲ್ಲಿದ್ದಾನೆ. ಅದಕ್ಕೆ ಈ ಲಿಂಗಕ್ಕೆ ಅಪ್ ಲಿಂಗ ಅಂತಾರೆ.

Z : up ?

ನಾನು : English up ಅಲ್ವೆ...ಸಂಸ್ಕೃತ ಅಪ್. ಅಪ್ ಅಂದ್ರೆ ನೀರು ಸಂಸ್ಕೃತದಲ್ಲಿ !

Z : ok ok...continue.

ನಾನು : ಇಲ್ಲಿ ಲಿಂಗದ ಹಿಂದೆಗಡೆ ಒಂದು ನೇರಳೆ ಹಣ್ಣಿನ ಮರ ಇದೆ. ಅದು ದಿನಕ್ಕೆ ಒಂದೊಂದು ಹಣ್ಣನ್ನು ಈಶ್ವರನಿಗೆ ಸಮರ್ಪಿಸತ್ತೆ. ಅದಕ್ಕೆ ಈ ದೇವರನ್ನ ಜಂಭುಕೇಶ್ವರ ಅಂತ ಕರಿತಾರೆ.

Z : very interesting.

ನಾನು : yeah yeah...Gravity you see...Its very interesting !

Z : :)

ನಾನು : ನಾವು ಬೆಳಿಗ್ಗೆ ಬೆಳಿಗ್ಗೆ ಹೋಗಿದ್ದೆವಲ್ಲ...ನಮಗೆ ದೇವರೇ ಕಾಣಲಿಲ್ಲ. ಗರ್ಭಗುಡಿ ಸ್ವಲ್ಪ ಕತ್ತಲು ಕತ್ತಲಾಗಿತ್ತು. ಅದಕ್ಕೆ ನಾನು ಏನು ಮಾಡಿದೆ ಗೊತ್ತಾ ?

Z : ಏನ್ ಮಾಡಿದೆ ?

ನಾನು : ಟಾರ್ಚ್ ಆನ್ ಮಾಡಿ ಲಿಂಗದ ಮೇಲೆ ಬೆಳಕು ಬೀರಿ ದೇವರ ದರ್ಶನ ಮಾಡಿದೆ.

Z : what ? ಸಹಸ್ರ ಕೋಟಿ ಸೂರ್ಯ ಪ್ರಭ ದೇವರ ಮೇಲೆ ಟಾರ್ಚ್ ಬಿಟ್ಟೆಯಾ ?

ನಾನು : ಹೂಂ...

Z :ಕರ್ಮ ಕರ್ಮ !

ನಾನು : ಇನ್ನೇನ್ ಮಾಡಲಿ ? ನಿಜ್ವಾಗ್ಲು ಮೂರ್ತಿ ಕಾಣಿಸ್ತಿರ್ಲಿಲ್ಲ. ಅರ್ಚಕರು ಸುತ್ತ ಮುತ್ತ ಇರ್ಲಿಲ್ಲ. ಅದಕ್ಕೆ ಧೈರ್ಯವಾಗಿ ಬ್ಯಾಗ್ ಪ್ಯಾಕ್ ಇಂದ ಟಾರ್ಚ್ ತೆಗೆದು, ಆನ್ ಮಾಡಿ, ದೇವರನ್ನ ನೋಡಿದೆ. Very calm and composed posture.

Z : !!!!!!!!!!!!!!!!!!!!!!!!!!!

ನಾನು : ಹೂಂ....ದೇವಸ್ಥಾನದ ಪ್ರಾಕಾರ ಎಲ್ಲ ತುಂಬಾ ಚೆನ್ನಾಗಿದೆ. ಅನ್ಯಾಯ ಕ್ಯಾಮೆರ ತಗೊಂಡು ಹೋಗಿರಲಿಲ್ಲ...ಬಹಳ ಬೇಜಾರ್ ಆಯ್ತು ನನಗೆ.

Z : ಪಾಪ ಪಾಪ.

ನಾನು : ವಿಪರೀತ ಪಾಪ ! ಸರಿ ಅಲ್ಲಿಂದ ವಾಪಸ್ಸು ಬಂದು ಶ್ರೀ ರಂಗಂ ನ ಶ್ರೀರಂಗನಾಥ ದೇವಸ್ಥಾನಕ್ಕೆ ಹೋದೆವು. ಅಲ್ಲಿ ನಾವೆಂದೂ ಮರೆಯಲಾಗದಂತಹಾ ಒಂದಿಷ್ಟು ಘಟನೆಗಳು ನಡೆದವು.

ನಾವು ಅಲ್ಲಿಗೆ ಹೋಗುವಾಗ ಕ್ಯೂ ಐದನೆಯ ಪ್ರಾಕಾರದಲ್ಲಿತ್ತು. ಶರಣಂ ಅಯ್ಯಪ್ಪ ಭಕ್ತರು ಸಹಸ್ರ ಸಹಸ್ರ ಸಂಖ್ಯೆಗಳಲ್ಲಿ ನೆರೆದಿದ್ದರು. ಗೇಟಿನ ಬಾಗಿಲು ತೆಗೆದಿದ್ದೆ ಕ್ಯೂ ಸಿಸ್ಟಮ್ ನೂ ಮೀರಿ ಎಲ್ಲರೂ ಒಂದೇ ಏಟಿಗೆ ನುಗ್ಗಿದರು. ನಮ್ಮ ಗ್ರೂಪಿನಲ್ಲಿ ಬಂದಿದ್ದ ದಂಪತಿಗಳ ಹೆಣ್ಣು ಮಗು ಆ ರಶ್ಶಿನಲ್ಲಿ ಸಿಕ್ಕುಹಾಕಿಕೊಂಡುಬಿಟ್ಟಿತು. ಹಿಂದೆ ಇದ್ದವರು ಅಮ್ಮ. ನಾನು ಅಪರ್ಣಾ ಅಣ್ಣ ಅಮ್ಮ ಎಲ್ಲರೂ ಈ ಗಲಭೆಯಲ್ಲಿ ಬೇರಾಗಿಬಿಟ್ಟೆವು. ಅಮ್ಮ ಬಹಳ ಕಷ್ಟ ಪಟ್ಟು, ಅವರ ಮಧ್ಯೆ ನುಗ್ಗಿ ಆ ಹೆಣ್ಣು ಮಗುವನ್ನ ಬಿಡಿಸಿದರು. ನಾನು ಆ ಗಲಭೆಯಲ್ಲಿ ಅಣ್ಣನನ್ನು ಹುಡುಕಿ ಅವರ ಹಿಂದೆ ಹೋದೆ. ಅಪರ್ಣಾ ನನ್ನನ್ನು ಹುಡುಕುತ್ತಾ ಬಂದಳು. ಮತ್ತೆ ನಮ್ಮ ಗ್ರೂಪಿನವರು ಸೇರಿ ಆ ಅಯ್ಯಪ್ಪನ ಭಕ್ತ ವೃಂದವರಿಗೆ ದಬಾಯಿಸಿದೆವು. ಅವರು ಮಾತು ಕೇಳಲೇ ಇಲ್ಲ. ನಾವು ಪೋಲೀಸರ ಮೊರೆ ಹೋದೆವು. ಆಗಲೂ ಏನೂ ಪ್ರಯೋಜನವಾಗಲಿಲ್ಲ. ಗರ್ಭಗುಡಿಗೆ ಬಂದಾಗ ನಮಗೆ ಉತ್ಸವ ಮೂರ್ತಿಯ ದರ್ಶನ ಮಾತ್ರ ಆಯ್ತು. ಮೂಲ ದೇವರು ಕಡೆಗೂ ಕಾಣಿಸಲೇ ಇಲ್ಲ. ಗರ್ಭಗುಡಿಯಲ್ಲಿ ಎಷ್ಟು ಅವ್ಯವಸ್ಥೆ ಆಯ್ತೆಂದರೆ, ಅಮ್ಮ ಉಸಿರುಗಟ್ಟಿಸಿಕೊಂಡಿದ್ದರು.ಎಲ್ಲದಕ್ಕೂ ಕಾರಣ ಅಯ್ಯಪ್ಪ ಭಕ್ತರ ಹುಚ್ಚು ಭಕ್ತಿ. ನಮ್ಮ ಜೊತೆಯಲ್ಲಿ ಬಂದ ಅನಂತ್ ಅಂಕಲ್ ಹಾಗೂ ಸುಧಾ ಆಂಟಿ ಕೂಡಾ ಒದ್ದಾಡಿದರು. ಅಲ್ಲಿನ ಪೋಲೀಸ್ ಒಂದು ನಿಮಿಷವೂ ಕೂಡಾ ಯಾತ್ರಿಕರ ಗೋಳಾಟಕ್ಕೆ ಕಿವಿಗೊಡದಿದ್ದುದು ನಮಗೆ ಜಿಗುಪ್ಸೆ ತರಿಸಿತು. ಶ್ರೀ ರಂಗ, ಎಲ್ಲ ನಿನ್ನ ಲೀಲೆ ಎಂದುಕೊಂಡು ನಾವು ಹೊರಬಂದೆವು. ಹೊರಬಂದಾಗ ನಮ್ಮ ಗ್ರೂಪಿನ ಒಬ್ಬರು ಗರ್ಭಗುಡಿಯ ಗಲಭೆಯಲ್ಲಿ ಸಿಕ್ಕಿಹಾಕಿಕೊಂಡಿದ್ದು ಹೊರಬಾರದಿದ್ದುದು ಗೊತ್ತಾಯ್ತು. ನಾವಾಗಲೆ ಬಸ್ಸು ಹತ್ತಿದ್ದೆವು. ಏನೂ ಮಾಡಲು ತೋಚದಂತಾಗಿ, ಗೈಡ್ ನ ಅಲ್ಲಿರಲು ಹೇಳಿ ನಾವು ಹೋಟೆಲ್ ಗೆ ಬಂದು ಬಟ್ಟೆ ಪ್ಯಾಕ್ ಮಾಡತೊಡಗಿದೆವು. ಎರಡು ಘಂಟೆಯಾದ ಮೇಲೆ ಅವರು ಹೋಟೆಲ್ ಗೆ ಬಂದರು.

Z : ಹುಶಾರಾಗಿದ್ದರಾ ?

ನಾನು : ಹೂಂ.. ಸುಸ್ತಾಗಿದ್ದರು.

Z : ಆಮೇಲೆ ?

ನಾನು : ಅಲ್ಲಿಂದ ನಾವು ಪಳನಿ ಬೆಟ್ಟದ ಕಡೆಗೆ ಪಯಣ ಬೆಳೆಸಿದೆವು. ನನಗೆ ಸುಸ್ತಾಗಿತ್ತು. ನಾನು ಬಸ್ಸಿನಲ್ಲಿ ನಿದ್ದೆ ಮಾಡಿದೆ. ಅಪರ್ಣ ಒಂದಿಷ್ಟು ಫೋಟೋ ತೆಗೆದಿದ್ದಳು. ನಾವು ಪಳನಿ ತಲುಪಿದಾಗ ಸಾಯಂಕಾಲ ಐದು ಘಂಟೆ.

Z : ಉಫ್ ! ಆಮೇಲೆ ?

ನಾನು : ಐದನೆಯ ಫ್ಲೋರಲ್ಲಿ ರೂಮು. ಲಿಫ್ಟ್ ಇತ್ತು. ಬರೀ ಲಗೇಜಿಗೆ ಮಾತ್ರ. ಅಲ್ಲಿ ಹೋಗಿ, ಫ್ರೆಶ್ ಆಗಿ ನಾವು ಪಳನಿ ಬೆಟ್ಟಕ್ಕೆ ಹೋಗಿ ಕ್ಯೂ ನಲ್ಲಿ ನಿಂತೆವು. ನಾವು ಕೇಬಲ್ ಕಾರಿನಲ್ಲಿ ಬೆಟ್ಟ ಹತ್ತಿದೆವು. ನಾನು ಕೇಬಲ್ ಕಾರಿಂದ ಬೆಟ್ಟ ಹೇಗೆ ಕಾಣತ್ತೆ ಅಂತ ವಿಡಿಯೋ ತೆಗೆದೆ. ಫೈಲ್ ಸೈಜ್ ಜಾಸ್ತಿ ಇದೆ. ಅದಕ್ಕೆ ಹಾಕ್ತಿಲ್ಲ.

Z :ಓಕೆ.

ನಾನು : ದೇವಸ್ಥಾನ ತುಂಬಾ organised ಆಗಿ, ತುಂಬಾ well maintained ಆಗಿದೆ. ಏನ್ ಶುದ್ಧ, ಏನ್ ಸ್ವಚ್ಛ ! ತುಂಬಾ ಸಂತೋಷವಾಯ್ತು.ಅಲ್ಲಿ ಹೋದಾಗ ಅಲ್ಲಿ ಅಯ್ಯಪನ ಭಕ್ತರ ಗ್ಯಾಂಗು ಉತ್ಸವ ಹೊರಟಿತ್ತು. ಅಲ್ಲಿ ಒಬ್ಬ ಮುದುಕಿ ಭಾವ ಪರವಶಳಾಗಿ ನವಿಲುಗರಿ ಇಟ್ಟುಕೊಂಡು ನರ್ತಿಸುತ್ತಿದ್ದಳು. ಅದರ ವಿಡಿಯೋ ನೋಡು.





Z ::) :) :)


ನಾನು : ನಾವು ಕ್ಯೂ ನಲ್ಲಿ ನಿಲ್ಲೋ ಅವಶ್ಯಕತೆ ಇರಲಿಲ್ಲ. ಬಹಳ ಬೇಗ ನಮಗೆ Master Subrahmanya ಅವರ ದರ್ಶನ ಕೂಡಾ ಆಯ್ತು.

Z : ಈ ಸ್ಥಳದ ಮಹಿಮೆ ಏನು ?

ನಾನು : ಅದೇ ಗಣೇಶ v/s ಸುಬ್ರಹ್ಮಣ್ಯ... ವೇದವ್ಯಾಸರು ಬಂದದ್ದು...ಯಾರು ಇಡೀ ಭೂಮಿಯನ್ನ ಮೂರುಸಲ ಸುತ್ತುತ್ತಾರೋ ಅವರಿಗೆ ಮಾವಿನ ಹಣ್ಣು ಕೊಡ್ತಿನಿ ಅಂದಿದ್ದು, ಸುಬ್ರಹ್ಮಣ್ಯ ಭೂಮಿ ಸುತ್ತಿದರೆ ಗಣೇಶ ತಂದೆ ತಾಯಿಯರನ್ನೇ ಸುತ್ತಿದ್ದು, ಮಾವಿನ ಹಣ್ಣನ್ನು ಪಡೆದಿದ್ದಲ್ಲದೇ ವ್ಯಾಸರಿಗೆ stenographer ಆಗಿದ್ದು...ಆ ಕಥೆ ಗೊತ್ತಲ್ಲ ?

Z : ಗೊತ್ತು.

ನಾನು : ಗಣೇಶ ಗೆದ್ದ ಅಂತ ಸುಬ್ಬು ಗೆ ಕೋಪ ಬಂದು ನವಿಲನ್ನ kick start ಮಾಡಿಕೊಂಡು ಪಳನಿಗೆ ಬಂದು, ನವಿಲಿಗೆ ಆಕಾಶದಲ್ಲೇ sleeping stand ಹಾಕಿ ನಿಲ್ಲಿಸಿ ಅವನು ಬೆಟ್ಟದ ಮೇಲೆ ನಿಂತುಕೊಂಡ , ಕೋಪಿಷ್ಟನಾಗಿ, ಗಡಿಗೆ ಗಾತ್ರದ ಮುಖ ಮಾಡಿಕೊಂಡು.

Z : Naturally. ಎಂಥವರಿಗೂ ಬೇಜಾರಾಗಿರತ್ತೆ ಆ ಸಮಯದಲ್ಲಿ. Moreover, subbu was a kid.

ನಾನು : Exactly. ಮಗು ಗೆ ಬೇಜಾರಾಯ್ತಲ್ಲ ಅಂತ ಪಾರ್ವತಮ್ಮಂಗೆ ಬೇಜಾರಾಗಿ ಅವರು ಇಳಿದರು ಭೂಮಿಗೆ. Then, eshwara followed. ಅವ್ರಿಬ್ರೂ ಸುಬ್ಬುಗೆ ಸಮಾಧಾನ ಮಾಡಿ, ನೀನೇ ಬುದ್ಧಿವಂತ ಪುಟಾಣಿ...ನಾವೆಲ್ಲ ದಡ್ಡರು, ಗಣು has won the fruit, But we will give you the fruit of wisdom ಅಂತೆಲ್ಲಾ ಪೂಸಿ ಹೊಡೆದು, ಅವನನ್ನ ಸಮಾಧಾನ ಪಡಿಸಿದರು.

Z : I see. ಹೇಗಿದೆ ದೇವರು ?

ನಾನು : Cute and lovely. ನೋಡಕ್ಕೆ ನಗುಮುಖ ಇದ್ದರೂ " ನನ್ನನ್ನ ಕೆಣಕಿದರೆ ಸರಿ ಇರಲ್ಲ" ಅನ್ನೋ ಲುಕ್ಕಿದೆ ಕಣ್ಣಲ್ಲಿ.

Z : ಹೌದಾ ?

ನಾನು : ಹೂಂ. Top to bottom ಚಿನ್ನ ಹಾಕಿದ್ದರು ದೇವರಿಗೆ. ಗೋಪುರ ನೂ ಚಿನ್ನನೇ !

Z :ಹೌದಾ ?

ನಾನು : ಜಲೇಬಿನಾಡಲ್ಲಿ ಚಿನ್ನದ ಗೋಪುರ common. ಎಲ್ಲಾ ನೋಡಿಕೊಂಡು ಮತ್ತೆ ಕೇಬಲ್ ಕಾರಲ್ಲಿ ಬೆಟ್ಟ ಇಳಿದು, ಸ್ವಲ್ಪ ಶಾಪಿಂಗ್ ಮಾಡಿದೆವು.

Z :ಏನ್ ಶಾಪಿಂಗು ?

ನಾನು : ಬಳೆ, ಸರ..ಇತ್ಯಾದಿ ಇತ್ಯಾದಿ.

Z : :) :)

ನಾನು : ಅಲ್ಲಿ ನಮಗೆ ಒಂದು ತಮಾಷೆ ಕಂಡಿತು. ನೋಡಿದನ್ನ.



Z : ಹೆಹೆ...


ನಾನು : ಇದನ್ನ ತಿನ್ನಲು ನನಗೆ ಆರು ದಿನ ಬೇಕು !

Z : :) :)

ನಾನು : ಇದನ್ನೆಲ್ಲಾ ನೋಡಿಕೊಂಡು ವಾಪಸ್ ಹೋಟೆಲ್ಲಿಗೆ ಬಂದ ತಕ್ಷಣ ನಮಗೆ ಒಬ್ಬಟ್ಟು ಸಹಿತ ಬಾಳೆ ಎಲೆ ಊಟ ಕಾದಿತ್ತು. ಗಡದ್ದಾಗಿ ತಿಂದು ನಿದ್ರಿಸಿದೆವು. ಮಾರನೆಯ ದಿನ ಬೆಳಿಗ್ಗೆ ನಾವು ಮಧುರೈ ಗೆ ಹೊರಡಲಿದ್ದೆವು. ನಾಲ್ಕಕ್ಕೆ ರೆಡಿಯಿರಬೇಕು ಎಂದರು. ನಾನು ಗೂಬೆಗಳಿಗೆ ಸ್ಪರ್ಧೆಯೊಡ್ಡಬೇಕಿತ್ತು ಎಂದು ಅರಿವಾಯ್ತು.

Z :ಪಾಪ.

ನಾನು : ಫೋಟೋಸ್ ನೋಡು. ಮುಂದಿನ ಕಥೆ ಆಮೇಲೆ ಹೇಳುವೆ.

ಉತ್ತರಾಯಣ ೩

ನಾನು: ಬೃಂದಾವನಕ್ಕೆ ಹೊರಡಲು ನಾಲ್ಕು ಘಂಟೆಯಷ್ಟೊತ್ತಿಗೆ ರೆಡಿ ಇರಬೇಕು ಎಂದು ಮ್ಯಾನೇಜರ್ ವೆಂಕಟೇಶ್ ಅವರು ಹೇಳಿದ್ದರು. ಇವರೆಲ್ಲರೂ ಊಟ ಮಾಡಿ, ಮಲಗಿ, ಎದ್ದು ರೆಡಿಯಾಗು...