Wednesday, February 17, 2010

ಬ್ಲಾಗ್ ಲೋಕದಲ್ಲೂ invigilation duty !

Z : ಅಯ್ಯೋ ಪಾಪ. ಹೀಗ್ ಆಗ್ಬಾರ್ದಿತ್ತು ನೋಡು.

ನಾನು : ವಿಷಯ ಪೂರ್ತಿ ಗೊತ್ತಾದ್ರೆ ನೀನು ಹಾವಿನ ಥರ ಬುಸುಗುಡ್ತಿಯಾ.

Z : ಇಲ್ಲಪ್ಪ....I have decided not to lose my cool. ಪ್ರಾಣಾಯಾಮ ಮಾಡ್ತಿನಿ ಕೋಪ ಬಂದ್ರೆ.

ನಾನು : ಹ್ಮ್ಮ್.....ಒಳ್ಳೆದು.

Z : ವಿಷಯವನ್ನು ಪೇಳುವಂಥವಳಾಗು ಬಾಲೆ !

ನಾನು : ವಿಕಾಸ್ ಹೆಗ್ಡೆ...

Z : ಅದೇ ಮ್ಯುಸಿಯಮ್ ಕಥೆಯಲ್ಲಿ ಬರ್ತಾರಲ್ಲ...

ನಾನು : ಅದೇ...ಅದೇ ವಿಕಾಸ ಹೆಗಡೆ. ಎಂಥಾ ಲೆವೆಲ್ಲಲ್ಲಿ ಕಾಪಿ ಹೊಡೆದಿದ್ದಾರೆ ಅಂದ್ರೆ ನಮ್ಮಿಬ್ಬರ ಮಾತಿನ ಶೈಲಿ ನ....

Z : ಪ್ರಾಣಾಯಾಮ ಮಾಡ್ತಿನಿ ಇರು.

[ಐದು ನಿಮಿಷಗಳ ನಂತರ]

ಏನ್ ಮಾಡಿದಾರೆ ?

ನಾನು : ನೋಡು, ಅವರು ವಿಶ್ವೇಶ್ವರಯ್ಯ ಮ್ಯೂಸಿಯಮ್ ಗೆ ಹೋಗಿದ್ರು ಅಂತ ನಾನು ಹೋಗಿದ್ನಾ...ನಾನು ಎಚ್. ಎ. ಎಲ್ ಮ್ಯೂಸಿಯಮ್ ಗೆ ಹೋಗಿದ್ದೆ ಅಂತ ಅವ್ರೂ ಹೋಗಿದಾರೆ.

Z : ಈ ಲೆವೆಲ್ಲಲ್ಲಿ ಕಾಪಿ ! ಸದ್ಯೋಜಾತ !

ನಾನು : ಹೂಂ !!! ಆದ್ರೆ ಒಂದು ವಿಷಯ ನ ಕಾಪಿ ಮಾಡಿಲ್ಲ ಅವರು.

Z : ಏನು ?

ನಾನು : ನಾನು ಒಬ್ಬಳೇ ಹೋಗಿದ್ದೆ ಮ್ಯೂಸಿಯಮ್ ಗೆ, ಅವರು ಯಾರನ್ನೋ ಜೊತೆಗೆ ಕರ್ಕೊಂಡ್ ಹೋಗಿದಾರೆ.

Z : ನಿನ್ನ ಥರ ಒಬ್ಬಳೇ ಊರು ಸುತ್ತೋ talent ನ ಜಾಸ್ತಿ ಜನ maintain ಮಾಡಿಕೊಂಡಿರಲ್ಲ ತಿಳ್ಕೋ ಪ್ರಪಂಚದಲ್ಲಿ. ಹಾಗಾಗಿ ಯಾರು ಎಷ್ಟೇ ತಿಪ್ಪರ್ಲಾಗ ಹೊಡೆದರೂ, ನಿನ್ನ ಥರ ಒಬ್ಬಳೇ ಊರು ಸುತ್ತೋ ರೀತಿನ ಜಪ್ಪಯ್ಯ ಅಂದ್ರೂ ಕಾಪಿ ಹೊಡಿಯಕ್ಕೆ ಆಗಲ್ಲ.

ನಾನು : ನೋಡು, ಕಾಲೇಜಲ್ಲಿ students ಕಾಪಿ ಹೊಡಿಯದಿರಲಿ ಅಂತ invigilators ಆಗಿರ್ತಿವಿ ನಾವು...ಈಗ ಬ್ಲಾಗ್ ಲೋಕಕ್ಕೂ invigilators ಬೇಕಾಗಿದ್ದಾರೆ !

Z : ಕಾಲಾಯ ತಸ್ಮೈ ನಮಃ. ನಾವು ನಮ್ಮ ಶೈಲಿಯನ್ನು copyright ಮಾಡಿಕೊಳ್ಳೋದು ಉತ್ತಮ.

ನಾನು : ಯೆಸ್.ನಮ್ಮ ಶೈಲಿಯನ್ನ ಬಳಸಿಕೊಳ್ಳುವವರು ಮೊದಲು ನಮ್ಮ ಅನುಮತಿ ಕೇಳಲಿ. ವಿಕಾಸ್ ಹೆಗಡೆಯವರು, ಬರ್ಯೋದೆಲ್ಲ ಬರ್ದು, ಕೃಪೆ ಅಂತೆಲ್ಲ ಮೇಲೆ ಹತ್ತಿಸೋ ಮೊದಲೇ, ನನಗೆ ತಿಳಿಸಿದ್ದರು. " ನೀವು ಆದರ್ಶ " ಅಂತ ಬೇರೆ ಅಂದ್ರು. ನಾನು ಅದಕ್ಕೆ "wrong number ರಿ Vikas hegde, ನನ್ನ ಹೆಸರು ಲಕ್ಷ್ಮೀ ಅಂತ. ಆದರ್ಶ ಅಂತೆಲ್ಲ ಹೆಸರು ಚೇಂಜ್ ಮಾಡಬೇಡಿ. ಇರೋ ಒಂದು ಹೆಸರನ್ನ ನೆನಪಿಟ್ಟುಕೊಳ್ಳೋದಕ್ಕೆ ತಿಪ್ಪರ್ಲಾಗ ಹೊಡಿತಿದಿನಿ, ಸಿಕ್ಕಾಪಟ್ಟೆ ಹೆಸರುಗಳೆಲ್ಲಾ ಕೊಟ್ಟು confuse ಮಾಡಬೇಡಿ. ಅದಿರ್ಲಿ, ನಾವೇನು ನಿಮ್ಮ ಥರ mainstream writers ಅಲ್ಲ, ಸುಮ್ನೆ ಮಾತಾಡೋರು, ಹುಲುಮಾನವರು. ನಮಗೆಲ್ಲಾ ಮಹಾಬ್ರಾಹ್ಮಣ್ಯ ಇಲ್ಲ, ಮಹಾ ದರ್ಶನ ಇನ್ನೂ ಆಗಿಲ್ಲ, ಹಾಗಾಗಿ ಸುಮ್ಮನೆ ನಮ್ಮನ್ನ ಅಷ್ಟೆಲ್ಲಾ ಮೇಲೆ ಏರಿಸಬೇಡಿ "ಅಂದೆ.

Z : ಸರಿಯಾಗಿ ಹೇಳಿದಿ. ಅದಕ್ಕೆ ಅವರೇನಂದ್ರು ?

ನಾನು : ಸಿಕ್ಕಾಪಟ್ಟೆ ದೊಡ್ಡ್ ಮಾತು ಅಂದ್ರು.

Z : ಮಾತಿನ length measure ಮಾಡಿರ್ತಾರೆ. ಎಷ್ಟೇ ಆಗಲಿ ಎಂಜಿನಿಯರ್ರು...

ನಾನು : weight ಕೂಡಾ ಇದೆ ಮಾತಿಗೆ.

Z : ತಕ್ಕಡಿ ಇರ್ಲಿಲ್ಲ ಆಗ ಅಂತ ಕಾಣತ್ತೆ. ಈಗ ತೂಕ ಮಾಡ್ತರೆ ಬಿಡು. next time ಕಾಪಿ ಎಲ್ಲ ಹೊಡಿಯಲ್ಲ. By the way, ನೀನು ಎಚ್. ಎ. ಎಲ್ ಮ್ಯೂಸಿಯಮ್ ಗೆ ಹೋಗಿದ್ದ ಕಥೆ ಲೋಕಕ್ಕೆಲ್ಲಾ ಗೊತ್ತಿದೆ. ನನಗೇ ಗೊತ್ತಿಲ್ಲ !

ನಾನು : ಏನು ಮಾಡಕಾಗಲ್ಲ. ಹೀಗೆಲ್ಲ ಆಗತ್ತೆ ಒಮ್ಮೊಮ್ಮೆ life-ನಲ್ಲಿ.

Z : ಇವೆಲ್ಲ ಫಿಲಾಸಫಿ ಬೇಡ. ಯಾಕ್ ಹೋಗಿದ್ದೆ ಅಲ್ಲಿ ಅಂತ ನೀಟಾಗಿ ಹೇಳ್ಬಿಡು.

ನಾನು : ನಾನು Fever 104 Fm ನಡೆಸಿದ ಒಂದು ಕಾಂಟೆಸ್ಟ್ ನಲ್ಲಿ ಅಪ್ಪಿ ತಪ್ಪಿ ಗೆದ್ಬಿಟ್ಟೆ.

Z : ಅಹಾ?!

ನಾನು : ಹು.ನನಗೇ ಗೊತ್ತಿರ್ಲಿಲ್ಲ.ಅವರು ಫೋನ್ ಮಾಡಿದ್ ಮೇಲೆ ನೆ ಗೊತ್ತಾಗಿದ್ದು.

Z : ಇರ್ಲಿ, ಹೀಗಾಗತ್ತೆ ಒಮ್ಮೊಮ್ಮೆ ಲೈಫಲ್ಲಿ. ಮುಂದೆ ?

ನಾನು : ಅವರ ಆಫೀಸ್ ಇರೋದು ಈ ಎಚ್.ಎ.ಎಲ್ ಮ್ಯೂಸಿಯಮ್ ಪಕ್ಕ. ನಾನು ಒಂದು ದಿನ ಪೂರ್ತಿ ರಿಂಗ್ ರೋಡಲ್ಲೇ ಇದ್ದೆ ಈ ಪ್ರೈಜ್ ತರಕ್ಕೆ ಹೋಗಿ.

Z : ಹಾ ?

ನಾನು : ಹು. ನಮ್ಮನೆಯಿಂದ ಮಾರತ್ ಹಳ್ಳಿ ಗೆ ಎರಡು ಘಂಟೆಗಳ ಕಾಲ ಪ್ರಯಾಣ. ಅಲ್ಲಿಂದ ಎಚ್. ಎ. ಎಲ್ ಕಾಲು ಘಂಟೆ. ಅಲ್ಲಿಂದ fever 104 office ಹತ್ತು ನಿಮಿಷ, ರೇಡಿಯೋ ಆಫೀಸಲ್ಲಿ ಒಂದು ನಿಮಿಷ, ಅಲ್ಲಿಂದ ಹೊರಗೆ ಬಂದ ಮೇಲೆ ಇದು ಕಣ್ಣಿಗೆ ಬಿತ್ತು.

Z : ನೀನು ಗೂಳಿ ಥರ ನುಗ್ಗಿದೆ.

ನಾನು : ಇಲ್ಲಪ್ಪಾ...ನನ್ನ ಕಾಲು involuntary ಆಗಿ ಟಿಕೆಟ್ ಕೌಂಟರ್ ಬಳಿ ನಿಂತುಕೊಂಡಿತು. ನನ್ನ ಫೋನಿನ ಕ್ಯಾಮೆರಾ ತೋರಿಸಿ ಅದಕ್ಕೂ ಸೇರಿಸಿ ದುಡ್ಡುಕೊಟ್ಟು ಒಳನಡೆದೆ.

Z : ಸುಮ್ಮನಿದ್ದಿದ್ರೆ ದುಡ್ಡು ಉಳಿತಿತ್ತು. ಹನಿ ಹನಿಗೂಡಿದರೆ ಹಳ್ಳ.

ನಾನು : ನಿನ್ನ ತಲೆ. ನಾನು ಗಾಂಧಿ ಬಜಾರಿನಲ್ಲಿ ಸುಮ್ಮನೆ ವಾಕಿಂಗ್ ಅಂತ ಹೋದರೆ ಪಾನಿ ಪುರಿಗೇ ನೂರು ರುಪಾಯಿ ಮುಖ ಮುಲಾಜಿಲ್ಲದೇ ಖರ್ಚಾಗತ್ತೆ. ಅಂಥಾದ್ರಲ್ಲಿ ನಾನು ಇಲ್ಲಿ ಹತ್ತು ರುಪಾಯಿ ಉಳಿಸಿ ಯಾವ ಸಾಮ್ರಾಜ್ಯ ಕಟ್ಟಬೇಕು ಹೇಳು ? ಅದೂ ಅಲ್ಲದೇ, ನನಗೆ ಫೋಟೋ ತೆಗೆಯಬೇಕು ಅನ್ನೋ ಆಸೆ ನ ರೆಸಿಸ್ಟ್ ಮಾಡ್ಕೊಳ್ಳೋ ಅಷ್ಟು ನಿಗ್ರಹ ಬಂದಿಲ್ಲ :) ಸುಮ್ಮನೆ Penny wise pound foolish ಆಗಿರ್ಬಾರ್ದು ಅಂತ, ನೀಟಾಗಿ ದುಡ್ಡು ಕೊಟ್ಟು ನಡೆದೆ.

Z : ಹಾಗೆ. ಮುಂದೆ ?

ನಾನು : ಕಳೆದೋದೆ.

Z : ಹಾಂ?!

ನಾನು : ಅಂದ್ರೆ...ಮ್ಯೂಸಿಯಮ್ ನೋಡ್ತಾ ಕಳೆದು ಹೋದೆ ಅಂತ. ಅಣ್ಣಂಗೆ ಪೈಲಟ್ ಆಗ್ಬೇಕು ಅಂತ ಆಸೆ ಇತ್ತು. ತಾತ ಬಿಲ್ಕುಲ್ ಉಹು ಅಂದ್ಬಿಟ್ರು.ನನಗೂ ಅದೇ ಆಸೆ ಇತ್ತು, ಆದ್ರೆ ಕಣ್ಣಿಗೆ spectacles ಬಂದು....

Z : ಹೋಗ್ಲಿ ಬಿಡು....ಕಥೆ ಮುಂದ್ವರ್ಸು.

ನಾನು : ಎಚ್. ಎ. ಎಲ್ ಉಗಮದಿಂದ ಹಿಡಿದು ಈಗಿನ ವರೆಗೂ ಅದು ಸಾಗಿ ಬಂದ ಹಾದಿ ನೋಡಿ ಹೆಮ್ಮೆ ಅನಿಸಿತು ನಂಗೆ ನಮ್ಮ ದೇಶದ ಬಗ್ಗೆ.

Z : :) ಆಮೇಲೆ ?

ನಾನು : ಅವೆಲ್ಲಾ ಹೇಳಕ್ಕಾಗಲ್ಲ, ಪ್ರತಿಯೊಂದು ವಿಮಾನದ ಮಾದರಿ ಮುಂದೆ ನಿಂತುಕೋಬೇಕು, ಅದರ ಒಳಗೆ ಕೂರಬೇಕು, ಆನಂದ ನ ಅನುಭವಿಸಬೇಕು.

Z : ಹಂಗಂತಿಯಾ ?

ನಾನು : ಇನ್ನೇನ್ ಮತ್ತೆ. That museum is indeed a glorious heritage. ಅಲ್ಲೇ ಮೂರು ಘಂಟೆ ಕಾಲ ಆಯ್ತು. ಅಲ್ಲಿನ ಕ್ಯಾಂಟೀನಿನಲ್ಲಿ ಹೋಪ್ಲೆಸ್ಸಾತೀತವಾದ ಕಾಫಿಯನ್ನ ಗಟಗಟನೆ ಕುಡಿದು, ಹೊರಗೆ ಬಂದೆ.

Z : ನೀನು...ನೀನು ಕಾಫಿನ ಗಟ ಗಟ ಅಂತ ಕುಡಿದೆ ಅಂದರೆ ಅದು ಹೇಗಿದೆ ಅನ್ನೋದನ್ನ ಊಹಿಸಬಹುದು.

ನಾನು : ಯು ಆರ್ ರೈಟ್. ಅಲ್ಲಿಂದ ಬಸ್ ಹತ್ತಿ, ಊರೆಲ್ಲಾ ಸುತ್ತಿ ಮೆಜೆಸ್ಟಿಕ್ ಗೆ ಬಂದೆ.

Z : ಯಾಕೆ ?

ನಾನು : ಪ್ಲಾನೆಟೇರಿಯಂ ನಲ್ಲಿ ಕೆಲಸ ಇತ್ತಮ್ಮಾ....ಇದು ನಾನು ಪ್ಲಾನೆಟೇರಿಯಮ್ ನಲ್ಲಿ ಕೆಲಸ ಮಾಡುತ್ತಿದ್ದ ಕಾಲದ ಕಥೆ.

Z : ಓಹ್ಹೊ....

ನಾನು : ಆಹಾ.....ಟೈಂ ನೋಡಿದರೆ ಐದು ಘಂಟೆ ಆಗೋಗಿತ್ತು. ಪ್ಲಾನಿಟೇರಿಯಂ ಕ್ಲೋಸ್ ಆಗೋಗಿರತ್ತೆ. ನಾನು ಅಲ್ಲಿ ಆವತ್ತು ಹೋಗದಿದ್ದರೂ ನಡಿತಿತ್ತು ಅಂತ ಗೊತ್ತಿತ್ತು.ಆದರೂ ಹೋಗಿ, ಸಾಂಗವಾಗಿ ಲೈಬ್ರರಿಯಲ್ಲಿ ಕೂತು ಓದೋಣ ಅಂದುಕೊಂಡಿದ್ದೆ. ಆಗ್ಲಿಲ್ಲ. ಮನೆಗೆ ಬರಲು ಬಸ್ಸು ಹತ್ತಿದೆ. ಬೆಳಿಗ್ಗೆ ಹತ್ತಕ್ಕೆ ಮನೆ ಬಿಟ್ಟವಳು ಮನೆಗೆ ಬಂದಾಗ ಆರುವರೆ. ಅಮ್ಮ "ಊಟ ?" ಅಂದ್ರು. ನಾನು, " thanks ಮಾ ನೆನಪಿಸಿದಕ್ಕೆ, ನನಗೆ ಮರ್ತೇ ಹೋಗಿತ್ತು ! "ಅಂದೆ.

Z : ತಲೆ ಮೇಲೆ ಕುಟ್ಟಿರ್ತಾರೆ ಅಮ್ಮ.

ನಾನು : ಇಲ್ಲ, ಪ್ರಯೋಜನ ಇಲ್ಲ ಅಂತ ಗೊತ್ತಿದೆ ಅವರಿಗೆ. ಹಾಗಾಗಿ, ಅವರೇ ಊಟ ಕಲಿಸಿಕೊಂಡು ಬಂದು ತಟ್ಟೆ ಕೈಯಲ್ಲಿಟ್ಟರು. ನಾನು ತಿಂದು, ಏಳು ಕಾಲಿಗೆಲ್ಲ ಪವಡಿಸಿಬಿಟ್ಟೆ.

Z : ಆಹಾ...ಅದಿರ್ಲಿ, ಪ್ರೈಜ್ ಏನ್ ಬಂತು ?

ನಾನು : ಯಾವ್ದೋ ಬ್ಯೂಟಿ ಸಲೂನ್ ನಲ್ಲಿ ಹರ್ಬಲ್ ಬ್ಯೂಟಿ ಟ್ರೀಟ್ಮೆಂಟ್ ಗೆ ಎರಡು ಸಾವಿರ ರುಪಾಯಿಗೆ ವೋಚರ್ರು ! ಅಮ್ಮ ಖಡಾ ಖಂಡಿತವಾಗಿ ಹೇಳಿಬಿಟ್ಟರು-"ನೋಡು, ಇದೆಲ್ಲಾ ಮಾಡಿಸ್ಕೊಂಡ್ರೆ ಹಾಳಾಗ್ ಹೋಗತ್ತೆ ಸ್ಕಿನ್ನು. ಸುಮ್ನೆ ಇದ್ಬಿಡು. " ನಾನು ಆಸೆ ತಾಳಲಾಗದೆ ಆ ಬ್ಯೂಟಿ ಸಲೂನ್ ಗೆ ಹೋದೆ ಇನ್ನೊಂದು ದಿನ. ಸುಮ್ನೆ ಎಲ್ಲಾ ಟ್ರೀಟ್ಮೆಂಟ್ ನ ರೇಟ್ಸ್ ಕೇಳ್ದೆ. ಐದು ಸಾವಿರಕ್ಕಿಂತ ಕಡಿಮೆ ಒಂದೂ ಇರಲಿಲ್ಲ. ಒಂದು ಟ್ರೀಟ್ಮೆಂಟ್ ಇತ್ತು ಎರಡು ಸಾವಿರಕ್ಕೆ, ಆದರೆ ನನಗೆ ಮಾಡಿಸಿಕೊಳ್ಳೋ ಆಸೆ ಆಗ್ಲಿಲ್ಲ. ಸರಿ ಅಲ್ಲಿಂದ ನನ್ನ ಸ್ನೇಹಿತೆ ಆಫೀಸ್ ಗೆ ಹೋಗಿ, ಅವಳಿಗೆ ಈ ಪ್ರೈಜ್ ಕಥೆ ಹೇಳಿದೆ. ಅವಳಂದ್ಲು-" ಕೊಡು, ನಾನೆ ಯಾರಿಗಾದರೂ ದಾಟಿಸ್ತಿನಿ ಇದನ್ನ" ಅಂತ. ನಾನು ವೋಚರ್ ನ ಅವಳಿಗೆ ಕೊಟ್ಟು ವಾಪಸ್ ಬಂದೆ. ಇಷ್ಟು ಕಥೆ.

Z : ಆಹಾ....ಇವತ್ತು ಮುಹೂರ್ತ ಇದನ್ನ ನನಗೆ ಹೇಳಕ್ಕೆ. ಅಲ್ವಾ ?

ನಾನು : ಹು. ಇನ್ನೂ ಸಿಕ್ಕಾಪಟ್ಟೆ ಕಥೆಗಳಿವೆ ಹೇಳೋಕೆ. ಸಧ್ಯಕ್ಕೆ ಟೈಂ ಸಿಕ್ತಿಲ್ಲ. ನಿಧಾನಕ್ಕೆ ಹೇಳ್ತಿನಿ ಒಂದು ದಿನ. ಅಲ್ಲವರ್ಗು...

Line on hold.

ಫೋಟೋಸ್ ನೋಡ್ಬಿಡು. ಆಮೇಲೆ ಮತ್ತೆ ಗೋಳಾಡ್ಬೇಡ ನಾನು ಸ್ಲೈಡ್ ಶೋ ಹಾಕಿಲ್ಲ ಅಂತ.

ಉತ್ತರಾಯಣ ೩

ನಾನು: ಬೃಂದಾವನಕ್ಕೆ ಹೊರಡಲು ನಾಲ್ಕು ಘಂಟೆಯಷ್ಟೊತ್ತಿಗೆ ರೆಡಿ ಇರಬೇಕು ಎಂದು ಮ್ಯಾನೇಜರ್ ವೆಂಕಟೇಶ್ ಅವರು ಹೇಳಿದ್ದರು. ಇವರೆಲ್ಲರೂ ಊಟ ಮಾಡಿ, ಮಲಗಿ, ಎದ್ದು ರೆಡಿಯಾಗು...