Thursday, May 28, 2009

ಆಸೆ ಪೂರೈಸಿಕೊಂಡೆ !

ನಾನು : :) :) :) :) :) :) :) :) :)

Z : ಹಲ್ಲು ಕಿರಿದಿದ್ದು ಮುಗಿದಿದ್ದರೆ ಅದು ಯಾವ ಆಸೆಯನ್ನು ಪೂರೈಸಿಕೊಂಡಿರಿ ಅಂತ ಪೇಳುವವರಾಗಿ.

ನಾನು : :D :D :D :D :D :D :D

Z : ಸಾಕು !!!!!

ನಾನು : ಹಾಂ...ಆಯ್ತು ನಕ್ಕಿದ್ದು. ಈಗ ಕಥೆ ಹೇಳ್ತಿನಿ ಕೇಳ್ಸ್ಕೊ.

Z : ಹು.

ನಾನು : ವಿಕಾಸ್ ಹೆಗಡೆ ಇದ್ದಾರಲ್ಲ...

Z : ಇದ್ದಾರೆ.

ನಾನು : ಅವರು ಸರ್. ಎಮ್ . ವಿಶ್ವೇಶ್ವರಯ್ಯ ವಿಜ್ಞಾನ ಮತ್ತು ತಂತ್ರಜ್ಞಾನ ವಸ್ತುಸಂಗ್ರಹಾಲಯಕ್ಕೆ ಭೇಟಿ ಕೊಟ್ಟಿದ್ದರ ಬಗ್ಗೆ ಬ್ಲಾಗ್ ಪೋಸ್ಟ್ ಒಂದನ್ನು ಬರೆದಿದ್ದರು. ನಾನು ಬಹಳಾ ಹಿಂದೆ ಆ ಮ್ಯೂಸಿಯಂ ಗೆ ಭೇಟಿ ಕೊಟ್ಟಿದ್ದೆನಾದರೂ, ಈ ಪ್ರಯೋಗಗಳನ್ನು ನೋಡಿದ ನೆನಪಿರಲಿಲ್ಲ. ಇವರು ಪೋಸ್ಟ್ ಹಾಕಿದ ದಿನದಿಂದ ನನಗೆ ಮತ್ತೆ ಅಲ್ಲಿಗೆ ಹೋಗಬೇಕೆಂಬ ಆಸೆ ಹುಟ್ಟಿತು.ಆದರೆ...

Z : ರೆ ?

ನಾನು : ನನಗೆ ಯಾರ ಜೊತೆಯಲ್ಲಿಯೂ ಹೋಗಲು ಇಷ್ಟ ಇರಲಿಲ್ಲ. ನಾನೊಬ್ಬಳೇ ಹೋಗಿ, ಪ್ರತಿಯೊಂದು ಪ್ರಯೋಗವನ್ನು ಅರ್ಥೈಸಿಕೊಂಡು, notes ಮಾಡಿಕೊಂಡು ಬರಬೇಕು ಅಂತ ಆಸೆ ಇತ್ತು. ಮನೆಯಲ್ಲಿ ಒಬ್ಬಳೇ ಹೋಗ್ತಿಯಾ ಅಂತ ಹುಬ್ಬೇರಿಸುತ್ತಾರೆಂದು ಗೊತ್ತಿತ್ತು. ಅಪರ್ಣಂಗೆ ಬರೋ ಆಸೆ ಇತ್ತು. ಆದರೆ Thanks to 2nd PUC tuitions, ಅವಳಿಗೆ ಒಂದು ನಿಮಿಷ ಬಿಡುವಿಲ್ಲ.

Z : sad.

ನಾನು : ಇದಕ್ಕಿಂತಾ ಹೆಚ್ಚಾಗಿ ನನಗೆ ಅಲ್ಲಿ ಹೋಗಲು ಇನ್ನೊಂದು ದೊಡ್ಡ ಕಾರಣ ಇತ್ತು. ನಾನು ಮುಂದೆ ಎಲ್ಲಾದರೂ ಅಧ್ಯಾಪಕಿಯಾದರೆ ಭೌತಶಾಸ್ತ್ರದ ನಿಯಮಗಳನ್ನು ಮಕ್ಕಳಿಗೆ ತಿಳಿಸಿಕೊಡುವ ಪ್ರಯೋಗಗಳು, ಸಿದ್ಧಾಂತಗಳ ಸುಲಭ ನಿದರ್ಶನ ಹಾಗು ವಿವರಣೆಗಳನ್ನು ನೀಡಬೇಕು. ಹಾಗೂ, ಅದನ್ನು ಮಕ್ಕಳಿಗೆ ಅರ್ಥ ಮಾಡಿಸಬೇಕು. ದೈನಂದಿನ ಕೆಲಸಗಳಲ್ಲಿ ಅಡಗಿರುವ ಭೌತಶಾಸ್ತ್ರದ ಸೂತ್ರಗಳನ್ನು ತಿಳಿದುಕೊಳ್ಳಲು ನಾನು ಸುಲಭದ ಪ್ರಯೋಗಗಳ ಬಗ್ಗೆ ಎಲ್ಲಿಂದಲಾದರೂ ಮಾಹಿತಿ ಪಡೆಯುವುದು ಅನಿವಾರ್ಯವಾಗಿತ್ತು. ಮತ್ತು ಹೊಸ ಆವಿಷ್ಕಾರಗಳ ಬಗ್ಗೆ ನಾನು update ಆಗದೇ ಇದ್ದರೆ ಮಕ್ಕಳನ್ನು educate ಮಾಡುವುದು ಹೇಗೆ ? ಈಗಿನ ಮಕ್ಕಳು ಹುಟ್ಟುವಾಗಲೇ ಗೂಗಲ್ ಮಂತ್ರವನ್ನು ಜಪಿಸುತ್ತಿರುತ್ತಾರಾದರೂ ಭಾರತದಲ್ಲಿ ಎಲ್ಲರಿಗೂ ಕಂಪ್ಯೂಟರ್ ಲಭ್ಯವಿದೆ ಎಂದು ಹೇಳಲಾಗುವುದಿಲ್ಲ. ಹಾಗಾಗಿ, ಇಂತಹಾ ವಸ್ತು ಸಂಗ್ರಹಾಲಯಗಳ ಅವಶ್ಯಕತೆ ಇದೆ. ಮಕ್ಕಳಿಗೆ ದುಬಾರಿ ವಸ್ತುಗಳ ಉಪಯೋಗ ಮಾಡದೇ ಸುಲಭಕ್ಕೆ ಸಿಕ್ಕುವ ವಸ್ತುಗಳಲ್ಲಿ ಪ್ರಯೋಗ ಮಾಡಿಸುವುದು ನಮ್ಮ ಜಾಣತನದ ಪರೀಕ್ಷೆಯಾಗುತ್ತದೆ. ಆದ್ದರಿಂದ ನನ್ನ ಮೇಲೆ ಸಿಕ್ಕಾಪಟ್ಟೆ ದೊಡ್ಡ ಜವಾಬ್ದಾರಿ ಇದೆ ಅಂತ ವಿಕಾಸ್ ಹೆಗಡೆ ಅವರ ಬ್ಲಾಗ್ ಪೋಸ್ಟ್ ನೋಡಿದಾಗಲೇ ನನಗೆ ಅನ್ನಿಸಿತ್ತು. ಅಧ್ಯಾಪಕಿಯ ಕೆಲಸಕ್ಕೆ ಸೇರುವ ಸಮಯ ಹತ್ತಿರವಾಗುತ್ತಿದ್ದಂತೆ ನನಗೆ ಈ ಬ್ಲಾಗ್ ಪೋಸ್ಟ್ ನೆನಪಾಯಿತು. ನೋಡೋಣ ಅಂತ ಸುಮ್ಮನಿದ್ದೆ, ಆದರೆ ಕಳೆದ ಸೋಮವಾರ ರಾತ್ರಿ ನನಗೆ ಒಂದು ಕನಸು ಬಿತ್ತು.

Z : ???

ನಾನು : ಕಾಲೇಜಲ್ಲಿ ಮಕ್ಕಳು ಸಿಕ್ಕಾಪಟ್ಟೆ ಪ್ರಶ್ನೆ ಕೇಳಿ, ನಾನು ಅವುಗಳಿಗೆ ಸಮರ್ಪಕವಾದ ಉತ್ತರ ನೀಡಲಾಗದೇ, HOD ಮುಂದೆ ತಲೆತಗ್ಗಿಸುವ ಕನಸು ಬಿತ್ತು. ಮಧ್ಯರಾತ್ರಿ ಮೂರು ಘಂಟೆಗೆ ಧಡ್ ಅಂತ ಎದ್ದು ಕೂತೆ. ನಾನು ಓದುತ್ತಿರಬೇಕಾದರೆ ನಮ್ಮ ಲೆಕ್ಚರರ್ ಗಳಿಗೆ ಪ್ರಶ್ನೆ ಕೇಳಿ ಕೇಳಿ ಅವರನ್ನು ಸುಸ್ತಾಗಿಸುತ್ತಿದ್ದ ನಾನು ಈಗ ಅವರ ಜಾಗದಲ್ಲಿ ನಿಲ್ಲಬೇಕಾದರೆ, ಪ್ರಶ್ನೆಗಳನ್ನು ಉತ್ತರಿಸುವಷ್ಟು ಜ್ಞಾನದ ಅವಶ್ಯಕತೆ ಬಹಳ ಇತ್ತು, ಸೂಕ್ತ ತಯಾರಿ ಇಲ್ಲದೇ ಅಧ್ಯಾಪಕ ವೃತ್ತಿಗೆ ಹೋದರೆ, ವೃತ್ತಿಗೆ ಮೋಸವಾಗತ್ತೆ ಅನ್ನೋ moral fear ಬೇರೆ. ಜೊತೆಗೆ, ತ. ರಾ.ಸು ಅವರ ಬೆಳಕು ತಂದ ಬಾಲಕ ಅನ್ನೋ ಕೇನೋಪನಿಷತ್ ಆಧಾರಿತ ಕಾದಂಬರಿ ಓದುತ್ತಿದ್ದೆನಾ, ಅದರಲ್ಲಿ ಕಥಾನಾಯಕ ನಚಿಕೇತ ಬರೀ ಪ್ರಶ್ನೆಗಳನ್ನೇ ಕೇಳುತ್ತಿರುತ್ತಾನೆ. ನನಗೆ ಸಿಕ್ಕುವ ಮಕ್ಕಳೆಲ್ಲ ನಚಿಕೇತನ ತರಹಾ ನೇ ಕಾಣಿಸುತ್ತಿದ್ದರು ಕನಸಲ್ಲಿ ! ತ. ರಾ. ಸು ಬೇರೆ ಸತ್ಯದ ಉಪಾಸನೆಯೇ ಪರಬ್ರಹ್ಮಜ್ಞಾನ ಪಡೆಯಲು ದಾರಿ ಅಂತ ಬರೆದುಬಿಟ್ಟಿದ್ದಾರೆ. ಮಕ್ಕಳಿಗೆ ಸತ್ಯದ ದರ್ಶನ ಮಾಡಿಸದಿದ್ದರೆ ನಾವು ಸುಳ್ಳು ಹೇಳಿದ ಹಾಗಾಗುತ್ತದೆ. ಹೀಗೆಲ್ಲಾ ಯೋಚನೆಗಳು ಒಟ್ಟೊಟ್ಟಿಗೆ ಬಂದು ನನಗೆ ಆ ರಾತ್ರಿ ನಿದ್ದೆಯೇ ಬರಲಿಲ್ಲ ! ಮ್ಯೂಸಿಯಂ ಗೆ ಹೋಗಲೇಬೆಕೆಂಬ ನನ್ನ ಆಸೆ ತೀವ್ರವಾಯ್ತು.

Z : ಕರ್ಮಕಾಂಡ !!


ನಾನು : ಮಂಗಳವಾರ ಮತ್ತು ಬುಧವಾರ ನನಗೆ ಬೇರೆ ಕಡೆ ಕೆಲಸಗಳಿದ್ದವು. ಮಂಗಳವಾರ ಬೆಳಿಗ್ಗೆ " ನಾನು ಗುರುವಾರ ಮ್ಯೂಸಿಯಂ ಗೆ ಹೋಗಿ ಬರುತ್ತೇನೆ" ಅಂತ ಘೋಷಣೆ ಮಾಡಿದೆ. ಹೋಗಲಾ ? ಯಾರಾದರೂ ಬರ್ತೀರಾ ಅಂತ ಕಾಟಾಚಾರಕ್ಕೂ ಕೇಳಲಿಲ್ಲ.

Z : :) :)

ನಾನು : ಮನೆಯವರದ್ದು expected reaction. ಹುಬ್ಬೇರಿಸಿದರು. ನಾನು- "museum ನ renovate ಮಾಡಿದ್ದಾರೆ ಅಂತ ಬ್ಲಾಗ್ ಒಂದರಲ್ಲಿ ಗೊತ್ತಾಯ್ತು. As a physicist ನಾನು ಅಲ್ಲಿಗೆ ಹೋಗದಿದ್ದರೆ ಅದು ನನಗೆ ಅವಮಾನ. ಆಮೇಲೆ ಪಕ್ಕದ ವೆಂಕಟಪ್ಪ ಆರ್ಟ್ ಗ್ಯಾಲೆರಿಯಲ್ಲಿ ಕನ್ನಡ ಸಾಹಿತ್ಯದ ಪ್ರಪ್ರಥಮ ಶಾಸನವಾದ ಹಲ್ಮಿಡಿ ಶಾಸನ ಇಟ್ಟಿದ್ದಾರೆ. ಬಿ.ಎಸ್ಸಿ ಮಾಡೋವಾಗ ನಮ್ಮ ಇಂಗ್ಲಿಷ್ ಅಧ್ಯಾಪಕರು "If you have not seen halmidi shasana in venkatappa art gallery, then you are not eligible to call yourself a kannadiga " ಅಂತ ಇಂಗ್ಲೀಷಿನಲ್ಲಿ ಬೈದಿದ್ದರು. ಇಷ್ಟೆಲ್ಲಾ ಬ್ಲಾಗ್ ಬರೆದು, ಸಾಹಿತ್ಯ ಅಲ್ಪ ಸ್ವಲ್ಪ ಓದಿ ಹಲ್ಮಿಡಿ ಶಾಸನ ನೋಡದೇ ಇದ್ದರೆ ಏನ್ ಪ್ರಯೋಜ್ನ ! " ಅಂದೆ. " ಸಾಹಿತ್ಯ" ಅನ್ನೋ ಪದ ಕೇಳಿದ ಮೇಲೆ ಅಮ್ಮ ಸ್ವಲ್ಪ ಮೆತ್ತಗಾದರು, ಅಣ್ಣನಿಂದ no reaction. ಅಪರ್ಣಂಗೆ ಹೊಟ್ಟೆ ಉರಿಯುತ್ತಿತ್ತೆಂದು ಅವಳ ನೋಟವೇ ಹೇಳುತ್ತಿತ್ತು. ನನ್ನ ಕೆಲಸ ಆಗಿತ್ತು. ನಾನು ಹೊರಡಬಹುದೆಂದು ಆಗಿತ್ತು. ಆದರೆ ಕ್ಯಾಮೆರಾ ತಗೊಂಡು ಹೋಗ್ತಿನಿ ಅಂತ ಮಾತ್ರ ಬಾಯ್ಬಿಡಲಿಲ್ಲ.

Z : ಯಪ್ಪ !!!!!! ಸಧ್ಯ. ಆಮೇಲೆ ?

ನಾನು : ಗುರುವಾರ ಬೆಳಿಗ್ಗೆ ನಾನು ಹತ್ತುಘಂಟೆಗೆ ಬಿಟ್ಟು ಮನೆಗೆ ಸಾಯಂಕಾಲ ಎಂಟಕ್ಕೇ ಕಾಲಿಡಬೇಕೆಂದು ಪ್ಲಾನ್ ಮಾಡಿದ್ದೆ. ಮ್ಯೂಸಿಯಮ್ಮು, ಗ್ಯಾಲೆರಿ, ಎಲ್ಲಾ ನೋಡಿದ ಮೇಲೆ, ಕಸ್ತೂರ್ಬಾ ರಸ್ತೆಯಲ್ಲಿ ನಡೆದು ಕಾರ್ಪೋರೇಷನ್ ತಲುಪಬೇಕು ಅಂತ ನನಗೆ ಮಹದಾಸೆ ಇತ್ತು. ಆದರೆ, ಮನೆಯಲ್ಲಿ ಸ್ವಲ್ಪ ಕೆಲ್ಸ ಇತ್ತು. ಅದೆಲ್ಲಾ ಮಾಡೋ ಅಷ್ಟೊತ್ತಿಗೆ ಒಂಭತ್ತುವರೆ. ಅಮ್ಮ ಮೇಲೆ ಏನೋ ಕೆಲಸ ಮಾಡುತ್ತಿದ್ದರು. ನಾನು ರೆಡಿಯಾಗಿ, ಸಮಯ ನೋಡಿ ಕ್ಯಾಮೆರಾ ಹೆಗಲೇರಿಸಿಕೊಂಡು ಮನೆ ಬಿಟ್ಟಾಗ ಗಂಟೆ ಹನ್ನೊಂದು.

Z : ಉಫ್ಹ್ಹ್ಹ್ಹ್ !!!

ನಾನು : ನನ್ನ ಕರ್ಮಕ್ಕೆ, ಕಾರ್ಪೋರೇಷನ್ ಗೆ ಡೈರೆಕ್ಟು ಬಸ್ಸು ಸಿಗಲಿಲ್ಲ. ಎರಡು ಬಸ್ಸು ಚೇಂಜ್ ಮಾಡಿ, ಕಾರ್ಪೋರೇಷನ್ ತಲುಪಿ ಅಲ್ಲಿಂದ ಒಂದು ಆಟೋ ಹಿಡಿದೆ. ಅವನು "೨೦ ರುಪೀಸ್" ಅಂದ. ನಾನು " ಓಕೆ" ಅಂದೆ.

Z : ನೀನು....ನೀನು ಜಗಳ ಆಡದೇ, ಬಾರ್ಗೈನ್ ಮಾಡದೇ, ಒಂದೇ ಸರ್ತಿಗೆ ಆಟೋ ಹತ್ತಿದೆಯಾ ?

ನಾನು : ಹು.

Z : ನೀನು ?

ನಾನು : ಹು...ಸ್ವತಃ ಸ್ವಯಂ ಸಾಕ್ಷಾತ್ ನಾನೆ !

Z : ಪವಾಡ !! ಪವಾಡ !!

ನಾನು : ಏನಿಲ್ಲ. ನನಗೆ ಜಗಳ ಆಡಲು ಟೈಂ ಇರಲಿಲ್ಲ. ಅದಕ್ಕೆ ಆಡಲಿಲ್ಲ.

Z : ಹಂಗನ್ನು. ಆಮೇಲೆ ?

ನಾನು : ಮ್ಯೂಸಿಯಂ ತಲುಪಿದ ತಕ್ಷಣ ನನ್ನ ಕೈ involuntary ಆಗಿ ಕ್ಯಾಮೆರಾ ಕಡೆ ಹೋಯ್ತು. ಟಿಕೆಟ್ ತೆಗೆದುಕೊಳ್ಳುವಾಗ ಫೋಟೋಗ್ರಫಿ allowed ತಾನೆ ? ಅಂತ ಕೇಳಿದೆ. ಅವರು "ಖಂಡಿತಾ" ಅಂದರು . ನಾನು "ದೇವರು ಚೆನ್ನಾಗಿಟ್ಟಿರುತ್ತಾನೆ ನಿಮ್ಮನ್ನ" ಅಂತ ಬಾಯ್ಬಿಟ್ಟು ಹಾರೈಸಲಿಲ್ಲ...ಹಾಗೆ ಯೋಚನೆ ಮಾಡಿದೆ. ಫೋಟೋಸ್ ತೆಗೆಯುತ್ತಲೇ ಒಳನಡೆದೆ.

Z : :) ಮುಂದೆ ?

ನಾನು : ಕೆಳಗಡೆ ಫ್ಲೋರ್ ನಲ್ಲಿ ಸರ್. ಎಮ್. ವಿಶ್ವೇಶ್ವರಯ್ಯ ಅವರ ಕೆಲವು ಸ್ಮಾರಕಗಳು, ಅವರ ಫೋಟೊ ಎಲ್ಲ ಇತ್ತು. ನನಗೆ ಒಂದು ಮುಖ್ಯವಾದ ಜ್ಞಾನೋದಯ ಆಯ್ತು ಅಲ್ಲಿ.

Z : ಏನದು ?

ನಾನು : ಇವರ ಕಣ್ಣು ನೋಡು.


ನಾನು : Flood light ಥರ ಎಷ್ಟು ಹೊಳಿತಿದೆ ! You can see the light of knowledge in his eyes ! ನನ್ನ ಕಣ್ಣು ಒಳ್ಳೆ zero candle bulb ಥರ ಇದ್ಯಲ್ಲಾ ಅಂತ ಬಹಳಾ ಬೇಜಾರಾಯ್ತು ನಂಗೆ ! :( :( :(


Z : ಬೇಜಾರ್ ಮಾಡ್ಕೋಬೇಡ. ಅವರ ಕಣ್ಣು ಹಾಗಿರೋದಕ್ಕೆ ಅವರು ಅಷ್ಟು ದೊಡ್ಡ ಮನುಷ್ಯರಾದರು. ನೀನು ಓದಿ, ಅರ್ಥೈಸ್ಕೊಂಡು, ಕಣ್ಣಲ್ಲಿ ಈ ಕಾಂತಿ ಬರ್ಸ್ಕೊಳ್ಳಕ್ಕೆ ಟ್ರೈ ಮಾಡು. ಆದರೆ ಸರಿ. ಇಲ್ಲಾಂದ್ರೆ ಪರ್ವಾಗಿಲ್ಲ. ಮುಂದ್ವರ್ಸು ಕಥೆ ನಾ...

ನಾನು : ಇಂಜಿನ್ ಹಾಲ್ ಮತ್ತು ಡೈನೋಸಾರ್ ಕೂಡಾ ಇತ್ತು. ಇನ್ನೊಂದು ಸೆಕ್ಷನ್ ಗೆ ಪ್ರವೇಶ ಇರಲಿಲ್ಲ. ಕೆಲಸ ನಡಿತಿತ್ತು ಅನ್ನಿಸತ್ತೆ. ಇಂಜಿನ್ ಹಾಲ್ ನನಗೆ ತುಂಬಾ ಇಷ್ಟ ಆಯ್ತು. ಎಷ್ಟು ತರಹ ಇಂಜಿನ್ ಗಳಿಟ್ಟಿದ್ದಾರೆ ಗೊತ್ತಾ !!! ಸಿಕ್ಕಾಪಟ್ಟೆ ಚೆನ್ನಾಗಿದೆ ಒಂದೊಂದು. ಸಿಂಪಲ್ ಮೆಷೀನ್ ಸೆಕ್ಷನ್ ಕೂಡಾ ತುಂಬಾ educative ಆಗಿದೆ. ಎಲ್ಲ ವರ್ಕಿಂಗ್ ಮಾಡೆಲ್ ಗಳ ವಿಡಿಯೋ ಷೂಟ್ ಮಾಡಿಕೊಂಡೆ.

Z : ಒಹ್ಹೋ...

ನಾನು : ಇದನ್ನ ನೋಡು.



Z : ಏನಿದು ?

ನಾನು : ಇದನ್ನ ಓದು.



Z : ಒಹ್ಹೋ... ತಮ್ಮ ಫೇವರೆಟ್ ಕಾರ್ ಕಂಪನಿಯ ಇಂಜಿನ್ನು...

ನಾನು : :) :) :) :)ಇದನ್ನೆಲ್ಲಾ ನೋಡುತ್ತಾ , ನೋಟ್ಸ್ ಮಾಡುತ್ತಾ ಮೊದಲನೆಯ ಮಹಡಿಗೆ ಬಂದೆ. ಅಲ್ಲೊಂದು 3D ಥಿಯೇಟರ್ ಇದೆ. ನಾನು ಹೋಗುವ ಸಮಯಕ್ಕೆ ಸರಿಯಾಗಿ ಅಲ್ಲಿ ಒಂದು ಶೋಗೆ ಟಿಕೆಟ್ ಕೊಡುತ್ತಿದ್ದರು. ಟಿಕೆಟ್ ಪಡೆದು ಹೋದೆ.

Z : ಹೇಗಿದೆ ?

ನಾನು : ಹೇಳಿದರೆ ಪ್ರಯೋಜನ ಇಲ್ಲ. ಅದನ್ನ ನೊಡಬೇಕು. It is a very nice attempt to educate people through entertainment. ಒಂಥರಾ edutainment.

Z : ಹಂಗೆ.

ನಾನು : ಹೂ. ಹೊರಗೆ ಬರುವ ಹೊತ್ತಿಗೆ ಕರೆಂಟು ಹೋಗಿತ್ತು. ಮೊದಲನೆಯ ಮಹಡಿಯ ಪ್ರಯೋಗ ಶಾಲೆಯನ್ನು ಆಮೇಲೆ ನೋಡಿರಾಯ್ತು ಅಂತ ಎರಡನೆಯ ಮಹಡಿಗೆ ಹೋದೆ. ಅಲ್ಲಿ ಜೈವಿಕ ತಂತ್ರಜ್ಞಾನದ ಸೆಕ್ಷನ್ ಇತ್ತು. ನನಗೆ ಬಯಾಲಜಿ ಓದಿದ್ದೆಲ್ಲಾ ಮರ್ತೋಗಿತ್ತು. ತಕ್ಕ ಮಟ್ಟಿಗೆ ನೆನಪಾಯ್ತಾದರೂ ಹೆಚ್ಚು ಅರ್ಥವಾಗಲಿಲ್ಲ. ಅಪರ್ಣಂಗೆ ಫೋಟೋ ನೋಡಿ ಹೊಟ್ಟೆ ಉರಿಯುವುದು ಖಚಿತ ಅಂತ ಅನಿಸಿತು. ಅದಕ್ಕೆ ಫೋಟೋ ತೆಗೆಯಲಿಲ್ಲ. ಅದನ್ನ ನೋಡಿಕೊಂಡು ಬಾಹ್ಯಾಕಾಶ ಸೆಕ್ಷನ್ ಗೆ ಬಂದೆ. ತುಂಬಾ ಚೆನ್ನಾಗಿದೆ ಈ ಸೆಕ್ಷನ್ನು. ಉಪಗ್ರಹ ಉಡಾವಣೆ ಎಂದರೆ ಏನು, ಹೇಗೆ ನಡೆಯುತ್ತೆ, ಎಂಥೆಂಥಾ ಉಪಗ್ರಹಗಳಿವೆ ಎನ್ನುವುದರ ಬಗ್ಗೆ ಮಾಹಿತಿ ಇದೆಯಲ್ಲದೇ, ನಾವೇ ಕೆಲವು ಪ್ರಯೋಗಗಳನ್ನೂ ಸಹ ಮಾಡಬಹುದು.

Z : ಪ್ರಯೋಗ ಅಂದರೆ ?

ನಾನು : Monitoring of a satellite from ground station. prototype ಇದು.

Z : ಒಹ್ಹೋ...

ನಾನು : ಹಾಂ...ಚೆನ್ನಾಗಿತ್ತು. ಇಲ್ಲೊಂದಿಷ್ಟು ಫೋಟೋ ಮತ್ತು ವಿಡಿಯೋ ಆದಮೇಲೆ ಮೂರನೆಯ ಫ್ಲೋರ್ ಗೆ ಹೋದೆ. ಅಲ್ಲಿ ಭಾರತೀಯ ಎಲೆಕ್ಟ್ರಾನಿಕ್ಸ್ ಸಂಸ್ಥೆ ತನ್ನದೇ ಒಂದು ಸೆಕ್ಷನ್ ನಿರ್ಮಿಸಿದೆ. Semiconductor electronics ಬಗ್ಗೆ, ಮತ್ತು ಅದರ ಉಪಯೋಗದ ಬಗ್ಗೆ ತುಂಬಾ ಒಳ್ಳೊಳ್ಳೆ ಮಾಹಿತಿ ಮತ್ತು ಮಾಡೆಲ್ ಗಳಿವೆ. Manufacture of a silicon chip from sand section ನನಗೆ ತುಂಬಾ ಇಷ್ಟ ಆಯ್ತು. ಎಷ್ಟೋ ಡೌಟುಗಳು clarify ಆದವು. Optic fibres, communication, GPS, internet ಇವೆಲ್ಲದರ ಬಗ್ಗೆಯೂ ಮಾಹಿತಿ ಸಿಕ್ಕಾಪಟ್ಟೆ ಇತ್ತು. ಫೋಟೋಗಳನ್ನು ಕ್ಲಿಕ್ಕಿಸಿದ ಮೇಲೆ ನಾಲ್ಕನೆಯ ಫ್ಲೋರಿನ ಕೆಫೆಟೇರಿಯಾ ಗೆ ಹೋದೆ.

Z : ಹೊರಗೆ , that too in places like this, usually ಏನು ತಿನ್ನಲ್ಲ ಅಲ್ವಾ ನೀನು...ಮತ್ತೆ ಅವಲಕ್ಕಿ ತೆಗೆದುಕೊಂಡು ಹೋಗಿದ್ಯಲ್ಲ, ಅಲ್ಯಾಕೆ ಹೋದೆ ?

ನಾನು : ಸುಮ್ಮನೆ.

Z : ನಿಜ ಹೇಳು.

ನಾನು : :) ಸರಿ. ನಾನು ಯಾಕೆ ಹೋದೆ ಅಂದರೆ,

೧. ಅವಲಕ್ಕಿ ತಿನ್ನಕ್ಕೆ.

೨. ಈ ಫೋಟೋ ತೆಗೆಯಕ್ಕೆ.






Z : ನನಗೆ ಗೊತ್ತಿಲ್ವಾ ನಮ್ಮ ದೇವರ ಸತ್ಯ ! ಆಮೇಲೆ ?

ನಾನು : ಕೆಫೆಟೇರಿಯಾ ಗೆ ಹೋಗಿದ್ದಕ್ಕೆ ಕಾಫಿ ಕುಡಿದೆ.

Z : ಉದ್ಧಾರ. ಮುಂದೆ ?

ನಾನು : ಸೀದಾ ಮೊದಲನೆಯ ಫ್ಲೋರಿಗೆ ಬಂದೆ. ಅಲ್ಲಿ ನೋಡಿದರೆ ಧರ್ಮಸ್ಥಳದ ಮಂಜುನಾಥ ಸ್ವಾಮಿಯ ಧರ್ಮದರ್ಶನದ ಕ್ಯೂ ಥರ ಕ್ಯೂ ಇತ್ತು ಪ್ರತಿಯೊಂದು ಪ್ರಯೋಗಕ್ಕು.

Z : :))

ನಾನು : ಹೂಂ...fun science section ಅದು, and everybody was having fun. This is the best and the most educative section of the museum. They have explained the fundamentals of physics and mathematics in a very simple and effective way. ನಾನಂತೂ ಎಲ್ಲದರ ಫೋಟೋ ತೆಗೆಯಲು ಹೊರಟಿದ್ದೆ, ಆದರೆ ಜನರ ನೂಕುನುಗ್ಗಲಿತ್ತಾದ್ದರಿಂದ ತೆಗೆಯಲು ಆಗಲಿಲ್ಲ. ವಿಜ್ಞಾದ ಸೂತ್ರಗಳ ಫೋಟೋ ಮಾತ್ರ ತೆಗೆದು ನಾನೇ ಯಾವಾಗಲಾದರೂ ಮಾಡೆಲ್ ಗಳನ್ನು ಮಾಡೋಣ ಅಂತ ವಾಪಸ್ ಬಂದೆ. ಸಖತ್ತಾಗಿತ್ತು ಈ ಫ್ಲೋರು. I really had fun and revised my physics too !

Z : :) ಆಮೇಲೆ ?

ನಾನು : ಹನ್ನೆರಡು ವರೆಗೆ ಮ್ಯೂಸಿಯಂ ಗೆ ಹೋದವಳು ಮೂರುವರೆಗೆ ಹೊರಬಂದು ಆರ್ಟ್ ಗ್ಯಾಲೆರಿ ಗೆ ಹೋದೆ. ಮೂರು ಘಂಟೆಗಳಲ್ಲಿ ನಾನು ಮ್ಯೂಸಿಯಂ ನೋಡಿ ಮುಗಿಸಿದೆ ಅಂತ ನನಗೇ ನಂಬಲಾಗಲಿಲ್ಲ. ಆದರೆ ನಾನು ಯಾವುದನ್ನು ನೋಡುವುದು ಬಿಟ್ಟಿರಲಿಲ್ಲ. ಗ್ಯಾಲೆರಿಗೆ ಹೋದರೆ ಅಲ್ಲಿ ಫೋಟೋ ತೆಗೆಯುವ ಹಾಗಿಲ್ಲ ಅಂದರು. ಹಲ್ಮಿಡೀ ಶಾಸನದಲ್ಲಿ ಕನ್ನಡವೇ ಕಾಣದೇ ನನಗೆ ಬಹಳಾ ನಿರಾಸೆಯಾಯ್ತು !

Z : ಪಾಪ ! ಯಾವ್ ಥರ ಇತ್ತು ಲಿಪಿ ?

ನಾನು : ಕಣ್ಣಿಗೆ ಕಂಡರೆ ತಾನೆ ? I had not taken a magnifying glass with me.

Z : ಛೆ ಛೆ ಛೆ !

ನಾನು : ತೈಲವರ್ಣ ಚಿತ್ರಗಳು ಎಲ್ಲಾ ಒಂದಕ್ಕಿಂತ ಒಂದು ಮಸ್ತ್, ಜಬರ್ದಸ್ತ್. ಎಲ್ಲ ಶೈಲಿಗಳ (ಮೈಸೂರು, ತಂಜಾವೂರು, ಡೆಕ್ಕನ್, ಕಾಂಗ್ರಾ, ಅರೇಬಿಯಾ, ಪರ್ಷಿಯಾ, ಹೈದರಾಬಾದಿ, ಮರಾಠಿ, ಇತ್ಯಾದಿ) ತೈಲವರ್ಣ ಚಿತ್ರಗಳು ಮನಸೆಳೆಯುತ್ತವೆ. ಮೊಹೆನ್ ಜೊದಾರೋ, ಹರಪ್ಪ ನಾಗರಿಕತೆಯ ಕೆಲವು excavations ನ ಇಲ್ಲಿ ಸಂಗ್ರಹಿಸಲಾಗಿದೆ. ಕರ್ನಾಟಕ ಹಾಗೂ ಭಾರತದ ಹಲವಾರು ಸ್ಥಳದಲ್ಲಿ ಆದಿಮಾನವನ ಕಾಲದಲ್ಲಿ ಉಪಯೋಗಿಸುತ್ತಿದ್ದ ಮಡಿಕೆ, ಕುಡಿಕೆ, ಆಯುಧಗಳು ಸಹಾ ಇಲ್ಲಿವೆ. ಚರಿತ್ರೆಯ ವಿದ್ಯಾರ್ಥಿಗಳಿಗೆ ತುಂಬಾ ಉಪಯುಕ್ತ ಮಾಹಿತಿ ಸಿಕ್ಕತ್ತೆ ಇಲ್ಲಿ.

Z : I see.

ನಾನು : ಇಲ್ಲಿಂದ ಹೊರಬಂದಾಗ ಘಂಟೆ ನಾಲ್ಕುವರೆ. ಆಮೇಲೆ ಬರೋದು ಬಂದಿದಿನಿ, ಬ್ರಿಟಿಷ್ ಲೈಬ್ರರಿಯನ್ನೊಮ್ಮೆ ನೋಡಿಬಿಡೋಣ ಅಂತ ನಡೆಯಲು ಶುರು ಮಾಡಿದೆ.

Z : ಅದು ಅರ್ಧ ನಿಜ. Audi, Benz, Chevrolet ಕಾರ್ ಗಳ ಫೋಟೋ ತೆಗೆಯಕ್ಕೆ ತಾನೆ ನೀನು ಹೋಗಿದ್ದು ?

ನಾನು : :)) ಬೇಗ ಅರ್ಥ ಮಾಡ್ಕೋತ್ಯಾ ನೀನು. ಗುಡ್. ಅದೇ ಆಸೆಯಿಂದ ಹೋದೆ, ಆದರೆ ಆ ಕಾರುಗಳಲ್ಲಿ ಡ್ರೈವರ್ ಗಳು ಇದ್ದರು ಆದ್ದರಿಂದ ಫೋಟೋ ತೆಗೆಯಲಾಗಲಿಲ್ಲ.

Z : ಆಗ್ಬೇಕು ನಿನಗೆ.

ನಾನು : Silence !!

Z : ಸಾರಿ. ಆಮೇಲೆ ?

ನಾನು : St. Mark's road ನ F&B restaurant ನಲ್ಲಿ ಸಹ ಬ್ಲಾಗಿಗ murugan ಅವರ which main what cross photo exhibition ಮೂವತ್ತೊಂದನೆಯ ತಾರೀಖಿನ ವರೆಗೂ ಇದೆ ಅಂತ ನನಗೆ suddenly ನೆನಪಾಯ್ತು. ಅಲ್ಲಿಗೆ ಹೋದರೆ ಆ restaurant close ಆಗಿತ್ತು. ಸೀದಾ ವಾಪಸ್ ಬಂದು ಕಸ್ತೂರ್ಬಾ ರೋಡ್ ನಲ್ಲಿ ನಡೆಯುವ ಹೊತ್ತಿಗೆ ಶಿವಾಜಿನಗರದಿಂದ ನಮ್ಮ ಮನೆಗೆ ಬರುವ ಡೈರೆಕ್ಟ್ ಬಸ್ಸು ಕಾಣಿಸಿತು. ಕಸ್ತೂರ್ಬಾ ರೋಡಲ್ಲಿ ನಡೆಯುವ ಆಸೆಯನ್ನು ಬಿಟ್ಟು, ಬಸ್ಸು ಹತ್ತಿ, ಸೀಟು ಗಿಟ್ಟಿಸಿ , ಪ್ರಯಾಣ ಮಾಡಿ ಮನೆಗೆ ಬಂದಾಗ ಆರು ಮುಕ್ಕಾಲು !

Z : ಅಂತು ಒಬ್ಬಳೇ ಹೋಗಿ ಬಂದೆ ನೋಡು.

ನಾನು : ಯೆಸ್. Not everything in this world necessarily needs a company :)

Z : :) ಫೋಟೋಸ್ ? ವಿಡಿಯೋಸ್ ?


ನಾನು : ಫೋಟೋಸ್ ಹಾಕ್ತಿದಿನಿ. ವಿಡಿಯೋ ಹಾಕ್ಬಿಟ್ರೆ ಯಾರೂ ಮ್ಯೂಸಿಯಂ ಗೆ ಹೋಗಲ್ಲ ಆದ್ದರಿಂದ ಹಾಕ್ತಿಲ್ಲ. Its definitely worth a visit. ಹೋಗಿ ಬನ್ನಿ ಎಲ್ಲರೂ ಒಮ್ಮೆ, ಒಬ್ಬರೇ ಹೋಗುತ್ತೀರೋ, ಸಕುಟುಂಬ ಸಪರಿವಾರ ಸಮೇತರಾಗಿ ಹೋಗ್ತಿರೋ ...ಹೇಗೆ ಹೋದರೂ ಅದು ಖಂಡಿತಾ worthwhile !


Thursday, May 14, 2009

ಒಮ್ಮೊಮ್ಮೆ ಹೀಗೂ ಆಗುವುದು...

Z : ಈಗ ಏನ್ ಮಹಾ ಆಗೋಯ್ತು ಅಂತ ನೀನ್ ಈಥರ ತಲೆ ಕೆಡಿಸಿಕೊಂಡಿದ್ಯಾ ?

ನಾನು : ಏನ್ ಆಗಿಲ್ಲ ಅಂತ ಕೇಳು.

Z : ಏನ್ ಆಗಿಲ್ಲ ?

ನಾನು : ನನ್ನ ತಲೆ ಢಂ ಅಂತ ಒಡೆದು ಚೂರೊಂದು ಆಗಿಲ್ಲ ನೋಡು...

Z : ಓಕೆ....

ನಾನು : ಥುತ್ ! ಈ ಸಮಯದಲ್ಲಿ ಓಕೆ ಪ್ರಯೋಗ ಮಾಡ್ತ್ಯಲ್ಲಾ...ಮನುಷ್ಯಳಾ ನೀನು ?

Z : Have no doubts.

ನಾನು : Have no doubt that you are definitely not human ?

Z : ನಾನು ಮನುಷ್ಯಳೇ...

ನಾನು : I have my own doubts !

Z : Good, you at least own doubts !

ನಾನು : ನೋಡು...ಮೊದ್ಲೆ ನನ್ನ ಮೂಡ್ ಸರಿ ಇಲ್ಲ...

Z : ಯಾಕೆ ಸರಿ ಇಲ್ಲ ಅಂತ ಗೊತ್ತಾದ್ರೆ ತಾನೆ ನಾವ್ ಏನಾದ್ರು ಹೇಳಕ್ಕೆ ಆಗೋದು ?

ನಾನು : ನನಗೆ ಒಂದು ಪ್ರಶ್ನೆ ಸಿಕ್ಕಪಟ್ಟೆ ಕಾಡ್ತಿದೆ.

Z : ನೀನು ಯಾವಾಗ ಉದ್ಧಾರ ಆಗ್ತ್ಯಾ ಅನ್ನೋ ಪ್ರಶ್ನೆ ನ ? ನಾನು ಈಗ್ಲೆ ಉತ್ತರ ಕೊಡ್ತಿನಿ ತಗೊ...ನೀನು ಉದ್ಧಾರ ಆಗಕ್ಕೆ ಮಿನಿಮಮ್ 20 x 10^6 ಜನ್ಮ ಆಗತ್ತೆ.

ನಾನು : x-( x-( x-(

Z : ಬುಸುಗುಡು...ಹಾವಿನ ಥರ ! ಈಗ ಏನಾಯ್ತು ಅಂತ ಹೇಳು.

ನಾನು : ಜೀವನದಲ್ಲಿ ಏನು ಮುಖ್ಯ ?

Z : ನೆಮ್ಮದಿ.

ನಾನು : food, clothing and shelter ಅಲ್ವಾ ?

Z : ಅದು ದೇಹಕ್ಕೆ. ಆತ್ಮಕ್ಕೆ ಆನಂದ ಮುಖ್ಯ.

ನಾನು : ನೀನು ಇದೇ ಟೈಮಲ್ಲಿ ಫಿಲಾಸಫಿ ಪಾಠ ಮಾಡ್ಬೇಕಾ ನಂಗೆ ?

Z : ಅರೆರೆ...ನಿಂಗೆ ಹೆಂಗೆ ಗೊತ್ತಯ್ತು ? moreover, I just started with introduction..

ನಾನು : ಅಲ್ಲಿಗೆ full stop ಇಡು. ನನಗೆ ಟೈಮಿಲ್ಲ !

Z : ಓಕೆ. ಜೀವನಕ್ಕೆ ಮುಖ್ಯ The above mentioned and not to forget, money.

ನಾನು : ???

Z : :-) :-) :-) ನಾನು ಮಾತಾಡಲ್ಲ...ನಾನು ಬಾಯಿ ತೆಗೆದ್ರೆ ನೀನು " no gyan please !" ಅಂತ್ಯಾ !

ಇರ್ಲಿ. ಏನಾಯ್ತು ಈಗ ?

ನಾನು : ಈಗ ನಾನು ರಿಸರ್ಚಿಗೆ ಹೋಗಲೋ...ಕೆಲಸಕ್ಕೆ ಸೇರಲೋ ಅನ್ನೋದೆ ದೊಡ್ಡ ಪ್ರಶ್ನೆ ಆಗೋಗಿದೆ. ಜೀವನದಲ್ಲಿ the above four ಜೊತೆಗೆ choose ಮಾಡೋದು ability ಕೂಡಾ ಮುಖ್ಯ. ಏನಂತೀಯಾ ?

Z : ಹೂಂ....

ನಾನು : ಈಗ ನನಗೆ ನನ್ನ ನಿರ್ಧಾರವನ್ನ ಖಡಾಖಂಡಿತವಾಗಿ ತೆಗೆದುಕೊಳ್ಳುವ ಸಮಯ ಬಂದಿದೆ. ಎಕ್ಸಾಮುಗಳ ರಿಸಲ್ಟು ಬರದೇ, ಒಂದಾದ ಮೇಲೊಂದು ಬರುತ್ತಿರುವ ಕೆಲಸದ appointment orders ನನ್ನ ಆತಂಕ ಹೆಚ್ಚಿಸುತ್ತಿವೆ. ಒಂದು ವಾರಕ್ಕಿಂತ ಹೆಚ್ಚಿಗೆ ಟೈಮಿಲ್ಲ ! ರಿಸರ್ಚಿನ ರಿಸಲ್ಟಿಗೆ ಕಾದರೆ ಕೆಲಸ ಇಲ್ಲ. ಕೆಲ್ಸಕ್ಕೆ ಹೋದರೆ ರಿಸರ್ಚಿಗೆ ಬರಲಾಗುವುದಿಲ್ಲ !

Z : tough.

ನಾನು : ಇನ್ನೇನ್ ಮತ್ತೆ ! ನಾನು ಯೋಚನೆ ಮಾಡಿ ಮಾಡಿ ಒಂದು ನಿರ್ಧಾರಕ್ಕೆ ಬಂದಿದಿನಿ...

Z : ಬಾ...

ನಾನು : ಏನಪ್ಪಾ ಅಂದ್ರೆ - ರಿಸರ್ಚಿಲ್ಲದೇ ಬರಿ ಹಣಕ್ಕೋಸ್ಕರ ದುಡಿಯೋಕಿಂತ, ರಿಸರ್ಚಿಗೆ ಪ್ರೋತ್ಸಾಹ ಕೊಡುವ ಕೆಲಸಕ್ಕೆ ಸೇರ್ಕೊಳ್ಳೋದು ವಾಸಿ ಅಂತ.

Z : ಭೇಷ್...ಕೆಟ್ಟಿರೋ ತಲೆ ಕೂಡಾ ಒಳ್ಳೆ decisions ತೆಗೆದುಕೊಳ್ಳಬಹುದು ಅಂತ ಇವತ್ತು ಗೊತ್ತಾಯ್ತು ನೋಡು !

ನಾನು : ಸುಮ್ನಿದ್ರೆ ಸರಿ ನೀನು !

Z : ಹೆಹೆ...just joking ! ನೋಡು, at the end of everything, you should not regret what you did.

ನಾನು : I dont think I will regret anything. Decision making is a tough task, but not impossible.

Z : ಹೌದು. ಈಗ, ಸುಮ್ನೆ ಇದ್ಬಿಡು. ಮತ್ತೆ ಇದೇ ವಿಷ್ಯ ನ ಯೋಚನೆ ಮಾಡಿ, ಆಮೇಲೆ "ಹಿಂಗ್ ಮಾಡಿದ್ರೆ ಹೆಂಗೆ ?" ಅಂತ ನನ್ನ ಬಂದು ಕೇಳಬೇಡ !

ನಾನು : ಗ್ರ್ರ್ರ್ರ್ರ್ರ್ರ್ರ್ರ್ !!!

Z : ನೀನು ಎಷ್ಟೇ ಕೂಗಿದರೂ, ತಿಪ್ಪರ್ಲಾಗ ಹಾಕಿದರೂ, ಇದಕ್ಕಿಂತಾ suitable and feasible solution ಸಿಕ್ಕಲ್ಲ, ತಿಳ್ಕೋ !

ನಾನು :ಹಂಗಂತಿಯಾ ?

Z : ಯೆಸ್.

ನಾನು : ಓಕೆ.ಇಷ್ಟರ ಮಧ್ಯದಲ್ಲಿ ಒಂದು ವಿಷಯ ಹೇಳೋದೇ ಮರ್ತೋಗಿತ್ತು. ಇದು ನಮ್ಮಿಬ್ಬರ 75th phone call-u.I dont know whether we should celebrate or not.

Z : Recession period ಈಗ. ಆದ್ದರಿಂದ, ಸುಮ್ನೆ ಇದ್ದುಬಿಡೋಣ. ಅಪ್ಪಿ ತಪ್ಪಿ ಏನಾದ್ರೂ century ಆದರೆ, ಆಗ ಯೋಚನೆ ಮಾಡೋಣ.

ನಾನು : Done !

Friday, May 1, 2009

ಎಲ್ಲರ ಜೀವನನೂ ಇಷ್ಟೇ ಅಲ್ವಾ ?

Z : ಏನಿದು ಸಡನ್ ವೈರಾಗ್ಯ ? !

ನಾನು : ಗೊತ್ತಿಲ್ಲ...

Z :ಯಾಕೆ ಹಿಂಗಾಗೋಗಿದ್ಯಾ...

ನಾನು : ಯಾಕೋ ಹಿಂಗೆ ಅನ್ಸಕ್ಕೆ ಶುರುವಾಗೋಗಿದೆ.

Z :ಅದೆ ಯಾಕೆ ಅಂತ.

ನಾನು : ಇವತ್ತ್ ಏನಾಯ್ತಪ್ಪ ಅಂದ್ರೆ...ಸಾಯಂಕಾಲ ನಾನು ನನ್ನ ರೂಮಲ್ಲಿ "ನಾಯಿ ನೆರಳು" ಪುಸ್ತಕ ಓದೋಣ ಅಂತ ಒಳಗೆ ಬಂದೆ. ಸಿಕ್ಕಾಪಟ್ಟೆ ಸೆಖೆ ಅಂತ ಕಿಟಕಿ ತೆಗೆದೆ.

Z : ಸರಿ. ಮುಂದೆ ?

ನಾನು : ಮನೆಯ ಹಿಂದಿನ ರಸ್ತೆಯಲ್ಲಿ ಒಂದು ತೆಂಗಿನ ಮರ ಇದೆ. ಇತ್ತೀಚೆಗೆ ಅಲ್ಲಿ ಹದ್ದುಗಳ ವಾಸ ಶುರುವಾಗಿದೆ.

Z : ತೆಂಗಿನಮರದ ಮೇಲೆ ಹದ್ದುಗಳಾ ?

ನಾನು : yes. strange, but true. ಪ್ರತಿದಿನ ಸಾಯಂಕಾಲ ಮೂರು ಹದ್ದುಗಳು ಬರತ್ವೆ...around 6 pm.

Z : ಅದಕ್ಕೆ ?

ನಾನು : ಸರಿ ಇವುಗಳ ಫೋಟೋ ತೆಗೆಯಬೇಕು ಅಂತ ನನಗೆ ಬಹಳ ದಿನಗಳಿಂದ ಆಸೆ ಇತ್ತು. ಇವತ್ತು ಅದನ್ನ ಪೂರೈಸಿಕೊಳ್ಳೋ ಆಸೆ ಆಗಿ ಪುಸ್ತಕ ಮುಚ್ಹಿಟ್ಟು ಕ್ಯಾಮೆರಾ ತಗೊಂಡು ಸೀದಾ ಟೆರೇಸಿಗೆ ಓಡಿದೆ.

Z : ಹ್ಮ್ಮ್ಮ್...

ನಾನು : ಅಷ್ಟೊತ್ತಿಗೆ ಎರಡು ಹದ್ದುಗಳು ಪರಾರಿ.

Z : sad.

ನಾನು : ಸಾಯಂಕಾಲ ಬೇರೆ.ಲೈಟಿಂಗ್ ಕೈ ಕೊಡ್ತಿತ್ತು...ಪೂರ್ತಿ zoom ಮಾಡಿದರು ಚಿತ್ರ ನೆಟ್ಟಗೆ ಬರುವುದು ಡೌಟಾಯ್ತು. ಆದರೂ ಸಿಂಗಲ್ ಹದ್ದುವಿನ ಚಿತ್ರ ತೆಗೆದೆ. ಆದರೆ ಕಾಗೆಗೂ ಅದಕ್ಕೂ ವ್ಯತ್ಯಾಸವೇ ಕಾಣಲಿಲ್ಲ.

Z : ಹೆಹೆ !

ನಾನು : ನಗಬೇಡ. ಅನ್ಯಾಯ ಆಯ್ತಲ್ಲ ಅಂತ ವಾಪಸ್ ಹೊರಡಲು ರೆಡಿಯಾದೆ. ಅಷ್ಟೊತ್ತಿಗೆ ನನಗೆ ಒಂದು ದೃಶ್ಯ ಕಣ್ಣಿಗೆ ಕಂಡಿತು. ಪೇಪರ್ ಆಯುವ ಹೆಂಗಸೊಬ್ಬಳು ಬಂದು ತನ್ನ ಮಗುವನ್ನ ಕೆಳಗಿಳಿಸಿ ಬಿದ್ದಿದ್ದ cartons ನ ತೆಗೆದುಕೊಳ್ಳಲು ಶುರು ಮಾಡಿದಳು. ನಾನು ಅವಳನ್ನು ಹಾಗೇ ನೊಡುತ್ತಾ ನಿಂತೆ. ಯಾರಾದರು ಬೇರೊಬ್ಬರು ಬಂದು ಅದನ್ನ ತೆಗೆದುಕೊಳ್ಳಬಹುದು, ಇವಳು ಮಗುವನ್ನ ಕರೆದುಕೊಂಡು ಹೋಗಬಹುದು ಎಂದು ಅತ್ತಿತ್ತ ನೋಡಿದೆ. ಉಹೂ...ಯಾರೂ ಇಲ್ಲ.

Z : interesting...ಆಮೇಲೆ ?

ನಾನು : ಅವಳು ತನ್ನ ತಲೆಯ ಮೇಲೆ ಎಲ್ಲ ಪೇರಿಸಿಕೊಂಡು ಮಗುವನ್ನು ಎತ್ತಿಕೊಳ್ಳುವ ಹೊತ್ತಿಗೆ ಅವೆಲ್ಲ ಅವಳ ತಲೆಯಿಂದ ಬಿದ್ದುಹೋಯ್ತು.

Z :ಪಾಪ.

ನಾನು : ಮಗು ಅಳಲು ಶುರುಮಾಡಿತು. ಇವಳು ಅದಕ್ಕೆ ಸಮಾಧಾನ ಮಾಡಿದಳು. ನನಗೆ ಇವಳು ಇಷ್ಟೆಲ್ಲಾ ಸಾಮಾನನ್ನ ಹೇಗೆ ಹೊರುತ್ತಾಳೆ ನೊಡಬೇಕೆಂಬ ಆಸೆ ಆಯ್ತು. Involuntarily, ನನ್ನ ಕೈ ನನ್ನ ಕ್ಯಾಮೆರಾವನ್ನು video mode ನಲ್ಲಿ ಇಟ್ಟು ವಿಡಿಯೋ ತೆಗೆಯಲು ಪ್ರಾರಂಭಿಸಿತು.

Z : ನಿನ್ನ ಕೈಗೆ ಕ್ಯಾಮೆರಾ ಬಂದಿದ್ದೇ ದೊಡ್ಡ ತಪ್ಪು.ಅದು ಬಂದ ಮೇಲೆ ನನ್ನ ಬಗ್ಗೆ ಒಂದು ಚೂರು attention ಕೊಡಲ್ಲ ನೀನು !

ನಾನು : ಹೊಟ್ಟೆ ಉರ್ಕೊಳ್ಳೋದು ಬಿಟ್ಟು ಮೊದಲು ವಿಡಿಯೋ ನೋಡು.








Z : ಹ್ಮ್ಮ್....

ನಾನು : ನನಗೆ ಒಂದು ಕ್ಷಣ ಎಲ್ಲರ ಜೀವನಾನೂ balancing act ಅಲ್ಲದೇ ಮತ್ತಿನ್ನೇನು ಅನ್ನಿಸಿಬಿಡ್ತು.

Z : ತ್ಚು ತ್ಚು ತ್ಚು....

ನಾನು : ಆಯ್ತ ಲೊಚಗುಟ್ಟಿದ್ದು ?

Z : ಹೂಂ...continue.

ನಾನು : ಅವಳು ಡಬ್ಬಗಳನ್ನ balance ಮಾಡ್ತಿದ್ಲು..ನಾವು ಜೀವನದಲ್ಲಿ ನಮ್ಮ priorities, requirements and commitments ನ balance ಮಾಡ್ತಿದಿವಿ ಅಲ್ವಾ ?

Z : ಒಹ್ಹೋ....ಇದು ನೀನು ಈ ರೂಟ್ ನಲ್ಲಿ ಬರ್ತಿದ್ಯಾ ?

ನಾನು : ಹೂಂ...

Z : ನಿಜ. life is all about maintaining balance...including bank balance !

ನಾನು : ಹೆಹೆಹೆ ! ನಾನು ಹೇಳಿದ್ದು ಹಂಗಲ್ಲ...

Z : ಗೊತ್ತು...ನಾನು ಸುಮ್ಮನೆ ಹೇಳ್ದೆ ಅಷ್ಟೆ. ನೀನು ಮುಂದುವರೆಸು.

ನಾನು : ನಾನು ಹಂಗೇ ಯೋಚನೆ ಮಾಡತೊಡಗಿದೆ. ಮುಂದೆ ನಾನು ಏನೇನೆಲ್ಲಾ balance ಮಾಡ್ಬೇಕಾಗತ್ತೆ..ಮನೆ, ಕೆಲಸ, ರಿಸರ್ಚು, ಬ್ಲಾಗು..ಯೋಚನೆ ಮಾಡ್ತಾ ಮಾಡ್ತಾ mild ಆಗಿ ಭಯ ಆಯ್ತು.

Z : ಎಷ್ಟಿತ್ತು Richter scale ನಲ್ಲಿ ?

ನಾನು : ನಾನು ಭೂಕಂಪ ಆಯ್ತು ಅಂದೆನಾ ? Richter scale ಅಂತೆ !

Z : ಭಯ ಆದ್ರೆ ಜನ ನಡುಗುತ್ತಾರೆ. ಭೂಮಿ ನಡುಗುವುದನ್ನ ಅಳೆಯುವುದಕ್ಕೆ ಮಾಪಕ ಇದೆ ಅಂತ ಆದ್ರೆ, ಮನುಷ್ಯರ ಭಯ ಅಳೆಯಲು ಅದನ್ನೇ ಬಳಸಬಾರದೇಕೆ ?

ನಾನು : ತಾಯಿ ಜಗಜ್ಜನನಿ ದುರ್ಗಾಪರಮೇಶ್ವರಿ !!!!!!!!!! Z..ದಯವಿಟ್ಟು ನಿನ್ನ ಅದ್ವಿತೀಯ ತಲೆ ನ ಉಪಯೋಗಿಸುವುದನ್ನ ನಿಲ್ಲಿಸುತ್ತೀಯಾ ?

Z : ಯಾಕೆ ?

ನಾನು : ಲೋಕದ ಆರೋಗ್ಯಕ್ಕೆ ಒಳ್ಳೆದಲ್ಲ.

Z : ಓಹ್...ಹೋಗ್ಲಿ ಬಿಡು..ಏನೋ ಪಾಪ ನೀನು ಕೇಳ್ತಿದ್ದೀಯಾ ಅಂತ ನಾನು ತಲೆ ಉಪಯೋಗಿಸೊಲ್ಲ.

ನಾನು : ಧನ್ಯೋಸ್ಮಿ. ಒಟ್ಟಿನಲ್ಲಿ ಮುಂದಿನ balancing act ನೆನಸಿಕೊಂಡು ಈಗಲೆ ತಲೆ ಭಾರವಾಗಿದೆ.

Z : Physics ಓದಿದ್ಯಲ್ಲಾ..ಉಪಯೋಗಿಸು ಅದನ್ನ. ಕಲಿ balance ಮಾಡೋದನ್ನ...ಅಷ್ಟೇ !

ನಾನು : ಕಷ್ಟ !

Z :ಅಸಾಧ್ಯ ಅಲ್ವಲ್ಲ...ನಿಧಾನಕ್ಕೆ ಎಲ್ಲಾ ಸಿದ್ಧಿಸತ್ತೆ. ನೀನು impatience ನ ಸ್ವಲ್ಪ ಕಡಿಮೆ ಮಾಡಿಕೊಂಡರೆ ಆಯ್ತು.

ನಾನು : :-(

Z :ಹ್ಯಾಪ್ ಮೋರೆ ಹಾಕೊಂಡ್ರೆ ಏನೂ ಪ್ರಯೋಜನ ಇಲ್ಲ.

ನಾನು : ಹಂಗಂತಿಯಾ ?

Z :ಹೂಂ..

ನಾನು : ಓಕೆ. balance ಮಾಡೋಕೆ, ಖುಷಿಯಾಗಿ ಇರೋಕೆ ಪ್ರಯತ್ನ ಪಡ್ತಿನಿ.

Z : :-)

ಉತ್ತರಾಯಣ ೩

ನಾನು: ಬೃಂದಾವನಕ್ಕೆ ಹೊರಡಲು ನಾಲ್ಕು ಘಂಟೆಯಷ್ಟೊತ್ತಿಗೆ ರೆಡಿ ಇರಬೇಕು ಎಂದು ಮ್ಯಾನೇಜರ್ ವೆಂಕಟೇಶ್ ಅವರು ಹೇಳಿದ್ದರು. ಇವರೆಲ್ಲರೂ ಊಟ ಮಾಡಿ, ಮಲಗಿ, ಎದ್ದು ರೆಡಿಯಾಗು...