Saturday, April 11, 2009

Journey to ಜಲೇಬಿನಾಡು ಭಾಗ ೪

ನಾನು :ಕುಂಭಕೋಣಂ ಬಿಟ್ಟು ನಾವು ಮುಂದಕ್ಕೆ ಬಂದ ಸ್ಥಳದ ಹೆಸರು ಸ್ವಾಮಿ ಮಲೈ ಅಂತ.

Z : ಓಹ್ ! ಬೆಟ್ಟ !

ನಾನು : ಇಲ್ಲ. ಇದು ನಿಜವಾದ ಬೆಟ್ಟ ಅಲ್ಲ.

Z : ಮತ್ತೆ ?

ನಾನು : ಅರವತ್ತು ಮೆಟ್ಟಿಲುಗಳಿಂದ ಮಾಡಲ್ಪಟ್ಟಿರುವ ಕೃತಕ ಬೆಟ್ಟ ಅದು.

Z : ಕಾಲೇಜಿನ ಮೆಟ್ಟಿಲಿನ ಥರ ಅನ್ನು.

ನಾನು : ಹಾಗೇ...ಆದ್ರೆ ಸ್ವಲ್ಪ steep.

Z : ಏನ್ ಕಥೆ ದೇವಸ್ಥಾನದ್ದು ?

ನಾನು : ಕಥೆ ಒಂಥರಾ ಮಜವಾಗಿದೆ. ಎರಡೆರಡು ವರ್ಶನ್ ಬೇರೆ ಇದೆ ಇದಕ್ಕೆ ! But both are nice. Master Subramanya ಅವರ ದೇವಸ್ಥಾನ ಇದು. I think ಮೂರ್ತಿ 8 ಅಡಿ ಇದೆ. What a handsome ದೇವರು ಅಂತಿಯಾ .... smile-u... look-u, radiance-u.........ನಾನಂತೂ ಪೂರ್ತಿ impress ಆಗೋದೆ.

Z : ಸಾಕು ಹಾರಿದ್ದು..ಕೆಳಗೆ ಬಂದು ಕಥೆ ಮುಂದುವರ್ಸು !

ನಾನು : ಹಾಂ...ಕೈಲಾಸದಲ್ಲಿ ಒಮ್ಮೆ general body meeting ಇತ್ತಂತೆ. Lord brahma and Lord Subramanya were first talking informally about the meaning of the word Om.

Z : ಆಮೇಲೆ ?

ನಾನು : ವಿಷಯ ಸೀರಿಯಸ್ಸಾಯ್ತು. ಬ್ರಹ್ಮ ಗೆ ಏನು ಗೊತ್ತಿರ್ಲಿಲ್ಲ ...Master ಸುಬ್ರಮಣ್ಯ ನೆ ಎಲ್ಲ ವಿವರಿಸಿದರು.

Z : ಅಯ್ಯೋ !!! ಆಮೇಲೆ ?

ನಾನು : Master ಸುಬ್ರಮಣ್ಯ ಅವರು ಎಷ್ಟು ಬುದ್ಧಿವಂತರೋ ಅಷ್ಟೆ playful ಕೂಡ. ಅವ್ರು ಏನ್ ಮಾಡಿದರಂತೆ ಗೊತ್ತಾ ?

Z : ಏನು ?

ನಾನು : ಬ್ರಹ್ಮ ಅಂಥಾ ಬ್ರಹ್ಮಂಗೆ ಓಂ ಶಬ್ದದ ಅರ್ಥ ಗೊತ್ತಿಲ್ಲ ಅಂತ ಕೈಲಾಸದ ಪರ್ವತದ ಗುಹೆಯೊಂದರಲ್ಲಿ Mr. Brahma ಕೂಡಿ ಹಾಕಿಬಿಟ್ಟರಂತೆ.

Z : Oh my God !!

ನಾನು : ಎಲ್ಲಾ ದೇವತೆಗಳು ಹೀಗೆ ಕಿರ್ಚಿದ್ದು in front of Mr. Sadyojaata.

Z : ಏನ್ ಮಾಡಿದ್ರು ಈಶ್ವರ ಆಮೇಲೆ ?

ನಾನು : Master ಸುಬ್ರಮಣ್ಯ ಹತ್ತಿರ ಹೋಗಿ ಕೇಳಿದರಂತೆ , " ನೀನು ದೊಡ್ಡ ಮನುಷ್ಯನ ಥರ ಬ್ರಹ್ಮನ್ನ ಕೂಡಿಹಾಕಿಬಿಟ್ಟೆಯಲ್ಲ , ಓಂ ಪದದ ಅರ್ಥ ಗೊತ್ತಿಲ್ಲ ಅಂತ , ನಿನಗೆ ಗೊತ್ತ ನೆಟ್ಟಗೆ ? "

ನಾನು : ಅದಕ್ಕೆ Master ಸುಬ್ರಮಣ್ಯ " ನನಗೆ ಗೊತ್ತು ಓಂ ಶಬ್ದದ ಅರ್ಥ. ನೀನು ಅರ್ಥ ತಿಳ್ಕೊಬೇಕು ಅಂದ್ರೆ ನನ್ನ ಶಿಷ್ಯನಾಗು " ಅಂತ ಸಾಕ್ಷಾತ್ ಸದ್ಯೋಜಾತಂಗೆ ಹೇಳಿಬಿಟ್ಟರಂತೆ !

Z : ಓಹ್ಹೋ...ಸೂರ್ಯಂಗೇ ಟಾರ್ಚು !

ನಾನು : exactly. ಆದ್ರೆ ಸದ್ಯೋಜಾತ ಬೇಜಾರೇ ಮಾಡಿಕೊಳ್ಳಲಿಲ್ಲ . ಬಹಳ ಸಿಂಪಲ್ ಆಗಿ ಓಕೆ ಅಂದುಬಿಟ್ಟರು .

Z : ಹಾನ್ ? ಈಶ್ವರ ಸುಬ್ರಹ್ಮಣ್ಯನಿಗೆ ಶಿಷ್ಯ ಆದರಾ ?

ನಾನು : yes. ಜಗತ್ತಿಗೆ ಸ್ವಾಮಿಯಾದ ಸದ್ಯೋಜಾತಂಗೆ ಇವನು ಗುರುವಾದನು ಆದ್ದರಿಂದ ಅವನಿಗೆ ಇಲ್ಲಿ ಸ್ವಾಮಿನಾಥನ್ ಅಂತ ಹೆಸರು ಬಂತು.

Z : ಹಂಗೆ !

ನಾನು : ಹೂ...ಇದು ಮೊದಲನೆ ವರ್ಷನ್ನು.
ಎರಡನೇ ವರ್ಶನ್ ಕೂಡ ಚೆನ್ನಾಗಿದೆ. ಭೃಗು ಮುನಿ ಗೊತ್ತಲ್ಲ ? ಅವ್ರು ಒಮ್ಮೆ ತಪಸ್ಸು ಮಾಡಲು ಕುಳಿತರಂತೆ. ಆದ್ರೆ ಋಷಿಗಳು ತಪಸ್ಸು ಮಾಡುವಾಗಲೆಲ್ಲ ರಾಕ್ಷಸರು ಸಿಕ್ಕಾಪಟ್ಟೆ ತೊಂದರೆ ಕೊಡೋದು routine. exam time ನಲ್ಲೆ ಕರೆಂಟ್ ಹೋಗತ್ತಲ್ಲ, ಹಾಗೆ. ಅದಕ್ಕೆ ಭೃಗು ಮಹರ್ಷಿಗಳು ಹೇಳಿದರಂತೆ , ಯಾರಾದ್ರು(ದೇವತೆ+ರಾಕ್ಷಸ) ನನ್ನ ಹತ್ತಿರ ಬಂದ್ರೆ, ಅವರ ಬುದ್ಧಿ ಎಲ್ಲ hard disk format ಆಗೋದಂಗೆ ಎಲ್ಲ erase ಆಗೋಗತ್ತೆ ...ಎಷ್ಟೇ ತಿಪ್ಪರಲಾಗ ಹೊಡೆದರು ಖಂಡಿತಾ ನೆನಪಾಗಲ್ಲ ಅಂತ.

Z : ಯಪ್ಪಾ... dangerous !

ನಾನು : ಹ್ಞೂ ! ಇವರು ಎಷ್ಟು intensive ಆಗಿ ತಪಸ್ಸು ಮಾಡುತ್ತಿದ್ದರಪ್ಪ ಅಂದ್ರೆ, ಅವರ ತಲೆಯಿಂದ ಬೆಂಕಿ ಹೊರಗೆ ಬಂದು ಇಡಿ ಜಗತ್ತೆಲ್ಲ ವ್ಯಾಪಿಸತೊಡಗಿತು. ಎಲ್ಲರು ಈಶ್ವರನ ಹತ್ತಿರ ಹೋದರು. F1 !! f1 !! ಅಂದರು . ಅದಕ್ಕೆ ಈಶ್ವರ ಆ ಬೆಂಕಿ ತಡಿಯಲು ಭೃಗು ಮಹರ್ಷಿಗಳ ತಲೆಯ ಮೇಲೆ ಕೈ ಇಟ್ಟರು . ತಕ್ಷಣ ಈಶ್ವರನ hard disk format ಆಗೋಯ್ತು !

Z : ಅಯ್ಯಯ್ಯೋ !

ನಾನು : ಹ್ಞೂ ! Madam ಪಾರ್ವತಿ ಈಶ್ವರನಿಗೆ ಅವರು ಯಾರು, ಏನು, ಎತ್ತ ಅನ್ನೋದೆಲ್ಲಾ ನೆನಪಿಗೆ ತಂದುಕೊಟ್ಟರು...ಆದ್ರೆ ಈಶ್ವರನಿಗೆ ಓಂ ಶಬ್ದದ ಅರ್ಥ ನೆ ಮರ್ತೋಗಿತ್ತು. ಆಗ Master ಸುಬ್ರಮಣ್ಯ ಈಶ್ವರನಿಗೆ ಗುರುವಾಗಿ ಅರ್ಥ ತಿಳಿಸಿಕೊಟ್ಟರು ಅನ್ನೋದು ಕಥೆ.

Z : ಮೊದಲನೆಯದು ಸೂರ್ಯನಿಗೆ ಟಾರ್ಚ್ ಆದರೆ, ಎರಡನೆಯದು ಮೀನಿಗೆ ಫಿನ್ ಇರೋದೇ ಮರ್ತ್ಹೋಗಿ tube ಹಾಕೊಂಡು ಈಜುತ್ತಿರುವಾಗ ಅದಕ್ಕೆ ಫಿನ್ ಇದೆ ಅಂತ ನೆನಪಿಸಿ ಈಜನ್ನು ನೆನಪಿಗೆ ತಂದುಕೊಟ್ಟಹಾಗಾಯ್ತು !!

ನಾನು : ಗುಡ್...ಸೀರಿಯಲ್ ಗಳನ್ನ ನೋಡಿದ್ದಕ್ಕೂ ಸಾರ್ಥಕ ಆಯ್ತು ನೋಡು !

Z : ಯಾ ಯಾ...

ನಾನು : ನೀನು ಏನೇ ಹೇಳು...swami nathan is just so handsome !!

Z : ನಿಜವಾಗಲು ?

ನಾನು : ಹ್ಞೂ ! ನನಗಂತೂ ಹೊರಗೆ ಬರಕ್ಕೇ ಮನಸ್ಸಿರಲಿಲ್ಲ. ಅಮ್ಮ...ಬರ್ತ್ಯೋ ಇಲ್ವೋ ಅಂತ ಗದರಿದರು, ಹೊರಗೆ ಬಂದೆ ಅಷ್ಟೆ !

ಅಲ್ಲಿಂದ ನಾವು ಹೊರಟಿದ್ದು ತಂಜಾವೂರಿಗೆ .

Z : ಒಹ್ ! ಬೃಹದೇಶ್ವರ ದೇವಾಲಯಕ್ಕಾ ?

ನಾನು : yes. I was longing to see that temple ! ಹೆಸರಿಗೆ ತಕ್ಕ ಹಾಗೆ ಇದೆ ದೇವಸ್ಥಾನ. see anything and it is ಬೃಹತ್ !

Z :ಹೌದಾ ?

ನಾನು : ಹ್ಞೂ ! ನಾವು ಹೋದ ತಕ್ಷಣ ಅಲ್ಲಿ ಪವರ್ ಕಟ್ ಆಯ್ತು. ಎಲ್ಲರು ಬಂದು ದೇವರನ್ನೇ ನೋಡಕ್ಕೆ ಆಗಲಿಲ್ಲವಲ್ಲ ಅಂತ ಹಲುಬುತ್ತಾ ಹೊರನಡೆದರು. ನಾನು ಅಪರ್ಣ ಇಬ್ಬರು ಸ್ವಲ್ಪ ಹೊತ್ತು ಕಾದು ನೋಡೋಣ ಅಂತ ಅಂದುಕೊಂಡೆವು . ನಮ್ಮ ಕಾಯುವಿಕೆಗೆ ಬೆಲೆ ಇತ್ತು. generator on ಆಯ್ತು . ನಾನು ಮತ್ತು ಅಪರ್ಣ ಇಬ್ಬರು ಮೊದಲು ಬೃಹದೇಶ್ವರನ್ನ ನೋಡಿ ದಾಖಲೆ ಮಾಡಿದೆವು.

Z : ಶಭಾಷ್ !

ನಾನು : ನಮಗೆ ಅಷ್ಟಕ್ಕೆ ತೃಪ್ತಿ ಆಗ್ಲಿಲ್ಲ. ಸಿಕ್ಕಾಪಟ್ಟೆ ದೊಡ್ಡ queue ಇತ್ತು ಆದ್ದರಿಂದ ನಾವು ಬೇರೆ ಕಡೆಯಿಂದ ನುಗ್ಗಿದೆವು.

Z : typical Indians.

ನಾನು : Yes. ಲಿಂಗ ಎಷ್ಟು ದೊಡ್ಡದಾಗಿತ್ತು ಅಂದರೆ, ನನಗಂತೂ ಪಾಣಿಪೀಠವೇ ಕಾಣಿಸಲಿಲ್ಲ . ಅಷ್ಟರಲ್ಲಿ ನಾವು ಬೇರೆ ಕಡೆಯಿಂ ನುಗ್ಗಿದ್ದೆವು ಆದ್ದರಿಂದ ನಮ್ಮನ್ನು ಗದರಿಸಲು ದೇವಸ್ಥಾನದ ಸಿಬ್ಬಂದಿಯೊಬ್ಬರು ಬಂದರು. ನಾವು ಅವರಿಗೆ ವಿವರಿಸಿದೆವು, "ಇಲ್ಲ, ಕರೆಂಟು ಹೋಗಿತ್ತಾದ್ದರಿಂದ ನಮಗೆ ಏನೂ ಕಾಣಿಸುತ್ತಿರಲಿಲ್ಲ...ಇಲ್ಲೆಲ್ಲಾ ನೂಕುನುಗ್ಗಲು ಇತ್ತು, ಅದಕ್ಕೆ ಈಕಡೆ ಬಂದೆವು ಅಂತ, ಇವಿಷ್ಟನ್ನು ಆಂಗ್ಲದಲ್ಲಿ ಹೇಳಿದ್ದಕ್ಕೆ ಅವ " ಪೋಂಗೋ" ಅಂದ !

Z : ಹಹಹಹಹ !!!!!!!!

ನಾನು : ನಾವಿಬ್ಬರೂ automatic ಆಗಿ "ಬಿಂಗೋ" ಅಂದ್ವಿ !

Z : ಹೆಹ್ಹೆ !

ನಾನು : ನಾವು ವಾಪಸ್ ಹೊರಟೆವು...ಆದರೆ ಆಗಬೇಕಿದ್ದ ಕೆಲಸ ಆಗಿತ್ತು. ನಾವು Mr. ಬೃಹದೇಶ್ವರ ಅವರನ್ನು ನೋಡಿದ್ದಾಗಿತ್ತು. ನಾನು ಹೋಗುವಾಗ ಹಿಂದೆ ತಿರುಗಿ ನೋಡಿದೆ..ನನ್ನನ್ನು ಗದರಿದವ ಬೇರೆಕಡೆ ಎಲ್ಲೊ ನೋಡುತ್ತಿದ್ದ. ನಾನು ಇದೇ ಸರಿಯಾದ ಸಮಯ ಅಂತ camera on ಮಾಡಿದೆ, flash off ಮಾಡಿ, telescopic zoom ಹಾಕಿ, ಬೃಹದೇಶ್ವರನ photo ತೆಗೆದೇಬಿಟ್ಟೆ !

Z : Oh my god !

ನಾನು : ಹ್ಞೂ ಮತ್ತೆ...

Z : ಸರಿ. ಮಜಾ ಮಾಡು. ಮುಂದೆ ?

ನಾನು :ಹೊರ್ಗಡೆ ಬಂದು ನನ್ನ ಸಾಧನೆ ನ ವರ್ಣಿಸಿದೆ. ಅಣ್ಣ, " ಮಂಗನ ಕೈಲಿ ಮಾಣಿಕ್ಯದಂತೆ ಇಪ್ಪತ್ ಸಾವ್ರ invest ಮಾಡಿದ್ನಲ್ಲಾ ಅಂದುಕೊಂಡೆ...ಸದ್ಯ...ಕ್ಯಾಮೆರಾ ಕೊಡ್ಸಿದ್ದಕ್ಕೂ ಸಾರ್ಥಕ ಆಯ್ತು ! " ಅಂದ್ರು.

Z : :-) :-) :-)

ನಾನು :ಎಲ್ಲರು ಅವರವರ ಇಮೈಲ್ ಗೆ ಬೃಹದೇಶ್ವರನ್ನ ಬರಮಾಡಿಕೊಳ್ಳಲು ಕ್ಯೂ ನಿಂತರು. ನಾನು ಹಿರಣ್ಮಯಿ ಇಮೈಲ್ ಐಡಿ ಗಳನ್ನ ಸೇವ್ ಮಾಡಿಕೊಳ್ಳುವಲ್ಲಿ ಬ್ಯುಸಿ ಆದೆವು.

Z : ಹೆಹೆ...

ನಾನು :ಹಾನ್...ಒಂದು ವಿಷಯ. Mrs. ಬೃಹದೇಶ್ವರ ಅವರ ಹೆಸರು ಬೃಹನ್ನಾಯಕಿ ಅಂತ. ಎಂಥಾ ಪರ್ಫೆಕ್ಟ್ ವರಸಾಮ್ಯ ಅಂತ್ಯಾ .....marvellous...ಅಷ್ಟು ಎತ್ತರದ ಸ್ತ್ರೀ ದೇವತೆಯ ಮೂರ್ತಿ ನಾನು ನೋಡಿಯೇ ಇರ್ಲಿಲ್ಲ !!

Z : hmmm....

ನಾನು : ಒಂಭತ್ತು ಟೈಪ್ ಗೆಜ್ಜೆ ಹಾಕಿದ್ದ್ರು..ಎಲ್ಲಾ patterns ಸೂಪರ್ರಾಗಿತ್ತು...ಬರ್ಕೊಳಣಾ...ಬೆಂಗಳೂರಲ್ಲಿ ಹುಡ್ಕೋಣ ಅಂದುಕೊಂಡೆ...ಬರ್ಕೊಳ್ಳಕ್ಕೆ ಟೈಮೇ ಸಿಗ್ಲಿಲ್ಲ !

Z : ಪಾಪ ಪಾಪ !!!

ನಾನು : serious ಪಾಪ ! ಸರಿ ಹೋಕೊಳ್ಳಿ ಅಂತ ಅಲ್ಲಿಂದ ಹೊರಟು, ಊಟ ಮುಗಿಸಿ ಶ್ರೀರಂಗಮ್ ಕಡೆ ಪ್ರಯಾಣ ಬೆಳೆಸಿದೆವು. ಅವತ್ತು ಶ್ರೀರಂಗಮ್ ನಲ್ಲೇ ಹಾಲ್ಟು. ರೂಮಲ್ಲಿ ಲಗೇಜಿಟ್ಟು ರಂಗನಾಥಸ್ವಾಮಿಯ ದೇವಸ್ಥಾನಕ್ಕೆ ಹೊರಟೆವು. ಅಲ್ಲಿ ಕಾದು ಕಾದೂ ಒಳಗೆ ಹೋದರೆ ದೇವರ ದರ್ಶನವೇ ಇಲ್ಲ ಅಂದುಬಿಟ್ಟರು. ಸರಿ ನಾವು ಮಾರನೆಯ ದಿನ ಬೆಳಿಗ್ಗೆ ಬೇಗ ಎದ್ದು ಕ್ಯೂ ನಿಲ್ಲುವುದಾಗಿ ನಿರ್ಧರಿಸಿ ಅಲ್ಲಿನ ಪ್ರಸಿದ್ಧ ಜಂಬುಕೇಶ್ವರ ದೇವಾಲಯಕ್ಕೆ ಹೋಗುವುದಕ್ಕೂ ಅವರು ಬಾಗಿಲು ಹಾಕುವುದಕ್ಕೂ ಸರಿಯಾಯ್ತು. ಸರಿ ಎರಡೂ ದೇವಸ್ಥಾಕ್ಕೆ ಬೆಳಿಗ್ಗೆಯೇ ಬೇಗ ಹೋಗುವ ಪರಿಸ್ಥಿತಿ ಉದ್ಭವವಾಯ್ತು. As usual, no hot water. ಮೂರುವರೆಗೆ ಏಳಬೇಕ್ಕಿತ್ತು...

Z :ಗೂಬೆಗಳು ಕಾಫಿ ಕುಡ್ಯೋ ಟೈಮ್...

ನಾನು : ಹೂಂ...... ಬಂದದ್ದೇ ಮೊಬೈಲು ಮತ್ತು ಕ್ಯಾಮೆರಾ ಚಾರ್ಜಿಗೆ ಹಾಕಿ, ಅಲಾರಂ ಇಟ್ಟು ಮಲಗಿದ್ದಷ್ಟೇ ಗೊತ್ತು...

Z : ಫೋಟೋಸ್...

ನಾನು :ಕೆಳಗಿದೆ slide show.



ಉತ್ತರಾಯಣ ೩

ನಾನು: ಬೃಂದಾವನಕ್ಕೆ ಹೊರಡಲು ನಾಲ್ಕು ಘಂಟೆಯಷ್ಟೊತ್ತಿಗೆ ರೆಡಿ ಇರಬೇಕು ಎಂದು ಮ್ಯಾನೇಜರ್ ವೆಂಕಟೇಶ್ ಅವರು ಹೇಳಿದ್ದರು. ಇವರೆಲ್ಲರೂ ಊಟ ಮಾಡಿ, ಮಲಗಿ, ಎದ್ದು ರೆಡಿಯಾಗು...