Monday, January 28, 2008

ಶುರುವಾದ ಕಾಲೇಜು !!

ನಾನು : ಒಂದುವರೆ ತಿಂಗಳು ನಾನು ಬೆಳಗ್ಗೆ ೬.೩೦ ರ ಸೂರ್ಯನಿಗೆ hi ಹೇಳಿಯೇ ಇರಲಿಲ್ಲ !! ಇವತ್ತು ಬೆಳಗ್ಗೆ ಆರು ವರೆಗೆ ಎದ್ದು ಕಾಲೇಜಿಗೆ ಹೋಗಬೇಕಾಗಿ ಬಂತು !!

Z: finally,ಕಾಲೇಜು ಶುರುವಾಯಿತು.

ನಾನು: ಹು...ಏಳಲು ಮನಸ್ಸೇ ಇರದೆ...ಕಾಗೆ ಸ್ನಾನ ಮಾಡಿ...ತಿಂದಿದ್ದು ಏನು ಅಂತ ಗೊತ್ತಾಗದೆ...ಹೇಗೋ ಒಂದು ಆಟೋ ಹಿಡಿದು ಕಾಲೇಜಿಗೆ ಸರಿಯಾಗಿ ೮.೩೦ ಕ್ಕೆ ಕಾಲಿಟ್ಟೆ.ನೋಡಿದರೆ ೯.೩೦ ತನಕ ಪಾಠಗಳೇ ಇರಲಿಲ್ಲ !!ಬಸ್ಸಿನಲ್ಲೇ ಬರಬಹುದಿತ್ತು !!ಅನ್ಯಾಯ ಮೂವತ್ತು ರೂಪಾಯಿ ಆಟೋನವನಿಗೆ ಸುರಿದೆನಲ್ಲಾ ಅನ್ನಿಸಿತು !!

z: cant help. ಏನಿತ್ತು ?

ನಾನು : Astrophysics !! ನನಗೆ ಸ್ವಲ್ಪ ಭಯ ಹುಟ್ಟಿಸುವ subject ಇದು ! but thanks to shailaja maa'm...she made the subject so imaginative and simple...I began to love it !!

Z: planetarium ನಲ್ಲಿ ಇದಾರಲ್ಲ ...ಅವರಾ ?

ನಾನು : ಹು...ಅವರು ಎರಡು derivation ಗಳನ್ನು ಮಾಡಿದರು ಅಂತ ಅವರೇ ನಮಗೆ ಹೇಳುವವರೆಗೂ ಗೊತ್ತಾಗಲೇ ಇಲ್ಲ !! ನಮ್ಮನ್ನು ಅಂತರಿಕ್ಷದಲ್ಲಿ ಸ್ವೇಚ್ಛೆ ಇಂದ ಓಡಾಡಲು ಬಿಟ್ಟರು !! ಸಾಮಾನ್ಯವಾಗಿ ಈ subject ಗೆ imagination ಬೇಕು. everything is 3 dimensional here. ನಮ್ಮ ಕಲ್ಪನಾ ಸಾಮರ್ಥ್ಯವನ್ನು ಹೆಚ್ಚಿಸಿದರಲ್ಲದೇ, ನಾವು ಎಲ್ಲಿದ್ದೇವೆ...ಬೇರೆಯವರಿಗೆ ನಾವು ನೋಡುವ ಆಕಾಶಕಾಯಗಳನ್ನು describe ಮಾಡುವುದು ಹೇಗೆ ಎಂದು ಅತಿ ಮನೋಜ್ಞವಾಗಿ...ಮನೋಹರವಾಗಿ ಪಾಠ ಮಾಡಿದರು !! ನಿಜವಾಗಿಯೂ ನಾನು ಈ subject ಬಗ್ಗೆ ಹೆದರಿದ್ದೆ..but now, I am not at all worried !!

Z: good...ನಾಳೆ ?

ನಾನು : ಗೊತ್ತಿಲ್ಲ...But I eagerly await astrophysics ಈಗ !!

Z: ಕಲಿಯುವ ವರೆಗೂ ಬ್ರಹ್ಮವಿದ್ಯೆ...

ನಾನು : ಕಲಿತಾದ ಮೇಲೆ exam ವಿದ್ಯೆ !!

(ಸಶೇಷ)

2 comments:

Sridhar Raju said...

anthu intu kaaleju shuruyaavthu...
ondu sogasaada duswapnadanthe....
ಕಾಗೆ ಸ್ನಾನ ....he he padabaLake chennagidhe.. mangalore part 2 ge waiting -u...bega bardbidi...

ಅಂತರ್ವಾಣಿ said...

ಏನ್ರಿ ಇದು.. ಕಾಲೇಜು ಇದ್ದಾಗಲೆಲ್ಲಾ ಕಾಗೆ ಸ್ನಾನನ ನಿಮ್ಮದು??...
ಅಂದ ಹಾಗೆ ನನಗೂ Astrophysics ಹೇಳ್ಕೋಡ್ತೀರ ತಾನೆ?

ಉತ್ತರಾಯಣ ೩

ನಾನು: ಬೃಂದಾವನಕ್ಕೆ ಹೊರಡಲು ನಾಲ್ಕು ಘಂಟೆಯಷ್ಟೊತ್ತಿಗೆ ರೆಡಿ ಇರಬೇಕು ಎಂದು ಮ್ಯಾನೇಜರ್ ವೆಂಕಟೇಶ್ ಅವರು ಹೇಳಿದ್ದರು. ಇವರೆಲ್ಲರೂ ಊಟ ಮಾಡಿ, ಮಲಗಿ, ಎದ್ದು ರೆಡಿಯಾಗು...