Wednesday, July 30, 2008

one ekta kapoor serial got over ? ! ? ! ? !

Z : what ? ತಮಾಷೆ ಮಾಡ್ಬೇಡ !

ನಾನು : ನಿಜ್ ನಿಜ್ವಾಗ್ಲೂ Z ! ನನ್ನ ನಂಬು ! ನಿಜ್ವಾಗ್ಲೂ ಏಕ್ತಾ ಕಪೂರ್ banner ನ serial ಒಂದು ಮುಗಿದಿದೆಯಂತೆ. ಹಾಗಂತ ನೆನ್ನೆ star parivar awards ನಲ್ಲಿ ಹೇಳಿ, ಹೊಸ ಸೀರಿಯಲ್ ನವರನ್ನ ಸ್ವಾಗತ ಬೇರೆ ಮಾಡಿದ್ರು !

Z : ಯಪ್ಪ !!!! ಯಾವ್ ಸೀರಿಯಲ್ಲೇ ? ಯಾವಾಗ್ ಶುರುವಾಯ್ತು ?

ನಾನು : ನಾನು ಪಿಯೂಸಿ ನಲ್ಲಿ ಇದ್ದೆನಲ್ಲ... ಐ ಥಿಂಕ್ ಫಸ್ಟ್ ಪಿಯೂಸಿ, ಆಗ ಶುರುವಾದ ಸೀರಿಯಲ್ಲೇ ಈ " kasautii zindagi kay " ಎಂಬ ನಾಮಧೇಯ ಉಳ್ಳ ಕಣ್ಣೀರ ಕಥೆ.

Z : ಏಕ್ತಾ ಅಂದರೆ ಕಣ್ಣೀರೇ ಅಲ್ಲವೇ ?

ನಾನು : ಹೌದ್ ಹೌದ್. ಹೀರೋ handsome ! heroine ತಕ್ಕ ಮಟ್ಟಿಗೆ ಪರ್ವಾಗಿಲ್ಲ.ಈ ಸೀರಿಯಲ್ಲಿನ title song ತುಂಬಾ ಬರೀ ಕೆಂಪು ದುಪಟ್ಟಾಗಳೇ ಇತ್ತಾದ್ದರಿಂದ ನನಗದು ಸಖತ್ attractive ಆಗಿ ಕಂಡು, ನಾನು ಮೊದಲನೇ ಎಪಿಸೋಡನ್ನ ಬಹಳ ಆಸಕ್ತಿಯಿಂದ ವೀಕ್ಷಿಸಿದೆ. ರಿಪೀಟ್ ಟೆಲೆಕಾಸ್ಟ್ ಬೇರೆ ನೋಡಿದೆ !!!

Z : ಒಂದ್ ಸರ್ತಿ ತಲೆ ನೋವ್ ಬರೋದು ಸಾಲ್ದಂತ ರಿಪೀಟ್ ಟೆಲಿಕಾಸ್ಟ್ ಬೇರೆ ನೋಡ್ದ್ಯ ?

ನಾನು : ಹಾಗಲ್ಲ... studio, sets, interiors ಎಲ್ಲ ಚೆನ್ನಾಗಿತ್ತಾದ್ದರಿಂದ ಕೆಲವು color combinations, chandeliers, tables, tea pots, mantle pieces, phones, vases, ಇವೆಲ್ಲದರ ಬಣ್ಣ, ಗಾತ್ರ, ಮುಂತಾದವುಗಳನ್ನು ನೋಟ್ ಮಾಡಿಟ್ಟುಕೊಳ್ಳುತ್ತಿದ್ದೆ. ಜೀವನದಲ್ಲಿ ಮುಂದೆಂದಾದರೂ ಇವು ಉಪಯೋಗಕ್ಕೆ ಬರಬಹುದು ಅಂತ ನನಗೆ ಅನ್ನಿಸಿತ್ತು.

Z : ವಾಹ್ ವಾಹ್ ! ನೀನೋ...ನಿನ್ನ ತಲೆ ನೋ !!!

ನಾನು : ಅಲ್ವೆ...ಆ ಹೀರೋಯಿನ್ನು interior designer. ಹೀರೋ ಪೇಪರ್ ನಡೆಸುವವರೊಬ್ಬರ ಮಗ. family full journalists. ನನಗೆ ಇವೆರಡರಲ್ಲೂ ಸಖತ್ ಆಸಕ್ತಿ ಇದ್ದಿದ್ದರಿಂದ ಈ ಸೀರಿಯಲ್ಲನ್ನು ವೀಕ್ಷಿಸಲು ಶುರು ಮಾಡಿದೆ. ಮೂರು ತಿಂಗಳು ಬಹಳ interesting ಅಂತ ಅನ್ನಿಸಿದ ಈ ಕಥೆ, ನಂತರ ಯಥಾ ಪ್ರಕಾರ ಕಣ್ಣೀರಿನ ಕಥೆಯಾಯ್ತು. ನೋಡುವುದನ್ನು ಬಿಟ್ಟೆ.

Z : ಅದೇ love triangle, illegitimate children, middle class upper class bias etc etc...

ನಾನು : exactly. ಅದಾದಮೇಲೆ ಒಂದು ದಿನ ಕಾಲೇಜಿನಲ್ಲಿ ಈ ಸೀರಿಯಲ್ ಗೆ ಹೊಸ ಪಾತ್ರಧಾರಿಗಳು ಪ್ರವೇಶಿರುವುದು ತಿಳಿದುಬಂತು. ಮೊಬೈಲ್ ನಲ್ಲಿ ರೆಮೈಂಡರ್ ಸೆಟ್ ಮಾಡಿಕೊಂಡು ಸೀರಿಯಲ್ಲು ನೋಡಿದೆ. ಕಥಾಘಟ್ಟ ರೋಚಕವಾಗೇ ಇತ್ತು. ಮತ್ತೆ ಆರು ತಿಂಗಳು ನೋಡಿ, ಕಥೆ ನೀರಸವೆನಿಸಿದಾಗ ನೋಡುವುದನ್ನು ನಿಲ್ಲಿಸಿದೆ. ಅದಾದಮೇಲೆ ಒಂದು ವರ್ಷ ನಾನು ಆ ಸೀರಿಯಲ್ಲು ನೋಡಲೇ ಇಲ್ಲ.

Z : ಭೇಷ್ ! ಆಮೇಲೆ ?

ನಾನು : ಆಮೇಲೆ ನಮ್ಮ ಮನೆಗೆ ಪೈಂಟ್ ಮಾಡಿಸಬೇಕಾದ ಸಂದರ್ಭ ಬಂದೊದಗಿತು. ನಾನು ಈ ಸೀರಿಯಲ್ಲಿನ ತರಹ ನೇ ಪೈಂಟ್ ಮಾಡಿಸಬೇಕೆಂದು ಸಲಹೆ ಹಿಡಿದೆ. ನಮ್ಮ ತಂದೆ ತಾಯಿ ಅದು ಸ್ಟುಡಿಯೋ ಎಂದು ಕೋಟಿ ಸರ್ತಿ ಹೇಳಿದರೂ ಕೇಳದೇ ಟ್ರೈ ಮಾಡುವುದರಲ್ಲಿ ತಪ್ಪೇನೆಂದು ಕೇಳಿ, creativity important ಎಂದು ಭಾಷಣ ಬಿಗಿದೆ. ಸರಿ ಅದೇನು ಬೇಕೋ ನಮಗೆ ಮೊದಲು ಹೇಳಿ ತೋರಿಸು ಅಂತಂದರು. ನಾನು ಪುಟಗಟ್ಟಲೆ ಮಾಡಿಟ್ಟಿದ್ದ ನೋಟ್ಸು ಸಾಮಾನು ಪ್ಯಾಕ್ ಮಾಡುವ ತರಾತುರಿಯಲ್ಲಿ ಕಳೆದುಹೋಗಿದ್ದವು. ಸರಿ ನಾನು ಆ ಸೀರಿಯಲ್ಲು ಹೇಗೂ ಬೇಗ ಮುಂದೆ ಹೋಗಿರಲ್ಲ...ಮೆಗ ಎಂದರೆ ಅದೇ ಅಲ್ಲವೇ ಅರ್ಥ.. "ಮೆ"ಲ್ಲ "ಗ"ತಿಯ ಸೀರಿಯಲ್ಲು ?? ನೋಡಿ ಮತ್ತೆ ಮಾಡಿದರಾಯ್ತು ಎಂದು ಟಿ ವಿ ಆನ್ ಮಾಡಿದೆ...


Z : ದೆ ... ?

ನಾನು : situation totally changed !! including settings ! ಸೀರಿಯಲ್ಲಿನ ಪಾತ್ರಧಾರಿಗಳು ನನ್ನ ನಿರೀಕ್ಷೆಯನ್ನು ಹುಸಿಯಾಗಿಸಿ ಎಂಟು ವರ್ಷ ಮುಂದೆ ಹೋಗಿದ್ದರು !! ಕಥೆಯ ಮಕ್ಕಳು ಶಾಲೆಗೆ ಹೋಗಲು ಪ್ರಾರಂಭಿಸಿದ್ದರು. ಯಾರು ಯಾರ/ಯಾರೊಬ್ಬರ ಮಕ್ಕಳು ಎಂದು ತಿಳಿಯಲು ನಾನು ನನ್ನ ಹತ್ತಾರು ಸ್ನೇಹಿತರಿಗೆ ಫೋನ್ ಮಾಡಬೇಕಾಯ್ತು. ಹೊಸ ಸೆಟ್ ಒಂದು ಚೂರೂ ಚೆನ್ನಾಗಿರಲಿಲ್ಲವಾದ್ದರಿಂದ ನಾನು ನಮ್ಮ ತಂದೆ ತಾಯಿಗೆ ನಿಮ್ಮಿಷ್ಟ ಬಂದ ಹಾಗೆ ಮಾಡಿಸಿ ಎಂದು ಹೇಳಿ ಸುಮ್ಮನಾದೆ. ಆದರೆ ಸೀರಿಯಲ್ಲಿನಲ್ಲಿ ಒಂದೊಂತೂ ಮುಂದೆ ಹೋಗಿರಲಿಲ್ಲ.

Z : ಏನು ?

ನಾನು : ಒಂದು ಡೈಲಾಗ್ : " main tumse tab bhi pyaar karti thi, ab bhi pyaar karti hoon or zindagii bhar karti rahoongi, chahe mujhe iske liye lakhO kasautiiyOn ka saamna kyon na karna paDE...pyaar se main har kasautii par khari utroongi, yeh mera atoot vishwaas hai ! is parivaar ko main bikharne nahi doongi ! ....."

ನಾನು ಈ ಡೈಲಾಗ್ ಇಂದ ಬೇಸತ್ತು ನೋಡುವುದನ್ನು ನಿಲ್ಲಿಸಿದ್ದೆ...ಆ ಡೈಲಾಗ್ ಹಾಗೇ ಇತ್ತು...ನಾನು ಮತ್ತೆ ನೋಡಲು ಪ್ರಾರಂಭಿಸಿದಾಗಲು ! ಅಂದಿನಿಂದ ಈ ಸೀರಿಯಲ್ಲು ನೋಡುವುದನ್ನು ನಿಲ್ಲಿಸಿದ್ದೆನಾದರೂ, ಒಂದುವರೆ ವರ್ಷಕ್ಕೆ ಒಮ್ಮೆ ಒಂದು ವಾರ ತಪ್ಪದೇ ಸೀರಿಯಲ್ಲು ನೋಡುತ್ತಿದ್ದೆ. ಆಗ ಕಥೆ ಎಲ್ಲಿಗೆ ಬಂದು ತಲುಪಿದೆ ಎಂದು ತಿಳಿಯುತ್ತಿತ್ತಾದರೂ, ಯಾರು ಯಾರನ್ನ ಎಷ್ಟು ಸಲ ಮದುವೆಯಾಗಿ ಡೈವರ್ಸ್ ಮಾಡಿದರು, ಯಾರು ಎಷ್ಟು ಸಲ ಸತ್ತು ಬದುಕಿ ಬಂದರು ಎಂದು ತಿಳೀಯುವುದಕ್ಕೆ ನನ್ನ ಸ್ನೇಹಿತರ ಸಹಾಯ ಬೇಕೇ ಬೇಕಾಗಿತ್ತು. ಅಮ್ಮ, ಅಣ್ಣ ಮತ್ತು ಅಪರ್ಣ ಕೆಲವು ಸೀರಿಯಸ್ ಪ್ರಶ್ನೆ ಕೇಳಿ ನನ್ನ ತಲೆ ಕೆಡಿಸಿದ್ದರು :

ಅಮ್ಮ : ( vamp ಗಳನ್ನು ನೋಡಿ) ಯಾರಿವರೆಲ್ಲಾ ? ಅಶೋಕವನದ ಅಸುರಸೇನೆಯೋ ?

ಅಣ್ಣ : ನೋಡಿದರೆ ದುಡ್ಡಿಲ್ಲ ಅಂತಿರ್ತಾರೆ, ಒಂದ್ ಸರ್ತಿ benz ಇನ್ನೊಂದ್ ಸರ್ತಿ skoda ಓಡ್ಸ್ತಾರೆ ? ಹೇಗೆ ?ಅದಿರ್ಲಿ...ದುಡ್ಡೇ ಇಲ್ದೇ ಇದ್ರೆ ಇವ್ರು ಮೇಕಪ್ ಗೆ ಹೇಗೆ ಹೊಂದುಸ್ತಾರೆ ದುಡ್ಡ್ ನ ?

ಅಪರ್ಣ : ಅಲ್ವೇ ? chandelier earrings ಹಾಕೊಂಡು ಈ ಥರ dance ಮಾಡಿ, ಕೋಪಗೊಂಡು, ಕಪಾಳಕ್ಕೆ ಹೊಡೆದು/ಹೊಡೆಸಿಕೊಂಡರೆ ಕಿವಿ ಹರ್ದೊಗಲ್ವ ?

ಇವ್ಯಾವುದಕ್ಕೂ ನನಗೆ ಉತ್ತರ ಸಿಕ್ಕಿಲ್ಲ...ಇನ್ನೂ !!!

Z : correct ಆಗಿ ಕೇಳಿದ್ದಾರೆ ! clap clap !!

ನಾನು : ಈ ಪ್ರಶ್ನೆಗಳ ಮೂಲಕ ನನ್ನ ಮುಖಭಂಗವಾದ ಮೇಲೆ ನಾನು ಈ ಸೀರಿಯಲ್ಲು ನೋಡುವುದೇ ಇಲ್ಲ ಎಂದು ದೃಢನಿರ್ಧಾರ ಮಾಡಿದ ಒಂದು ವಾರಕ್ಕೇ ನನ್ನ ಸ್ನೇಹಿತೆ ಫೋನ್ :

"ಲಕ್ಷ್ಮೀ... kasautii has gone 20 years ahead in time ! "

ಮರುಮಾತಾಡದೇ ಫೋನ್ ಕುಕ್ಕಿ ಟಿವಿ ಆನ್ ಮಾಡಿದೆ. ನನ್ನ ಕಣ್ಣು ನಾನೇ ನಂಬಲಾಗಲಿಲ್ಲ. ದೊಡ್ಡವಾರಗಬೇಕಿದ್ದವರ ಯಾರ ಕೂದಲೂ ಬೆಳ್ಳಗಿರಲಿಲ್ಲ. ಚಿಕ್ಕವರು ವಯಸ್ಸಾದವರಂತೆ ಕಾಣುತ್ತಿದ್ದರು. ದೊಡ್ಡವರೆಲ್ಲ ಕನ್ನಡಕ ಹಾಕಿದ್ದರಷ್ಟೆ. ಸಿಕ್ಕಾ ಪಟ್ಟೆ ಕೋಪ ಬಂದು ಟಿವಿ ಆಫ್ ಮಾಡಿ ನಾಳೆ ಕಾಲೇಜಿನಲ್ಲಿ ಲಂಚ್ ಟೈಮ್ ನಲ್ಲಿ ವಾದಕ್ಕೆ ನಿಲ್ಲೋದೆ ಎಂದು ನಿರ್ಧರಿಸಿದೆ.

ಕಾಲೇಜಿಗೆ ಬಂದ ಮೇಲೆ, ಲಂಚ್ ಟೈಮ್ ಗಿಂತ ಮುಂಚೆಯೇ ಚರ್ಚೆ ಸಾಗಿತ್ತು. makeover ಮಾಯೆಗಳೂ...ಪಾತ್ರಧಾರಿಗಳ ಗಲಾಟೆಗಳೂ...ಆಗ ನನಗೆ ತಿಳಿಯತೊಡಗಿದವು. ಈ ಹಂತದಲ್ಲಿನ ಸೀರಿಯಲನ್ನು ಕನಿಷ್ಟ ಪಕ್ಷ ಒಂದು ತಿಂಗಳಾದರೂ ನೋಡಲೇಬೇಕೆಂದು ತೀರ್ಮಾನಿಸಿದೆ.

Z : ಮತೆ ಆಗ ಮಾಡಿದ್ದ ದೃಢನಿರ್ಧಾರ ?

ನಾನು : ಗಾಳಿಗೆ ತೂರಿಬಿಟ್ಟೆ. ಒಂದು ತಿಂಗಳಾದ ಮೇಲೆ ನೋಡುವುದನ್ನು ನಿಲ್ಲಿಸಿದೆ...ಪರೀಕ್ಷೆ ಅಂತ. ಅದಾದಮೇಲೆ ನಾನು ಸೀರಿಯಲ್ಲು ನೋಡಿದ್ದು ಎಮ್.ಎಸ್ಸಿಯ ಮೊದಲ ಸೆಮೆಸ್ಟರ್ ನಲ್ಲೇ...

Z : ಏನ್ ನಡಿತಿತ್ತು ಆಗ ?

ನಾನು : ಅಜ್ಜಿಯ ಮತ್ತು ಮೊಮ್ಮೊಗಳ ಮದುವೆ.


Z : what ? !!!!!!!!!!!!!!!!!!!!!!!!!!!!!

ನಾನು : ಹೂ...ಗಾಬ್ರಿ ಆಗ್ಬೇಡಾ...ನಿಜ್ವಾದ್ ಸತ್ಯ ಇದು. ಅಜ್ಜಿಗೆ ತನ್ನ ಮೊದಲ ಪ್ರೇಮಿ ೨೫ ವರ್ಷ ಆದ್ಮೇಲೆ ಸಿಕ್ಕಿರುತ್ತಾನೆ. ಪ್ರೇಮಿಯ ನಾಲ್ಕನೇ ಹೆಂಡ್ತಿಯ ಮೊಮ್ಮಗನನ್ನು ಪ್ರೇಯಸಿಯ ಎರಡನೇ ಗಂಡನ ಮೂರನೇ ಮೊಮ್ಮಗಳು ಪ್ರೀತಿಸುತ್ತಿರುತ್ತಾಳೆ. ಪ್ರೇಮಿಯ ಹೆಂಡತಿ ಮತ್ತು ಪ್ರೇಯಸಿಯ ಗಂಡ ಸತ್ತುಹೋಗಿರುತ್ತಾರಾದ್ದರಿಂದ ಇವ್ರ ಮದ್ವೇ ನೂ ಆಗ್ತಿರತ್ತೆ, ಮೊಮ್ಮೊಕ್ಕಳ ಮದುವೆಯ ಜೊತೆಯಲ್ಲಿ.

Z : ಶಿವನೇ !!!!!


ನಾನು : ಇಲ್ಲಾ...ಇನ್ನು ಮುಗ್ದಿಲ್ಲಾ...ಅಜ್ಜಿಗೆ ತಾಳಿ ಬೀಳುವ ಸಮಯದಲ್ಲಿ ಎರಡನೇ ಗಂಡ ಬದುಕಿ ಬರುತ್ತಾನೆ !

Z : no...........I cannot tolerate this any further !

ನಾನು : nor could I. ಅದಾದ ಮೇಲೆ ನಿಜವಾಗಿಯೂ ಈ ಸೀರಿಯಲ್ಲಿನ ಕಡೆ ತಲೆ ಎತ್ತಿಯೂ ನೋಡಲಿಲ್ಲ.ನೆನ್ನೆಯೇ ನನಗೆ ಗೊತ್ತಾಗಿದ್ದು ಸೀರಿಯಲ್ಲು ಮುಗಿದಿದೆ ಅಂತ.

Z : ಸದ್ಯ...what a relief !

ನಾನು: ನಿಜ್ವಾಗ್ಲೂ...ನನ್ನ ಜೀವಿತಾವಧಿಯಲ್ಲಿ ಯಾವ ಏಕ್ತಾ ಕಪೂರ್ ಸೀರಿಯಲ್ಲೂ ಮುಗಿಯುವುದಿಲ್ಲ ಎಂದು ಬಲವಾಗಿ ನಂಬಿದ್ದ ನಾನು ಕಡೆಗೆ ಒಂದು ಸೀರಿಯಲ್ಲು ಮುಗಿದ ಸುದ್ದಿ ಕೇಳಿ ಬಹಳ ಸಂತೋಷಿಸಿದೆ !

Z : ಹೆ ಹೆ ಹೆ !!! ಅತ್ಮತೃಪ್ತಿ ಆಯ್ತ ?

ನಾನು : ಹೂ !!! ಇನ್ನು ಯಾವ ಸೀರಿಯಲ್ಲೂ ನೋಡಲ್ಲ ಅಂತ Decide ಮಾಡಿದ್ದೇನೆ.

Z : lets see how long will the decision remain firm.

ನಾನು : ಏನಿಲ್ಲ...ನೋಡಲ್ಲ ಅಂದಮೇಲೆ ನೋಡಲ್ಲ. ಆದರೂ ಈ ಸೀಯಲ್ಲಿನ ಬಗ್ಗೆ ನನ್ನ ಕೆಲವು ಪ್ರಶ್ನೆಗಳು ಪ್ರಶ್ನೆಗಳಾಗಿಯೇ ಉಳಿದವು.
ಅವೇನಪ್ಪಾ ಅಂದರೆ :

೧. ಹೀರೋ ಹೀರೋಯಿನ್ನು ಎಷ್ಟು ಸಲ ಮದುವೆಯಾಗಿ ಡೈವರ್ಸ್ ಆದರು ?
೨. ಮೊಮ್ಮಕ್ಕಳ ಸಂಖ್ಯೆ ಎಷ್ಟು ?
೩. ನಿಂತ ಮದುವೆಗಳ ಖರ್ಚು ನಿಭಾಯಿಸಿದವರು ಯಾರು ?
೪. vamp ಹತ್ತಿರ ಕೃತ್ರಿಮ ಕೆಲ್ಸ ಮಾಡಿಲು ದುಡ್ಡು ಎಲ್ಲಿಂದ ಬರುತ್ತಿತ್ತು...ಅವಳು ಎಲ್ಲೂ ಕೆಲಸ ಮಾಡುತ್ತಿರಲಿಲ್ಲ, ಬಡವಳು ಬೇರೆ ? ಮಾತೆತ್ತಿದರೆ ಲಕ್ಷಗಳೇ !!
೫. ತಾತಂದಿರು ಮಾತ್ರ ಸತ್ತು ಅಜ್ಜಿಯರು ಹೇಗೆ ಬದುಕುತ್ತಿದ್ದರು ? ಅದು ನೂರಾರು ವರ್ಷ ? ಏನು ತಿನ್ನುತ್ತಿದ್ದರು ಅಂತ?
೬. ಆಸ್ಪತ್ರೆಯ icu ಗಳಲ್ಲಿ ೬೬ ಜನರ ಪರಿವಾರ ನಿಲ್ಲಬಹುದೇ ?
೭. interior course ಮಾಡಿದ್ದ ಹುಡುಗಿ ಸಡನ್ನಾಗಿ ಬ್ಯಿಸಿನೆಸ್ ಮ್ಯಾಗ್ನೆಟ್ ಹೇಗಾದಳು ?

Z : ತಲೆ ಕೆಡ್ಸ್ಕೋಬೇಡಾ ಸುಮ್ನಿರು. ಸದ್ಯ ಗೊಡವೆ ಮುಗಿತಲ್ಲ....

ನಾನು : ಆದರೂ ಇದ್ಯಾವ್ದನ್ನೂ ಹೇಳದೇ ಸೀಯಲ್ಲು ಮುಗಿಸಬಾರ್ದಿತ್ತು. ಆದ್ರೂ ಮುಗ್ದಿದ್ದಕ್ಕೆ ಸಂತೋಷ ನೇ !! :)

Z : majaa maadi !

:) :) :) ಅಂತು ಇಂತು...ಸಿರಿಯಲ್ಲು ಮುಗಿತು..ಒಂದು ಜಡಿಮಳೆಯಾ ಸೀಸನ್ನಿನಂತೆ !!!

Saturday, July 26, 2008

ಸತ್ತ ಲಕ್ಷ್ಮಿ ನಾನಲ್ಲ !

ನಾನು : ನಾನು ಬದುಕಿದ್ದೇನೆ...ಚೆನ್ನಾಗೇ ಇದ್ದೇನೆ. ನೆನ್ನೆ ಬ್ಲಾಸ್ಟ್ ನಡೆದ ಯಾವ ಜಾಗದಲ್ಲೂ ನಾನಿರಲಿಲ್ಲ.

Z : ಇದನ್ನ ಇಷ್ಟು explicit ಆಗಿ proclaim ಮಾಡುತ್ತಿರುವ ಕಾರಣ, ಉದ್ದೇಶ ?

ನಾನು : ಕಾರಣ ಇದೆ. ಕೇಳಿದರೆ ನಿನಗೆ ಏನನ್ನಿಸತ್ತೋ ಗೊತ್ತಿಲ್ಲ. ಮತ್ತೆ ಇನ್ಯಾರೂ ನನಗೆ ಫೋನ್ ಮಾಡಿ "ಎಲ್ಲಿದಿಯಾ ? ಬದುಕಿದ್ದೀಯ ಸತ್ತಿದ್ದೀಯ ? " ಅಂತ ಮತ್ತೊಮ್ಮೆ ಕೇಳದಿರಲಿ ಅಂತ ಹೀಗ ಘೋಷಣೆ ಮಾಡುತ್ತಿದ್ದೇನೆ.

Z : ಏನಂಥಾ ಕಾರಣ ?

ನಾನು : ನೆನ್ನೆ ನನಗೆ ಕಾಲೇಜಿನಲ್ಲಿ ಸಲ್ಪ ಕೆಲಸವಿತ್ತು. ಹೋಗಿದ್ದೆ. ಹೋದವಳು ಜಯನಗರ ನಾಲ್ಕನೇ ಬ್ಲಾಕಿಗೆ ಹೋಗದೇ ಇರಲಾಗಲಿಲ್ಲ. ತಿರುಗಾಡಲು ಹೋದೆ. ಅಚಾನಕ್ಕಾಗಿ ಬಿ.ಎಸ್ಸಿ ಯ ಗೆಳೆಯನೊಬ್ಬ, ಅವನೂ ಕ್ರೈಸ್ಟ್ ಕಾಲೇಜಿನಲ್ಲಿ ಭೌತಶಾಸ್ತ್ರ ಎಮ್.ಎಸ್ಸಿ ಮಾಡಿ ಮುಗಿಸಿದ್ದ ಇದೇ ವರ್ಷ...ಅವನು ಸಿಕ್ಕಿದ. ನಾವಿಬ್ಬರೂ ನಮ್ಮ ಎಮ್ಮೆಸ್ಸಿಯ ಸುಖ ದುಃಖ ಹಂಚಿಕೊಳ್ಳುತ್ತಾ fourth block ನಲ್ಲಿ ಎರಡು ಗಂಟೆಗಳ ಕಾಲ ನಿಂತೇ ಮಾತಾಡಿದೆವು. ನಂತರ ಕಾಂಪ್ಲೆಕ್ಸಿನಲ್ಲಿ ಬಂದಿರುವ ಹೊಸ ವಸ್ತುಗಳನ್ನೆಲ್ಲಾ ವೀಕ್ಷಿಸಿ, ಹಣದುಬ್ಬರದಿಂದ ದೇಶ ಕೆಟ್ಟು ಕುಲಗೆಟ್ಟು ಹಾಳಾಗೋಗಿದೆ ಅನ್ನೋ conclusion ಗೆ ಬಂದ ನಂತರ ಸೌತ್ ಎಂಡ್ ಸರ್ಕಲ್ಲಿನ ಸಿಟಿ ಸೆಂಟ್ರಲ್ ಲೈಬ್ರರಿ ಗೆ ಪಾದ ಬೆಳೆಸಿದೆ, ಮೆಂಬರ್ ಆಗಲಿಕ್ಕೆ ಅಪ್ಲಿಕೇಷನ್ ಫಾರಂ ಬೇಕಿತ್ತು, ನನಗೆ ಮತ್ತು ನನ್ನಿಬ್ಬರು ಸ್ನೇಹಿತೆಯರಿಗೆ . ಆ ಕೆಲಸವೂ ಹತ್ತು ನಿಮಿಷದಲ್ಲಿಯೇ ಮುಗಿಯಿತು. ನಂತರ ನಾನು ವರ್ಲ್ಡ್ ಕಲ್ಚರ್ ಲೈಬ್ರರಿಗೆ ಪುಸ್ತಕಗಳನ್ನು ಹಿಂದಿರುಗಿಸಲು ಅಲ್ಲಿಗೆ ಹೋದೆ. ಅಲ್ಲಿದ್ದ ಲೈಬ್ರರಿಯನ್ ಆಂಟಿ ನನಗೆ ತುಂಬಾ ಚೆನ್ನಾಗಿ ಪರಿಚಯ. ನಾನು ಬಂದದ್ದೇ ಅವರು, ಹುಷಾರಾಗಿ ಮನೆಗೆ ಹೋಗು, ಮನೆಗೆ ಹೋದ ಮೇಲೆ ಫೋನ್ ಮಾಡು, ಬಾಂಬ್ ಬ್ಲಾಸ್ಟ್ ಆಗಿದೆ ನಾಯಂಡಹಳ್ಳಿಯಲ್ಲಿ...ನಿಮ್ಮ ಮನೆ ಕಡೆ ಜಾಮ್ ಆಗಿರತ್ತೆ...ಜೋಪಾನ ಅಂದರು. ಅವರು ಸದಾಕಾಲ ತಮಾಷೆ ಮಾಡುತ್ತಿದ್ದರು. ನಾವಿಬ್ಬರು ಪಿಸುಮಾತಿನಲ್ಲೆ ಗಂಟೆಗಟ್ಟಲೆ ಪಟ್ಟಾಂಗ ಹೊಡೆಯುವಂಥವರು. ಇವತ್ತೂ ಹಾಗೆ ಮಾಡುತ್ತಿದ್ದಾರೆಂದು ಭಾವಿಸಿದ ನಾನು ನಕ್ಕೆ. ಅವರು ನಗದಿದ್ದದ್ದು ನನಗೆ ಆಶ್ಚರ್ಯ ತಂತಾದರೂ ನಾನು ಏನಾದರೂ ಸರಿ ಇವತ್ತು ಲಂಕೇಶರ ಮುಸ್ಸಂಜೆಯ ಕಥಾ ಪ್ರಸಂಗನ್ನು ಹುಡುಕಿ ತೆಗೆದುಕೊಳ್ಳಲೇಬೇಕೆಂದು ಧೃಡನಿರ್ಧಾರ ಮಾಡಿದ್ದೆನಾದ್ದರಿಂದ ಆ ಕಡೆ ಗಮನ ಹರಿಸಿದೆ. ಸದ್ಯ ಪುಸ್ತಕ ಸಿಕ್ಕಿತು. ಪಕ್ಕದಲ್ಲೇ ಕುವೆಂಪುರವರ ಕಾನೂರು ಹೆಗ್ಗಡತಿಯೂ ಕಣ್ಣಿಗೆ ಬಿತ್ತಾದ್ದರಿಂದ ಎರಡನ್ನೂ ಇಷ್ಯೂ ಮಾಡಿಸಿಕೊಂಡ ನಾನು ಅಲ್ಲಿಂದ ಅವರ ಮತ್ತೊಂದು ಜೋಪಾನ ಎಂಬ ಎಚ್ಚರಿಕೆಯನ್ನು ಗಂಭೀರವಾಗಿ ಪರಿಗಣಿಸದೇ ಹೊರಬಿದ್ದೆ. ನಾನು ನನ್ನದೇ ಲಹರಿಯಲ್ಲಿ ಇದ್ದೆನಾದ್ದರಿಂದ, ಲೈಬ್ರರಿಯ ಹೊರಗೆ ಜನರು ಗುಂಪುಕಟ್ಟಿಕೊಂಡು ಪಿಸುಗುಟ್ಟುತ್ತಿದ್ದುದ್ದು ಹೆಚ್ಚು ಕುತೂಹಲಕಾರಿಯಾಗಿ ನನಗನ್ನಿಸದೇ, ಗಾಂಧಿ ಬಜಾರಿನ ಟ್ರಾಫಿಕ್ ಜಾಮು ನನ್ನ ಗಮನ ಸೆಳೆಯದೇ ಹೋದವು. ರಾಮಕೃಷ್ಣ ಆಶ್ರಮದ ಬಸ್ ಸ್ಟಾಪ್ನಲ್ಲಿ ಹಿರಣ್ಮಯಿ ಗಲಾಟೆ ಶುರುಮಾಡಿದಳು. ನೋಡಿದರೆ ಅಣ್ಣನ ಫೋನ್. ಅದೂ ಅವರು ಎಂದೂ ಉಪ್ಯೋಗಿಸದ ಆಫೀಸಿನ airtel landline number ಇಂದ. ನನಗೆ ಎತ್ತಿದ್ದೇ ಗಾಬರಿಯಾಯ್ತು. ಅಣ್ಣ ಯಾವತ್ತು ನನಗೆ ಫೋನ್ ಮಾಡಿದವರೇ ಇಲ್ಲ...ಅದೂ ಇಳಿ ಸಂಜೆ ನಾಲ್ಕಕ್ಕೆ ! ಯಾವಾಗಲೂ ನಾನೇ ಅಣ್ಣನಿಗೆ ಫೋನ್ ಮಾಡುತ್ತಿದ್ದವಳು. ನಮ್ಮ ಮನೆಯಲ್ಲಿ ಒಂದು ಅಲಿಖಿತ ನಿಯಮವಿದೆ. ಹೊರಗಿರುವಾಗ ಯಾರು ಯಾರಿಗೂ ಫೋನ್ ಮಾಡದೇ ಇದ್ದರೆ ಎಲ್ಲರೂ ಕ್ಷೇಮ ಎಂದು ಅರ್ಥ. ಫೋನ್ ಮಾಡಿದರೆ ತೊಂದರೆ ಎಂದು ಅರ್ಥ ಮಾಡಿಕೊಳ್ಳಬೇಕು. ಫೋನ್ ರಿಸೀವ್ ಮಾಡಿದೆ.

ಅಣ್ಣ: " ಎಲ್ಲಿದ್ದೀಯಾ ?"

ನಾನು : ರಾಮಕೃಷ್ಣ ಆಶ್ರಮ.

ಅಣ್ಣ : ಸರಿ ಬೇಗ ಹೋಗಿ ಮನೆ ಸೇರ್ಕೊ.

ನಾನು : ಯಾಕೆ ?

ಅಣ್ಣ : ಏನಿಲ್ಲ, ಸುಮ್ನೆ.

ನಾನು : ಆಫೀಸಿನಲ್ಲಿ ಏನಾದ್ರೂ ಕೆಲ್ಸ ಇದ್ಯಾ ನಂಗೆ ?

ಅಣ್ಣ : ಇಲ್ಲ. ಬೇಗ ಸಿಗೋ ಬಸ್ಸು ಹತ್ತಿ ಮನೆ ಸೇರ್ಕೊ.

ನಾನು ಮುಂದೆ ಮಾತಾಡುವ ಮೊದಲೇ ಫೋನ್ ಇಟ್ಟರು.

Z : ಅಣ್ಣ ಹೀಗೆ ಹೇಳಿದ್ದು ತುಂಬಾ ಆಶ್ಚರ್ಯಕರ ಅಲ್ವ ?

ನಾನು : ಹೂ...ಇವರೇಕೆ ಇಷ್ಟು ಗಾಬರಿಯಾದರೆಂದು ಯೋಚಿಸುತ್ತಿರುವಾಗಲೇ ನನ್ನ ಕಸಿನ್ನಿಂದ ಎಸ್ ಎಮ್ಮೆಸ್ ಬಂತು.
" lakshmi where are you ? didn’t you get the news ? bomb exploded near richmond circle and mysore road..please reach home wherever you are. be careful yaar " ಅಂತ. ನಾನಿದೊಂದು ಜೋಕಿನ ಫಾರ್ವರ್ಡ್, hoax message ಎಂದು ಮತ್ತೆ ignore ಮಾಡಿದೆ. ನನಗೆ ಅಣ್ಣನ ಫೋನಿನ ಉದ್ದೇಶ ಅರ್ಥ ಆಗದೇ ಆಗಲೇ ತಲೆ ಕೆಟ್ಟಿತ್ತು. ಸಾಲದೆಂಬಂತೆ ನನ್ನ ಕಸಿನ್ನಿಗೆ ನಾನೇನೂ ರಿಪ್ಲೈ ಮಾಡದಿದ್ದುದನ್ನು ನೋಡಿ ನನ್ನ ಸೋದರಮಾವ ಫೋನೇ ಮಾಡಿಬಿಟ್ಟರು. ಅಣ್ಣನ ಫೋನೇ ಅರ್ಥವಾಗದ ಕಗ್ಗಂಟಾಗಿದ್ದಾಗ ಮಾವನ ಫೋನ್ ನೋಡಿ ನನಗೆ ಎರಡು ಅನುಮಾನ ಬಂದಿತು : ಒಂದು - ಅಮ್ಮನಿಗೇನೋ ಆಗಿದೆ, ಎರಡು- ಅಮ್ಮನಿಗೇನೋ ಆಗಿದ್ದು ಕೇಳಿ ದಾವಣಗೆರೆಯ ನನ್ನ ಹಾರ್ಟ್ ಪೇಷೆಂಟ್ ಅಜ್ಜಿಗೇನೋ ಆಗಿದೆ ಎಂದು ವಿಪರೀತ ಗಾಬರಿ ಆಯ್ತು. ಅದಕ್ಕೆ ಅಣ್ಣ ನನ್ನನ್ನ ಬೇಗ ಮನೆ ಸೇರ್ಕೋ ಅಂದರೋ? ಏನಾದರೂ ಆಗಿದ್ದಿದ್ದರೆ ಅಣ್ಣ ಮೊದಲೇ ಮನೆ ಸೇರಿ ಮನೆಗೆ ಬಾ ಎಂದು ಕರೆಯುತ್ತಿದ್ದರು. ಸೇರ್ಕೋ ಎಂಬ ಪದ ಯಾಕೆ ಉಪಯೋಗಿಸಿದರು ? ಇಷ್ಟೆಲ್ಲ ಯೋಚನೆಗಳು ತಲೆಯಲ್ಲಿ ಗಿರ್ಕಿ ಹೊಡಿಯುತ್ತಿರುವಾಗಲೇ ಫೋನ್ ಎತ್ತಿದೆ.

ನಾನು : ಹಲೋ ಮಾವ ? ಏನಾಯ್ತು ?

ಅವರು : ಎಲ್ಲಿದಿಯ ?

ನಾನು : ಈಗ ಬಸ್ಸು ಹತ್ತುತ್ತಿದ್ದೇನೆ ರಾಮಕೃಷ್ಣ ಆಶ್ರಮದಲ್ಲಿ.

ಅವರು: ಏನ್ ಬಂತು ನಿಂಗೆ ಅಲ್ಕೊಂಡು ಈಥರ ? ಗೊತ್ತಿಲ್ಲ ? ಬಾಂಬ್ ಬ್ಲಾಸ್ಟ್ ಆಗಿದೆ. TV9 ನಲ್ಲಿ ಲಕ್ಷ್ಮಿ ಮೃತಪಟ್ಟ ಮಹಿಳೆ ಅಂತ ತೋರ್ಸಿದ್ದನ್ನ ನೋಡಿ ದಾವಣಗೆರೆಯಲ್ಲಿ ಅಜ್ಜಿ ಮತ್ತು ನಿನ್ನ ಸೋದರ ಮಾವ ವಿಪರೀತ ಗಾಬರಿಯಾಗಿದ್ದಾರೆ. ಅಮ್ಮ ಅಣ್ಣನ ಫೋನ್ ಸಿಕ್ತಿಲ್ಲ. ಎಲ್ರೂ ಗಾಬ್ರಿಯಾಗಿದ್ದಾರೆ...ಎಲ್ಲಿ ಎಲ್ಲಾರು ?

ನಾನು : ನಾನು ಬದುಕಿದ್ದೇನೆ ಮಾವ. ನನಗೇನೂ ಆಗಿಲ್ಲ. ಚೆನ್ನಾಗೇ ಇದ್ದೇನೆ. ಬ್ಲಾಸ್ಟ್ ಆದ ಜಾಗದಲ್ಲಿ ನಾನಿರಲಿಲ್ಲ. ಈಗ ಬಸ್ಸಿನಲ್ಲಿ ಕೂತಿದ್ದೇನೆ. ಅಣ್ಣ safe. ಈಗಷ್ಟೆ ಫೋನ್ ಮಾಡಿದ್ದರು. ಅಮ್ಮಂಗೆ try ಮಾಡಿ ನಿಮಗೆ ಫೋನ್ ಮಾಡಲು ಹೇಳುವೆ.

ಅವರು : ಎಲ್ಲಿಗೆ ಹೋಗಿದ್ದೆ ? ಪಿ ವಿ ಆರ್ ನಲ್ಲಿ ಪಿಕ್ಚರ್ ನೋಡಕ್ಕೆ ಹೋಗಿದ್ಯ ?ಅಪ್ಪಿ ತಪ್ಪಿ ನೂ ಇನ್ನು ಮೂರ್ ತಿಂಗಳು ಅಲ್ಲಿ ಕಾಲ್ ಇಡ್ಬೇಡಾ...ಕೆಂಗೇರಿಯ ನಿನ್ನ ಡೆಪಾರ್ಟ್ಮೆಂಟ್ ಕಡೆ ದಿಂಬು ಹಾಕಿಕೊಂಡು ಮಲಗಬೇಡಾ...ಗೊತ್ತಾಯ್ತು ? ಶಾಪಿಂಗ್, ಸೈಟ್ ಸೀಯಿಂಗ್ ಅಂತ ಎಲ್ಲು ಹೊರಗೆ ಕಾಲಿಡ್ಬೇಡಾ ಒಂದು ವಾರ. ತಿಳ್ಕೋ... ಸರಿ ನಿಮ್ಮಮ್ಮನ ಕೈಲಿ ನನಗೆ ಫೋನ್ ಮಾಡಿಸು ಮೊದ್ಲು...

ಎಂದು ಆಜ್ಞೆ ಮಾಡಿದ್ದೇ ಫೋನ್ ಇಟ್ಟರು. ನಾನು ಅವರ ಪ್ರಶ್ನೆಗೆ ಉತ್ತರಿಸುವ ಮೊದಲೇ.

ನಾನು ಬಿದ್ದೂ ಬಿದ್ದೂ ನಗುತ್ತಿದ್ದುದನ್ನು ಬಸ್ಸಿನವರೆಲ್ಲಾ ವಿಚಿತ್ರ ನೋಟದಿಂದ ನೋಡುತ್ತಿದ್ರು !

Z : uhahahahahahaha !!!!!!!!!!!!!!!!!!!!!!!!!!!!!!!!!!!!!

ನಾನು : :=))

ಅಮ್ಮನ ಮೊಬೈಲ್ ಕನೆಕ್ಟಾಗದಿದ್ದದ್ದು ನನಗೀಗ ಭಯ ತರಿಸಿತು. ಮನೆಗೆ ಫೋನ್ ಮಾಡಿದೆ., ನನ್ನದೇ ದನಿಯ answering machine ಮಾತಾಡಿತು . ನಾನು ಒದರಿದೆ..."ಎಲ್ಲಿದ್ದೀರಿ ಎಲ್ಲಾರು ? ಅಣ್ಣ ಬೇರೆ ಫೋನ್ ಮಾಡಿದ್ದರು. ಏನೂ ಹೇಳ್ತಿಲ್ಲ ಅವ್ರು ಬೇರೆ. ಏನಾಯ್ತು ಅಂತ ಮನೆಗೆ ಬಂದ ತಕ್ಷಣ ಫೋನ್ ಮಾಡೀ. ಬೇಗ !

ಫೋನ್ ಇಟ್ಟ ಮೇಲೆ ಫ್ಲಾಷಾಯ್ತು ಮಾವ ಫೋನ್ ಮಾಡಿದ್ದೂ ಹೇಳಬೇಕಿತ್ತು ಅಂತ. ಮನೆಯಲ್ಲಿ ಯಾರೂ ಇಲದಿದ್ದರೆ ಬೀಗಕ್ಕೇನು ಮಾಡುವುದು ? ತೋಚಲಿಲ್ಲ. ಅಷ್ಟೊತ್ತಿಗಾಗಲೇ ನಾನು ಮನೆಯ ಹತ್ತಿರ ತಲುಪಿದ್ದೆ. ಬಸ್ ಸ್ಟಾಪ್ ನಲ್ಲಿ ಎಲ್ಲರ ದುಗುಡದ ಮುಖಗಳು ನನಗೆ ಆಗ ಗೋಚರಿಸಲು ಪ್ರಾರಂಭವಾದವು...ಮಕ್ಕಳೆಲ್ಲ ಸ್ಕೂಲಿನಿಂದ ಮನೆಗೆ ದಾಪುಗಾಲು ಹಾಕಿಕೊಂಡು ಹೋಗುತ್ತಿದ್ದವು. ಪೋಲೀಸರು ರಸ್ತೆಯಲ್ಲೆಲ್ಲ ಬೀಟು ಹೊಡೆಯುತ್ತಿದ್ದರು. ಅಮ್ಮ ತಂಗಿ ಎಲ್ಲಿದ್ದರೂ ಮನೆಗೆ ತಲುಪಿರಲಪ್ಪಾ ಎಂದು ಪ್ರಾರ್ಥಿಸುತ್ತಾ ಮನೆ ಸೇರಿದೆ.

ಮನೆಯ ಬೀಗ ಹಾಕಿರಲಿಲ್ಲ. ಬಾಗಿಲು ಮುಚ್ಚಿತ್ತಷ್ಟೆ. ಕರೆಘಂಟೆಗೆ ಬಾಗಿಲು ತೆಗೆದವಳು ಅಪರ್ಣ, ನನ್ನ ತಂಗಿ.

ನಾನು : ಫೋನ್ ನ answering machine mode nalli ಇಟ್ಟು ಮನೆಲಿ ಏನ್ ಮಾಡ್ತಿದ್ದ್ರಿ ?

ಅವಳು : ನಿದ್ದೆ ಮಾಡ್ತಿದ್ವಿ.

Z : uhahahahahahahahahahahahahahaaha !!!!!!!!!!!!!!!!!!!!!!!!!!!!!!!!!!!!!!

ನಾನು : ನಗ್ಬೇಡಾ ನೀನು ! ನನಗೆ ವಿಪರೀತ ರೇಗತ್ತಿತು. ಅಷ್ಟೊತ್ತಿಗೆ ಅಮ್ಮ ಮೇಲಿಂದ ಕೆಳಗಿಳಿದರು..ಕಾರ್ಡ್ಲೆಸ್ಸ್ ಫೋನ್ ಕೈಯಲ್ಲಿ ಹಿಡಿದು.

ಲೇ ಅಣ್ಣ ಫೋನ್ ಮಾಡಿದ್ರು ನೀನೆಲ್ಲಿ ಅಂತ ಕೇಳ್ಕೊಂಡು...ಏನ್ ವಿಷ್ಯ ?

ನಾನು : ಎಷ್ಟ್ ಸರ್ತಿ ಮಾಡಿದ್ದರು ?

ಅಪರ್ಣ : answering machine ನಲ್ಲಿ ಎರಡು ಸರ್ತಿ ಮೆಸೇಜು ಬಿಟ್ಟಿದ್ದಾರೆ. ಈಗ ನಮಗೆ ಎಚ್ಚರ ಆಯ್ತು. ಮೊದಲು ನಿನ್ನ ಮೆಸೇಜು ಕೇಳಿದೆವು. ನಿನಗೆ ಟ್ರೈ ಮಾಡಲು ಹೋದರೆ ನಮ್ಮ ಮೊಬೈಲಿಂದ ಕನೆಕ್ಟ್ ಆಗ್ತಿಲ್ಲ.ಅಷ್ಟೊತ್ತಿಗೆ ಅಣ್ಣಾಮತ್ತೆ ಫೋನ್ ಮಾಡಿದರು. ಲ್ಯಾಂಡ್ ಲೈನಿಂದ ಫೋನ್ ಮಾಡುವ ಹೊತ್ತಿಗೆ ನೀನೇ ಬಂದೆ.

ನಾನು ನಡೆದ ಕಥೆ ಎಲ್ಲಾ ಕೂಲಂಕಷವಾಗಿ ಹೇಳಿದೆ.

ಅಮ್ಮ ನಾನು ಕಣ್ಣೂ ಮುಂದೆ ಇದ್ದರೂ ಗಾಬರಿ ಆದರು. ಸದ್ಯ ನಿನಗೇನು ಆಗಲಿಲ್ಲವಲ್ಲ. ಮಾವಂದಿರು ಫೋನ್ಗೆ ನಾನು ಏನಾದರೂ ಸಿಕ್ಕಿದ್ದಿದ್ದರೆ ನಾನು ವಿಷಯ ಕೇಳಿ ನೀನು ಹೋಗೇ ಬಿಟ್ಟೆಯೆಂದು ಗಾಬರಿ ಆಗಿ ನಾನೂ ಹೋಗೇ ಬಿಡುತ್ತಿದ್ದೆ ! ಸದ್ಯ ದೇವರು ಕಾಪಾಡಿದ !!

ನಾನು ಮತ್ತು ಅಪರ್ಣಾ ನಮ್ಮ ರೂಮಿನ ಬಾಗಿಲು ಹಾಕಿಕೊಂಡು ಬಿದ್ದೂ ಬಿದ್ದೂ ನಕ್ಕು, ಅಮ್ಮಂದಿರೆಲ್ಲಾ ಇಷ್ಟೆ ಎಂಬ universal law ಅನ್ನು ಮತ್ತೆ prove ಮಾಡಿ ಹೊರಬಂದೆವು. ಬಂದೊಡನೆ ಅಮ್ಮ...

" ಗೊತ್ತು ಕಂಡ್ರೆ ನೀವ್ ಬಿದ್ದೂ ಬಿದ್ದೂ ನಗ್ತೀರಿ ಅಂತ..ನಿಮಗೂ ಮಕ್ಕಳಾಗತ್ತಲ್ಲ...ಆಗ ಗೊತ್ತಾಗತ್ತೆ ನಿಮ್ಗೆ ನನ್ನ ಟೆನ್ಷನ್ನು !!!

ಅಣ್ಣನ airtel landline ಗೆ ಫೋನ್ ಮಾಡಿ ನಾನು ಮನೆ ಸೇರಿದ್ದೇನೆ ಎಂದು ಹೇಳಿ ಅಮ್ಮ ಸಮಾಧಾನದ ನಿಟ್ಟುಸಿರು ಬಿಟ್ಟರು. ಅಣ್ಣನೂ ಸಮಾಧಾನಗೊಂಡಿರುತ್ತಾರೆಂದು ನಮಗೆ ಖಾತ್ರಿಯಾಯ್ತು. ಅಮ್ಮನಿಗೆ ರಾಗಿಗುಡ್ಡದಲ್ಲಿ ಕಾವ್ಯ ವಾಚನ ಕಾರ್ಯಕ್ರಮವಿತ್ತು. ಫೋನ್ ಗೆ ಸಿಗುತ್ತಿದ್ದುದು ನಾನೊಬ್ಬಳೆ. ಸರಿ ನಾನೂ ಹೊರಟೆ, ಹನುಮನ ನೋಡಿದ ಹಾಗೂ ಆಯ್ತು, ಅಮ್ಮನ ಕಾದ ಹಾಗೂ ಆಯ್ತು...ಟೈಮ್ ಪಾಸೂ ಆಯ್ತು ಅಂತ. ಆದರೂ ನಾನು ನಗುತ್ತಲೇ ಇದ್ದೆ...

Z : ha hahah !!!

ನಾನು : ನಾನು, ಲಕ್ಷ್ಮೀ, ಬದುಕಿದ್ದೇನೆ, ಸತ್ತ ಲಕ್ಷ್ಮೀ ನಾನಲ್ಲ !

Z :ನಾನೂ ಹೇಳ್ಬೇಕಾ ಇದನ್ನ ?

ನಾನು : ನಿನ್ನಿಷ್ಟ.

Z : to be on a safer side, ನಾನೂ ಹೇಳಿಬಿಡುವೆ.

ಸತ್ತ ಲಕ್ಷ್ಮೀ ನಾನೂ ಕೂಡಾ ಅಲ್ಲ !!!

Thursday, July 24, 2008

ತಾಯಮ್ಮ- ೩

ನಾನು : ಹಾ....ಎಲ್ಲಿದ್ದೆ ಕಥೆ ಲಿ ?

Z : ಅದೇ...ತಾಯಮ್ಮ ಬೇರೆ ಕೆಲ್ಸದವಳನ್ನ ಕರ್ಕೊಂಡು ಬರ್ತಿನಿ ಅಂದಿದ್ದು.

ನಾನು : ಹಾ...ಯೆಸ್. ಅವರು ಹೋದ ರಾತ್ರಿ ಮಾತಾಮಣಿಯರು ಹೈ ಕಮಾಂಡ್ ಬಳಿ ತಾಯಮ್ಮನ ಪುರಾಣವನ್ನು ಎಪಿಸೋಡ್ ಬೈ ಎಪಿಸೋಡ್ ಹೇಳಿ ತಾಯಮ್ಮನಿಗೆ ದುಡ್ಡು ಕೊಡಲು ದುಡ್ಡು sanction ಮಾಡಿ ಎಂದು ಕೇಳಿದರು. ಹೈ ಕಮಾಂಡ್ ಊಟ ಮಾಡುವಾಗ ಯೋಚನೆ ಮಾಡಿ, ಬೇರೆ ಕೆಲ್ಸದವಳು ತಾಯಮ್ಮನ ಸಂಬಳಕ್ಕೆ ಕೆಲಸ ಮಾಡುವುದಾದರೆ ಇಟ್ಕೊಳ್ಳಬೇಕೆಂಡು ಆಜ್ಞೆ ಮಾಡಿತು. ನಾರಿಮಣಿಯರು ನಿರಾಕರಿಸಲಿಲ್ಲ. ತಾಯಮ್ಮನ ಐದು ಸಾವಿರ ರೆಡಿಯಾಯಿತು.

Z : oho...ಆಮೇಲೆ ?

ನಾನು : ಮಾರನೆಯ ದಿನ ತಾಯಮ್ಮನೊಂದಿಗೆ ವಯಸ್ಸಾದ ಹೆಂಗಸೊಬ್ಬಳು ಬಂದಳು. she must be in her mid 50's. ಅವಳ ಹೆಸರು ಅಲಮೇಲು ಅಂತ. ತಮಿಳಿನವಳು. ಕನ್ನಡ ಅರ್ಥ ಮಾಡಿಕೊಳ್ಳಬಲ್ಲಳು...ಆದ್ರೆ ಕನ್ನಡ ಮಾತಾಡಳು. ನಮ್ಮ ಅಮ್ಮನಿಗೆ ತಮಿಳು ಮಾತಾಡಲು ಬರದು. ಅರ್ಥ ಮಾಡಿಕೊಳ್ಳಬಲ್ಲರು. ತಾಯಮ್ಮ ಇವಳು ನಿಮ್ಮ ಮನೆಗೆ ಸರಿಯಾದವರೆಂದರು. ಅದೇ ಸಮಯಕ್ಕೆ ನಾನು ಲ್ಯಾಬ್ ಇರಲಿಲ್ಲವಾದ್ದರಿಂದ ಮನೆಗೆ ಬಂದೆ. ಅಮ್ಮನ ಕನ್ನಡ ಪ್ರಶ್ನೆ ಮತ್ತು ಅವರ ತಮಿಳಿನ ಉತ್ತರ ನಡಿಯುತ್ತಿತ್ತು. ಇಬ್ಬರು ಸರೀಗಿದ್ದಾರೆಂದು ನನಗನ್ನಿಸಿತು. ಒಳಗೇ ನಕ್ಕೆ. ಸರಿ ಬಂದ ದಿನವೇ ಇವರು ಕೆಲ್ಸ ಮಾಡಲು ಶುರು ಮಾಡಿದರು.

Z : ಸದ್ಯ...

ನಾನು : wait wait....there is more to come. ತಾಯಮ್ಮ ಆವತ್ತೇ ಅಸ್ಪತ್ರೆಗೆ ಸೇರಿದರೆಂದು ಫೋನ್ ಬಂದಿತು. ನಾವೆಲ್ಲ ಅವಳ ಕ್ಷಿಪ್ರ ಚೇತರಿಕೆಗೆ ಪ್ರಾರ್ಥನೆ ಮಾಡಿದೆವು. ಅಲಮೇಲು ನಮ್ಮ ಮನೆಯಲ್ಲಿ ಒಂದು ತಿಂಗಳು ಒಂದು ದಿನವೂ ತಪ್ಪಿಸದೇ ಬರುತ್ತಿದ್ದರು. ಆದರೆ ಅವರು ತಾಯಮ್ಮನಷ್ಟು ಚೆನ್ನಾಗಿ ಅಚ್ಚುಕಟ್ಟಾಗಿ ಕೆಲಸ ಮಾಡುತ್ತಿರಲಿಲ್ಲ. ಹೇಳಿ ಹೇಳಿ ಮಾಡಿಸಬೇಕಿತ್ತು. ವಯಸ್ಸಾದವರೆಂದು ನಾವೂ ಮೆಲ್ಲಗೇ ಹೇಳಿ ಹೇಳಿ ಮಾಡಿಸುತ್ತಿದ್ದೆವು.

ನಮ್ಮಮ್ಮ ಬೆಳಿಗ್ಗೆ ಒಂದು ದಿನ ಎಲ್ಲೋ ಹೋಗಬೇಕಿತ್ತು. ಎದುರು ಮನೆಯಲ್ಲಿ ಕೀ ಕೊಟ್ಟು ಅಲಮೇಲು ಕೈಲಿ ಪಾತ್ರೆ ತೊಳಿಸಿ, ಕಸ ನಾನೆ ಗುಡಿಸಿ ಮನೆ ಸಾರಿಸಿದ್ದೇನೆ. ಹಿತ್ತಲಲ್ಲೇ ಪಾತ್ರೆ ಇದೆ..ಪಾತ್ರೆ ತೊಳಿಸಿಬಿಡಿ ಸಾಕು ಎಂದು ಹೇಳಿ ಹೋಗಿದ್ದರು. ಎದುರು ಮನೆಯವರೂ ಹಾಗೆಯೇ ಮಾಡಿಸಿದ್ದರು. ಆದರೆ ಯಾವುದೋ ಮಾಯೆಯಲ್ಲಿ ಪಾತ್ರೆಗಳು ಕೆಲವು, ಎರಡು ಸೌಟು ನಾಪತ್ತೆಯಾಗಿದ್ದವು. ನಮಗದು ತಿಳಿದಿದ್ದು ಮೂರು ದಿನ ಆದಮೇಲೆ...ಯಾಕಂದರೆ ನಮ್ಮಮ್ಮ ಅದನ್ನ ನೋಟೀಸ್ ಮಾಡಿದ್ದೇ ಆವತ್ತು. ಅಲಮೇಲು ಅಂದಿನಿಂದ ಕೆಲಸಕ್ಕೇ ಬಂದಿರಲಿಲ್ಲ. ಅವರಿಗೆ ಅಸ್ಥಮಾ ತೊಂದರೆ ಇದ್ದಿದ್ದು ಆವತ್ತು ಹೇಳಿದ್ದರು. ಆದರೆ ನಾನು ಏನು ಮಾಡಿರೂ ತಪ್ಪಿಸುವುದಿಲ್ಲ ಎಂದು ಹೇಳಿದ್ದರು ಸಹ. ಸರಿ ನಮ್ಮಮ್ಮ ಪಾತ್ರೆ ಹೋದಮೇಲೆ ನಮಗೆ ರೆಡ್ ಅಲೆರ್ಟ್ ಕೊಟ್ಟರು..ನಮ್ಮ earrings, hangings ಎಲ್ಲಾ ಸರಿಗಿದಿಯಾ ಚೆಕ್ ಮಾಡಿಕೊಳ್ಳೀ ಅಂತ. ನಮಗೆ ಗಾಬರಿಯಾಯ್ತು. ಎಲ್ಲ ಕೂಲಂಕುಷವಾಗಿ ನೋಡಿದೆವು. ನೆಟ್ಟಗಿದ್ದವು. ಅಮ್ಮನದ್ದೂ ಸರಿಗಿದ್ದವು. ಪಾತ್ರೆ ಗಾಯಬ್ಬಾದ ದಿನದಂದೇ ನಾವು ಹುಷಾರಾದೆವು. ಎಲ್ಲ artificial ವೊಡವೆಗಳನ್ನು ಮೊದಲು mirror wardrobe ನಲ್ಲಿ ಇಡುತ್ತಿದ್ದವರು ಈಗ ತಿಜೋರಿಯಲ್ಲಿಡಲಾರಂಭಿಸಿದೆವು. ಆದರೆ, ಅಲಮೇಲು ನಾಪತ್ತೆ.

Z : sad !

ನಾನು : yes ! ತಾಯಮ್ಮನ ಮನೆ ಗೊತ್ತಿಲ್ಲ, ಆಪರೇಷನ್ ಆದ ದಿನ ಆಪರೇಷನ್ ಸಕ್ಸೆಸ್ಸ್ ಅಂತ ಫೋನ್ ಮಾಡಿದ್ದ ಅವರ ಮಗ. ಊರಿಗೆ ಹೊರಟರೇನೋ...ಏನೂ ಗೊತ್ತಿಲ್ಲ. ಬೇರೆ ಕೆಲಸದವಳಿಲ್ಲ, ನನಗೆ ಇಂಟರ್ನಲ್ಸ್, ತಂಗಿಗೆ ಹತ್ತನೇ ಕ್ಲಾಸಿನ ಫೈನಲ್ ಪರೀಕ್ಷೆ. ಅಮ್ಮನೇ ಪಾಪ ಎಲ್ಲ ಕೆಲ್ಸ ಮಾಡಿಕೊಳ್ಳುತ್ತಿದ್ದರು. ನಾವು ಅಸಹಾಯಕರಾಗಿದ್ದೆವು.

Z : ಕಷ್ಟಗಳು ಒಟ್ಟೊಟ್ಟಿಗೇ ಬರೋದು....ಅಮೇಲೆ ?

ನಾನು : ಹು ! ಹೀಗೆ ಒಂದು ತಿಂಗಳು ಕಳೇಯಿತು. ಜೂನ್ ನಲ್ಲಿ ಒಂದು ದಿನ ಹಿಂದಿನ ರಸ್ತೆಯ ಮನೆಯವರು ಒಬ್ಬರು ಮತ್ತೊಬ್ಬ ಕೆಲಸದವರನ್ನು ಹುಡುಕಿ ಕೊಟ್ಟರು. ಅವರು ವಿಪರೀತ ಚಿಕ್ಕವರು. ಅವರ ತಾಯಿಗೆ ಐದು ಜನ ಹೆಣ್ಣು ಮಕ್ಕಳು. ಇವರಿಗೆ ೧೪ ವರ್ಷಕ್ಕೇ ಮದುವೆ, ವಯಸ್ಸು ಇಪ್ಪತ್ತು...ಮೂರು ಮಕ್ಕಳು. ಒಂದೂ ಆರೋಗ್ಯದಿಂದಿಲ್ಲ. ಒಂದು ದಿನ ಬಂದರೆ ಇನ್ನೊಂದು ದಿನ ಮಗುವಿಗೆ ಹುಷಾರಿಲ್ಲವೆಂದು ನಾಪತ್ತೆ. ನಾವೇ ಅವರ ತಂಗಿಯರಿಗೆ, ಅವರಿಗೆ ನಮ್ಮ ಹಳೆಯ ಬಟ್ಟೆ, ಸೀರೆ ಮುಂತಾದವುಗಳನ್ನು ಕೊಟ್ಟೆವು. ಮಳೆಗಾಲ, ಹಾಕಿಕೊಳ್ಳಲಿ ಅಂತ. ಕೆಲಸ super ಆದರೆ attendance irregular :( . ನಾವು ದಿನಾ ಹತ್ತುವರೆವರೆಗೂ ಕಾಯುವುದು, ಅವರು ಬರಲಿಲ್ಲವೆಂದರೆ ನಾನು ಪಾತ್ರೆ ತೊಳೆದು, ಗುಡಿಸಿ ಸಾರಿಸಿ ಮಾಡುವುದು...ಇಷ್ಟು ನನ್ನ ರೊಟೀನು ಸದ್ಯಕ್ಕೆ. ಆದ್ದರಿಂದ ಟೈಮ್ ಪಾಸ್ ಆಗುತ್ತಿದೆ...ಕೆಲ್ಸದಲ್ಲಿ.

Z : hmm....

ನಾನು : ಇದಲ್ಲದೇ ಇನ್ನೊಂದು ತೊಂದರೆ ಇದೆ. ಈ ಹೊಸ ಕೆಲಸದವರ, (ಅವರ ಹೆಸರು ಜಯಂತಿ) ತಂಗಿಯರು ಇನ್ನೂ ಚಿಕ್ಕ ಮಕ್ಕಳು. ಇವರು ಬರಲಾಗದಿದ್ದರೆ ಅವರನ್ನು ಕಳಿಸುತ್ತಾರೆ. We are strictly against child labor. ಇವರ ಕೈಲಿ ಏನು ಕೆಲಸ ಮಾಡಿಸುವುದು ? ಹೇಗೆ ಮಾಡಿಸುವುದು ? ಪುಟ್ಟ ಪುಟ್ಟ ಕೈಗಳು, ಕೈಯಲ್ಲಿ ಪೆನ್ಸಿಲ್ಲು ಹಿಡಿಯಬೇಕಾದವು ಪಾತ್ರೆ ತೊಳೆಯುವ ಗುಂಜನ್ನು ಹಿಡಿಯುವುದನ್ನು ನೋಡಿದರೆ ಯಾರಿಗೆ ಏನನ್ನಿಸತ್ತೋ ಬಿಡತ್ತೋ...ನನಗಂತೂ ಸಂಕಟವಾಗುತ್ತದೆ. ಯಾಕಂದರೆ ನನಗೆ ಅವರಿಗಿಂತ ಸ್ವಲ್ಪವೇ ದೊಡ್ಡ ತಂಗಿಯಿದ್ದಾಳೆ. ನಾವು ಸುಮ್ಮನೆ ಕೂರುವುದು, ನಮಗಿಂತ ಚಿಕ್ಕ ಚಿಣ್ಣರು ಅವರು ದುಡಿಯುವುದು ಎಷ್ಟು ಸರಿ ಹೇಳು ? ಶಾಲೆಗೆ ರಜೆ ಹಾಕಿ ಕೆಲಸ ಮಾಡಿ ನಾವು ಕೊಡುವ ಹತ್ತು ರುಪಾಯಿಯನ್ನು ಆಸೆಗಣ್ಣಿನಿಂದ ನೋಡುವ ಅವರ ಅಸಹಾಯಕತೆ ನನ್ನನ್ನು ಹತಾಶಗೊಳಿಸುತ್ತದೆ Z ....

Z : ನಿಜ...ತುಂಬಾ ನಿಜ.

ನಾನು : ಆದ್ದರಿಂದಲೆ ನಾನು ಅವರು ಬಂದರೆ ಕೆಲಸ ಮಾಡಲೇ ಬೇಡಿ ಎಂದು ಹೇಳಿದೆ. ಆದರೆ ಅವರು ಇಲ್ಲ ನಾವು ಮಾಡಿಯೇ ಮಾಡುತ್ತೇವೆಂದು ಹಠ ಹಿಡಿದರು. ಗುಡಿಸಿ ಸಾರಿಸಿ ಮಾಡಿಸದೆ, ಬರೀ ಪಾತ್ರೆ ತೊಳೆಯಿರೆಂದು ಹೇಳಿದೆ. ಬೆಂಗಳೂರಿನಲ್ಲಿ ಹಣವನ್ನು ನೀರಿನಂತೆ ಚೆಲ್ಲುವ ಜನರೊಂದು ಕಡೆ, ಪುಡಿಗಾಸಿಗೂ ಹೋರಾಡಿ, ಆಕಾಶಕ್ಕೆ ಕೈಚಾಚಿ, ಬೊಗಸೆಯಲ್ಲಿ ಸಿಕ್ಕಷ್ಟನ್ನು ಬಚ್ಚಿಟ್ಟು ಮುಚ್ಚಿಟ್ಟು ಕಾಪಾಡುವ ಜನ ಇನ್ನೊಂದು ಕಡೆ, ಇಂಥವರೆಲ್ಲರ ಮಧ್ಯ ಕಿಂಕರ್ತವ್ಯಮೂಢಳಾದ ನಾನು !

ನನಗೆ ಕೆಲ್ಸ ಮಾಡಲು ಗೊತ್ತಿಲ್ಲ ಅಂತ ಏನಲ್ಲ. ಆದರೆ ಮಾಡಲು ಸಮಯ ಸಿಕ್ಕಿರಲಿಲ್ಲ ಅಷ್ಟೆ. ಆದ್ದರಿಂದ, ಇವೆಲ್ಲ ಗಲಾಟೆ ಯಿಂದ ನಮ್ಮ ಮನೆ ಹದಗೆಟ್ಟು ಹಣ್ಣಾದ ಮೇಲೆ, ನಾನು ಮನೆಯಲ್ಲಿರುವ ತನಕ ( ಕೆಲ್ಸ/ph.D position ಸಿಗುವ ವರೆಗೂ) ನಾನೆ ಕೆಲಸ ಮಾಡುವೆನೆಂದು ಹೇಳಿದ್ದೇನೆ. ಟೈಮ್ ಪಾಸ್ ಆದ ಹಾಗೂ ಆಯ್ತು. ಕೆಲಸದ recapitulation ಕೂಡಾ ಆಯ್ತು.

Z : good...

ನಾನು : thanks. ಆದರೂ...ನನಗೆ ತಾಯಮ್ಮನ ನೆನಪು ಬಂದೇ ಬರುತ್ತದೆ. ಯಾಕೆ ಗೊತ್ತಾ ? ನಮ್ಮಿಬ್ಬರ ನಡುವೆ ಒಂದು funny conversation ನಡೆದಿತ್ತು ಒಂದು ದಿನ. ಹೇಳುತ್ತೇನೆ ಕೇಳು :

ತಾಯಮ್ಮ ಕಸ ಗುಡಿಸುತ್ತಿದ್ದರು. ನಾನು ಓದಿಕೊಳ್ಳುತ್ತಿದ್ದೆ. ಬಂದದ್ದೇ ಕೇಳಿದರು-

" ಅಮ್ಮಾವ್ರೆ, ನೀವು ಎಸ್ಸೆಸ್ಸೆಲ್ಸಿ ಆದ್ಮ್ಯಾಕೆ ಏಟ್ ವರ್ಷ ಓದೀರಿ ?"

ನಾನು : " ಏಳು ವರ್ಷ"

ಅವರು: " ಈ ವರ್ಸ ಆದ್ಮ್ಯಾಕೆ ಮುಗಿತದಾ ? "

ನಾನು : " ಇಲ್ಲ ತಾಯಮ್ಮ, ಇನ್ನೂ ಏಳು ವರ್ಷ ಓದಬೇಕು "

ಅವರು : ಯಾಕೆ ?

ನಾನು : ಅದು ಹಾಗೇ ತಾಯಮ್ಮ...ನಮಗಿಷ್ಟ ಆದ ವಿಷಯ ನ ಚೆನ್ನಾಗಿ ತಿಳ್ಕೋ ಬೇಕಲ್ಲ...ಅದಕ್ಕೆ.

ಅವರು : ಕಡೆ ಮನೆ ಡಾಕ್ಟರಮ್ಮ ಏಟ್ ವರ್ಸ ಓದವ್ರೆ ಎಸ್ಸೆಸೆಲ್ಸಿ ಆದ್ಮೆಲೆ ?

ನಾನು : ಹತ್ತು ವರ್ಷ.

ಅವರು : ಯಪ್ಪಾ ಸಿವನೆ ! ಇರ್ಲಿ ಬುಡಿ...ನೀವ್ ಏನ್ ಮಾಡ್ತಿರಿ ಇನ್ನು ಯೊಳ್ ವರ್ಸ ಓದ್ಮ್ಯಾಕೆ ?

ನಾನು : ಮನೆಯಲ್ಲಿರ್ತಿನಿ ತಾಯಮ್ಮ...

ಅವರು : ಅದೆಂಥದ್ದು ಅಮ್ಮಾವ್ರೆ ಈಟ್ ವರ್ಷ ಓದ್ಮ್ಯಾಕೆ ಮನೆಲಿದ್ಗೊಂಡು ? ಈ ಪುರುಸಾರ್ಥಕ್ಕೆ ಬರೀ ಎಸ್ಸೆಸೆಲ್ಸಿ ಮಾಡಿದ್ರೆ ಸಾಕಿರ್ತಿಲಿಲ್ವಾ ? ಸುಮ್ನಿರಿ ನೀವು ಅಮಾವ್ರೆ...ಸೌಟ್ ಎಲ್ಲ ಎಣ್ಣ್ ಮಕ್ಕಳು ಇಡಿಯೋದೇಯಾ ತಗಳಿ.. ಗಂಡಾ ಮನೆ ಮಕ್ಕಳು ಎಲ್ಲ ಮಾಡ್ಕಳಿ ಯಾರು ಬೇಡಾ ಅನ್ನಾಕಿಲ್ಲ. ಆದ್ರೆ ನೀವ್ ಮನೆಲಿ ಮಾತ್ರ ಇರ್ಬ್ಯಾಡಿ ನೋಡಿ... ಎಲ್ಲೆಲ್ಲೊ ಓಗ್ ಏನೋ ಸಮ್ಸೋದನೆ ಎಲ್ಲ ಮಾಡವ್ರಂತೆ ನೀವು ? ಮನೆಲಿದ್ರೆ ನಿಮ್ಮಂಥವರು ಅದ್ಯಾವ್ ನ್ಯಾಯ ಅಂತಿನಿ... ಆಕಡೆ ಮನೆ ಇಂಜಿನೀರಮ್ಮ ಈಗ ಓಗ್ತಿಲ್ವಾ ಕೆಲ್ಸಕ್ಕೆ ? ಮಕ್ಕಳನ್ನ ಸಾಲೆಗೆ ಬಿಟ್ಟು ? ಏಟ್ ಓದಿದಾರೆ ಅಂತೀರಾ ಅವ್ರುನೂ ...ಅವ್ರ ಮನೆಲೂ ಬರೀ ಪುಸ್ತಕಾನೆಯಾ...ನಾನ್ ಈಗ ಅವ್ರ ಮನೆಲಿ ಕೆಲ್ಸ ಮಾಡ್ಕಂಡ್ ಇಲಾ ? ನೀವ್ ಎಲ್ಲೇ ಇರಿ ಬೆಂಗ್ಳೂರ್ ನಾಗೆ...ನಾನ್ ಬಂದ್ ಮಾಡ್ಕೊಟ್ಟ್ ಓಯ್ತಿನಿ ಕೆಲ್ಸಾ ನ...ಮಗೀನ ನೋಡ್ಕೊಳ್ಳೊಕೆ ನಿಮ್ಮಮ್ಮ ಇಲ್ವಾ ? ನೀವೇನ್ ಈಟ್ ಒದು ಬರ್ಹ ಮಾಡೀ ಮನೆಯಾಕ್ ಮುದುರ್ಕಂಡಿರದು..ಹಾ ? ನಾನ್ ಯೋಳ್ತಿನಿ ಕೇಳಿ... ಓಗಿ ಓರ್ಗೆ ದುಡಿರಿ ಅತ್ತ್ಲಾಗೆ !

ನಾನು ಆವತ್ತೆಲ್ಲಾ ನಕ್ಕಿದ್ದೂ ನಕ್ಕಿದ್ದೇ ! ನನ್ನ ಮದುವೆ, ಮಕ್ಕಳ ಬಗ್ಗೆಯೂ ತಾಯಮ್ಮ ಯೋಚಿಸಿದ್ದರು ಆಗಲೇ ! ತಾಯಮ್ಮ ನನಗೆ ಆರ್ಡರ್ ಮಾಡಿದರೋ, ಅಥವಾ ಅವರ ಕೆಲಸ ಖಾಯಮ್ ಮಾಡಿಕೊಂಡರೋ ನನಗಿನ್ನೂ ತಿಳಿಯದ ವಿಷಯ !

Z : :) :) :) .....ಆದರೆ ಅವರ concern ನ ಮೆಚ್ಚಬೇಕು ನೋಡು !

ನಾನು : ನಿಜ ನಿಜ. ಅವರು ಒಂದು ನಿಯಮ ಮಾಡಿದ್ದರು...ಬಿಸಾಕಬೇಕಿದ್ದ ಪೇಪರ್ಗಳನ್ನೆಲ್ಲ ಹರಿದು ಹಾಕಿ, ಇಲಾಂದ್ರೆ ನಾನು ಎಲ್ಲಾ ನಿಮ್ಮ ಟೇಬಲ್ ಮೇಲೆ ಮತ್ತೆ ಎತ್ತಿಟ್ಟು ಹೋಗುವೆ ಅಂತ. ಇಂದು ನನಗೆ ಪೇಪರ್ ಹರಿಯುವಾಗಲೆಲ್ಲಾ ತಾಯಮ್ಮನದೇ ನೆನಪು. ಅವರು ಸದ್ಯ ಎಲ್ಲಿದ್ದಾರೋ, ಹೇಗಿದ್ದಾರೋ...ಕ್ಷೇಮದಿಂದ ಇರಲಿ, ಬೇಗ ಗುಣವಾಗಲಿ ಎಂದಷ್ಟೇ ಪ್ರಾರ್ಥನೆ ಸದ್ಯೋಜಾತನಲ್ಲಿ. ಆದಷ್ಟು ಬೇಗ ಅವರು ಕೆಲಸಕ್ಕೆ ಬರಲಿ ಅಂತ ಆಸೆ.

Z : hmm.....same here.

Wednesday, July 23, 2008

ತಾಯಮ್ಮ- ೨

ನಾನು : ಎಲ್ಲಿಗೆ ನಿಲ್ಲಿಸಿದ್ದೆ ಕಥೆ ನ ಮೊನ್ನೆ ?

Z : ತಾಯಮ್ಮ ಬಯಾಪ್ಸಿ ಗೆ ಒಪ್ಪಿದ್ದು.

ನಾನು : ಹಾ.....ಕರೆಕ್ಟ್. ತಾಯಮ್ಮ ಮೂರು ದಿನಗಳ ಅಧಿಕೃತ ರಜೆ ಘೋಷಿಸಿ ಹೋಗಿ ಬಯಾಪ್ಸಿ ಮಾಡಿಸಿಕೊಂಡು ಬಂದರು. ರೆಪೋರ್ಟ್ ಬರಲು ಎರಡು ದಿನವಾಯ್ತು. ಆ ಶನಿವಾರ ನನಗೆ ಯಾವುದೋ ಹಬ್ಬದ ಪ್ರಯುಕ್ತ ರಜೆ ಇತ್ತು. ತಾಯಮ್ಮ ಓಡೋಡಿ ಹೆದರಿ ನಲುಗಿ ನಮ್ಮ ಮನೆಗೆ ಬಂದರು. ಬಂದದ್ದೇ " ಅಮ್ಮಾವ್ರೆ, ವೊಟ್ಟೆಯಲ್ಲಿ ಗಡ್ಡೆ ಇದೆಯಂತೆ...ಆಪರೇಷನ್ ಮಾಡಿಸಿಕೊಳ್ಳಬೇಕಂತೆ...ಹತ್ತು ಸಾವಿರವಾಗ್ತದಂತೆ, ಆದಷ್ಟು ಬೇಗ ಮಾಡಿಸಿಕೊಳ್ಳದಿದ್ದರೆ ನಾ ಬದ್ಕಕ್ಕಿಲ್ವಂತೆ..ಆರು ತಿಂಗಳು ಮನೆಯಾಗೆ ಬಿದ್ಕಂಡಿರ್ಬೇಕಂತೆ, ಭಾರ ಎತ್ತೋಹಾಗಿಲ್ವಂತೆ, ಜಾಸ್ತಿ ನಡಿಯೋ ಹಾಗಿಲ್ವಂತೆ ...ಕೈ ಕಾಲೇ ಕಟ್ಟಾಕ್ಬಿಟ್ಟ್ರಲ್ಲ ಹೊಟ್ಟೆ ಕುಯ್ದು !? ದುಡ್ಡು ಎಲ್ಲಿಂದ ತರದು ? ಕೆಲ್ಸ ಮಾಡ್ದೆ ಎಂಗ್ ಜೀವನ ಸಾಗ್ಸೋದು ? ಆಗಕ್ಕಿಲ್ಲ...ಏನ್ ಮಾಡೊದು ? " ಎಂದು ಒಂದೇ ಉಸಿರಿನಲ್ಲಿ ಆತಂಕ ವ್ಯಕ್ತಪಡಿಸಿದರು.

ಈಗ ಯೋಚನೆ ಮಾಡುವ ಸರದಿ ನಮ್ಮದಾಗಿತ್ತು. ತಾಯಮ್ಮನಿಗೆ ನಾನು ಸಾಂತ್ವನ ಹೇಳುವೆ, ದೊಡ್ದವರೆಲ್ಲ ದುಂಡು ಮೇಜಿನ ಪರಿಷತ್ತು ನಡಿಸಿ ಎಂದು ನಾರೀಮಣಿಯರನ್ನು ನೆರೆಮನೆಗೆ ಓಡಿಸಿ, ನಾನು ತಾಯಮ್ಮನನ್ನು ಸಂತೈಸಲು ಅನುವಾದೆ. ತಾಯಮ್ಮ ಕೊರಗುತ್ತಲೇ ಇದ್ದರು, " ದುಡ್ಡಿಲ್ಲ,ಕೆಲ್ಸ ಮಾಡ್ದೆ ಇದ್ರೆ ಏನ್ ಗತಿ, ಸಾಲ ಬೇರೆ ಅಷ್ಟೋಂದು... ಬದುಕಿ ಏನಾಗ್ಬೇಕಾಗೈತೆ...." ಅಂತೆಲ್ಲ. ನಾನಂದೆ-

"ತಾಯಮ್ಮ, ನಮ್ಮಮ್ಮ ನಮಗಾಗಿ ಬದುಕುತ್ತಿರುವ ಹಾಗೆ ನೀವು ನಿಮ್ಮ ಮಕ್ಕಳಿಗಾಗಿ ಬದುಕಬೇಕು. ಪಾಪ...ಚಿಕ್ಕವು ಇನ್ನು. ನೀವೇ ಹೊಟೋದ್ರೆ ಅವರ ಗತಿಯೇನು ? ಏನೋ ಚೆನ್ನಾಗಿ ಓದ್ಕೊಂಡು, ಆಟ ಗೀಟ ಆಡ್ಕೊಂಡ್ ಇದಾವೆ. ನೀವ್ ಹೊಟೋದ್ರೆ ಅವಕ್ಕೆ ಕೂಲಿ ನಾಲಿ ಬಿಟ್ಟರೆ ಬೇರೆ ಗತಿಯಿಲ್ಲ. ಅನ್ಯಾಯ ಅವುಗಳ ಭವಿಷ್ಯ ಹಾಳಾಗೋಗತ್ವೆ. ನೀವು ನಿಮ್ಮ ಮನೆ ಕಡೆ ಗಮನ ಕೊಡಿ. ನೀವು ಆರು ತಿಂಗಳು ಕೆಲಸ ಮಾಡಬಾರದು ಅಂದಿದ್ದಾರೆ ತಾನೆ , ನಿಮ್ಮ ಯಜಮಾನರಿಗೆ ಹೇಳಿ ಸಲ್ಪ ಜಾಸ್ತಿ ಹೊತ್ತು ದಿನಸಿ ಅಂಗಡಿಯಲ್ಲಿ ದುಡಿಯೋಕೆ...ಸಂಬಳ ಜಾಸ್ತಿಯಾಗತ್ತೆ. ದುಡ್ಡಿಗೆ ದೊಡ್ಡವರು ಏನೋ ಪರಿಹಾರ ಹೇಳ್ತಾರೆ. ಇನ್ನು ಆರು ತಿಂಗಳ ಮಟ್ಟಿಗೆ ನಮ್ಮೆಲ್ಲರ ಮನೆಗೆ ಇನ್ನೊಬ್ಬ ನಂಬಿಕಸ್ಥ ಕೆಲಸದವಳನ್ನು ಗೊತ್ತು ಮಾಡಿ. ಆಗಾಗ ನಿಮ್ಮ ಮಗನ ಕೈಲಿ ಫೋನ್ ಮಾಡಿಸಿ ಯೋಗಕ್ಷೇಮ ಹೇಳಿ . ಚೆನ್ನಾಗಿ ರೆಸ್ಟ್ ತಗೊಳ್ಳೀ...ಆಮೇಲೆ ನೋಡಿ ಜಿಂಕೆ ಮರಿ ಥರ ಓಡಾಡಬಹುದು. ಆಪರೇಷನ್ ಆದ ತಕ್ಷಣ ನೀವೇನಾದ್ರು ಕಿತ್ತೂರು ರಾಣಿ ಚೆನ್ನಮ್ಮನ ಥರ ಕೆಲ್ಸಕ್ಕೆ ಬಂದ್ರಿ....ಚೂರೂ ಪಾರೂ ಆರೋಗ್ಯ ನೂ ಹದಗೆಟ್ಟು ನೀವು ಕಂಗಾಲಾಗಿ ಹೋಗ್ತೀರಿ. ನನ್ನ ಮಾತು ಕೇಳಿ ತಾಯಮ್ಮ. ಡಾಕ್ಟರ್ ಆಂಟಿ ಆಸ್ಪತ್ರೆ ಲಿ ಇರೋದ್ರಿಂದ್ಲೇ ನಿಮಗೆ ಇಷ್ಟು ಕಡಿಮೆ ದುಡ್ಡಲ್ಲಿ ಆಪರೇಷನ್ ಆಗ್ತಿರೋದು. ಇಲ್ಲಾಂದ್ರೆ ಒಂದು ಲಕ್ಷದ ವರೆಗೂ ಬರತ್ತೆ ದೊಡ್ಡಾಸ್ಪತ್ರೆಗಳಲ್ಲಿ. ಆಗತ್ತ ನಿಮ್ ಕೈಲಿ ತೂಗ್ಸಕ್ಕೆ ? ನೋಡಿ, ಅವರು ಹೇಳಿದಾಗೆ ಕೇಳಿ . ಇದೇ ವಾರದಲ್ಲಿ ಹೋಗಿ ಆಸ್ಪತ್ರೆಗೆ ಸೇರ್ಕೊಳ್ಳೀ...ಖಂಡಿತಾ ನಿಮ್ಗೇನೂ ಆಗಲ್ಲ. ಧೈರ್ಯವಾಗಿರಿ...ದೇವರಿದ್ದಾನೆ."

ನಾನೀಥರ ಮಾತಾಡಿದ್ದನ್ನು ಕೇಳಿ ತಾಯಮ್ಮನ ಕಣ್ಣಲ್ಲಿ ಮೋಡಕವಿದ ವಾತಾವರಣ. ಆದ್ರೂ ಅವರು ಅಳಲಿಲ್ಲ. ನನ್ನ ಮಾತು ಅವರ ಮನಸ್ಸನ್ನು ಮುಟ್ಟಿದೆ ಎಂದು ತೋರಿಸಲು ಅವರು ಕೆಲಕಾಲ ಸುಮ್ಮನಿದ್ದರು. ನಂತರ ಏನೋ ಭಯಗೊಂಡಂತಾಗಿ, " ಅಮ್ಮಾ...ಆಪರೇಸನ್ ಮಾಡವಾಗ ಮತ್ತ್ ಬರ್ಸೋ ಔಸ್ಧ ಕೊಡೊವಾಗ ಜಾಸ್ತಿಕೊಟ್ಟು ಪಿರಾನಾ ನೇ ಒಂಟೋದ್ರೆ ? "

Z : ಓಹ್ ಪಾಪ ! anesthesia ಅಂದ್ರೆ ಭಯ ಅನ್ಸತ್ತೆ.

ನಾನು : naturally. ಸಿರಿಂಜು ನೋಡಿದರೇನೇ ಸೈರನ್ನ್ ಹಾಕುವ ತಾಯಮ್ಮ ಇನ್ನು anesthesia ಗೆ ಹೆದರದೇ ಇರ್ತಾರ ? ನಾನಂದೆ- "ಯಾರಿಗೆ ಯೆಷ್ಟ್ ಮತ್ತ್ ಬರ್ಸೋ ಔಷಧಿ ಕೊಡ್ಬೇಕು ಅಂತ ಅವರಿಗೆ ಗೊತ್ತಿರತ್ತೇ ತಾಯಮ್ಮ. ಅದನ್ನೇ ಓದಿ ತಿಳ್ಕೊಂಡಿರ್ತಾರೆ .ಪ್ರಾಣ ಹೋಗಲ್ಲ, ಹೆದರಬೇಡಿ. ಆಪರೇಷನ್ ಆದ ಒಂದೆರಡು ಘಂಟೆಗಳಲ್ಲಿ ಎಚ್ಚರ ಆಗತ್ತೆ. ಮುಖ್ಯ ನೀವು ಧೈರ್ಯಗೆಡಬಾರದು.ಆಪರೇಷನ್ ಮುಂಚೆ ಅತ್ತು ಕರ್ದು, ಕೊನೆ ಸರ್ತಿ ನೋಡ್ಬಿಡಿ, ಆಸೆ ಎಲ್ಲ ತೀರ್ಸ್ಬಿಡಿ ಅಂತೆಲ್ಲ ಡೈಲಾಗ್ ಹೊಡಿಬೇಡಿ. ಅದ್ರಿಂದ ಮನಸ್ಸಿನ ಮೇಲೆ ಪರಿಣಾಮ ಬೀರತ್ತೆ. ಶಾಂತವಾಗಿ ಈಶ್ವರನ್ನ ನೆನೆಸಿಕೊಳ್ಳಿ. ನಿಮ್ಮ ಗ್ರಾಮದೇವತೆ ಮದ್ದೂರಮ್ಮ ದೇವರಿಗೆ ಹರಸಿಕೊಳ್ಳಿ. ಕಾಪಾಡ್ತಾರೆ ಇಬ್ರು. ಆಯ್ತಾ ? ಆಮೇಲೆ ಇದೇ ವಾರ ಆಪರೇಷನ್ ಮಾಡ್ಸಿಕೊಳ್ಳೋ ಹಾಗಿದ್ರೆ ಎರಡು ದಿನ ಮುಂಚೆ ನಮಗೆ ಫೋನ್ ಮಾಡಿ ತಿಳಿಸಿ ."

ಸಮಾಧಾನವಾಯ್ತು ಅನ್ಸತ್ತೆ ಅವರಿಗೆ. ತಲೆಯಲ್ಲಾಡಿಸಿ ಸಮ್ಮತಿಸಿದರು. ಆದ್ರು ಅವರಿಗೆ ಔಷಧಿ ಚಿಂತೆ. ನಾನು ಡಾಕ್ಟರ್ ಆಂಟಿ ಅದಕ್ಕೂ ವ್ಯವಸ್ಥೆ ಮಾಡುತ್ತಾರೆ ಎಂದು ಹೇಳಿ ಸಮಾಧಾನಗೊಳಿಸಿದೆ. ಅಷ್ಟೊತ್ತಿಗೆ ಹಿರಿಯರ ದುಂಡು ಮೇಜಿನ ಪರಿಷತ್ತು ಮುಗಿದಿತ್ತು. ತಾಯಮ್ಮ ಒಟ್ಟು ಐದು ಮನೆಗಳಲ್ಲಿ ಕೆಲಸ ಮಾಡುತ್ತಿದ್ದರು. ಎಲ್ಲರೂ ತಲಾ ಒಂದೊಂದು ಸಾವಿರ ರುಪಾಯಿ ಕೊಡಲು ಮುಂದಾದರು. ಮಿಕ್ಕೈದು ಸಾವಿರಕ್ಕೆ ಅವರ ಯಜಮಾನರು ವ್ಯವಸ್ಥೆಮಾಡಬೇಕೆಂದೂ, ಅದಾಗಲಿಲ್ಲವೆಂದರೆ ಮುಂದೆ ಯೋಚನೆ ಮಾಡಬೇಕೆಂಬುದು ನಿರ್ಧಾರವಾಯಿತು.ಸಂಬಳದಲ್ಲಿ ಸದ್ಯಕ್ಕೆ ಹಿಡಿಯುವುದಿಲ್ಲ, ಕಂತು ಕಂತಾಗಿ ಆದಾಗ ತೀರಿಸು ಎಂದು ಎಲ್ಲರೂ ಹೇಳಿದರು. ಆದರೆ ತಾಯಮ್ಮ ನೀವು ಸಂಬಳದಲ್ಲಿ ದುಡ್ಡು ಹಿಡಿದುಕೊಳ್ಳುವುದಾದರೆ ಮಾತ್ರ ದುಡ್ಡು ತೆಗೆದುಕೊಳ್ಳುವುದಾಗಿ ಹೇಳಿದರು. ನಾನು ಅವರ ಸ್ವಭಿಮಾನ ಕಂಡು ಬೆರಗಾದೆ.ನನ್ನ ದೃಷ್ಟಿಯಲ್ಲಿ ತಾಯಮ್ಮ ಬಹಳ ಉನ್ನತಸ್ಥಾನ ತಲುಪಿದರು. ಎಲ್ಲರೂ ಒಪ್ಪಿದರು. ತಾಯಮ್ಮ ಕೃತಜ್ಞತಾಪೂರ್ವಕವಾಗಿ ಅತ್ತು ಕಣ್ಣೀರಿಟ್ಟರು. ಮೆಗಾಸೀರಿಯಲ್ಲು ನೋಡಿ ಅತ್ತು ಅತ್ತು ಪಳಗಿದ್ದ ತಾಯಂದಿರೂ ಕಣ್ಣೀರ ಕೋಡಿಯನ್ನು ಸಮೃದ್ಧವಾಗಿಯೇ ಹರಿಸಿದರು.

Z : i see.... ಆಮೇಲೆ ?

ನಾನು : ಆಮೇಲೆ ಇನ್ನೇನು ? ತಾಯಮ್ಮ ಇನ್ನು ಮಾರನೇ ದಿನವೇ ಬಂದು ದುಡ್ಡು ತೆಗೆದುಕೊಳ್ಳುವುದಾಗಿ ಹೇಳಿ, ಮಾರನೇ ದಿನವೇ substitute ಕೆಲಸದವಳನ್ನ ಹುಡುಕಿ ತರುತ್ತೇನೆಂದು ಭಾಷೆಯಿತ್ತರು. ಮಹಿಳೆಯರು, ಆ ಕೆಲಸದವಳು ನಿನ್ನಂತೆಯೇ ನಂಬಿಕಸ್ಥಳಾಗಿರಬೇಕೆಂದು ತಾಕೀತು ಮಾಡೀದರು. ಯಾಕಂದರೆ ಕೆಲವರು ತಾಯಮ್ಮನಿಗೆ ಅವರ ಮನೆಯ ಬೀಗ ಕೊಟ್ಟು ಕೆಲಸಕ್ಕೆ ಹೋಗುತ್ತಿದ್ದರು.ತಾಯಮ್ಮ ಮನೆಯ ಕೆಲಸವೆಲ್ಲ ಮಾಡಿ ನಂತರ ಬೀಗ ಹಾಕಿ ಅವರ ಬಳಿಯೇ ಇಟ್ಟುಕೊಂಡಿರುತ್ತಿದ್ದರು. ಆದ್ದರಿಂದ ತಾಯಮ್ಮನ ಬಿಟ್ಟು ಬೇರೆ ಯಾರನ್ನೂ ನಂಬಲು ಮಾತಾಮಣಿಯರು ತಯಾರಿರಲಿಲ್ಲ. ಪರಿಸ್ಥಿತಿಯ ಗಾಢತೆಯನ್ನು ಅರಿತ ತಾಯಮ್ಮ ಅಂಥಾ ಮನೆಯವರಿಗೆ ಕೆಲಸದವಳನ್ನು ಅವರೇ ಹುಡುಕಿಕೊಳ್ಳಬೇಕೆಂದು ಬೇಡಿಕೊಂಡರು. ಯಾಕಂದರೆ ಹೊಸೊಬ್ಬರಿಗೆ ಬೀಗ ಕೊಡಲು ಸ್ವಯಂ ತಾಯಮ್ಮನೂ ಹಿಂಜರಿಯುತ್ತಿದ್ದರು. ಮೂರು ಮನೆಯ ಬೀಗ ತಾಯಮ್ಮನ ಸುಪರ್ದಿಯಲ್ಲಿದ್ದವು. ಅವರೆಲ್ಲರೂ ಬೇರೆ ವ್ಯವಸ್ಥೆ ಮಾಡಿಕೊಳ್ಳಲು ನಿರ್ಧರಿಸಿದರು. ನಮ್ಮ ಮನೆ ಮತ್ತು ನಮ್ಮ ಎದಿರು ಮನೆಗೆ ಕೆಲಸದವಳನ್ನು ತರುವ ಜವಾಬ್ದಾರಿ ತಾಯಮ್ಮ ಹೊತ್ತರು. ನನ್ನ ಪ್ರಾಬ್ಲೆಮ್ ಸಾಲ್ವ್ ಆಯ್ತೆಂದು ನಾನು ಸಂತೋಷ ಪಟ್ಟೆ. ಆದರೂ ಅಮ್ಮ ಹೊಸೊಬ್ಬಳು ಬರ್ತಾರೆ, ಮನೆ ಕಡೆ ನಿಗಾ ಇರಲಿ, ವಸ್ತುಗಳು ಭದ್ರ ಎಂದು ಕಿವಿಮಾತು ಹೇಳಿದರು. ಆದರ್ಶ ಮಕ್ಕಳಂತೆ ನಾನು ಮತ್ತು ನನ್ನ ತಂಗಿ ಆ ಕಿವಿಮಾತನ್ನು ಈ ಕಿವಿಯಲ್ಲಿ ಕೇಳಿ ಆ ಕಿವಿಯಲ್ಲಿ ಹೊರಹಾಕಿದೆವು.

Z : so far so good. ಆಮೇಲೆ ?

ನಾನು : ಈಗ ಪಾತ್ರೆ ತೊಳೆಯುವುದಿದೆ. ನಾಳೆ continue ಮಾಡುವೆ.

line on hold.

Monday, July 21, 2008

ತಾಯಮ್ಮ- ೧

ನಾನು : ಅದು ಯಾವ ಘಳಿಗೆಯಲ್ಲಿ ನನಗೆ ಒಂದು ಚೂರು ಕೆಲ್ಸ ಇಲ್ಲ ಅಂತ ಹೇಳಿದೆನೋ...ಈಗ ಒಂದು ಚೂರೂ ಬಿಡುವು ಸಿಗದಷ್ಟು ಕೆಲ್ಸ ಮಾಡುವ ಹಾಗಾಗಿದೆ !

Z : ಯಾಕೇ ? ಏನಾಯ್ತು ?

ನಾನು : ತಾಯಮ್ಮ ....ಅದೇನಮ್ಮ ಮನೆಯ ಕೆಲ್ಸದವರು....

Z : ಹುಷಾರಾಗಿದ್ದಾರೆ ತಾನೆ ? ಪಾಪ ಅವರಿಗೆ ಏನಾಯ್ತು ?

ನಾನು : ಅದೊಂದು ದೊಡ್ದ ಕಥೆ.

Z : ಹೇಳಿಬಿಡು, ಕೇಳುತ್ತೇನೆ.

ನಾನು : ಹೋದ ವರ್ಷ ಡಿಸೆಂಬರ್ ವರೆಗೂ ಏನೂ ತೊಂದರೆ ಇರಲಿಲ್ಲ. ಜನವರಿ ತಿಂಗಳ ಕೊನೆಯಲ್ಲಿ ಅಚಾನಕ್ಕಾಗಿ ತಾಯಮ್ಮ ಒಂದು ದಿನ ಕೆಲಸಕ್ಕೆ ಬರಲಿಲ್ಲ. ಏಳು ವರ್ಷದಿಂದ ಒಂದು ದಿನವೂ ತಪ್ಪಿಸದೆ, ಮದುವೆ ಮುಂಜಿ ಮುಂತಾದ ಸಮಾರಂಭಗಳಿದ್ದರೂ ಕೆಲ್ಸ ಮುಗಿಸಿಕೊಂಡೆ ಹೋಗುತ್ತಿದ್ದ ತಾಯಮ್ಮ ಗಾಯಬ್ಬಾಗಿದ್ದು ನಮಗೆ ಭಯ ತರಿಸಿತು. ಅವರಿದ್ದ ಮನೆಯ ಯಜಮಾನ ರಾತ್ರೋ ರಾತ್ರಿ ಗಲಾಟೆ ತೆಗೆದು ಅವರನ್ನು ಓಡಿಸಿದನೋ, ಅವರಿಗೆ ಹುಷಾರಿರಲಿಲ್ಲವೋ, ಮಕ್ಕಳು ಶಾಲೆಗೆ ಹೋಗುವಾಗ ಏನಾದರೂ ಅಪಘಾತವಾಯಿತೋ, ಊರಿನಲ್ಲಿದ್ದ ಅವರ ಅತ್ತೆ ಮಾವಂದಿರು ಸೀರಿಯಸ್ಸಾದರೋ, ....ಹೀಗೆ ನಮಗೆ ಯೋಚನೆಗಳು ಅಲೆಯಲೆಯಾಗಿ ಹುಟ್ಟಿಬಂದು ತಲೆಕೊಳವನ್ನು ರಾಡಿಯಾಗಿಸಿದವು. ಯೋಚನೆಯಲ್ಲಿದ್ದುಕೊಂಡೇ ಅಮ್ಮ ಕಷ್ಟ ಪಟ್ಟು ಪಾತ್ರೆ ತೊಳೆದುಕೊಂಡರು. ನನಗೆ ಕಾಲೇಜು, ತಂಗಿ ಹತ್ತನೇ ಕ್ಲಾಸು.ಅಮ್ಮ, ನಮ್ಮನ್ನ ಮಾತಾಡಿಸಲೇ ಬೇಡವೆಂದು ನಾವು ಹೇಳಿಬಿಟ್ಟಿದ್ದೆವು. ಅಮ್ಮ ಅವರ ಸಂಗೀತ ಕಚೇರಿಗಳ ಕಡೆಗೂ ಗಮನ ಹರಿಸಬೇಕಿತ್ತು. ತಾಯಮ್ಮ ದಿನಗಳ ಗಟ್ಟಲೆ ನಾಪತ್ತೆಯಾದರೆ ಗತಿಯೇನೆಂಬುದು ಡೈನಿಂಗ್ ಟೇಬಲ್ ಮೇಲಿನ ಬಿಸಿ ಬಿಸಿ ಚರ್ಚೆಯಾಯಿತು.

ಅಮ್ಮನಿಗೆ ಪಾತ್ರೆ ತೊಳೆಯುವುದು ಕೆಲವು ಮುಖ್ಯ ಕಾರಣಗಳಿಂದ ಅಸಾಧ್ಯ. ಅಮ್ಮ ಹಾಗಂತ ಸುಮ್ಮನಿರುವ ಪೈಕಿ ಅಲ್ಲ...ತೊಳೆದು ಒದ್ದಾಡುತ್ತಾರೆ. ಜೋಶ್ ಅಲ್ಲಿ ಕೆಲಸ ಮಾಡಿ ನಂತರ ಸುಸ್ತಾದರೆ ಮನೆ ಅಲ್ಲೋಲ ಕಲ್ಲೋಲವಾಗುತ್ತದೆ ಎಂಬುದು ನಮಗೆ ಗೊತ್ತಿತ್ತು. ಬೆಳಗ್ಗೆ ಅಮ್ಮ ಎಬ್ಬಿಸದಿದ್ದರೆ ನಮಗೆ ಎಚ್ಚರವಾಗುವುದೇ ಇಲ್ಲ..ಯಾರು ಎಷ್ಟೇ ಜೋರಾದ ಅಲಾರಮ್ ಇಟ್ಟರೂ ಅದು ಅಮ್ಮನ ಕೂಗಿನ ಮುಂದೆ ಏನೇನೂ ಇಲ್ಲ. ಅಪರ್ಣನಿಗೆ ಊಟ ಶಾತಾಯ ಗತಾಯ ಸ್ಕೂಲಿಗೆ ಆಗಲೇ ಬೇಕು. ಅಮ್ಮನ ಮೇಲೆ ಅಷ್ಟು dependent ನಾವು. ಹೀಗಿರುವಾಗ ಅಮ್ಮ ಸುಸ್ತಾದರೆ ನಮ್ಮ ಗತಿಯೇನು ಎಂಬುದು ನಮ್ಮ ದೊಡ್ದ ಸಮಸ್ಯೆಯಾಯಿತು.

ನಾನೊಂದು ನಿರ್ಧಾರಕ್ಕೆ ಬಂದೆ. ಲೈಬ್ರರಿಯಲ್ಲಿ ಸಾಯಂಕಾಲ ಕೂತು ಓದುವ ಬದಲು ಬೇಕಿದ್ದನ್ನು ಜೆರಾಕ್ಸ್ ಮಾಡಿಸಿಡುವುದು. ಮನೆಗೆ ಬಂದು ಅಮ್ಮನಿಗೆ ಸಹಾಯ ಮಾಡಿ ನಂತರ ಓದುವುದೆಂದು ನಿರ್ಧರಿಸಿ ಅಮ್ಮನಿಗೆ ನಾನು ಸಾಯಂಕಾಲ ಬಂದ ತಕ್ಷಣ ಪಾತ್ರೆ ತೊಳೆಯುವುದಾಗಿ ಹೇಳಿದೆ. ಇದೊಂದು ತಾತ್ಕಾಲಿಕ ಪರಿಹಾರವಾಗಿ ಗೋಚರಿಸಿತು.ಥಟ್ಟನೆ ಒಪ್ಪಿದರು.

ಮಾರನೆಯ ದಿನ ತಾಯಮ್ಮ ನಾನು ಕಾಲೇಜಿಗೆ ಹೋದಾಗ ಪ್ರತ್ಯಕ್ಷಳಾಗಿದ್ದಾಳೆ. ಹಿಂದಿನ ದಿನ ಬೆಳಿಗ್ಗೆ ವಿಪರೀತ ಹೊಟ್ಟೆನೋವು ಬಂದು ನೋವು ತಾಳಲಾಗದೇ ಆಸ್ಪತ್ರೆಗೆ ದೌಡಾಯಿಸಿದ್ದಾಳೆ. ಅದೂ ಗವರ್ನಮೆಂಟ್ ಆಸ್ಪತ್ರೆ, ಬನಶಂಕರಿ ಎರಡನೇ ಸ್ಟೇಜಿನಲ್ಲಿರುವಂಥದ್ದು. ಯಾಕಂದರೆ, ಅಲ್ಲಿಯ ಡಾಕ್ಟರು ನಮ್ಮನೆಯ ಬೀದಿಯ ಕಡೆಯ ಮನೆಯ ನಿವಾಸಿ. ಇವಳು ಆ ಮನೆಯಲ್ಲೂ ಕೆಲ್ಸ ಮಾಡೂತ್ತಾಳೆ...ದುಡ್ದು ಕಡಿಮೆಯಾಗತ್ತೆ ಅಂತ ಹೋಗಿದ್ದಾಳೆ. ಅವರು ಇವಳ ಸ್ಥಿತಿ ನೋಡಿ ಬಯಾಪ್ಸಿ ಗೆ ಬರೆದುಕೊಟ್ಟಿದ್ದಾರೆ. ಸೂಜಿಯೆಂದರೆ ಮೈಲಿದೂರ ಓಡುವ ತಾಯಮ್ಮ ನಾನು ಹೀಗೆ ಸಾಯುತ್ತೇನೆ, ಚುಚ್ಚಿಸಿಕೊಳ್ಳುವುದಿಲ್ಲ ಎಂದು ಭೀಷ್ಮಪ್ರತಿಜ್ಞೆ ಮಾಡಿ ಮಾರನೆಯ ದಿನ ಯಮಯಾತನಾ ಸದೃಶ ನೋವಲ್ಲಿಯೂ ಕೆಲಸಕ್ಕೆ ಬಂದಿದ್ದಾಳೆ.

Z : ಛೆ ! ಬಯಾಪ್ಸಿ ಏನ್ ಮಹಾ ? ಏನೂ ತೊಂದರೆಯಾಗಲ್ಲ ಅಲ್ಲವಾ ?

ನಾನು : ಅದು ನನಗೆ ಗೊತ್ತು, ನಿನಗೆ ಗೊತ್ತು, ಡಾಕ್ಟರ್ ಆಂಟಿಗೆ ಗೊತ್ತು. ಹೆಬ್ಬೆಟ್ಟು ತಾಯಮ್ಮನಿಗೆ ಏನ್ ಗೊತ್ತು ?

Z : right ! ಆಮೇಲೆ ?

ನಾನು : ರಸ್ತೆಯ ಮನೆಯೊಡತಿಯರೆಲ್ಲ ತುರ್ತು ಸಭೆ ಕರೆದು, ತಾಯಮ್ಮನ್ನು ಕೂರಿಸಿ shift ನಲ್ಲಿ ಧೈರ್ಯ ಹೇಳಲು ಪ್ರಯತ್ನಿಸಿದ್ದಾರೆ. ದುಡ್ದು ನಾವು ಕೊಡುವೆವೆಂದೂ, ಬಯಾಪ್ಸಿಯ ಬಗ್ಗೆ ಭಯ ಬೇಡವೆಂಡು ತರತರಹ ರೀತಿಯಲ್ಲಿ ಧೈರ್ಯ ಹೇಳಲು ಪ್ರಯತ್ನಿಸಿದ್ದಾರೆ. ಆದರೆ ತಾಯಮ್ಮ, ಈಗಾಗಲೆ ಮನೆಗೆ ಭೋಗ್ಯಕ್ಕೆ ತೆಗೆದುಕೊಳ್ಳಲು ಮಾಡಿರುವ ಸಾಲವೇ ತೀರಿಲ್ಲ, ಇನ್ನು ಮತ್ತೆ ಸಾಲ ಮಾಡುವುದಿಲ್ಲ , ತನಗೆ ಆಪರೇಷನ್ ಅಂದರೆ ಪ್ರಾಣಭಯವಿರುವ ಕಾರಣ ತಾನೇನು ಮಾಡಿದರೂ ಆಪರೇಷನ್ ಮಾಡಿಸಿಕೊಳ್ಳುವುದಿಲ್ಲ ವೆಂದು ಬಿಕ್ಕಿ ಬಿಕ್ಕಿ ಅತ್ತು ಹೋಗಿದ್ದಾಳೆ. ಇದಾದದ್ದು ಒಂದು ಶನಿವಾರದಂದು.

ಶನಿವಾರ ರಾತ್ರಿ ನಮ್ಮಮ್ಮ ಕಥೆಯನ್ನ ನನಗೆ ಸವಿವರವಾಗಿ ತಿಳಿಸಿದರು. ತಾಯಮ್ಮನಿಗೆ ನನ್ನ ಕಂಡರೆ ವಿಷೇಷ ಪ್ರೀತಿ. ನನ್ನ book rack ನೋಡಿ ನಾನು ಮಹಾಬುದ್ಧಿವಂತಳೆಂದುಕೊಂಡಿದ್ದಾರೆ. ಬೀದಿಯ ಬುದ್ಧಿಜೀವಿಗಳು ಒಂದು ಉಪಾಯ ಮಾಡಿದರು. ನನ್ನ ಕೈಲಿ ಹೇಳಿಸಿ ನೋಡಲು sketch ಹಾಕಿದರು . ನಾನೂ ಸರಿ try ಮಾಡುವ ಎಂದು ಒಪ್ಪಿಕೊಂಡೆ.

ಭಾನುವಾರ ತಾಯಮ್ಮ ಎಂದಿನಂತೆ ಬಂದರು. ಮುಖದಲ್ಲಿ ರೋಗ ಲಕ್ಷಣ ಎದ್ದುಕಾಣುತ್ತಿತ್ತು.

ನಾನು : ಏನು ತಾಯಮ್ಮ...ಹೇಗಿದ್ದೀರಿ ?

ತಾಯಮ್ಮ : ಪರ್ವಾಗಿಲ್ಲ...ಮಾತ್ರೆ ತಿಂದು ಸಲ್ಪ ಗೆಲ್ವಾಗಿದ್ದೀನಿ ಅಮ್ಮಾವ್ರೆ....

ನಾನು : ಡಾಕ್ಟರ್ ಆಂಟಿ ಬರೆದುಕೊಟ್ಟ ಹಾಗೆ ಬಯಾಪ್ಸಿ ಮಾಡಿಸಿಕೊಳ್ಳಿ.

ಅವರು : ಆಗಕ್ಕಿಲ್ಲ ಅಮ್ಮೌ...ಆಗಕ್ಕಿಲ್ಲ. ಹೊಟ್ಟೆ ಕುಯ್ದ್ರೆ ನೋವಾಗಲ್ವ ? ನಂಗೆ ಮೊದ್ಲೇ ಆಸ್ಪತ್ರೆ ವಾಸ್ನೆ ಆಗಕ್ಕಿಲ್ಲ. ವುಟ್ಟ್ದಾಗಿಂದ ನಾನು ಆಸ್ಪತ್ರೆ ಗೆಲ್ಲ ಓದವ್ಳೇ ಅಲ್ಲ...ಹೆರಿಗೇ ನೂ ಸೂಲ್ಗಿತ್ತೀರೆ ಮಾಡವ್ರೆ ನಮ್ಮೂರ್ನಾಗೆ... ಈಗ್ ಎಂಗ್ ಓಗ್ಲಿ ಯೋಳೀ...ಆಗಕ್ಕಿಲ್ಲ ತಗಳಿ ! ಇಂಗೆ ಒಂಟೋಓಓಓಗ್ಲಿ ಪಿರಾನ.

ನಾನು ಬರುತ್ತಿದ್ದ ನಗುವನ್ನ ಕಷ್ಟ ಪಟ್ಟು ತಡೆದೆ. ನಾನಂದೆ,

"ತಾಯಮ್ಮ...ಹೊಟ್ಟೆ ಕುಯ್ಯಬೇಕೋ ಇಲ್ವೋ ಅಂತ ನೋಡೊಕೆ ನೆ ಈ ಬಯಾಪ್ಸಿ ಮಾಡೊದು...ಸುಮ್ ಸುಮ್ನೆ ಹೊಟ್ಟೆ ಕುಯ್ಯೋಕೆ ನೀವೇನು ನೀವು ತಿನ್ನೋ ಕೋಳಿಯೋ ಅಥವ ನಾವು ತಿನ್ನೋ ಕುಂಬಳಕಾಯೋ ? ಗೊತ್ತಿರೋ ಡಾಕ್ಟರ್ರೇ ಇರೋವಾಗ ಎಂಥಾ ಭಯ ? ನರ್ಸ್ ಗಳೆಲ್ಲ ಚೆನ್ನಾಗ್ ನೋಡ್ಕೋತಾರೆ ಡಾಕ್ಟರ್ ಭಯದಿಂದ. ಹೆದ್ರುಕೋಬೇಡಿ.. ಏನಾಗಲ್ಲ...ಮೊದ್ಲು ಊರಿಗೆ ಟೆಲಿಗ್ರಾಂ ಕಳಿಸಿ ನಿಮ್ಮ ವಾರಗಿತ್ತಿಯನ್ನೋ ಯಾರಾರ್ನು ಕರ್ಸ್ಕೊಳ್ಳಿ. ಒಬ್ಬರೆ ಆಸ್ಪತ್ರೆಗೆಲ್ಲ ಹೋಗ್ಬೇಡಿ. ಹೋಗಿ ಬೇಗ ಬಯಾಪ್ಸಿ ಮಾಡಿಸಿ.... ಹೀಗೆ ನರಳಬೇಡಿ.

ಆಆಆಆಅಂ೦೦೦೦೦೦೦೦ ಅಂದರು ತಾಯಮ್ಮ...ಜ್ಞಾನೋದಯವಾದಂತೆ. ಪುಳಕ್ಕಂತ ಒಂದು ಡೌಟು ಬಂದು ನನ್ನನ್ನ ಮತ್ತೆ ಕೇಳಿದರು -

"ಅಲ್ಲಾ.....ಹೊಟ್ತೆ ಕುಯ್ದೇ ಇದ್ರೆ ಏನಾಗದೆ ಒಳಾಗೆ ಅಂತ ಎಂಗ್ಗೊತಾಯ್ತದೆ ?"

ನನಗೆ ಬಯಾಪ್ಸಿ ಬಗ್ಗೆ ಏನೂ ಗೊತ್ತಿರಲಿಲ್ಲ...ಇವರಿಗೆ ಹೇಗೆ ಹೇಳದು ? ನನ್ನ ಮಾನದ ಪ್ರಶ್ನೆ! ಸರಿ ನಾನಂದೆ -

"ಏನಿಲ್ಲ ತಾಯಮ್ಮ, ಕುಯ್ಯದೇ ನೋಡುವ ಹಾಗೆ ಈಗ ಬೇಕಾದಷ್ಟು ಮೆಷಿನ್ನುಗಳನ್ನ ಈಗ ಕಂಡುಹಿಡಿದಿದ್ದಾರೆ. ಅದಕ್ಕೆ ಕುಯ್ಯದೇ ನೋಡಿ ತಿಳಿದುಕೊಳ್ಳಬಹುದು."

ಅವರು : "ಟಿವಿ ನೋಡಿ ಮಗು ಇಂಗದೇ ಅಂತ ಬಸುರಿಗಳಿಗಳಿಗೆ ತೋರ್ಸ್ತವ್ರಲ್ಲ..ಅಂಗಾ ?"

ನಾನು : "ಹೂ...ಒಂಥರಾ ಹಂಗೇ..."

Z : ultrasound scanning ಹಾಗೂ biopsy ಯನ್ನ ಎಷ್ಟು ಚೆನ್ನಾಗಿ confuse ಮಾಡ್ಕೊಂಡಿದಾರೆ ನೋಡು !

ನಾನು : ಹೂ....ಮತ್ತೆ ತಾಯಮ್ಮ ತಮ್ಮ questionnaire ತೆಗೆದರು. ನಾನು ಸರ್ವಜ್ಞೆ ಅಂದುಕೊಂಡು.

ತಾಯಮ್ಮ : ಅಲ್ಲ ಅಮ್ಮಾವ್ರೆ, ಈಗ ವೊಟ್ಟೇಲಿ ಏನಾದ್ರು ಅದೆ ಅಂದ್ರೆ ಕುಯ್ಯದೇ ತೆಗ್ಯಕ್ಕಾಗಕ್ಕಿಲ್ವಾ ? ನೀವು ಟಿವಿ ನೋಡ್ಕೊಂಡು ಅಮೇರಿಕದಲ್ಲಿರೋ ನಿಮ್ಮ ದೊಡ್ಡಪ್ಪನ ಜೊತೆ ಮಾತಾಡ್ತಿರಾ ಫೋನಿಲ್ಲದೇ ....ಅಂಗೇ ತೆಗ್ಯಕ್ಕಾಗಕ್ಕಿಲ್ವಾ ?

Z : excellent mess up of monitor with web cam and scanner ! uhahahaha !!!

ನಾನು : ನಗು ! ನಾನು ಅಲ್ಲಿ ಇವರಿಗೆ ಹೇಗಪ್ಪಾ ಹೇಳದು ಅಂತ ಯೋಚನೆಮಾಡುತ್ತಿದ್ದರೆ....

ಸರಿ, ನಾನಂದೆ,

ನಾವು ಮಾತಾಡೋದು ಬೇರೆ ಟಿವಿ, ಇದು ಬೇರೆ ಟಿವಿ ತಾಯಮ್ಮ...ಹಂಗೆಲ್ಲ ತೆಗ್ಯಕ್ಕಾಲ್ಲ, ಸಣ್ಣದಿದ್ದರೆ ಮಾತ್ರೆಯಲ್ಲೇ ಕರಗಿಸುತ್ತಾರೆ....ನೀವು ಹೋಗಿ ಬನ್ನಿ...ಗಾಬರಿಯಾಗಬೇಡಿ...ನಿಮಗೆ ಸೂಜಿ ಚುಚ್ಚಲ್ಲ.

ಅವರು : ಏನೋ ನೀವ್ ಯೋಳ್ತಿದೀರಾ ಅಂತ ಎದೆ ಗಟ್ಟಿಮಾಡ್ಕಂಡ್ ಓಯ್ತಿವ್ನಿ....ನಮ್ಮೂರ್ನಾಗೆ ಪಟೆಲ್ರ ಮೊಬೈಲ್ ಗೆ ಮಗನ ಕೈಲಿ ಫೋನ್ ಮಾಡ್ಸಿ ಕರ್ಸ್ಕೊತಿನಿ ವಾರ್ಗಿತ್ತೀನ.... ನಾನ್ ಈಟ್ ದಿನ ಜೀವಾ ತೇಯ್ದಿವ್ನಿ...ಈಗ ಅವ್ರೂ ಸಲ್ಪ ತೇಯ್ಲಿ ಅತ್ಲಾಗೆ....

ಅಂತೂ ಆಸ್ಪತ್ರೆಗೆ ಹೋಗಲು ಗಟ್ಟಿ ಮನಸ್ಸು ಮಾಡಿದರಲ್ಲ, ಸದ್ಯ ಅಂದುಕೊಂಡೆ. ಮುಗಿಯಿತಪ್ಪಾ ರಗಳೆ ಅಂದರೆ ಮತ್ತೆ ಶುರುವಾಯ್ತು ಅವರ ಪ್ರಶ್ನಾವಳಿ.

"ಅಲ್ಲಾ ಅಮ್ಮಾವ್ರೆ....ಇದೆಂಥದ್ದು ಮಾತ್ರೆ...ಡುಮ್ಮಕ್ಕೆ ? ಏನಕ್ಕೆ ತಗಬೇಕು ಅಂತ ಗೊತ್ತಿಲ್ಲ....ಏಟ್ ದುಡ್ಡು ಅಂತೀರಿ ...ಇನ್ನೂರು ರುಪಾಯಿ ಬರೀ ಮಾತ್ರೆ ಗೇ ಆಗ್ ಓಯ್ತ್ ತಗಳಿ....ಇದು ನೋಡಿ ಏನಕ್ಕೆ "ಅಂತ ಎಂದು ತಂದಿದ್ದ ಮಾತ್ರೆಗಳು, ಪ್ರಿಸ್ಚ್ರಿಪ್ಷನ್ನು ನನ್ನ ಮುಂದಿಟ್ಟರು.

ನಾನು ನೋಡಿದೆ. ನಿಶ್ಶಕ್ತಿಗೆ ಗೆ ಆ ಮಾತ್ರೆಗಳು ಅಂತ ಗೊತ್ತಾಯ್ತು. ಇನ್ನು ಬಿ ಕಾಂಪ್ಲೆಕ್ಸ್ ಮಾತ್ರೆಗಳು..ವಿಟಮಿನ್ ಕೊರತೆಗೆ. ರಕ್ತಹೀನತೆಗೊಂದಿಷ್ಟು. ಇದನ್ನೆಲ್ಲಾ ಹೇಗೆ ಹೇಳೋದಿವರಿಗೆ ? ದುಡಿದು ಹಣ್ಣಗಾದರೂ, ಉಪವಾಸ ಮಾಡಿದರು ತಾನು ಗಟ್ಟಗಿತ್ತಿ ಅನ್ನೋ ಅಚಲವಾದನಂಬಿಕೆ ಇವರಿಗೆ. ಇದನ್ನೆಲ್ಲ ನಾನು ಹೇಳಿದರೆ ಇವರು ನಂಬೋ ಪೈಕಿಯಲ್ಲ." ಎಂಟೆಂಟು ಮನೆಲಿ ಡುಡಿತಿನಿ..ನಂಗೆಂಥದ್ದು ನಿಶ್ಶಕ್ತಿ ಇವ್ರ ಮನೆಯಾಳಾಗ...ವೋಗಿ ನಾನ್ ವೋಗಕ್ಕಿಲ್ಲ...ಸುಳ್ಳು ಯೋಳಿ ದುಡ್ದ್ ತಿಂತಾರೆ ಬಡ್ಡಿಮಕ್ಳು ! ಕಾಲ ಕೆಟ್ಟೋಗದೆ ! ಸುಮ್ಸುಮ್ನೆ ವೊಟ್ಟೆ ಕುಯ್ತಾರೆ ನೋಡಿ...ನಂಗೊತ್ತು ಎಲ್ಲಾ ! ಟಮೇಟೋ ಮನೇಲಿ ಬೆಳೆದು ತಿಂತಿವಿ, ರಕ್ತ ಇಲ್ವಂತೆ....ಏನ್ ಕಂಡವ್ರೆ ಅಂತ ? ಇನ್ನು ಈ ಡುಮ್ಮು ಮಾತ್ರೆ...ಗಂಟ್ಲಲ್ಲಿ ಇಳಿಯದೇಲ್ಲಾ ಅನ್ನತ್ತೆ...ಯೆಂಗ್ ತಿನ್ನೋದವ್ವಾ ? ನಾನ್ ಓಗಕ್ಕಿಲ್ಲ...ಮಾತ್ರೆ ನೂ ತಗಳಾಕ್ಕಿಲ್ಲಾ " ಅಂತೆಲ್ಲ ಉಲ್ಟಾ ಹೊಡಿದರೆ ಏನ್ ಗತಿ ? ನಾನಂದೆ-

ವಯಸ್ಸು ನಲ್ವತ್ತಾಯ್ತಲ್ಲ ತಾಯಮ್ಮ....ದೇಹದಲ್ಲಿ ಬದಲಾವಣೆ ಆಗಕ್ಕೆ ಶುರುವಾಗತ್ತೆ...ನಿಮ್ಗೂ ಗೊತ್ತಿದೆ ಅಲ್ವಾ ? ಅದು ತೊಂದ್ರೆ ಕೊಡದೇ ಇರ್ಲಿ ಅಂತ ಇಷ್ಟ್ ಮಾತ್ರೆ ಕೊಟ್ಟಿದ್ದಾರೆ.

ಓ............ ಅಂಗೆ ! ಈಗ್ ಏನೋ ಒಂಥರಾ ಧೈರ್ಯ ಬರ್ತಿದೆ....ಏನೂ ಆಗಲ್ಲ ಅಂತೀರಾ ?

ನಾನು : ಏನೂ ಆಗಲ್ಲ !

ಅವರ ರೋಗಪೀಡಿತ ಮುಖದಲ್ಲಿ ಎಲ್ಲೋ ಸಮಾಧಾನದ ನಗುವೊಂದು ಮಿಂಚಿ ಮಾಯವಾಯ್ತು. ನಾಳೇ ಕೆಲಸಕ್ಕೆ ಬರಬೇಡಿ, ಇಂಡು ಕೆಲಸ ಮಾಡಬೇಡಿ ಎಂದು ಹೇಳಿಯೇ ಕಳಿಸಿದೆವು. ತಾಯಮ್ಮ ಡಾಕ್ಟರ್ ಬಳಿ ಹೊರಡಲನುವಾದರು.

Z : ಒಳ್ಳೇ ತಾಯಮ್ಮ ! ಆಮೇಲೆ ? ಮಾಡಿಸಿದರಾ ಬಯಾಪ್ಸಿ ? ಏನ್ ಬಂತು ರೆಪೋರ್ಟ್ ?

ನಾನು : ಈಗ ನಂಗೆ ಸಲ್ಪ ಕೆಲ್ಸ ಇದೆ. second round ಪಾತ್ರೆ ತೊಳಿಬೇಕು. ನಾಳೆ ಕಥೆ ಮುಂದುವರಿಸುವೆ.

line on hold.

Tuesday, July 15, 2008

ವಿದ್ಯಾಲಯ ಪ್ರವಾಸ ಭಾಗ ೨

Z : oho...I cant wait !! tell me how is the department !


ನಾನು : ಚೆನ್ನಾಗಿದೆ. building ಹೊಸಾದು. ಜೊತೆ ಇಟ್ಕೋಂಡ್ ಹೋಗ್ಬೇಕು ಈ ಜಾಗಕ್ಕೆ. ಒಬ್ಬ್ರೇ ಹೋದ್ರೆ ಕಳ್ದೋಗ್ತಿವಿ.

Z : ಹೌದಾ ? ವಿಪರೀತ ನಿರ್ಜನ ಪ್ರದೇಶ ನ ?

ನಾನು : ಹು ಕಣೇ . ದಾರಿಯಲ್ಲಿ ಒಂದು ಬೀದಿ ದೀಪ ನೂ ಕಣ್ಣಿಗೆ ಬೀಳಲಿಲ್ಲ. ಸಾಯಂಕಾಲ ಆದ್ರೆ ನಾವ್ಯಾರೂ ಓಡಾಡಕ್ಕಾಗಲ್ಲ.

Z : ಆಮೇಲೆ ?

ನಾನು : ಗೂಳಿಗಳ ತರಹ ನುಗ್ಗಿ ಆಫೀಸೆಲ್ಲಿದೆ ಎಂದು ಹುಡುಕಿದೆವು. ಅಲ್ಲಿ ಒಬ್ಬರು ಮೇಡಮ್ ಕುಳಿತಿದ್ದರು. ನಾವು ಹೋಗಿ ಕದ ತಟ್ಟಿದೆವು.

ಅವರು: ಬನ್ನಿ !

ನಾವು: ಮೇಡಮ್, ಹೊರ ಯೂನಿವರ್ಸಿಟಿ ವಿದ್ಯಾರ್ಥಿಗಳಿಗೆ ಎಷ್ಟು ಸೀಟುಗಳಿವೆ ?

ಅವರು: ಒಂದೆ. ಮೆರಿಟ್ ಸೀಟ್ ಒಂದೆ.

ನಾವು : payment seats ?

ಅವರು: ಇವೆ.

ನಾವು: ಮೆರಿಟ್ ಸೀಟ್ ಗೆ payment ಸೀಟ್ ಗೆ ಫೀಸ್ ಎಷ್ಟು ?

ಅವರು: ಮೆರಿಟ್ ಗೆ ಹನ್ನೊಂದು ಸಾವಿರ, ಪೇಮೆಂಟ್ ಗೆ ಹೋದ ವರ್ಷ ಅರವತ್ತೈದು ಸಾವಿರ ಇತ್ತು... ಈ ಸರ್ತಿ ಇನ್ನೂ ಜಾಸ್ತಿಯಾಗತ್ತೆ.

ನಮಗೆ ಸಲ್ಪ ಶಾಕ್ ಆಯ್ತು.

ನಾವು : admission procedure ಏನು ?

ಅವರು ವಿವರಿಸಿದರು.

ನಾನು ಎಲ್ಲ ಲ್ಯಾಬುಗಳಿಗೆ, ಗೂಳಿಯ ತರಹ ನೇ ನುಗ್ಗಿ, ಎಲ್ಲ ಕೂಲಂಕುಷವಾಗಿ ನೋಡಿಕೊಂಡು ಬಂದೆ.
ಲೈಬ್ರರಿಯವರು ಇಲ್ಲೆಲ್ಲ ನುಗ್ಗಬಾರದು ಅಂತ diplomatic ಆಗಿ ನನ್ನ ಬೈದರು. actually ಅವರು librarian ಅಂತ ನಂಗೆ ಗೊತ್ತಿರ್ಲಿಲ್ಲ. ಸುಮ್ಮನೆ ಓದುತ್ತಿದ್ದರು. ನಾನು ಅವರನ್ನ disturb ಮಾಡಲು ಇಚ್ಛಿಸದೇ ಹಾಗೆಯೇ ನುಗ್ಗಿ ತಪ್ಪು ಮಾಡಿದೆ. ಸರಿ ಸಾರಿ ಕೇಳಿ ಅಲ್ಲಿಂದ ಹೊರಬಿದ್ದೆವು. ಲ್ಯಾಬ್ ನಲ್ಲಿ ಕೆಮಿಕಲ್ ಗಳು , apparatus ಗಳು ಕಂಡವು. ಸಂತೋಷವಾಯ್ತು. ಹೊರಬಂದೆವು.

Z : ದುಡ್ಡು ಸಲ್ಪ ಜಾಸ್ತಿ ಆಯ್ತಲ್ವ ?

ನಾನು : ಈಗಿನ ಎಡುಕೇಷನ್ ಸಖತ್ ದುಬಾರಿ ....ಎಲ್ ಕ್ ಜಿ ಗೆ ಸಾವಿರಾರು ರೂಪಾಯಿ ಆಗತ್ತ್ವೆ ದೊಡ್ದ ದೊಡ್ದ ಸ್ಕೂಲುಗಳಲ್ಲಿ. ಸ್ಕೂಲಿಗೆ ಕಳಿಸೋದಲ್ಲದೇ ವ್ಯಾನು, ಸ್ವಿಮ್ಮಿಂಗು, ಕರಾಟೆ, ರಾಮ ರಾಮ ....ಹೀಗ್ ಬಂದು ಹಾಗ್ ಹೊಟೊಗತ್ತೆ ತಿಂಗಳ ಸಂಬಳ. ಪೋಸ್ಟ್ ಗ್ರ್ಯಾಡುಯೇಷನ್ ಗೆ ಇದು ಕಮ್ಮಿನೇ ನನ್ನ ಪ್ರಕಾರ.

ಸರಿ ಅಲ್ಲಿಂದ ಹೊರ ಬಂದಿದ್ದೇ ನಾವು ಎಡುಕೇಷನ್ ಲೋನನ್ನು ತೆಗೆದುಕೊಳ್ಳುವ ಬಗ್ಗೆ ಯೋಚಿಸುತ್ತಾ ನಡೆದೆವು. ದಾರಿಯಲ್ಲಿ ಏನಾಯ್ತು ಗೊತ್ತ ?

Z : ಏನಾಯ್ತು ?

ನಾನು : ಅದೇ, ನಾವು ಬರ್ತಾ ರಸ್ತೆಲಿ ಒಬ್ಬರು unconscious ಆಗಿ ಬಿದ್ದಿದ್ದ್ರಲ್ಲ...ಅವರು ಎದ್ದು ನಡೆದು ಬರ್ತಿದ್ದ್ರು !!

Z : what ????????????

ನಾನು : ಹು !!!!!!!!!!!! ನಾವು ಮೊದಲು ಅವರ ಕಾಲು ನೋಡಿದೆವು. ನೆಟ್ಟಗಿತ್ತು. ನಮಗೆ ಸಿಕ್ಕ್ ಸಿಕ್ಕಾಪಟ್ಟೆ ಭಯ ಆಗೋಯ್ತು. ನಿಲ್ಲಿಸಿ ಏನಾಗಿತ್ತು ಅವರಿಗೆ ಅಂತ ಕೇಳೊ ಧೈರ್ಯ ನಮಗೆ ಬರಲಿಲ್ಲ. ambulance ಬಂತೋ ಇಲ್ವೋ ಗೊತ್ತೇ ಆಗ್ಲಿಲ್ಲ. ಹಾಗೇ ಮುಂದೆ ನಡೆದು ಬಂದೆವು.

ದಾರಿಯಲ್ಲಿ ನಡೆದು ಬಂದು ಆ spot ಅನ್ನು ತೀಕ್ಷ್ಣವಾಗಿ ಗಮನಿಸಿದೆವು. once again, deserted place. ಏನೂ ತೋಚದೇ ಮುಂದೆ ನಡೆದೆವು.

ನಂತರ ಅಲ್ಲಿನ ಒಂದು ಕಟ್ಟೆಯ ಮೇಲೆ ಕುಳಿತು ಅಮ್ಮ ಕಳಿಸಿದ್ದ ಹಲಸಿನ ಹಣ್ಣು ತಿಂದು, ಕೆಲವು ಫೋಟೋಗಳನ್ನು ಕ್ಲಿಕ್ಕಿಸಿ, ಯೂನಿವರ್ಸಿಟಿಗೆ ಟಾ ಟಾ ಹೇಳಿ ಬಸ್ ಸ್ಟಾಪ್ ಗೆ ನಡೆದೆವು.

Z : hmmmmm...........

ನಾನು : ನಮ್ಮ ಮುಂದಿನ ಜಾಗ ಹನುಮಂತನಗರದ ಪಿ.ಇ.ಎಸ್ ಕಾಲೇಜು. ಬಸ್ಸುಗಳು ಬೇಗನೇ ಸಿಕ್ಕಿದವು. ಅಲ್ಲಿಗೆ ತಲುಪಿದಾಗ ಒಂದು ವರೆ. ಅಲ್ಲಿ ಸಲ್ಪ ಕಾದು, ವಿಚಾರಿಸಲು ಅಲ್ಲಿ ಎರಡು ಲಕ್ಷ [ಒಂದುವರೆ ಲಕ್ಷ ಡೊನೇಷನ್ನು, ಐವತ್ತು ಸವಿರ ಫೀಸು, ಇದು management quota. merit ಸೀಟ್ ಗೆ PG-CET ಬರೀಬೇಕು. ಮತ್ತೆ ಹೊರ ಯೂನಿವರ್ಸಿಟಿ ಗೆ ಒಂದೇ ಮೆರಿಟ್ ಸೀಟು, per college, counselling ನಲ್ಲಿ allot ಆಗುವಂಥದ್ದು merit seat .] ಫೀಸು ಎಂದು ಕೇಳಿ ಆದ ಗಾಬರಿಯನ್ನು ತೋರಿಸಿಕೊಳ್ಳದೆ ಹಾಗೆಯೇ ಹೊರ ನಡೆದವು.

Z : ಒಹೋ ! ಇದು ವಿಪರೀತ ಆಯ್ತು.

ನಾನು ; ಏನ್ ಮಾಡ್ತ್ಯ ? ಇದರ ಬಗ್ಗೆ ಮಾತಾಡಿದಷ್ತು ನಮಗೆ ಬೇಜಾರಾಗತ್ತೆ ಅಲ್ಲದೇ ಮತ್ತಿನ್ನೇನು ಆಗಲ್ಲ. ನೋಡು, ನಮ್ಮ ತಂದೆ ತಾಯಿ ನಮ್ಮನ್ನ ಸಾಕಲು ಬೆವರಲ್ಲ, ರಕ್ತ ಸುರಿಸುತ್ತಿದ್ದಾರೆ ಅಂತ ನಮಗೆ ಆವತ್ತು ಅರಿವಾಯ್ತು. ಚೆನ್ನಾಗಿ ಓದಿಯೇ ನಾವವರ ಪರಿಶ್ರಮವನ್ನ ಸಾರ್ಥಕಗೊಳಿಸಬೇಕು. ಸಮಯವನ್ನು ಹೇಗು ಹೇಗೊ ಉಡಾಯಿಸಬಾರದು, ದುಡ್ದನ್ನ ಅನವಶ್ಯಕವಾಗಿ ಪೋಲು ಮಾಡಬಾರದು ಎಂಬುದನ್ನು ನಿಜವಾಗಲು ಮನಗಂಡೆವು. ಮಿಡಲ್ ಕ್ಲಾಸ್ ಜನ ನಾವು, ಆರಕ್ಕೇರಲು ಅಗದೇ, ಮೂರಕ್ಕಿಳಿಯಲು ಇಷ್ಟಪಡದೇ, ಕ್ಷಣ ಕ್ಷಣ ಹೋರಾಟ ನಡೆಸುವವರು. ಉನ್ನತ ಶಿಕ್ಷಣದಿಂದ ಒಳ್ಳೆ ಉದ್ಯೋಗ ಸಿಕ್ಕು ಸಲ್ಪ ಹೆಚ್ಚು ಸಂಬಳ ಸಿಗುವುದೆಂಬ ಆಸೆ ಹೊತ್ತರೆ, ಆ ಆಸೆ ಪೂರೈಸಿಕೊಳ್ಳಲೂ ಸಾಲ ಸೋಲ ಮಾಡಿ ತಿನುಕಾಡಬೇಕು. ನಮ್ಮ ಹಣೆಬರಹ. subsidized education ಮುಂತಾದ ಸರ್ಕಾರದ ಭರವಸೆ ಎಲ್ಲಾ ಬರೀ ಮರೀಚಿಕೆ. ಬೆಂಗಳೂರಿನಲ್ಲಿ ಓದು ತುಂಬಾ ದುಬಾರಿ. ಅಗ್ಗದ ಫೀಸಿರುವ ಕಾಲೇಜುಗಳಲ್ಲಿ facilities ಇಲ್ಲ, facilities ಇರೋ ಕಡೆ afford ಮಾಡಕ್ಕಾಗಲ್ಲ. it oscillates between two extremes. ನಮಗೆ ಒಂಥರಾ ಬುದ್ಧನ್ನ ಬೀದಿಗೆ ತಂದು ಜಗತ್ತಿನ ಸತ್ಯ ದರ್ಶನ ಮಾಡಿಸಿದ ಹಾಗೆ ಆಯ್ತು.

Z : very true !!

ನಾನು : ನನ್ನ ಚಪ್ಪಲಿ ಕಾಲೇಜಿನಿಂದ ಹೊರಬರುತ್ತಲೇ ಅಸು ನೀಗಿತು. ನಾನು ಗಾಂಧಿ ಬಜಾರಿನ world culture library ಗೆ ಸದಸ್ಯೆ. ಪುಸ್ತಕ return ಮಾಡಲು ಅಲ್ಲಿಗೆ ಹೋಗಲೇ ಬೇಕಿತ್ತು. ಹೋಗಿ, ಆ ಕೆಲ್ಸವನ್ನೂ ಮುಗಿಸಿ, ಚಪ್ಪಲಿ ಖರೀದಿಸಿ, ಪುಳೀಯೋಗರೆ ಪಾಯಿಂಟ್ ನಲ್ಲಿ ಪಲಾವು ತಿಂದು, ಮನೆಯತ್ತ ಸಾಗಿದೆವು. ಬಸ್ಸುಗಳು ಬೇಗ ಸಿಕ್ಕಿದವು. ಮನೆ ತಲುಪಿ ಅಪ್ಪ ಅಮ್ಮಂಗೆ ವಿಷಯ ಎದ್ದ ಮೇಲೆ ತಿಳಿಸುವೆವೆಂದು ಹೇಳಿ ನಿದ್ದೆ ಹೋದೆವು.

ವಿದ್ಯಾಲಯ ಪ್ರವಾಸ ಪುರಾಣಂ ಸಂಪೂರ್ಣಂ .

Friday, July 11, 2008

ವಿದ್ಯಾಲಯ ಪ್ರವಾಸ - ಭಾಗ ೧

ನಾನು : uffffffffffffff !!!!!!!!!!!!!!!!!!!!!!!!!!!!!!! ಉಶ್ಶಪ್ಪಾ !!!!!!!!!!

Z : ಸುಧಾರ್ಸ್ಕೊ. ಒಂದೆರಡು ಬಾಟಲ್ ಗ್ಲೂಕೋಸ್ ಕುಡಿದೇ ಮಾತಾಡು ಪರ್ವಾಗಿಲ್ಲ.

ನಾನು : ಸಾಕಾಗಲ್ಲ...ಎರಡು ಬಾಟಲ್ ಗ್ಲೂಕೋಸ್ ಕುಡಿದರೆ ನನಗೆ ಶಕ್ತಿ ಬರಬಹುದೇನೋ . ಆದರೆ Z ..... ನಮ್ಮ education system ಕೆಟ್ಟು, ಕುಲಗೆಟ್ಟು, ಹಾಳಾಗೋಗಿದೆ !!! ಇದನ್ನ ನೆನಸಿಕೊಂಡರೆ ಬಂದಿರೋ ಶಕ್ತಿ ಎಲ್ಲಾ ಮತ್ತೆ ಉಡುಗಿಹೋಗತ್ತೆ !

Z : ನೆನಪಿಸಿಕೊಳ್ಳಬೇಡ ! simple !!

ನಾನು : ಆಹಾ ! whatte ಪಲಾಯನವಾದಿ !

Z : ಇದರಲ್ಲಿ ಪಲಾಯನವಾದ ಏನ್ ಬಂತು ? ಆಗದಿರೋದನ್ನ ನೆನಸಿಕೊಳ್ಳದಿದ್ದರೆ ಆಯ್ತಪ್ಪ.

ನಾನು : ಹಾಗಾಗಲ್ಲ Z ..ನಾವಿರೋದು ಇದೇ ವ್ಯವಸ್ಥೆ ನಲ್ಲಿ ಅಲ್ವ ? ಯಾಕ್ ಹಿಂಗಾಗೋಗಿದೆ ಅಂತ ಯೋಚ್ನೆ ಮಾಡೊದು ತಪ್ಪಾ ?

Z : ಹೂ....ಯೋಚನೆನಾದ್ರೂ ಮಾಡ್ಬೇಕು.

ನಾನು : ಬರೀ ಯೋಚನೆ ಅಲ್ಲ...ಅದಕ್ಕೆ ನಮ್ಮ ಕೈಲಿ ಆದ್ರೆ ಪರಿಹಾರ ನೂ ಹುಡುಕ್ಬೇಕು.

Z : ಕೈಲಾದ್ರೆ...ಬಹಳ important word ಇದು. ಸರಿ ಏನ್ ಆಯ್ತು ಇವತ್ತು ?

ನಾನು : ದಾವಣಗೆರೆ ಇಂದ ನನ್ನ ತಮ್ಮ ಮನೋಹರ ಬಂದಿದ್ದ ಗೊತ್ತಲ್ಲ ? ಈ ವರ್ಷ ಫೈನಲ್ ಬಿ. ಎಸ್ಸಿ ಅವನು. ಎಮ್.ಎಸ್ಸಿ ಮಾಡಲು ಬೆಂಗಳೂರಿನ ಕಾಲೇಜುಗಳು ಹೇಗಿದೆ ಎಂದು ತಿಳಿದುಕೊಳ್ಳಲು ಬಂದಿದ್ದ. ನನ್ನದು ಎಮ್.ಎಸ್ಸಿ ಮುಗಿಯಿತಾದ್ದರಿಂದ ಅವನು ನನ್ನ ಹತ್ತಿರ ಎಮ್. ಎಸ್ಸಿಯ ವಿದ್ಯಾರ್ಥಿ ಜೀವನದ ಬಗ್ಗೆ ಕೆಲವು ಪ್ರಶ್ನೆಗಳನ್ನು ಕೇಳುವುದಿತ್ತಂತೆ ಅವನಿಗೆ. ನಾನು ಅವನಿಗೆ ಅವನಿಗೆ ಬೇಕಾದ ವಿಚಾರಗಳನ್ನೆಲ್ಲಾ ಹೇಳಿದೆ. ಸರಿ ಮೊನ್ನೆ ಶುಕ್ರವಾರ ಬೆಂಗಳೂರು ವಿಶ್ವವಿದ್ಯಾನಿಲಯ (ಜ್ಞಾನಭಾರತಿ ) ಕ್ಕೂ ಹೋಗಿ ಎಲ್ಲ ವಿಷಯಗಳನ್ನು ಸವಿವರವಾಗಿ ತಿಳಿದುಕೊಂಡರೆ ವಾಸಿ ಎಂದು ನಮಗೆ ಅನ್ನಿಸಿತು. ಹಾಗೆಯೇ ಬೇರೆ ಕಾಲೇಜುಗಳಲ್ಲಿಯೂ ವಿಚಾರಿಸಬೇಕೆಂದು ತೀರ್ಮಾನಿಸಿದೆವು. ವಿದ್ಯಾಲಯ ಪ್ರವಾಸಕ್ಕೆ ಸಜ್ಜಾದೆವು.

Z : ಆಹ ! ಭೇಷ್ ! ಆಮೇಲೆ ?

ನಾನು : ಮೊದಲು ಕೆಂಗೇರಿಗೆ ಹೋಗುವುದೆಂದು ತೀರ್ಮಾನಿಸಿದೆವು. ಯಾಕಂದ್ರೆ ಅದೊಂದೆ ಊರಾಚೆ ಇರೋದು. ಬೆಳಗ್ಗೆ ಹತ್ತಕ್ಕೆ ಎದ್ದು ಹತ್ತೂ ಮುಕ್ಕಾಲಿಗಾಗಲೇ ಮಲಗಿದಂತೆ ಕಾಣುವ ಯೂನಿವರ್ಸಿಟಿಗೆ ನಾವು ಬೇಗ ಹೋಗಿ ಅದು ಪೂರ್ತಿ ನಿದ್ದೆ ಹೋಗುವ ಮುಂಚೆ ಎಲ್ಲ ವಿವರಗಳನ್ನು ಪಡೆಯಬೇಕಿತ್ತು.

ಮನೋಹರ ಬಿ.ಎಸ್ಸಿ ಮಾಡುತ್ತಿರುವುದು ಮೈಕ್ರೋಬಯಾಲಜಿಯಲ್ಲಿ. ಎಕರೆಗಟ್ಟಲೆ ಇರುವ ಆ ಯೂನಿವರ್ಸಿಟಿಯಲ್ಲಿ ಈ ಡಿಪಾರ್ಟಮೆಂಟನ್ನು ಹುಡುಕುವುದು ಎಲ್ಲಿ ? ಹೇಗೆ ? ಅಕಸ್ಮಾತ್ ಕಳ್ದೋದ್ರೆ ?

Z : right right...ಯೋಚನೆ ಮಾಡ್ಬೇಕಾದ್ದೆ. ಅಣ್ಣ ಅಮ್ಮಂಗೆ, ಅತ್ತೆ ಮಾವಂಗೆ, ಇರೋದು ನೀವಿಬ್ರೇ ದೊಡ್ಡ್ ಮಕ್ಕಳು ಪಾಪ...ಕಳ್ದೆಲ್ಲ ಹೋದ್ರೆ ಅವ್ರಿಗೆ ಬೇಜಾರಾಗತ್ತೆ.

ನಾನು : ಹೂ !! ಸರಿ ಯೂನಿವರ್ಸಿಟಿಯಲ್ಲಿ physics ಎಮ್.ಎಸ್ಸಿ ಮಾಡಿದ್ದ ಸುಜಾತಾ ಆಂಟಿಯ ಮಗನಿಗೆ ಫೋನ್ ತಿರುಗಿಸಿದೆ.
ಎಲ್ಲಿದ್ಯೋ ಡಿಪಾರ್ಟ್ಮೆಂಟು ಅಂದೆ.

ಅದಕ್ಕೆ ಅವನು "microbiology ಅಂತ ಒಂದು department ಇದ್ಯಾ ? " ಅಂತ ನನ್ನನ್ನೆ ಕೇಳ್ಬಿಟ್ಟ !!

Z : ಆಹಾ !! ಅಹಾಹ !! ಆಹಾಹ !ಆಹ !

ನಾನು : ನಗ್ಬೇಡಾ !! ಪಾಪಾ...ಅವನಿಗೆ ಗೊತ್ತಿರ್ಲಿಲ್ಲ.

Z : ಸರಿ...ಆಮೇಲೆ ?

ನಾನು : ಅಡುಗೆಮನೆಯಂಥಾ ಜಾಗಗಳಲ್ಲೆಲ್ಲಾ expedition ಮಾಡಿ ವಿಜಯಶಾಲಿಗಳಾದ ನನ್ನಂಥವರು ಯೂನಿವರ್ಸಿಟಿ ಅಂಥ ಜಾಗಗಳನ್ನು explore ಮಾಡಲು ಹೆದರಬಾರ್ದು ಅಂತ ತೋಚ್ತು ನಂಗೆ.

Z : correct.

ನಾನು : ಸರಿ, ಏನಾದ್ರು ಆಗ್ಲಿ ಕಣೋ ಮನೋಹರ, ಇವತ್ತು ಅದೊಂದೆ ಜಾಗದಲ್ಲಿ ತಿರುಗಿ ಅಲೆದು ಸುಸ್ತಾದರೂ ಪರ್ವಾಗಿಲ್ಲ, microbiology department ಹುಡುಕದೇ ವಾಪಸ್ ಬರೋ ಮಾತೇ ಇಲ್ಲ ಕಣೋ ಅಂದೆ. ಅವನೂ ಒಪ್ಪಿಕೊಂಡ. ಅಮ್ಮನ ಕೈಲಿ ತಿಂಡಿ ಬೇರೆ ಪ್ಯಾಕ್ ಮಾಡಿಸಿಕೊಂಡೆ. ಅವನು ಕಣ್ಣು ಪಿಳಿ ಪಿಳಿ ಬಿಟ್ಟ. ನಾನಂದೆ. ಇಲ್ಲಿ ತಿಂದಿರೋ ತಿಂಡಿ ನಾವು department ಹುಡುಕೋ ಅಷ್ಟರಲ್ಲೇ ಕರ್ಗೋಗಿರತ್ತೆ ಕಣೋ ....ಅಲ್ಲಿಂದ ಹೊರಗಡೆ ಬಂದ ತಕ್ಷಣ ಲಗಾಯಿಸದೇ ಇದ್ರೆ ಹೊರ್ಗಡೆ ಬರಕ್ಕೂ ಶಕ್ತಿ ಇರಲ್ಲ ತಿಳ್ಕೋ. ಅವನು ತಲೆ ಅಲ್ಲಾಡಿಸಿದ.

Z : ಅದು ಹೌದು..ನೀನೆ ಕೆಲವೊಮ್ಮೆ physics department ಗೆ ಹೋಗ್ಬೇಕಾದ್ರೆ ಮೂರು carrier ತಗೊಂಡ್ ಹೋಗ್ತಿದ್ದೆ...ಒಂದು ಅಲ್ಲಿ ಸೇರಿದ ತಕ್ಷಣ ತಿನ್ನೋಕೆ, ಇನ್ನೊಂದು ಹೊರಡೋ ಮುಂಚೆ, ಮತ್ತೊಂದು ಬಸ್ ನಲ್ಲಿ ...[ಕಾದೂ ಕಾದೂ ಸುಸ್ತಾಗಿ ಕೆಲವೊಮ್ಮೆ ಬಸ್ ಸ್ಟಾಪ್ ನಲ್ಲೇ ]ತಿನ್ನೋಕೆ !

ನಾನು : ಹೂ !! ಬುತ್ತಿ ಹೊತ್ತು ಹತ್ತಕ್ಕೆ ಬಸ್ ಸ್ಟಾಪ್ ತಲುಪಿದೆವು. for the first time in the history of my bus journey in bangalore from janata bazaar to any destination, ಅರ್ಧ ಘಂಟೆಯಾದರೂ ಬಸ್ ಬರ್ಲಿಲ್ಲ. ನಾನ್ ಯಾವತ್ತೂ ಜನತಾ ಬಜಾರ್ ನಲ್ಲಿ 3 ನಿಮಿಷಕ್ಕಿಂತ ಹೆಚ್ಚು ಕಾದಿದ್ದೇ ಇಲ್ಲ ಯಾವುದೇ ಬಸ್ಸಿಗೂ !! ಇಬ್ಬರಿಗೂ ತಾಳ್ಮೆ ಸಲ್ಪ ಕಡಿಮೆಯಾಯ್ತು. ಆದ್ರೆ ಬೇರೆ ದಾರಿ ಇರ್ಲಿಲ್ಲ. ಕಾದ್ವಿ ಕಾದ್ವಿ ಕಾದ್ವಿ...ಕಡೆಗೆ 34 ನೇ ನಿಮಿಷಕ್ಕೆ ಬಸ್ ಒಂದರ ದರ್ಶನ ಆಯ್ತು.

Z : ಹಾಡ್ ಹೇಳ್ಬೇಕಿತ್ತು..."jhalak dikhlaaja, jhalak dikhlaaja, ek baar aaja aaja aaja aaja aaaaaaaaja " ಅಂತ...ಆಗ full ಸ್ಪೀಡ್ ನಲ್ಲಿ ಬಂದಿರ್ತಿತ್ತು ಬಸ್ಸು.....

ನಾನು : ಆಹ ! ನೀನೋ...ನಿನ್ನ ಡಕೋಟಾ ಐಡಿಯಾಗಳೋ !!

Z : dont under-estimate my ideas like this, remember, an idea can change yor life !

ನಾನು : ಅಲ್ವೆ ಮತ್ತೆ ? ನಾನ್ ಕೇಳೊ ತಂಕ ಐಡಿಯ ಕೊಡು ಅಂತ...ನೀನು ತೊಂದರೆ ತಗೋಬೇಡ.

Z : ok. continue.

ನಾನು : ಮುಕ್ಕಾಲು ಗಂಟೆಯಾದ್ಮೇಲೆ ಯೂನಿವರ್ಸಿಟಿಯ ಬಾಗಿಲ (?) ಮುಂದೆ ಹೋಗಿ ಬಿದ್ವಿ.

Z : ಬಿದ್ದ್ರಾ ?

ನಾನು : ಅಂದ್ರೆ ಇಳಿದೆವು ಬಸ್ಸಿಂದ ಅಂತ. ಅವನು ಯೇನೆ ಇಷ್ಟ್ ದೂರ ಅಂದ. ನಾನು ಲೇ... ಇಷ್ಟ್ ಹೊತ್ತು ನಾವು ಯೂನಿವರ್ಶಿಟಿ ಹೊರಗೇ ಸುತ್ತುತ್ತಿದ್ದೆವು. ಮೊದಲು ಸಿಕ್ಕ ಬಾಗಿಲಲ್ಲಿ ಇಳೀದಿದ್ದರೆ ಆರು ಕಿಲೋಮೀಟರ್ ಹೋಗ್ತಾ ಆರು ಕಿಲೋಮೀಟರ್ ಬರ್ತಾ ನಡಿಬೇಕಿತ್ತು. ಅದನ್ನ ತಪ್ಪಿಸಲು ನಾವು ಹನ್ನೆರಡು ಕಿಲೋಮೀಟರ್ ಹೊರಗಡೆ ಸುತ್ತಿದೆವು. ಈಗ ಒಳಗೆ 3 kms ನಡಿಬೇಕು. ಹೋಗ್ತಾ ಬರ್ತಾ 6 kms ಆಗತ್ತೆ . this is one of the largest universities in Asia in terms of area. ಅಂದೆ. ಅವನು ಹುಬ್ಬೇರಿಸಿದ. ನನ್ನ ಸೀರಿಯಸ್ ಮುಖ ನೋಡಿ ಅವನಿಗೆ ಇದು ನಿಜ ಅಂತ ಮನವರಿಕೆ ಆಯ್ತು. ಒಳಗಡೆ ಹೋಗಿ ಅರ್ಧ ಕಿಲೋಮೀಟರ್ ವಾರ್ಮ್ ಅಪ್ ವಾಕಿಂಗ್ ಆದಮೇಲೆ administrative block of BU ಕಾಣಿಸಿತು. ಅದರ ಬಳಿ ಬೋರ್ಡ್ ಇತ್ತು. department of microbiology ಅಂತ. ನಮ್ಮ expedition ಇಷ್ಟು ಸುಲಭ ಆಗೋಗತ್ತೆ ಅಂತ ನಾನು ಅಂದುಕೊಂಡಿರಲಿಲ್ಲ. ಸರಿ ಅಲ್ಲಿಂದ ಮುಂದೆ ನಡೆಯಲು ಶುರು ಮಾಡಿದೆವು.

Z : " ಬಿದ್ದ" ತಕ್ಷಣ ಸಿಕ್ತಾ ?

ನಾನು : ಹೆಹೆ ! ಭ್ರಮೆ ! ಬಿದ್ದ ತಕ್ಷಣ ಸಿಗಕ್ಕೆ ಅದೇನು spencers ಆ reliance fresh ಅ ? department ! department ! ಅದನ್ನ ತಲ್ಪಕ್ಕೂ [safe ಆಗಿ] ಸಾಧನೆ ಮಾಡಿ, ತಪಸ್ಸೆಲ್ಲಾ ಮಾಡಿ ಕಷ್ಟ ಪಡ್ಬೇಕು. ನಾವು ನಡೆದೆವು, ನಡೆದೆವು, ನಡೆದೆವು.........ನಮ್ಮದಲ್ಲಾ ಅಂತ ಎರಡು ಕಿಲೋಮೀಟರ್ ನಡೆದೆವು. ಮಧ್ಯ ಬೇರೆ ಒಂದು incident ನಡಿತು.

Z : what ?

ನಾನು : ಯಾರೋ ಒಬ್ಬರು ರಸ್ತೆಯಲ್ಲಿ unconscious ಆಗಿ ಬಿದ್ದಿದ್ದರು. ನಾವು ಅವರ ಬಳಿ ಹೋದೆವು. ರಕ್ತ ಬಾಯಿಂದ ಹೊರಬರುತ್ತಿತ್ತು. ಆದರೆ ಉಸಿರಾಡುತ್ತಿದ್ದರು. ಸರಿ ನಾವು 1062ಗೆ ಫೋನ್ ಮಾಡುವ ಎಂದು ನಿರ್ಧರಿಸಿದೆವು. ಅಷ್ಟು ಹೊತ್ತಿಗೆ ಇನ್ನೊಬ್ಬ ಬೈಕ್ ಸವಾರ ಬಂದು ಗಾಡಿ ನಿಲ್ಲಿಸಿದ. ಮತ್ತಿನ್ನೊಂದಷ್ಟು ಜನ ಕ್ಷಣಮಾತ್ರದಲ್ಲಿ ಜಮಾಯಿಸಿದರು. ಆ ಬೈಕ್ ಸವಾರ ಮೊಬೈಲ್ ತೆಗೆದು ನಂಬರ್ ಡಯಲ್ ಮಾಡಲು ಹೋಗಿ, ಯಾವ ಹಾಸ್ಪಿಟಲ್ ಗೆ ಡಯಲ್ ಮಾಡುವುದೆಂದು ಯೋಚಿಸಿದ. ನಾನು " 1062 ಗೆ phone ಮಾಡಿ. operation sanjeevani ಅಂತ. 10 minutes ನಲ್ಲಿ ಎಲ್ಲೇ ಇದ್ರೂ ಬರುತ್ತಾರೆ "ಅಂದೆ. ಸರಿ ಅವರು ಫೋನ್ ಮಾಡಿ ambulance ಕರೆಸಿದರು. ನಾವು ಅಲ್ಲಿಂದ ಹೊರಟೆವು.

ಇನ್ನೊಂದು ಮುಕ್ಕಾಲು ಕಿಲೋಮೀಟರ್ ನಡೆದ ಮೇಲೆ department ಕಟ್ಟಡ ಕಾಣಿಸಿತು. ಜನ್ಮ ಪಾವನವಾದಷ್ಟು ಸಂತೋಷ ಆಗೋಯ್ತು. ಒಂದು ಗಂಟೆ ನಡೆದಿದ್ದು ಸಾರ್ಥಕ ಆಯ್ತು. ಸರಿ ಒಳಗೆ ಗೂಳಿಗಳ ತರಹ ನುಗ್ಗಿದೆವು.

Z : ಹೇಗಿದೆ department ?

ನಾನು : oops ! ಅಮ್ಮ ಕರೀತಿದಾರೆ. will keep the line on hold till tomorrow. ನಾಳೆ department ನಲ್ಲಿ ಏನ್ ಆಯ್ತು ಅಂತ ಹೇಳುವೆ.

Z : ok...will wait.

ನಾನು : ok !

line on hold.

Tuesday, July 8, 2008

Teaching the teacher !

ನಾನು : ನೋಡು ಇವತ್ತೇನಾಯ್ತು ಗೊತ್ತಾ ? ಒಬ್ಬ ಟೀಚರ್ ಗೆ ನಾನ್ ಪಾಠ ಮಾಡೋಹಾಗ್ ಆಗೋಯ್ತು !

Z : ಹಾ ? ಹಾಗೆಲ್ಲ ಮಾಡ್ಬಾರ್ದು ಕಣೇ...ಗುರುಗಳಿಗೆ ತಿರುಮಂತ್ರ ಅನ್ಕೊಳ್ಳೋಲ್ವಾ ?

ನಾನು : ಅದೇ ಮಂತ್ರನ ವಾಪಸ್ ಹಾಕಿದ್ದಿದ್ರೆ ಅದು ತಿರುಮಂತ್ರ ಆಗಿರೋದು...but ನಾನು ಹೇಳಿಕೊಟ್ಟಿದ್ದು different ಮಂತ್ರ. Actually, it was a kind repayment of a favor done long ago.

Z : Long ago ನಾ ? ಯುಗಾಂತರಗಳ ಕಥೆ ನ ?

ನಾನು : ಇಲ್ಲಪ್ಪಾ....two years ago. ನಿನಗೆ ನೆನಪಿದೆಯ ಎಮ್.ಎಸ್ಸಿ first sem ನಲ್ಲಿರೋವಾಗ ಕನ್ನಡ ಸಂಸ್ಕೃತಿ ಇಲಾಖೆ ಇಂದ ನನಗೆ ಒಂದು letter ಬಂದಿತ್ತು, ಗಮಕ ವಾಚನ ಸ್ಪರ್ಧೆ, ಪಂಪಭಾರತದಿಂದ ಹಿಡಿದು ಕೌಶಿಕರ ದತ್ತ ಮಹಿಮ ದರ್ಶನಾದರ್ಶದವರೆಗೆ ಏನ್ ಬೇಕಿದ್ದರೂ ಕೇಳ್ತಿವಿ ...ಒಂದು ವರ್ಷ ಆದ್ಮೆಲೆ exam ಅಂದವರು ಒಂದು ತಿಂಗಳಲ್ಲೇ ಬನ್ನಿ ಪರೀಕ್ಷೆಗೆ ಅಂದರಲ್ಲ !

Z : yes ! ನಿನಗೆ ರಜ ಸಿಗದೆ, ನೀನು ಏನೂ prepare ಆಗಕ್ಕಾಗದೇ, written exam ಇದೆ ಅಂತ ಬೇರೆ ಹೆದರಿಸಿದ್ದರಲ್ಲ, ನಿನಗೆ ಗುರು ಲಘು ಹಾಕೋದು ನೆನಪಿಗೆ ಬರ್ದೆ, ಸಂಸ್ಕೃತ ಪುಸ್ತಕ ಆಗ ಕೈಗೆ ಸಿಗದೇ.....

ನಾನು : exactly ! ಆಗ ನನಗೆ ಗುರು ಲಘು ನ ಹಾಕೋಕೆ ಹೇಳಿಕೊಟ್ಟೋರು ಪದ್ಮಾವತಿ aunty. ಎಂದಿಗೂ ಮರೆಯದ ಹಾಗೆ ಹೇಳಿಕೊಟ್ಟಿದ್ದರು !

Z : ಹೂ ನೆನ್ಪಾಯ್ತು ! ಹೇಗಿದ್ದಾರೆ ಅವ್ರು ?

ನಾನು : as young as ever, still rocking at 61. ಇವತ್ತು ಮನೆಗೆ ಬಂದಿದ್ದರು. ನನ್ನ ಕೈಯಲ್ಲಿ mp3 ಪ್ಲೇಯರ್ ಹೇಗೆ handle ಮಾಡ್ಬೇಕು, ಹೇಗೆ operate ಮಾಡ್ಬೇಕು ಅಂತ ಹೇಳಿಸಿಕೊಳ್ಳೋಕೆ !

Z : ಓಹೋ ...ಅಮ್ಮನ mp3 player gang ಗೆ ಹೊಸ ಸೇರ್ಪಡೆ ಅನ್ನು.

ನಾನು : ಹೂ....ಅಮ್ಮ mp3 player ತಗೊಂಡ ಮಾರನೇ ದಿನವೇ ಅಮ್ಮನ entire friend gang big bazaar ಗೆ ಹೋಗಿ, ಮುಗಿ ಬಿದ್ದು, ಅಮ್ಮನ ಥರದ್ದೇ ಒಂದೊಂದು ಪ್ಲೇಯರ್ ಹೊತ್ತುಕೊಂಡು ಬಂದರು. uniformity ಅಂತೆ ! GB ಅಂದ್ರೆ ಏನು ಅಂತ ಅರ್ಥಮಾಡಿಕೊಳ್ಳೋಕೆ ಪರದಾಡಿ, ಕಡೆಗೆ 4 GB ಅಂತ by heart ಮಾಡ್ಕೊಂಡು ಹೋಗಿ ತಂದಿದಾರೆ. ಇನ್ನು ಕೆಲವರು ಕಪ್ಪು ಪ್ಲೇಯರ್ ಕೊಡಿ ಅಂತ ಬೇರೆ ಮಾಡೆಲ್ ತಂದುಬಿಟ್ಟಿದ್ದಾರೆ ಪಾಪ. ಕಪ್ಪನ್ನೋದು ಗೊತ್ತಾಗಿದೆ, ಮಾಡೆಲ್ ಹೆಸ್ರು ಗೊತ್ತಿಲ್ಲ. ನಾನ್ ಹೇಗ್ react ಮಾಡಕ್ಕು ಆಗ್ದೆ ಮಿಕಿ ಮಿಕಿ ನೋಡ್ತಿದ್ದೆ ಅಷ್ಟೆ. ಅವರ ಮಕ್ಕಳೆಲ್ಲ ಹೊರದೇಶಕ್ಕೆ ಹೊಟೋಗಿದಾರೆ, ಅಂಕಲ್ ಗಳು ತಮಗೂ ಗೊತ್ತಿಲ್ಲ ಅಂತ ತೋರಿಸಿಕೊಳ್ಳಾಲಾಗದೆ silent ಆಗಿ escape ಆಗಿದ್ದಾರೆ !ಇಲ್ಲೇ ಇರೋ ಕೆಲವರ ಮಕ್ಕಳು ಹೇಳಿಕೊಡಲು ಪ್ರಯತ್ನಿಸಿದ್ದಾರೆ, ಒಂದೇ ದಿನ, ಒಂದೇ ಸರ್ತಿ ಎಲ್ಲ functions ನ fast ಆಗಿ explain ಮಾಡಿದ್ದಾರೆ, ಇವರಿಗೆಲ್ಲ confuse ಆಗಿದೆ. ಏನೂ ಮಾಡಲಾಗದೇ ಮುಚ್ಚಿಟ್ಟು ಹೊದಿಕೆ ಹೊದಿಸಿ ಇಟ್ಟಿದ್ದರು ಇಷ್ಟ್ ದಿನ.

Z : ಪಾಪ ! ಆಮೇಲೆ ?

ನಾನು : ನಾನು, ನನ್ನ ತಂಗಿ shift ನಲ್ಲಿ ನಮ್ಮ ಅಮ್ಮನಿಗೆ ಒಂದು ತಿಂಗಳು ಪಾಠ ಮಾಡಿದ್ವಿ...ಹೇಗೆ use ಮಾಡ್ಬೇಕು player ನ ಅಂತ. ನಮ್ಮಮ್ಮನ speed ನಮಗೆ ಗೊತ್ತಿತ್ತು. finally, ಅವ್ರು ಕಲಿತರು. ಆಮೇಲೆ ಅವರ gang ಗೆ ಇವರೇ ಹೋಗಿ ಹೇಳಿಕೊಟ್ಟರು !! ನಾನು ನಮ್ಮಮ್ಮಂಗೆ good job mom ! ಅಂತ ಹೇಳಿದೆ. ಅವರಿಗೇನೋ ಆನಂದ...ಈಗಿನ generation ನ ಉಪಕರಣವೊಂದರ operation ಕಲ್ತು ನಾನು ಉದ್ಧಾರ ಆದೆ ಅಂತ.

Recent ಆಗಿ ಪದ್ಮಾವತಿ ಆಂಟೀ ತಗೊಂಡಿದಾರೆ ಪ್ಲೇಯರ್ ನ. ಅವರ ತಂಗಿ ಮಕ್ಕಳು, ಪಾಪ ಹೇಳ್ಕೊಟ್ಟಿದ್ದಾರೆ...ಇವರಿಗೆ ಏನೂ ಅರ್ಥ ಆಗಿಲ್ಲ. ಅಮ್ಮಂಗೆ ಫೋನಿಸಿದ್ದಾರೆ. ನಮ್ಮಮ್ಮ " ನಂ ಮಗಳು ಹೇಳ್ಕೊಡ್ತಾಳೇ ಬನ್ರಿ....ನನಗೂ ಅವಳೇ ಹೇಳ್ಕೊಟ್ಟಿದ್ದು ! " ಅಂತ ನನ್ನನ್ನ teacher ಮಾಡಿದ್ರು. ಅವ್ರೆಲ್ಲ ಮೂವತ್ತ್ ನಲ್ವತ್ತ್ ವರ್ಷ ಪಾಠ ಹೇಳ್ಕೊಟ್ಟೋರು. ಅಮ್ಮನ ಫ್ರೆಂಡ್ಸ್ ಎಲ್ಲರೂ ಅಮ್ಮನ ಥರಾನೇ ಮ್ಯೂಸಿಕ್ ಟೇಚರ್ಗಳು. ಇವರಿಗೆ ಸಂಗೀತದ ಭಾಷೆ, ಕನ್ನಡ ಎರಡೇ ಅರ್ಥ ಅಗೋದು ! ಅಂಗ್ಲ ಗೊತ್ತಿದ್ದರೂ manual ಓದಕ್ಕೆ ಚಾಲೀಸು ಕನ್ನಡಕ ಹುಡುಕದೇ, ಕೈಲಿದ್ದರೂ ಹಾಕಿಕೊಳ್ಳದೇ ಸುಮ್ಮನಿರುವವರು ! ಹೇಗಪ್ಪ ಹೇಳ್ಕೊಡೊದು ಅನ್ನೋದೇ ಸಖತ್ ದೊಡ್ದ್ challenge ಆಗೋಯ್ತು !

Z : ಹೂ...ನಿಧಾನಕ್ಕೆ ಬೇರೆ ಹೇಳ್ಕೊಡ್ಬೇಕು... without losing patience ! ಇಲ್ಲಾಂದ್ರೆ ಅವರಿಗೆ ಸಖತ್ ಬೇಜಾರ್ ಆಗತ್ತೆ. ನಾವ್ ಯಾವತ್ ಬೈದಿದ್ವಿ ಇವ್ರಿಗೆ ಇಷ್ಟ್ ದಿನ ? ಒಂದು ಸರ್ತಿನಾದ್ರೂ ನೋಡಿ ಸರೀಗೆ ಹೇಳ್ಕೊಡೋಲ್ಲ ಅಂತ !

ನಾನು : ಹೂ...ಸರಿ ಪಾಪ ಇವತ್ತು ಆಂಟಿ ಬಂದರು. ಲಕ್ಷ್ಮಿ, ನನಗೆ ಆನ್ ಮಾಡೊದು ಗೊತ್ತು, ಆಫ್ ಮಾಡೊದು ಗೊತ್ತು, ರೆಕಾರ್ಡಿಂಗ್ ಆನ್ ಮಾಡೋದು ಗೊತ್ತು...ಆದ್ರೆ ಆಫ್ ಮಾಡೋದು ಗೊತ್ತಿಲ್ಲ ! ಅಂದ್ರು !

ನಾನು : ಆಂಟಿ ಹಾಗೇ ಆನ್ ನಲ್ಲೇ ಇಟ್ಟಿದ್ರಾ ?

ಅವರು : ಇಲ್ಲಾ...ಹೇಗೋ ಆಗ್ಲಿ ಅಂತ ಆಫ್ ಮಾಡಿದೆ.

ನಾನು : battery ?

ಅವರು : ನಮ್ಮ ತಂಗಿಯ ಮಗನ ಕೈಲಿ ಕಂಪ್ಯೂಟರ್ ನಲ್ಲಿ ಚಾರ್ಜ್ ಮಾಡಿಸಿದೆ. ಈಗ ನೀನೆ ಹೇಳಿಕೊಡು.

ನಾನು : ಏನಿಲ್ಲ ಕಷ್ಟ ಆಂಟಿ...ಧೈರ್ಯವಾಗಿರಿ...ನೀವು ಕೆಡಿಸಿದರೂ ಇದು ಕೆಟ್ಟೊಗಲ್ಲ...ಏನೂ ಅಳಿಸಿಯೂ ಹೋಗಲ್ಲ. ನಿಮ್ಮ ಹಾಡುಗಳು ಹಾಗೇ ಇರತ್ತೆ ಹೆದ್ರುಕೋಬೇಡಿ. ಸರಿ ಈಗ ಆನ್ ಮಾಡಿ.

ಅವರು ಹೆದರುತ್ತಲೇ ಆನ್ ಮಾಡಿದರು.

ನಾನು : good ! record ಮಾಡಿ.

ಅವರು ಯಾವುದೋ ಒಂದು ಕಷ್ಟಕರವಾದ ರೀತಿಯಲ್ಲಿ ಮಾಡಿದರು.

ನಾನು : correct ! ಆದರೆ...ನೀವು record on ಮಾಡಲು ಇಷ್ಟು time ತಗೊಂಡರೆ singer wait ಮಾಡ್ತಾರ ? ಅವರು ಲಹರಿಯಲ್ಲಿರ್ತಾರೆ, ನೀವು " stop stop " ಅನ್ನಕಾಗತ್ತಾ?

ಅವರು : ಹೌದಲ್ವಾ ?

ನಾನು : ಇಲ್ಲಿ ನೋಡಿ ಒಂದು ಬಟನ್ ಇದೆ. ಇದನ್ನ ಎರ್ಡು ಸೆಕೆಂಡ್ ಒತ್ತಿದರೆ ಆಫ್ ಮೋಡ್ ನಲ್ಲೇ ರೆಕಾರ್ಡ್ ಆಗತ್ತೆ ! ಮಾಡಿ ತೋರಿಸಿದೆ.

ಅವರು ಅದನ್ನ harry potter magic ಅಂದುಕೊಂಡರು !

ಅವರು : ನೀನ್ ಮಾಡಿದ್ರೆ ಆಗತ್ತೆ...ನಾನ್ ಮಾಡಿದ್ರೆ ಆಗಲ್ಲ....

ನಾನು : ಯಾರ್ ಹೇಳಿದ್ದು ಹಾಗೆ ? ಎಲ್ಲಿ ಮತ್ತೆ ಆಫ್ ಮಾಡಿ ಈಗ ನೀವೆ ಮಾಡಿ.

ಅವರು ಮಾಡಿದರು...ಬಂತು...ಸಂತೋಷವಾಗೋಯ್ತು ಅವ್ರಿಗೆ !ನನಗೂ ನೂ !!

Z : very nice !!! ಆಮೇಲೆ ?

ಅವರು : record ಆಗ್ತಿದ್ಯೋ ಇಲ್ವೋ ಅಂತ ಹೇಗೆ ಕಂಡುಹಿಡಿಯೋದು ? ಸ್ಟಾಪ್ ಆದಾಗ ತೋರ್ಸದೇ ಇಲ್ಲ ! ಈ ಬಾಣದ ತುದಿ ಏನು ? ಈ ಎರಡು ಗೀಟೇನು ?

ನಾನು : ಅವರಿಗೆ square ತೋರ್ಸ್ತಿದ್ದರೆ stop, circle ತೋರಿಸುತ್ತಿದ್ದರೆ recording, double line ಬಂದರೆ pause, arrow head ಬಂದರೆ play, forward ಮತ್ತು reverse ಬಟನ್ ಗಳನ್ನ ಅವರಿಗೆ ನಿಧಾನವಾಗಿ explain ಮಾಡಿದೆ. ಕೊಬ್ಬರಿಮಿಠಾಯಿಯ ಚೂರು ಕಾಣಿಸಿತೆಂದರೆ ಹಾಡು ಮುಗಿಯಿಯಿತೆಂದುಕೊಳ್ಳೀ. ತಾಳದ ಆವರ್ತದ ಲೈನ್ ಬಂದರೆ pause ಆಗಿದೆ ಅಂದುಕೊಳ್ಳೀ....ಅರ್ಜುನನ ಬಾಣ ಕಾಣಿಸಿದರೆ ಪ್ಲೇ ಆಗುತ್ತಿದೆ ಎಂದು ಅರ್ಥ..ಹೀಗೆಲ್ಲ ಹೇಳಿ ಅವರ ಕೈಲೂ ಎಲ್ಲ ಬಟನ್ ಗನ್ನು press ಮಾಡಿಸಿ practice ಮಾಡಿಸಿದೆ. ಕಲಿತರು... very fast !

ಅವರು : ಇದನ್ನೆಲ್ಲ ಬರ್ಕೋತಿನಿ !

ಬುಕ್ ಒಂದನ್ನು ತೆಗೆದು ಒಂದೂ ಬಿಡದೇ, ಚಿತ್ರದ ಸಮೇತ ಬರೆದುಕೊಂಡರು ! ನನಗೆ ನಾವು ಸ್ಕೂಲ್ನಲ್ಲಿ ಟೀಚರ್ ಹೇಳಿದ ಪ್ರತಿಯೊಂದು ವಾಕ್ಯವನ್ನೂ, ಬೋರ್ಡ್ ಮೇಲೆ ಬರೆದ ಪ್ರತಿಯೊಂದು ಚಿತ್ರವನ್ನೂ ಗೀಚಿಟ್ಟುಕೊಳ್ಳುತ್ತಿದ್ದುದು ನೆನಪಾಯ್ತು...ಆದರೆ there was a role reversal ! student explaining...teacher writing !

ನಂತರ ಅವರು Fm channel ಗಳನ್ನ tune ಮಾಡಲು ಹೇಳಿದರು. ನಂಬರ್ಗಳು ಕಾಣಿಸುವುದಿಲ್ಲವಾದ್ದರಿಂದ ಒಂದು ಬಟನ್ ಒತ್ತಿದರೆ ಅಮೃತವರ್ಷಿಣಿ ವಾಹಿನಿ ಬರುವ ಹಾಗೆ ಮಾಡೆಂದು ಕೇಳಿಕೊಂಡರು. ಮಾಡಿ, ತೋರಿಸಿಕೊಟ್ಟು, ಅವರ ಕೈಲಿ ಮತ್ತೆ ಮಾಡಿಸಿದೆ. ಎರಡು ಸರ್ತಿ ತಪ್ಪಾಯ್ತು...ಹಠ ಬಿಡದೇ ಮಾಡಿ ಮೂರನೇ ಸರ್ತಿ ಕಲಿತರು !

ಕಲಿತಮೇಲೆ ಅಮ್ಮನಿಗೆ ಅವರು ಹೀಗೆಂದರು :

ರೀ..ನಿಮ್ಮ ಮಗಳು ಒಳ್ಳೇ ಟೀಚರ್ ಆಗ್ತಾಳೇ ರೀ...ಎಷ್ಟು ಚೆನ್ನಾಗಿ ನಮಗೆ ತಿಳಿಯೋ ಭಾಷೆಲಿ ಪಾಠ ಮಾಡ್ತಾಳೇ...ಕೊಬ್ರಿ ಮಿಠಾಯಿಂದ ಅರ್ಜುನನ ಬಾಣದವರೆಗೂ ಹೋದಳಲ್ರೀ...ಮರೆಯೊಲ್ಲ...ಎಂದೆಂದಿಗೂ ಮರೆಯೋಲ್ಲ...thanks ! ನಮ್ಮಂಥೋರಿಗೆ ಪಾಠಮಾಡಕ್ಕೆ ನಿಮ್ಮಂಥೋರು ಬೇಕು !

ನಾನಂದೆ, " ನಿಮ್ಮಂಥೋರು ನಮಗೂ ಹಿಂದೆ ಹೀಗೆ ಪಾಠ ಮಾಡಿದ್ದಕ್ಕೆ ನಾನು ಕಲಿತು ನಿಮಗೆ ಹೇಳುವ ಹಾಗಾಗಿದ್ದು...ನೀವು ಹೇಳಿಕೊಟ್ಟ ಗುರು ಲಘು ಮರೆಯಲಾದೀತೆ ? "

ಕಣ್ಣ ನೀರನ್ನು ತಡೆದರು...ನನಗದು ಹೇಗೋ ಕಾಣಿಸಿತು.

ನಂತರ ಅವರನ್ನ ಅವರ ಮನೆಗೆ ನಾನೇ ಬಿಟ್ಟು ಬಂದೆ. ರಾತ್ರಿ ಹೊತ್ತು ಅವರು ಹೊರಗೆ ಹೋಗಬಾರದೆಂದು ಅವರ ಡಾಕ್ಟರ್ ಹೇಳಿದ್ದರು. ಅವರ ಬಿ.ಪಿ.ಸ್ಥಿಮಿತಕ್ಕೆ ಬಂದಿರಲಿಲ್ಲವಾದ್ದರಿಂದ ಅವರಿಗೆ ತಲೆ ಸುತ್ತುತ್ತಿತ್ತು ಆಗಾಗ. ನಾನೇ ರಸ್ತೆ ದಾಟಿಸಿ, ಮನೆಯವರೆಗೂ ಹೋಗಿ, ಬಿಟ್ಟು ಬಂದೆ. ಅವರ ಕೈಲಿ ಭೇಷ್ ಅನ್ನಿಸಿಕೊಂಡಿದ್ದು ಒಂಥರಾ ಸಂತೋಷ ಅಲ್ವಾ ?

Z : ಹೂ ! its a rare opportunity ! feeling really nice...

ನಾನು : the best way to teach people is to teach in the language they understand, explain in a way which they can comprehend and make them learn things by doing....everything first hand !



Monday, July 7, 2008

ಬದನೇಕಾಯಿ, ಅಮ್ಮ, ಮತ್ತು ನಾನು

ನಾನು : ಛೆ ಎಂಥಾ ಕೆಲ್ಸ ಆಯ್ತು ಗೊತ್ತ ಮೊನ್ನೆ ?

Z : ಅಮ್ಮನ ಕೈಲಿ ಒಂದು ಕೋಟಿ ತೊಂಭತ್ತೊಂಭತ್ತು ಲಕ್ಷದ ತೊಂಭತ್ತೊಂಭತ್ತು ಸಾವಿರನೇ ಸಲ " ನಿನ್ನ ತಲೆ ! " ಅಂತಲೋ, " ಗಂಡನ ಮನೇಲಿ ಹೀನಾ ಮಾನ ಬೈತಾರೆ ಹೀಗೆ ಮಾಡಿದ್ರೆ " ಅಂತಲೋ ಬೈಸ್ಕೊಂಡಿರುತ್ತೀಯಾ ಅಷ್ಟೇ ! correct ?

ನಾನು : ಹು ! ಎರಡೂ ಬೈದ್ರು !

Z : ತಾವೇನು ಘನಕಾರ್ಯ ಸಾಧಿಸಿದಿರಿ ಬೈಸಿಕೊಳ್ಳೋಕೆ?

ನಾನು : ಎನಿಲ್ಲ...ಬದನೆಕಾಯಿ ಹೆಚ್ಚಿಕೊಟ್ಟೆ ಅಷ್ಟೇ !

Z : ಅಷ್ಟೇ ! ? ! ಏನು ಅಷ್ಟೇ ! ನೀನು ಅಡಿಗೆ ಮನೆಗೆ ಕಾಲಿಟ್ಟರೇನೆ ಅದು lab ge convert ಆಗತ್ತೆ. ನೀನು ಅಡುಗೆ ಮಾಡ ಹೋದರೆ ತಿನಿಸುಗಳ taste ಬೇರೆಯಾಗತ್ತೆ...ಅಂಥಾದ್ರಲ್ಲಿ "ಬರೀ ಬದನೇಕಾಯಿ ಹೆಚ್ಚಿಕೊಟ್ಟೆ ಅಷ್ಟೇ " !!?? ಇಲ್ಲ ಇಲ್ಲ...ಇನ್ನೇನೋ ಆಗಿರತ್ತೆ...ಟೆಲ್ಲು ಟೆಲ್ಲು !

ನಾನು : ಏನಿಲ್ವೆ....ನಿಜ್ವಾಗ್ಲೂ...ಬರೀ ಬದನೇಕಾಯಿ ಹೆಚ್ಚಿದೆ ಅಷ್ಟೇ....ಆದರೆ ಹೆಚ್ಚುವಾಗ ಏನಾಯ್ತು ಅಂದ್ರೆ :

ನನಗೆ ಬದನೇಕಾಯಿ ಹೆಚ್ಚೋದು ಗೊತ್ತಿತ್ತು. ಆದ್ರೆ speed ಇರ್ಲಿಲ್ಲ. naturally ಅಲ್ವ ? ಸರಿ ನಿಧಾನಕ್ಕೆ ಹೆಚ್ಚುತ್ತಿದ್ದೆ. ಅಮ್ಮ ಅಡಿಗೆಮನೆಯ ಒಳಗಿಂದ :

ಆಯ್ತೆನೆ ?

ನಾನು : ಮೂರು ಬದನೇಕಾಯಿ ಇದೆ ಇನ್ನೂ !!!

ಅಮ್ಮ : ಬೇಗ !

ನಾನು : wait mom !

ಅಮ್ಮ ಹೊರಗೆ ಪರೀಕ್ಷೆ ಮಾಡಲು ಬಂದರು. "slow ಆಯ್ತು !!! ಬೇಗ ಬೇಗ ! "ಅಂದರು. ನನ್ನ ಕೈ ಚಾಕುವಿನಿಂದ ಪ್ರತಿಸಲಿ ಸಖತ್ narrow ಆಗಿ escape ಆಗ್ತಿತ್ತು. ನಮ್ಮಮ್ಮಂಗೆ ಕೋಪ ಬಂತು.

ಅಮ್ಮ : ನೀನು diameter, symmetry, length, breadth ಎಲ್ಲಾ ನೋಡ್ಕೊಂಡು ಹೆಚ್ಚುತ್ತಿದ್ದರೆ ಹೀಗೆ...ನಿನ್ನ ಅತ್ತೆ ಮನೆಯವರು ಹೀನಾ ಮಾನ ಬೈತಾರೆ.

ನಾನು : ನಾನಿವೆಲ್ಲದಕ್ಕೆ ನೀನು ಇದ್ದೀಯಾ ಅಂತ ಗಮನ ಕೊಟ್ಟಿಲ್ಲ. ನೀನಿಲ್ಲದಿದ್ದರೆ ನಾನು ಬದನೇಕಾಯಿಯ ಪ್ರತಿಯೊಂದು piece ನು symmetrical and similar ಆಗಿ ಹೆಚ್ಚುತ್ತಿದೆ ಗೊತ್ತಾ ?

ಅಮ್ಮ : ಕೆಲ್ಸದ speed important ಕಣೇ...ನೀನು ಅಲ್ಲಿ ಸರೀಗೆ ಹೆಚ್ಚದಿದ್ರೆ ಮಗಳಿಗೆ ಏನೂ ಕಲ್ಸಿಲ್ಲಾ ಅಂತ ನನ್ನನ್ನೇ ಬೈಯ್ಯದು....

ನಾನು : speed is a matter of practice, mother ! Accuracy important...ಒಂದೊಂದು ಬದನೇಕಾಯಿ piece ಒಂದೊಂದು ಥರ ಇದ್ರೆ ? ನೋಡೋಕೆ ಚೆನ್ನಾಗಿರತ್ತ ? ನಿನ್ನ ಬೈಯ್ಯೋಕೆ ಬಾಯಿ ತೆಗೆದ್ರೆ ಅಲ್ಲಿ ಯಾರಾದ್ರೂ....ಅಷ್ಟೇ ನಾನು ! ಅಮ್ಮನ ತಪ್ಪು ಏನೂ ಇಲ್ಲ, ನನಗೇ ಕಲಿಯೋಕೆ ಬರ್ಲಿಲ್ಲ ಅಂತ ಈ ಬ್ಲಾಗ್ ನ print out ನ ಸಾಕ್ಷಿ ತೋರಿಸ್ತಿನಿ T.N . Seetaram ಥರ ! ನೀನ್ ಕಲ್ಸೋಕೆ ರೆಡಿ ಇದಿಯ...ನಾನೂ ಕಲಿಯೋಕೆ ರೆಡಿ, ಆದ್ರೆ ಇಷ್ಟ್ ದಿನ ಟೈಮ್ ಇರ್ಲಿಲ್ಲ...ಈಗಿನ್ನೂ beginner's course start ಆಗಿದೆ....ನನಗೆ ಕಲಿತು practice ಮಾಡಕ್ಕೆ ಟೈಮ್ ಕೊಡದೇ, ಸುಮ್ನೆ ಅತ್ತೆ ಮನೆ ಅತ್ತೆ ಮನೆ ಅಂತ ತೋಳ ಬಂತು ತೋಳ ಕಥೆ ಹೇಳ್ಬೇಡಾ !

ಅಮ್ಮ : argue ಮಾಡ್ಬೇಡಾ ! ಈಗ ಹೆಚ್ಚು ಸುಮ್ನೆ ! ಇದೆಲ್ಲ ಇಲ್ಲಿ ಹೇಳೋಕೆ ಚೆನ್ನಾಗಿರತ್ತೆ. ಅತ್ತೆ ಮನೆಲಿ ಬಾಯೇ ತೆಗಿಯೋಹಾಗಿಲ್ಲ ಸೊಸೇರು..ತಿಳ್ಕೋ !

ನಾನು : ಹೋಗಮ್ಮ ! ಬಾಯಿ ತೆಗೆಯಕಾಗಲ್ಲ ಅಂದ್ರೆ ನಾವೆಲ್ಲ ಮೂಕಾಭಿನಯ ಮಾಡ್ಬೇಕಾ ?

ಅಮ್ಮ silent.

Z : ಇನ್ನೇನ್ ಮಾಡ್ತಾರೆ ಪಾಪ...ನಿನಗೆ ಹೇಳಿ ಪ್ರಯೋಜನ ಇಲ್ಲ ಅಂತ ಸುಮ್ಮನಾಗಿರ್ತಾರೆ. ನಿನಗೆ experiment failure ಆಗಿ, ನೀನು ಅದರ interpretation ಗೆ ಕೂತ್ಕೊಂಡಾಗ್ಲೆ ಅಮ್ಮನ silence ಅರ್ಥ ಆಗೋದು.

ನಾನು : shut up ! ಅತ್ತೇರೆಲ್ಲ ಬರೀ ಆಡ್ಕೊಳ್ಳೋಕೆ ಇರೋದಿಲ್ಲ ತಿಳ್ಕೋ. every cloud has a silver lining. ಗೊತ್ತಿಲ್ಲ ಅಂದ್ರೆ ಹೇಳ್ಕೊಡೋ ಅಂಥೋರು ಇರ್ತಾರೆ. It all depends on us. we should be honest enough to say that we lack practice. ಗೊತ್ತಿದೆ ಅಂತ scope ತೋರಿಸಿ ಆಮೇಲೆ flop ಆದ್ರೆ ? ಗೊತ್ತಿಲ್ಲ ಅನ್ನೋದನ್ನ first ಒಪ್ಪಿಕೊಂಡುಬಿಡಬೇಕು. Also, its not that we totally dont know cooking. nowadays, mother- in- laws also know that we would also have spent most of the time of our lives before marriage studying and working outside, just like guys. They understand the change and they tend to change too... ಈಗಿನ lifestyle ನಲ್ಲಿ ಆಗ್ತಿರೋ change ನ ಪರಿಗಣಿಸಿ ಅವ್ರೂ ನಮಗೆ ಅಡುಗೆ ಹೇಳ್ಕೊಡ್ತಾರೆ. coming back to the story....

ನಾನು ಗೆದ್ದೆ ಅಂತ ನಂಗೆ ಗೊತ್ತಾಯ್ತು. ಸುಮ್ಮನೆ ಒಳಗೇ ನಕ್ಕಿದೆ . ಆಮೇಲೆ ಬದನೇಕಾಯಿ ಹೆಚ್ಚಿ ನೀರಿಗೆ ಹಾಕಿದ್ದೆನಲ್ಲಾ... ನೀರಿನ ಕಡೆ ನೋಡಿದೆ. brownish black colour ಇತ್ತು. ನನಗೆ ಥಟ್ ಅಂತ ಹೊಳಿತು. iron diffuse ಆಗಿದೆ, ಬದನೇಕಾಯಿಂದ ನೀರಿಗೆ ಅಂತ. ಕೂಗಿದೆ...

ಅಮ್ಮಾ...ನೀರೆಲ್ಲ ಕಪ್ಪಾಗಿದ್ಯಲ್ಲ....ಅದನ್ನೇ ಹಾಕಿ ಬೇಯಿಸುತ್ತೀಯ ?

ಅಮ್ಮ : ಇಲ್ಲ...ಬದನೇಕಾಯಿ ನ ಎಣ್ಣೇಲಿ ಬೈಯಿಸುತ್ತೀವಿ. ಅದರ training ಆಮೇಲೆ.

ನಾನು : ಅಲ್ಲಮ್ಮ...ಸತ್ವ ಎಲ್ಲ ನೀರಲ್ಲಿದ್ಯಲ್ಲಮ್ಮ... all iron in water ! iron ನೇ ಹೋದ್ಮೇಲೆ ಇನ್ನೇನಿದೆ ಬದ್ನೇಕಾಯಿ !

ಅಮ್ಮ : ನಿನ್ನ ತಲೆ !

Z : ಭೇಷ್ ! ಸರೀಗೆ ಬೈದಿದಾರೆ ಅಮ್ಮ...

ನಾನು : ಲೇ ! ಸತ್ವ ರಹಿತ ತರಕಾರಿ ನ ತಿಂದು ಪ್ರಯೋಜನ ಇದ್ಯೇನೆ ? ಆ iron ನ save ಮಾಡೋದು ಹೇಗೆ ಅಂತ ನಾನ್ ಯೋಚ್ನೆ ಮಾಡ್ತಿದ್ದೆ...

Z : ಆಮೇಲೆ ?

ನಾನು : ಅಮ್ಮ...ನೋಡು,ನನ್ನ ಮಾತು ಕೇಳು...ಈ ನೀರನ್ನ ಹೇಗಾದ್ರು ಮಾಡಿ use ಮಾಡು.

ಅಮ್ಮ : ನನ್ನ ಹತ್ರ ಐಡಿಯ ಇದೆ. ನೀನೇ ಕುಡಿ !

ನಾನು : what ? mom...its iron !

ಅಮ್ಮ : yes ! you better run...ಇಲ್ಲಾಂದ್ರೆ ನನಗೆ ಬರ್ತಿರೋ ಕೋಪದಲ್ಲಿ ....

ನಾನು ಅಲ್ಲಿಂದ ಕಾಲ್ಕಿತ್ತೆ..ಪ್ರಾಣ ಭಯಕ್ಕಲ್ಲ...ಯೋಚನೆ ಮಾಡಕ್ಕೆ. ಬದನೇಕಾಯಿಯಲ್ಲಿನ ಐರನ್ನನ್ನು ಉಳಿಸುವುದು ಹೇಗೆ ?

Z : ಉಹಹಹಹಹಹಹಹಹಹಹಹ !!!!!!!!!!!!!!!!!!!!!!!!!!!

ನಾನು : ಆಯ್ತಾ ? ಮುಗಿತಾ ?

Z : ಇಲ್ಲಾ...ಆಮೇಲೆ ನಗ್ತಿನಿ . ಇದು first instalment. ಬದನೇಕಾಯಿ ವಿಷಯಾನ ನೀನು ph.D problem ಥರ think ಮಾಡಕ್ಕೆ ಶುರು ಮಾಡಿರ್ತೀಯಾ ಈಗ !

ನಾನು : ಇಲ್ಲ...apple ನಲ್ಲಿರೋ iron ಹೋಗದಿರಲಿ ಅಂತ ಅದರ ಮೇಲೆ ಸಕ್ಕರೆ ಉದುರಿಸುತ್ತಾರೆ ಅದು ಗೊತ್ತು...but what about brinjal ? ಎನಾದ್ರೂ ಮಾಡಿ ಕಂಡುಹಿಡಿಯಲೇ ಬೇಕು...ಇಲ್ಲ, ಬಿಡಲ್ಲ...i will try.

Z : ಅಮ್ಮ ಯಾತಕ್ಕೆ silent ಆದ್ರು ಗೊತ್ತ ? ನೀನು ಪ್ರತಿಯೊಂದು vegetable ನ ಹೀಗೆ research ಮಾಡಕ್ಕೆ ಶುರು ಮಾಡಿದ್ರೆ ಹಸಿವು ನಿದ್ದೆ ಬಿಟ್ಟು...ಪಾಪ ಅತ್ತೆ ಮನೆ people !

ನಾನು : ಹೇ ಇಲ್ಲಪ್ಪ....ಅತ್ತೆ ಮನೆಲೆಲ್ಲ research ಮಡಕ್ಕಾಗಲ್ಲ...ಮಾಡದೂ ಇಲ್ಲ...ಆ ಭಯ ಬಿಡು ನೀನು. ಹೋಗೋ ಅಷ್ಟೊತ್ತಿಗೆ ಮುಗ್ಸಿರ್ಬೆಕು ಇವೆಲ್ಲ...and ಕಲ್ತೂ ಇರ್ಬೆಕು ಬದ್ನೇಕಾಯಿ ಹೆಚ್ಚೋದು ! fast ಆಗಿ ! uffffff !!!!!!

Z : ಭಗವಂತಾ...ಕಾಪಾಡಪ್ಪ ಎಲ್ಲಾರ್ನು !

ನಾನು : yeah ! ಒಕೆ. ಸಿಗ್ತಿನಿ sometime...with a new vegetable again. Or probably, with another expedition.

Z : ಹಾ ? expedition ಆದ್ರೆ ಕೇಳಕ್ಕೆ extra ಶಕ್ತಿ ಬೇಕು. ನಕ್ಕು ನಕ್ಕು ಸಾಕಾಗೋಗತ್ತೆ ನೀನ್ ಮಾಡ್ಕೊಳ್ಳೊ ಅವಾಂತರಕ್ಕೆ...but, I will wait !

ನಾನು : thanks !

line on hold.

Tuesday, July 1, 2008

ವಿಜ್ಞಾನೋತ್ಸವ

ನಾನು : Z...ಇವತ್ತು ನಾನು ವಿಜ್ಞಾನೋತ್ಸವಕ್ಕೆ ಹೋಗಿದ್ದೆ.

Z : what ? ರಾಮೋತ್ಸವ, ಸಂಗೀತೋತ್ಸವ, ಚಲನಚಿತ್ರೋತ್ಸವ ಗೊತ್ತು...ಇದೆಂಥದ್ದು ವಿಜ್ಞಾನೋತ್ಸವ ?

ನಾನು : ಇದನ್ನೇ ಇವತ್ತು ಬೆಂಗಳೂರು ವಿಜ್ಞಾನ ವೇದಿಕೆಯ ಅಧ್ಯಕ್ಷ ಡಾ ||||ಏ. ಎಚ್. ರಾಮರಾವ್ ಹೇಳಿದ್ದು. ಬೆಂಗಳೂರು ವಿಜ್ಞಾನ ವೇದಿಕೆಯನ್ನು ಹುಟ್ಟು ಹಾಕಿದವರು ಡಾ || ಎಚ್. ನರಸಿಂಹಯ್ಯ.ಎಚ್. ಎನ್ ಅವರು ಪ್ರತಿವರ್ಷ ಸಿಟಿ ಇನ್ಸ್ಟಿಟೂಟ್ ನಡೆಸುವ ರಾಮೋತ್ಸವ attend ಮಾಡುತ್ತಿದ್ದರಂತೆ. ರಾಮೋತ್ಸವದಂತೆಯೇ ವಿಜ್ಞಾನಕ್ಕೂ ಒಂದು ಉತ್ಸವ ಮಾಡಬಾರದೇಕೆ ಅನ್ನಿಸಿ, ಮೂವತ್ತು ವರ್ಷಗಳ ಹಿಂದೆ ಜುಲೈ ಒಂದರಿಂದ ಮೂವತ್ತೊಂದರ ವರೆಗೆ, ಎಚ್. ಎನ್ . ಹಾಲ್, ನ್ಯಾಷನಲ್ ಕಾಲೇಜು, ಬಸವನಗುಡಿಯಲ್ಲಿ ಈ ಉತ್ಸವವನ್ನ ಪ್ರಾರಂಭಿಸಿದರು. ಅದರ ಅದ್ಭುತ ಯಶಸ್ಸನ್ನು ಕಂಡು ಅದನ್ನು ಮುಂದುವರೆಸಿಕೊಂಡು ಬಂದರು. ಇದು ಒಂದು ತಿಂಗಳ ವಿಜ್ಞಾನೋತ್ಸವ. ಪ್ರತಿ ದಿನವೂ ಭಾರತದ ಹಲವಾರು ಕಡೆಗಳಿಂದ, ಕೆಲವೊಮ್ಮೆ ಅಮೇರಿಕೆಯಿಂದಲೂ ವಿಜ್ಞಾನಿಗಳು ಬಂದು ಇಲ್ಲಿ ಉಪನ್ಯಾಸ ನೀಡಿ ಹೋಗಿದ್ದಾರೆ. ಬಾಹ್ಯಾಕಾಶಯಾತ್ರೆ ಮಾಡಿದ ಮೊದಲ ಭಾರತೀಯ ರಾಕೇಶ್ ಶರ್ಮ ಕೂಡಾ ಇಲ್ಲಿ ಬಂದು ಮಾತಾಡಿದ್ದಾರೆ. ಇಂದು ಪ್ರಾರಂಭವಾಗಿದ್ದು ಮೂವತ್ತೊಂದನೇ ವಾರ್ಷಿಕ ವಿಜ್ಞಾನೋತ್ಸವ. ನಾನು ಕಳೆದ ಐದು ವರ್ಷದಿಂದ attend ಮಾಡುತ್ತಿದ್ದೇನೆ.

Z : ವಾ !! nice. but isn’t it too technical ?

ನಾನು : absolutely not. ಈ ಉಪನ್ಯಾಸ ಮಾಲಿಕೆ ಇರುವುದೇ ವಿಜ್ಞಾನವನ್ನು ಜನಪ್ರಿಯಗೊಳಿಸುವುದಕ್ಕಾಗಿ. these are popular science lectures. ಇಲ್ಲಿ ಗಲಿಬಿಲಿಗೊಳಿಸುವ equations ಇರೋದಿಲ್ಲ, long derivations ಇರೋದಿಲ್ಲ...ಎಂಥದ್ದೂ ಇಲ್ಲ. ಕೆಲವು ಮಾತ್ರ technical ಅನ್ನಿಸಿದರೂ ಅದನ್ನ detail ಮಾಡೊಲ್ಲ. ಈಗ,for example ನಮಗೆ haemoglobin ಗೊತ್ತು. ಅದು ಹೇಗೆ ಕೆಲ್ಸ ಮಾಡತ್ತೆ ಅಂತ ಗೊತ್ತ ?

Z : ಇಲ್ಲ.

ನಾನು : ಅದು ಕೈಕೊಟ್ಟರೆ ನಮಗೆ ಎಂಥೆಂಥಾ ರೋಗಗಳು ಬರತ್ತೆ ಅಂತ ಗೊತ್ತಾ ?

Z : ಉಹು !

ನಾನು : ಇದನ್ನ ಮತ್ತು ಇಂಥದ್ದೇ ಹತ್ತು ಹಲವಾರು ವಿಷಯಗಳನ್ನ ತಿಳಿಸ್ತಾರೆ ಅಲ್ಲಿ. ಇವತ್ತಿನ ಉಪನ್ಯಾಸವನ್ನು ಭಾರತೀಯ ವಿಜ್ಞಾನ ಸಂಸ್ಥೆ ಯ[Indian Institute of Science] ನಿರ್ದೇಶಕರಾದ ಡಾ||ಪಿ. ಬಲರಾಮ್ ಅವರು ಬಂದು ಈ ಹಿಮೋಗ್ಲೋಬಿನ್ ಎಂಬ ಅತ್ಯದ್ಭುತ ಪ್ರೋಟೀನ್ ಮಾಡುವ ಉಪಕಾರ, ಅದರ ಅಭಾವದಿಂದ ಆಗುವ ಅಪಾಯಗಳು, ಇತರೆ ಪ್ರೋಟೀನುಗಳು [ಇನ್ಸುಲಿನ್ ಮುಂತಾದವು] ಅವುಗಳ ಸ್ವರೂಪ, ಗುಣಲಕ್ಷಣ...ಎಲ್ಲಾ ನಮಗೆ ಗೊತ್ತಾಗುವಂತೆ ಹೇಳಿದರು. ಸಖತ್ತಾಗಿತ್ತು. ನಾನು ಬಯಾಲಜಿ ಓದಿದ್ದು ಪಿ. ಯೂ. ಸಿ. ವರೆಗೆ ಅಷ್ಟೇ ! ಆದರೂ ನನಗೆ ಇಂಥದ್ದು ಗೊತ್ತಾಗಲಿಲ್ಲಪ್ಪ ಅಂತ ಅನ್ನಿಸಲಿಲ್ಲ...

Z : wow !

ನಾನು : ಅಷ್ಟೇ ಅಲ್ಲ...ಪ್ರತಿ ಭಾನುವಾರ ವಿಜ್ಞಾನದ ಕುರಿತ film shows ಕೂಡಾ ಇರತ್ತೆ !

Z .nice !!

ನಾನು : ನಿಜ್ವಾಗ್ಲು !! ಈಗಿನ ಯುಗ ತಂತ್ರಜ್ಞಾನದ್ದು. ಅದಕ್ಕೆ ಮೂಲ ವಿಜ್ಞಾನ. ಇದರ ಅರಿವು ತಿಳಿವು ಮೂಡಿಸಲು ಈ ವಿಜ್ಞಾನೋತ್ಸವ ಒಂದು ಅದ್ಭುತ ಸಾಧನ. ನಾನಂತೂ ಈ ಸರ್ತಿ ಒಂದು ಉಪನ್ಯಾಸವನ್ನೂ ಬಿಡದೇ attend ಮಾಡುವೆ ! ಮುಂಚೆ ಎಲ್ಲ ಕಾಲೇಜ್ ಇರ್ತಿತ್ತು...record, assignment ಅಂತೆಲ್ಲ ಕರ್ಮಕಾಂಡಗಳ ಕಾರಣದಿಂದ 31 lectures ನಲ್ಲಿ 20 ನೇ attend ಮಾಡಕ್ಕೆ ಆಗ್ತಿದ್ದಿದ್ದು maximum. ಈಸಲ ಅದೆಲ್ಲ ಇಲ್ಲ...ಸದ್ಯ...ನೆಮ್ಮದಿಯಾಗಿ ಹೋಗಿ ಕೇಳಬಹುದು.

Z : wow !!

ನಾನು : ಸಾಕು ಕಣ್ಣ್ ಕಣ್ಣ್ ಬಿಟ್ಟ್ಕೊಂಡ್ ವಾವ್ ವಾವ್ ಅಂದಿದ್ದು. ಈ ಥರ lectures u....ಅಂಥ eminent scientists ನ ನೋಡೋಕೆ ಪುಣ್ಯ ಮಾಡಿರ್ಬೇಕು. ನಾನಂತೂ...ಪ್ರೊಫೆಸ್ಸರ್ ಸಿ. . ಎನ್.ಆರ್. ರಾವ್, ಡಾ || ಕಸ್ತೂರಿ ರಂಗನ್, ಡಾ||ಮಾಧವನ್ ನಾಯರ್,ಡಾ|| ರಾಕೇಶ್ ಶರ್ಮ ಇವರನ್ನೆಲ್ಲ ಹತ್ತಿರದಿಂದ ನೋಡಿ ಧನ್ಯಳಾಗಿದ್ದೇನೆ. so, moral of the story is, never miss opportunities like this !

Z : very true !! attend ಮಾಡು ಹೋಗಮ್ಮ....ಅಲ್ಪ ಸಲ್ಪ ತಿಳೀವಳಿಕೆ ಪಡ್ಕೋ.

ನಾನು :ಏನ್ "ಹೋಗಮ್ಮ" ಅಂದ್ರೆ....ನಾಳೇ ಇಂದ ನೀನು ಬರ್ಬೇಕು ನನ್ನ ಜೊತೆ.

Z : ಮಳೆ ! ಚಳಿ !

ನಾನು : ಹೊಡಿತಿನಿ ಸೋಂಬೇರಿ ! ಇವತ್ತು ನಾನು ಮನೆಯಿಂದ ಹೊರಗೆ ಕಾಲಿಟ್ಟ ತಕ್ಷಣ ಮಳೆ ಜೋರಾಗಿ ಬರಲು ಶುರುವಾಯ್ತು. ನೆನೆದುಕೊಂಡೇ ಹೋಗ್ಲಿಲ್ವಾ ನಾನು? [ಚತ್ರಿ ಇತ್ತು ಸದ್ಯ. ಆದ್ರೂ dress ಎಲ್ಲಾ ಕೊಚ್ಚೆಲಿ ಹಾಳಾಗೋಯ್ತು ! ] interest ಇರ್ಬೇಕು. ತಿಳ್ಕೋ. ನಾಳೆ ಚಕಾರ ಎತ್ತದೇ ಬಾ. Advances in neurosciences ಅಂತ topic. CT scans, MRI tests , stem cell research ಮೇಲೆ ಮಾತಾಡ್ತಾರೆ ಅನ್ನಿಸತ್ತೆ. lets see !

Z : ಬರ್ತಿನಿ ! ಬಂದೇ ಬರ್ತಿನಿ....

ನಾನು : good girl !!! ಸರಿ...ನಾಳೆ ಮಾತಾಡುವ.

line on hold.

ಉತ್ತರಾಯಣ ೩

ನಾನು: ಬೃಂದಾವನಕ್ಕೆ ಹೊರಡಲು ನಾಲ್ಕು ಘಂಟೆಯಷ್ಟೊತ್ತಿಗೆ ರೆಡಿ ಇರಬೇಕು ಎಂದು ಮ್ಯಾನೇಜರ್ ವೆಂಕಟೇಶ್ ಅವರು ಹೇಳಿದ್ದರು. ಇವರೆಲ್ಲರೂ ಊಟ ಮಾಡಿ, ಮಲಗಿ, ಎದ್ದು ರೆಡಿಯಾಗು...